Bad Newz: ಜಗಳವಾದ ಬಳಿಕ ಮಲಗೋದಿಲ್ವಂತೆ ಕತ್ರಿನಾ ಮತ್ತು ವಿಕ್ಕಿ ಕೌಶಲ್‌; ಕೈಫ್‌ ತುಂಬಾ ಭಾವುಕ ವೈಫ್‌ ಅಂದ್ರು ಅಮ್ಮಾವ್ರ ಗಂಡ
ಕನ್ನಡ ಸುದ್ದಿ  /  ಮನರಂಜನೆ  /  Bad Newz: ಜಗಳವಾದ ಬಳಿಕ ಮಲಗೋದಿಲ್ವಂತೆ ಕತ್ರಿನಾ ಮತ್ತು ವಿಕ್ಕಿ ಕೌಶಲ್‌; ಕೈಫ್‌ ತುಂಬಾ ಭಾವುಕ ವೈಫ್‌ ಅಂದ್ರು ಅಮ್ಮಾವ್ರ ಗಂಡ

Bad Newz: ಜಗಳವಾದ ಬಳಿಕ ಮಲಗೋದಿಲ್ವಂತೆ ಕತ್ರಿನಾ ಮತ್ತು ವಿಕ್ಕಿ ಕೌಶಲ್‌; ಕೈಫ್‌ ತುಂಬಾ ಭಾವುಕ ವೈಫ್‌ ಅಂದ್ರು ಅಮ್ಮಾವ್ರ ಗಂಡ

Bad Newz Movie: ಬಾಲಿವುಡ್‌ ತಾರೆಗಳಾದ ವಿಕ್ಕಿ ಕೌಶಲ್ ಕತ್ರಿನಾ ಕೈಫ್ 'ಬ್ಯಾಡ್ ನ್ಯೂಸ್' (Bad Newz Movie) ಸಿನಿಮಾದ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ವಿಕ್ಕಿ ಕೌಶಲ್ ಸಿನಿಮಾದ ಬಗ್ಗೆ ಕಡಿಮೆ ಮತ್ತು ಕತ್ರಿನಾ ಕೈಫ್ ಬಗ್ಗೆ ಹೆಚ್ಚು ಮಾತನಾಡಿದ್ದಾರೆ.

Bad Newz: ಜಗಳವಾದ ಬಳಿಕ ಮಲಗೋದಿಲ್ವಂತೆ ಕತ್ರಿನಾ ಮತ್ತು ವಿಕ್ಕಿ ಕೌಶಲ್‌
Bad Newz: ಜಗಳವಾದ ಬಳಿಕ ಮಲಗೋದಿಲ್ವಂತೆ ಕತ್ರಿನಾ ಮತ್ತು ವಿಕ್ಕಿ ಕೌಶಲ್‌

ಬೆಂಗಳೂರು: ವಿಕ್ಕಿ ಕೌಶಲ್ ಅಭಿನಯದ 'ಬ್ಯಾಡ್ ನ್ಯೂಸ್' (Bad Newz Movie) ಚಿತ್ರ ಜುಲೈ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಹೀಗಿರುವಾಗ ವಿಕ್ಕಿ ತಮ್ಮ ಸಿನಿಮಾದ ಪ್ರಚಾರವನ್ನು ಜೋರಾಗಿ ಮಾಡುತ್ತಿದ್ದಾರೆ. ಆದರೆ, ಪ್ರಚಾರದ ವೇಳೆ ಅವರು ತಮ್ಮ 'ಬ್ಯಾಡ್ ನ್ಯೂಸ್' ಚಿತ್ರದ ಬಗ್ಗೆ ಕಡಿಮೆ ಮಾತನಾಡುತ್ತಿದ್ದಾರೆ. ಅವರ ಪತ್ನಿ ಕತ್ರಿನಾ ಕೈಫ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಮತ್ತು ಕತ್ರಿನಾ ಅವರ ಮೊದಲ ಭೇಟಿಯ ಕಥೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಾವು ಜಗಳ ಮಾಡಿದಾಗ ಆಗುವ ಪರಿಣಾಮಗಳ ಕುರಿತೂ ಹೇಳಿದ್ದಾರೆ.

ವಿಕ್ಕಿ ಮತ್ತು ಕತ್ರಿನಾ ಮೊದಲ ಬಾರಿ ಭೇಟಿಯಾದದ್ದು ಎಲ್ಲಂತೆ?

ರಾಜ್ ಶಾಮ್ನಿಗೆ ನೀಡಿದ ಸಂದರ್ಶನದಲ್ಲಿ ವಿಕ್ಕಿ ಅವರು ಕತ್ರಿನಾಳನ್ನು ಮೊದಲ ಬಾರಿಗೆ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಕುರಿತು ಮಾಹಿತಿ ನೀಡಿದ್ದಾರೆ. “ನಾವು ಮೊದಲ ಬಾರಿಗೆ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ನಾನು ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದೆ. ವೇದಿಕೆಗೆ ಬರುವ ಮೊದಲು ನಾನು ಕತ್ರಿನಾ ಅವರೊಂದಿಗೆ ಮಾತನಾಡಿದೆ. ಆಗ ನಾನು ಮೊದಲ ಬಾರಿಗೆ ನನ್ನ ಪರಿಚಯ ಮಾಡಿಕೊಂಡೆ. ಅವರು ತನ್ನನ್ನು ಪರಿಚಯಿಸಿಕೊಂಡರು. ಆಗ ನಮಗೆ ಏನೂ ಐಡಿಯಾ ಇರಲಿಲ್ಲ. ಪ್ರೀತಿಯೂ ಇರಲಿಲ್ಲ. ಬಳಿಕ ಎಲ್ಲವೂ ಸಂಭವಿಸಿತು" ಎಂದು ಅವರು ಹೇಳಿದ್ದಾರೆ.

