ಕೆಲಸಕ್ಕಾಗಿ ನನ್ನನ್ನು ಮಾರಿಕೊಳ್ಳುವ ವ್ಯಕ್ತಿ ನಾನಲ್ಲ ಎಂದ ನಟಿ ರೆಜಿನಾ ಕಸ್ಸಂದ್ರ; ದಕ್ಷಿಣಕ್ಕೂ ಬಾಲಿವುಡ್‌ಗೂ ವ್ಯತ್ಯಾಸ ಹಿಂಗೈತೆ ನೋಡ್ರಿ
ಕನ್ನಡ ಸುದ್ದಿ  /  ಮನರಂಜನೆ  /  ಕೆಲಸಕ್ಕಾಗಿ ನನ್ನನ್ನು ಮಾರಿಕೊಳ್ಳುವ ವ್ಯಕ್ತಿ ನಾನಲ್ಲ ಎಂದ ನಟಿ ರೆಜಿನಾ ಕಸ್ಸಂದ್ರ; ದಕ್ಷಿಣಕ್ಕೂ ಬಾಲಿವುಡ್‌ಗೂ ವ್ಯತ್ಯಾಸ ಹಿಂಗೈತೆ ನೋಡ್ರಿ

ಕೆಲಸಕ್ಕಾಗಿ ನನ್ನನ್ನು ಮಾರಿಕೊಳ್ಳುವ ವ್ಯಕ್ತಿ ನಾನಲ್ಲ ಎಂದ ನಟಿ ರೆಜಿನಾ ಕಸ್ಸಂದ್ರ; ದಕ್ಷಿಣಕ್ಕೂ ಬಾಲಿವುಡ್‌ಗೂ ವ್ಯತ್ಯಾಸ ಹಿಂಗೈತೆ ನೋಡ್ರಿ

ತೆಲುಗು, ತಮಿಳು ನಟಿ ರೆಜಿನಾ ಕಸ್ಸಂದ್ರ ಅವರು ಬಾಲಿವುಡ್‌ನಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸ್ಕ್ರೀನ್‌ ಎಂಬ ಸಿನಿತಾಣಕ್ಕೆ ನೀಡಿದ ಸಂದರ್ಶನದಲ್ಲಿ ಇವರು ದಕ್ಷಿಣ ಭಾರತದ ಪ್ರಾದೇಶಿಕ ಚಿತ್ರಜಗತ್ತು ಮತ್ತು ಬಾಲಿವುಡ್‌ಗೆ ಇರುವ ವ್ಯತ್ಯಾಸಗಳ ಕುರಿತು ಮಾತನಾಡಿದ್ದಾರೆ.

ಕೆಲಸಕ್ಕಾಗಿ ನನ್ನನ್ನು ಮಾರಿಕೊಳ್ಳುವ ವ್ಯಕ್ತಿ ನಾನಲ್ಲ ಎಂದ ನಟಿ ರೆಜಿನಾ ಕಸ್ಸಂದ್ರ
ಕೆಲಸಕ್ಕಾಗಿ ನನ್ನನ್ನು ಮಾರಿಕೊಳ್ಳುವ ವ್ಯಕ್ತಿ ನಾನಲ್ಲ ಎಂದ ನಟಿ ರೆಜಿನಾ ಕಸ್ಸಂದ್ರ

ನಟಿ ರೆಜಿನಾ ಕಸ್ಸಂದ್ರ ಅವರು ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ನಟಿ. ಬಾಲಿವುಡ್‌ನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತನ್ನ 14 ವರ್ಷ ವಯಸ್ಸಿನಲ್ಲಿಯೇ ಸಿನಿ ಜಗತ್ತಿಗೆ ಕಾಲಿಟ್ಟ ಪ್ರತಿಭಾನ್ವಿತೆ ಈಕೆ. ತನ್ನ ಬದುಕಿನ ಬಹುಪಾಲ ಸಮಯವನ್ನು ಚಿತ್ರೋದ್ಯಮದಲ್ಲಿ ಕಾಲ ಕಳೆದಿದ್ದಾರೆ ಇತ್ತೀಚೆಗೆ ಸ್ಕ್ರೀನ್‌ ಎಂಬ ಮನರಂಜನಾ ತಾಣಕ್ಕೆ ಇವು ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಮದಲ್ಲಿ ಹಿಂದಿ ಮತ್ತು ದಕ್ಷಿಣ ಭಾರತದ ಪ್ರಾದೇಶಿಕ ಚಿತ್ರೋದ್ಯಮದ ನಡುವೆ ಇರುವ ಹೋಲಿಕೆ, ವ್ಯತ್ಯಾಸದ ಕುರಿತು ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ನಟಿಯರು ಬಾಲಿವುಡ್‌ಗೆ ಎಂಟ್ರಿ ನೀಡುವ ಸಂದರ್ಭದಲ್ಲಿ ಏನೆಲ್ಲ ಸವಾಲುಗಳು ಎದುರಾಗುತ್ತವೆ ಎಂಬ ವಿಚಾರದ ಕುರಿತೂ ಮಾತನಾಡಿದ್ದಾರೆ.

