Anxiety: ಆತಂಕವನ್ನು ನಿಭಾಯಿಸುವುದು ಹೇಗೆ? ಚಿಂತೆ ಪಡಬೇಡಿ, ಬಾಲಿವುಡ್ ನಟ ವಿಕ್ಕಿ ಕೌಶಲ್ ನೀಡಿದ ಸಲಹೆ ಪಾಲಿಸಿದ್ರೆ ನಿರಾಂತಕ ಖಾತ್ರಿ
Anxiety: ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಆತಂಕ, ಚಿಂತೆಯನ್ನು ನಿಭಾಯಸುವ ಕುರಿತು ಆಗಾಗ ಪ್ರಾಮಾಣಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚೆಗೆ ಮತ್ತೊಮ್ಮೆ ಇವರು ಆತಂಕ ನಿಭಾಯಿಸುವ ಕುರಿತು ಮಾತನಾಡಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಆತಂಕ, ಚಿಂತೆಯನ್ನು ನಿಭಾಯಸುವ ಕುರಿತು ಆಗಾಗ ಪ್ರಾಮಾಣಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚೆಗೆ ಮತ್ತೊಮ್ಮೆ ಇವರು ಆತಂಕ ನಿಭಾಯಿಸುವ ಕುರಿತು ಮಾತನಾಡಿದ್ದಾರೆ. ಹಾರ್ಪರ್ಸ್ ಬಜಾರ್‌ಗೆ ನೀಡಿದ ಸಂದರ್ಶನದಲ್ಲಿ ಚಿಂತೆ ನಿಭಾಯಿಸುವ ಕುರಿತು ಮಾತನಾಡಿದ್ದಾರೆ."ಆತಂಕ ನಿವಾರಣೆಗೆ ಮಾಡಬೇಕಾದ ಮೊದಲ ಅತ್ಯುತ್ತಮ ಕೆಲಸ ಎಂದರೆ ಅದನ್ನು ಒಪ್ಪಿಕೊಳ್ಳಿ" ಎಂದು ವಿಕ್ಕಿ ಹೇಳಿದ್ದಾರೆ. ಹಿರಿಯ ನಟರಿಂದ ಈ ಕುರಿತಾಗಿ ಪಡೆದ ಸಲಹೆಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಆತಂಕವನ್ನು ಒಪ್ಪಿಕೊಳ್ಳಿ
"ನನಗೆ ಹಿರಿಯ ನಟರೊಬ್ಬರು ಆತಂಕವನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ರು. ಅದು ಯಾವಾಗಲೂ ಇರುತ್ತದೆ. ನೀವು ಅದನ್ನು ಅರ್ಥಮಾಡಿಕೊಳ್ಳುವುದನ್ನು ಕರಗತ ಮಾಡಿಕೊಳ್ಳಬೇಕು. ಅದನ್ನು ಒಪ್ಪಿಕೊಳ್ಳುವುದು ಖಿನ್ನತೆ, ಆತಂಕ ನಿವಾರಣೆಗೆ ಇರುವ ಮೊದಲ ಹೆಜ್ಜೆ ಎದು ಸಲಹೆ ನೀಡಿದ್ರು. ನಾನು ಅದನ್ನೇ ಪಾಲಿಸುವೆ" ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ.
