ಕನ್ನಡ ಸುದ್ದಿ  /  ಮನರಂಜನೆ  /  ‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

ಬಹುಭಾಷಾ ನಟಿ ಶ್ರುತಿ ಹಾಸನ್‌ ಬಾಳಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಮತ್ತೆ ಅವರ ಹೃದಯ ಒಡೆದಿದೆ. ಬಹುಕಾಲದ ಪ್ರೇಮಿ ಶಂತನು ಹಜಾರಿಕಾ ಜತೆಗಿನ ಲೀವ್‌ ಇನ್‌ ಸಂಬಂಧವನ್ನೂ ಕಡೆದುಕೊಂಡು ಬ್ರೇಕಪ್‌ ಮಾಡಿಕೊಂಡಿದ್ದಾರೆ ಶ್ರುತಿ ಹಾಸನ್.

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ!; ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌
‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ!; ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

Shruti haasan‌ Break up: ಬಹುಭಾಷಾ ನಟಿ ಶ್ರುತಿ ಹಾಸನ್‌ ಇತ್ತೀಚೆಗಷ್ಟೇ ಸಲಾರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೊಂಬಾಳೆ ಫಿಲಂಸ್‌ ನಿರ್ಮಾಣದಲ್ಲಿ ಮೂಡಿಬಂದಿದ್ದ ಆ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸಿದ್ದರು. ಪ್ರಶಾಂತ್‌ ನೀಲ್‌ ಈ ಚಿತ್ರದ ನಿರ್ದೇಶಕರು. ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು ಸಲಾರ್. ಹೀಗೆ ಸಿನಿಮಾ ಜತೆಗೆ ಅದರಾಚೆಗೂ ನಟಿ ಶ್ರುತಿ ಹಾಸನ್‌ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಪ್ರೀತಿ, ಲೀವ್‌ ಇನ್‌ ರಿಲೇಷನ್‌ಶಿಪ್‌ ಬಗ್ಗೆಯೂ ಚರ್ಚೆಯಲ್ಲಿರುತ್ತಾರೆ. ಈಗ ಅದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಮೈಕಲ್‌ ಕೊರ್ಸಾಲೆ ಜತೆಗಿನ ಬ್ರೇಕಪ್‌ ಬಳಿಕ ಬಹುಕಾಲದ ಗೆಳೆಯ ಟ್ಯಾಟೂ ಕಲಾವಿದ ಶಂತನು ಜತೆಗಿನ ಪ್ರೀತಿ ಪ್ರೇಮಕ್ಕೂ ಬ್ರೇಕ್‌ ಹಾಕಿದ ಶ್ರುತಿ ಹಾಸನ್‌, ಆತನ ಜತೆಗೂ ಪ್ರಣಯ ಸಂಬಂಧವನ್ನು ಮುರಿದುಕೊಂಡಿದ್ದಾರೆ. ಮುಂಬೈನಲ್ಲಿ ಕಳೆದ ಕೆಲವು ತಿಂಗಳಿಂದ ಒಂದೇ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ಒಟ್ಟಿಗೆ ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ, ಅದ್ಯಾವ ಕಾರಣಕ್ಕೋ ಏನೋ ಇಬ್ಬರ ನಡುವೆ ಮುನಿಸು ಮನೆ ಮಾಡಿದೆ. ಬಹುದಿನಗಳ ಪ್ರೀತಿಗೆ ಇಬ್ಬರೂ ತಿಲಾಂಜಲಿ ಇಟ್ಟು, ದೂರ ದೂರವಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡುತ್ತಿದ್ದಾರೆ.

