Self Confidence: ಖಿನ್ನತೆಯು ಆತ್ಮವಿಶ್ವಾಸವನ್ನು ನಾಶಪಡಿಸುತ್ತದೆ, ಆತಂಕ ಬೇಡ ಖಿನ್ನತೆಯಿಂದ ಹೊರಬರಲು ಇಲ್ಲಿದೆ ದಾರಿ
- ಖಿನ್ನತೆ ಮನಸ್ಸಿನ ತೊಂದರೆ. ಆತಂಕ ಮತ್ತು ಖಿನ್ನತೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆತಂಕದಿಂದ ಹೊರಬಂದರೆ ಮಾತ್ರ ನಾವು ಧೈರ್ಯವಾಗಿ ಇರಬಹುದು. ಖಿನ್ನತೆಯು ಆತ್ಮವಿಶ್ವಾಸವನ್ನು ಕೊಲ್ಲುತ್ತದೆ. ಈ ಕುರಿತು ತಜ್ಞರು ಏನು ಹೇಳುತ್ತಾರೆ ನೋಡೋಣ ಬನ್ನಿ.
- ಖಿನ್ನತೆ ಮನಸ್ಸಿನ ತೊಂದರೆ. ಆತಂಕ ಮತ್ತು ಖಿನ್ನತೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆತಂಕದಿಂದ ಹೊರಬಂದರೆ ಮಾತ್ರ ನಾವು ಧೈರ್ಯವಾಗಿ ಇರಬಹುದು. ಖಿನ್ನತೆಯು ಆತ್ಮವಿಶ್ವಾಸವನ್ನು ಕೊಲ್ಲುತ್ತದೆ. ಈ ಕುರಿತು ತಜ್ಞರು ಏನು ಹೇಳುತ್ತಾರೆ ನೋಡೋಣ ಬನ್ನಿ.
(1 / 6)
ಆತಂಕ ಮತ್ತು ಆತ್ಮವಿಶ್ವಾಸವು ಜತೆಯಾಗಿ ಸಾಗುವುದು ಕಡಿಮೆ. ಆತಂಕವಾದಗ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಕಡಿಮೆಯಾದಗ ಖಿನ್ನತೆ ಹೆಚ್ಚುತ್ತದೆ ಎಂದು ಥೆರಪಿಸ್ಟ್ ಕ್ಯಾರಿ ಹೋವರ್ಡ್ ಹೇಳಿದ್ದಾರೆ. "ಆತಂಕವು ನಿಮ್ಮ ಆತ್ಮವಿಶ್ವಾಸವನ್ನು ದೂರ ಮಾಡುತ್ತದೆ. ಆತ್ಮವಿಶ್ವಾಸ ಕಡಿಮೆಯಾದ ಬಳಿಕ ಮತ್ತೆ ಖಿನ್ನತೆ, ಆತಂಕ ಹೆಚ್ಚುತ್ತದೆ" ಎಂದು ಅವರು ಹೇಳಿದ್ದಾರೆ.(Unsplash)
(2 / 6)
ಖಿನ್ನತೆಯಲ್ಲಿರುವವರು ಯಾವಾಗಲೂ ತಮ್ಮ ನಿರ್ಧಾರ ತಪ್ಪಾಗಿದೆ ಎಂದು ಭಾವಿಸುತ್ತಾರೆ. ಇವರು ಒಂದು ವಿಚಾರದ ಕುರಿತು ಮತ್ತೆಮತ್ತೆ ಯೋಚಿಸಿ ಸಂದೇಹದಲ್ಲಿಯೇ ಇರುತ್ತಾರೆ.(Unsplash)
(3 / 6)
ಖಿನ್ನತೆಯಲ್ಲಿರುವವರು ತಮ್ಮನ್ನು ಇತರರ ಜತೆಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಅವರ ಸಾಮರ್ಥ್ಯದ ಕುರಿತೇ ನಂಬಿಕೆ ಇರುವುದಿಲ್ಲ. ಇದರಿಂದ ಇನ್ನಷ್ಟು ಖಿನ್ನತೆ ಹೆಚ್ಚುತ್ತದೆ. (Unsplash)
(4 / 6)
ಆತಂಕ ಮತ್ತು ಖಿನ್ನತೆಯಲ್ಲಿರುವಾಗ ನಾವು ಬಾಹ್ಯ ಬೆಂಬಲ ಬಯಸುತ್ತೇವೆ, ಏಕೆಂದರೆ, ನಮಗೆ ನಮ್ಮ ಮೇಲೆ ನಂಬಿಕೆ ಇರುವುದಿಲ್ಲ.(Unsplash)
(5 / 6)
ಖಿನ್ನತೆಯು ಹಲವು ರೀತಿಯಲ್ಲಿ ಕಾಡುತ್ತದೆ. ತಕ್ಷಣ ಇದರಿಂದ ಹೊರಬರಲು ಪ್ರಯತ್ನಿಸಬೇಕು. ಖಿನ್ನತೆಯನ್ನು ಸುಖವೆಂದು ಅನುಭವಿಸುತ್ತ ಇರಬಾರದು. ಆತ್ಮವಿಶ್ವಾಸ ಇದ್ದರೆ ಈ ಜಗತ್ತಿನಲ್ಲಿ ಏನೂ ಬೇಕಾದರೂ ಸಾಧಿಸಬಹುದು. (Unsplash)
ಇತರ ಗ್ಯಾಲರಿಗಳು