ಸೃಜನಶೀಲತೆಗೆ ಗಮನ ನೀಡಿ
ಇದೇ ಸಂದರ್ಭದಲ್ಲಿ ವಿಕ್ಕಿ ಕೌಶಲ್ ಅವರು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಹತ್ವವನ್ನು ಹೇಳಿದ್ದಾರೆ. ಕಠಿಣ ಸಮಯದಲ್ಲಿ ಆತಂಕವನ್ನು ಇನ್ನಷ್ಟು ನಮ್ಮ ಮನಸ್ಸಿಗೆ ಆವರಿಸಲು ಬಿಡುವ ಬದಲು ಸೃಜನಶೀಲ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ನಾನು ಗಮನ ನೀಡುವೆ" ಎಂದು ಅವರು ಹೇಳಿದ್ದಾರೆ. “ಸಿನಿಮಾ ನಿರ್ಮಾಣದಲ್ಲಿನ ವಿಭಿನ್ನ ವಿಧಾನಗಳಿಂದ ನಾನು ಆಕರ್ಷಿತನಾಗಿದ್ದೇನೆ. ನಾನು ಇನ್ನೂ ನಿರ್ದೇಶನಕ್ಕೆ ಕಾಲಿಡುತ್ತೇನೆಯೇ ಎಂದು ನನಗೆ ಖಚಿತವಿಲ್ಲ, ಆದರೆ ನಾನು ಖಂಡಿತವಾಗಿಯೂ ಆಸಕ್ತಿ ಹೊಂದಿದ್ದೇನೆ" ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಾಲಿವುಡ್‌ನಲ್ಲಿ ಆಗುತ್ತಿರುವ ಇತ್ತೀಚಿನ ಬದಲಾವಣೆಗಳ ಕುರಿತೂ ವಿಕ್ಕಿ ಮಾತನಾಡಿದ್ದಾರೆ. "ನಾವು ರೋಚಕ ಹಂತದಲ್ಲಿದ್ದೇವೆ. ಹೊಸ ಧ್ವನಿಗಳು ಶಕ್ತಿಯನ್ನು ಪಡೆಯುತ್ತಿವೆ. ಪ್ರೇಕ್ಷಕರೂ ಹೊಸತನವನ್ನು ಒಪ್ಪಿಕೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. "ಜನರು ವೈವಿಧ್ಯಮಯ ನಿರೂಪಣೆಗಳಿಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಮಸಾನ್ (2015) ನಿಂದ ಸ್ಯಾಮ್ ಬಹದ್ದೂರ್ (2023) ಮತ್ತು ಸರ್ದಾರ್ ಉಧಮ್ (2021)ವರೆಗೆ ವಿಕ್ಕಿ ಕೌಶಲ್ ಕೆಲವು ಬಹುಮುಖ ಮತ್ತು ವಿಶಿಷ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. "ನಾನು ಆರಂಭಿಸಿದ ಸಂದರ್ಭದಲ್ಲಿ ಲಗ್ಷುರಿಯಾಗಿರಬೇಕು, ಐಷಾರಾಮಿಯಾಗಿರಬೇಕು, ಸುಖವಾಗಿರಬೇಕು ಎಂದು ಆಲೋಚಿಸಲಿಲ್ಲ. ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವೃತ್ತಿ ಜೀವನದಲ್ಲಿ ಬಂದ ಅವಕಾಶಗಳನ್ನು ಬಳಸಿಕೊಂಡೆ. ಇವೆಲ್ಲ ನಾನು ಇಂದು ಇಲ್ಲಿಗೆ ತಲುಪಲು ನೆರವಾಗಿದೆ" ಎಂದು ಅವರು ಹೇಳಿದ್ದಾರೆ.
'ಗ್ಯಾಂಗ್ಸ್ ಆಫ್ ವಾಸ್ಸೇಪುರ್' (2012) ಸಿನಿಮಾಕ್ಕೆ ನಾಣು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಇದು ನನಗೆ ಸಾಕಷ್ಟು ನೆರವಯಿತು. ನಟರಾದ ಪಂಕಜ್ ತ್ರಿಪಾಠಿ ಮತ್ತು ಮನೋಜ್ ಬಾಜ್‌ಪೇಯಿ ಅವರ ಜತೆ ಕಾರ್ಯನಿರ್ವಹಿಸುವ ಅವಕಾಶ ದೊರಕಿತು. ಅವರಂತೆ ನಟಿಸಲು ಬಯಸಿದೆ. ಪ್ರತಿಪಾತ್ರದಲ್ಲಿಯೂ ವಿಭಿನ್ನ ವ್ಯಕ್ತಿಯಾಗಿರುತ್ತೇನೆ ಎದು ಅವರು ಹೇಳಿದ್ದಾರೆ.
ವಿಕ್ಕಿ ಕೌಶಲ್ ಅವರು ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಅಂಡ್ ವಾರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.