ಹಳೇ ಫೋಟೋಗಳು ಡಿಲಿಟ್‌

ಇಷ್ಟಕ್ಕೆ ಮುಗಿಯದ ಇವರ ಕಥೆ, ಶ್ರುತಿ ಹಾಸನ್‌ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್‌ಫ್ರೆಂಡ್‌ ಶಂತನು ಹಜಾರಿಕಾ ಜತೆಗಿದ್ದ ರೊಮ್ಯಾಂಟಿಕ್‌ ಫೋಟೋಗಳನ್ನೂ ಡಿಲಿಟ್‌ ಮಾಡಿದ್ದಾರೆ. ಈ ಹಿಂದೆ ನನಗೆ ಮದುವೆ ಅವಶ್ಯಕತೆಯಿಲ್ಲ, ನಾನು ಮದುವೆ ಆಗಲ್ಲ, ನನಗೆ ಇವ್ನೇ ಸಾಕು ಎಂದು ಹೇಳಿ ಸಂಚಲನವನ್ನೂ ಸೃಷ್ಟಿಸಿದ್ದರು ಶ್ರುತಿ ಹಾಸನ್.‌ ಒಟ್ಟಿಗೆ ಇರುವ ರೊಮ್ಯಾಂಟಿಕ್‌ ಫೋಟೋಗಳನ್ನೂ ಈ ಜೋಡಿ ಶೇರ್‌ ಮಾಡಿತ್ತು. ಹೀಗೆ ಖುಷಿಯಲ್ಲಿಯೇ ಸಾಗಿದ್ದ ಇವರ ಲೀವ್‌ ಇನ್‌ ರಿಲೇಷನ್‌ಶಿಪ್‌ ಈಗ ಮುರಿದು ಬಿದ್ದಿದೆ.

ಹರಿದಾಡಿತ್ತು ಮದುವೆ ಗುಲ್ಲು

ಈ ಹಿಂದೆ ನಟಿ ಶ್ರುತಿ ಹಾಸನ್‌ ಮತ್ತು ಶಂತನು ಜೋಡಿಯ ಮದುವೆ ಗುಟ್ಟಾಗಿ ನಡೆದೇ ಹೋಗಿದೆ ಎಂಬ ಗುಲ್ಲು ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿತ್ತು. ಇದು ಶ್ರುತಿ ಗಮನಕ್ಕೂ ಬಂದಿತ್ತು. ಕೊಂಚ ಬಿರುಸಾಗಿಯೇ ಪ್ರತಿಕ್ರಿಯೆ ನೀಡಿದ್ದ ಶ್ರುತಿ, ಮೌನ ಮುರಿದಿದ್ದರು. ಮದುವೆ ವಿಚಾರವನ್ನು ಯಾರಾದ್ರೂ ಮುಚ್ಚಿಡ್ತಾರಾ? ನನಗೆ ಅಂಥ ಯಾವ ದರ್ದು ಬಂದಿಲ್ಲ. ನಾನು ಮದುವೆಯಾಗಿಲ್ಲ. ಮದುವೆ ಎಂದರೆ ನನಗೆ ಭಯ. ಆ ಬಗ್ಗೆ ನಾನು ಯೋಚಿಸಲೂ ಹೋಗುವುದಿಲ್ಲ. ಸದ್ಯಕ್ಕೆ ನಾನು ಆತನ (ಶಂತನು) ಜತೆಗೆ ಖುಷಿಯಿಂದ ಇದ್ದೇನೆ. ಅವನೇ ಸಾಕು ನನಗೆ. ಮದುವೆಗಿಂತ ಸದ್ಯ ನಾವಿಬ್ಬರು ಇರುವ ಸಂಬಂಧವೇ ಚೆನ್ನಾಗಿದೆ" ಎಂದಿದ್ದರು.

ಅಧಿಕೃತ ಘೋಷಣೆ ಹೊರಬಿದಿಲ್ಲ

ಒಂದೆರಡು ವರ್ಷಗಳ ಕಾಲ ಒಟ್ಟಿಗೆ ವಾಸಿಸಿ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತರ, ಶ್ರುತಿ ಹಾಸನ್ ಮತ್ತು ಶಂತನು ಜೋಡಿ, ಪ್ರೀತಿಯ ಬಂಧಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಇಬ್ಬರೂ ಪ್ರತಿಕ್ರಿಯೆ ನೀಡದಿದ್ದರೂ, ಫೋಟೋ ಡಿಲಿಟ್‌ ಮಾಡಿದ್ದು ಮತ್ತು ಅನ್‌ಫಾಲೋ ಮಾಡಿದ್ದು ಸದ್ಯ ಈ ಅನುಮಾನಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳ ಹಿಂದಿನಿಂದಲೇ ಇಬ್ಬರೂ ದೂರವಾಗುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಮುಂಬೈನಲ್ಲಿ ಬೇರೆ ಬೇರೆ ವಾಸವಾಗಿದ್ದರು.

IPL_Entry_Point