ಜಗಳವಾದಾಗ ವಿಕ್ಕಿ ಮತ್ತು ಕತ್ರಿನಾ ಏನು ಮಾಡುತ್ತಾರೆ?

ಈ ಕುರಿತು ಆಸಕ್ತಿದಾಯಕ ಮಾಹಿತಿಯನ್ನು ವಿಕ್ಕಿ ಕೌಶಲ್‌ ಹಂಚಿಕೊಂಡಿದ್ದಾರೆ. "ನಮ್ಮ ನಡುವೆ ಜಗಳ ಅಥವಾ ವಾದಗಳು ನಡೆದರೆ, ನಮಗಿಬ್ಬರಿಗೂ ಮಲಗಲು ಸಾಧ್ಯವಾಗುವುದಿಲ್ಲ. ಜಗಳದ ನಂತರ ಕತ್ರಿನಾ ಮೊದಲು ಮಾತನಾಡುವ ಮೂಲಕ ವಿಷಯಗಳನ್ನು ಮರೆಸಲು ಪ್ರಯತ್ನಿಸುತ್ತಾರೆ. ಆಕೆಯ ಮಾರ್ಗ ಮತ್ತು ನನ್ನ ಮಾರ್ಗ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಾನು ತರ್ಕಬದ್ಧ ( ನಾನು ಎಲ್ಲದರಲ್ಲೂ ಲಾಜಿಕ್ ನೀಡುವ ವ್ಯಕ್ತಿ ಮತ್ತು ಕತ್ರಿನಾ ತುಂಬಾ ಭಾವುಕಳು" ಎಂದು ವಿಕ್ಕಿ ಹೇಳಿದ್ದಾರೆ.

ಇವರ ಮದುವೆ ಯಾವಾಗ ನಡೆದಿತ್ತು?

ವಿಕ್ಕಿ ಮತ್ತು ಕತ್ರಿನಾ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ನಂತರ ಮೂರು ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 9 ರಂದು ವಿವಾಹವಾದರು. ಮದುವೆಗೂ ಮುನ್ನ ಇಬ್ಬರೂ ಡೇಟಿಂಗ್ ಸುದ್ದಿಗೆ ಪ್ರತಿಕ್ರಿಯಿಸಿರಲಿಲ್ಲ. ಮದುವೆಯ ಚಿತ್ರವನ್ನು ನೇರವಾಗಿ ಪೋಸ್ಟ್ ಮಾಡುವ ಮೂಲಕ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.

ಮದುವೆಯಾದ ಬಳಿಕ ಹೆಚ್ಚು ಪ್ರಬುದ್ಧನಾದೆ

ಈ ಹಿಂದೆಯೂ ವಿಕ್ಕಿ ಕತ್ರಿನಾ ಕೈಫ್‌ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಕತ್ರಿನಾ ಕೈಫ್‌ ಜತೆ ಜೀವನ ಹೇಗಿದೆ ಎಂದು ಪತ್ರಕರ್ತರು ಕೇಳಿದ ಕೇಳಿದ ಪ್ರಶ್ನೆಗೆ ವಿಕ್ಕಿ ಕೆಲವು ತಿಂಗಳ ಹಿಂದೆ ಹೀಗೆ ಉತ್ತರಿಸಿದ್ದಾರೆ. "ಕಳೆದ ಎರಡೂವರೆ ವರ್ಷಗಳಲ್ಲಿ (ಮದುವೆಯಾದ ಬಳಿಕದ) ನಾನು ಮೊದಲ 33 ವರ್ಷಗಳಿಗಿಂತ ಹೆಚ್ಚು ಸಾಧನೆ ಮಾಡಿದೆ ಎಂದೆನಿಸುತ್ತದೆ. ನನ್ನಲ್ಲಿ ಆಗ ಬೇರೆ ದೃಷ್ಟಿಕೋನವಿತ್ತು. ನನ್ನಲ್ಲಿ ಸ್ಟುಪಿಡ್‌ ಐಡಿಯಾಗಳು ಸಾಕಷ್ಟು ಇದ್ದವು. ಈಗ ಹೆಚ್ಚು ಪ್ರಬುದ್ಧನಾಗಿದ್ದೇನೆ. ಇಬ್ಬರಿಗೆ ಒಪ್ಪಿಗೆಯಾಗುವಂತಹ ವಿಷಯಗಳ ಕುರಿತು ಚರ್ಚೆ ಮಾಡುತ್ತೇವೆ. ಒಂದು ದಿನ ಹೊರಗೆ ಮಳೆಯಾಗುತ್ತದೆ ಎಂದು ಊಹಿಸಿ. ಆಗ ಮನೆಯೊಳಗೆ ಕುಳಿತು ಶಾಂತವಾಗಿರಲು ಬಯಸುತ್ತೇವೆ. ಭವಿಷ್ಯದ ಕುರಿತು ಭಯ, ಭೂತಕಾಲದ ಪಶ್ಚಾತಾಪ ಏನೂ ಇಲ್ಲ. ಪ್ರಸ್ತುತ ಅಂದರೆ ಈಗಿನ ಪರಿಸ್ಥಿತಿ ಜತೆ ಬದುಕುವುದು ನಮಗೆ ಇಷ್ಟ. ಇದು ಅದ್ಭುತ ತೃಪ್ತಿ ನೀಡುತ್ತದೆ. ಕತ್ರಿನಾ ಕೈಫ್‌ ಜತೆ ಇರುವಾಗ ನನಗೆ ಇಂತಹ ಫೀಲ್‌ ಆಗುತ್ತದೆ" ಎಂದು ಅವರು ಹೇಳಿದ್ದರು.

Whats_app_banner