ಬಾಲಿವುಡ್‌ನಲ್ಲಿ ನಟಿಸಬೇಕೆಂದರೆ ಹಿಂದಿ ಬರಬೇಕು. ನಾನು ನನ್ನಮ್ಮನ ಒತ್ತಾಯದ ಮೇರೆಗೆ ಶಾಲೆಯಲ್ಲಿ ಹಿಂದಿ ಭಾಷೆ ಕಲಿತೆ. ಅದು ನನ್ನ ಬದುಕಿನಲ್ಲಿ ಸಾಕಷ್ಟು ಸಹಾಯ ಮಾಡಿತು ಎಂದು ರೆಜಿನಾ ಹೇಳಿದ್ದಾರೆ. "ದಕ್ಷಿಣ ಭಾರತದ ಅನೇಕ ನಟಿಯರ ಬಾಲಿವುಡ್‌ನಲ್ಲಿ ಅವಕಾಶ ಪಡೆಯಲು ಭಾಷೆಯ ಜತೆ ಹೋರಾಟ ನಡೆಸ್ತಾ ಇದ್ದಾರೆ. ದಕ್ಷಿಣದಿಂದ ಬರುವ ನಟಿಯರಿಗೆ ಅವಕಾಶ ಪಡೆಯಲು ಭಾಷೆಯೇ ಬಹುದೊಡ್ಡ ತಡೆಗೋಡೆ ಅಂದ್ರೂ ತಪ್ಪಾಗದು. ಉತ್ತರದಲ್ಲಿ ಅವರು ಧ್ವನಿಯನ್ನ ಸಿಂಕ್‌ ಮಾಡುತ್ತಾರೆ. ದಕ್ಷಿಣ ಭಾರತದ ಪ್ರಾದೇಶಿಕ ಚಿತ್ರರಂಗದಲ್ಲಿ ನಾವು ಡಬ್‌ ಮಾಡುತ್ತೇವೆ" ಎಂದ ರೆಜಿನಾ ಹೇಳಿದ್ದಾರೆ.

"ನಾನು ಡಬ್ಬಿಂಗ್‌ ಬದಲು ಧ್ವನಿಯನ್ನು ಸಿಂಕ್‌ ಮಾಡಲು ಆದ್ಯತೆ ನೀಡುತ್ತೇನೆ. ಉತ್ತರದಲ್ಲಿ ಈ ವಿಷಯದಲ್ಲಿ ರಾಜಿ ಇಲ್ಲ. ನೀವು ಭಾಷೆಯನ್ನು ಸರಿಯಾಗಿ ತಿಳಿಯದೆ ಇದ್ದರೆ ಅವರು ಅವರ ಪ್ರಾಜೆಕ್ಟ್‌ಗೆ ನಿಮ್ಮನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ದಕ್ಷಿಣ ಭಾರತದಲ್ಲಿ ಭಾಷೆ ಗೊತ್ತಿಲ್ಲದೆ ಇದ್ದರೂ ಚಿತ್ರದ ಭಾಗವಾಗಿಸಲು ಒಪ್ಪುತ್ತಾರೆ" ಎಂದು ದಕ್ಷಿಣ ಭಾರತ ಮತ್ತು ಬಾಲಿವುಡ್‌ ನಡುವಿನ ವ್ಯತ್ಯಾಸವನ್ನು ರೆಜಿನಾ ಹೇಳಿದ್ದಾರೆ.

"ದಕ್ಷಿಣ ಭಾರತದಲ್ಲಿ ತಯಾರಾಗುವ ಬಹುತೇಕ ಸಿನಿಮಾಗಳ ಬೇರಿನ ಕುರಿತು, ನೆಲದ ಕುರಿತು ಮಾತನಾಡುತ್ತವೆ. ಉತ್ತರದಲ್ಲಿ ತಯಾರಾಗುವ ಹೆಚ್ಚಿನ ಸಿನಿಮಾಗಳು ನಗರ ಕೇಂದ್ರೀತವಾಗಿದೆ. ನಾನು ಉತ್ತದಲ್ಲಿ ಕೆಲಸ ಮಾಡು ಸಂದರ್‌ದಲ್ಲಿ ನೀವು ಮುಂಬೈನಲ್ಲಿ ವಾಸಿಸಬೇಕು, ಮೀಟಿಂಗ್‌ಗೆ ಬರುತ್ತಾ ಇರಬೇಕು ಎಂದು ನನಗೆ ಹೇಳಿದ್ರು. ದಕ್ಷಿಣ ಭಾರತದಲ್ಲಿ ನಾವು ಹಾಗೆ ಮಾಡುವುದಿಲ್ಲ. ನೆಟ್‌ವರ್ಕ್‌ ಎಂದರೆ ಜನರನ್ನು ಭೇಟಿಯಾಗುವಂತಹ ಸಂದರ್ಭಗಳಲ್ಲಿಯೂ ವ್ಯತ್ಯಾಸವಿದೆ. ದಕ್ಷಿಣದಲ್ಲಿ ಕಾಸ್ಟಿಂಗ್‌ ಏಜೆಂಟ್‌ ಎಂಬ ಪರಿಕಲ್ಪನೆ ಇಲ್ಲ. ಇಲ್ಲಿ ಮ್ಯಾನೇಜರ್‌ ಮತ್ತು ಪಿಆರ್‌ಒಗಳು ಇರುತ್ತಾರೆ" ಎಂದು ಅವರು ಹೇಳಿದ್ದಾರೆ.

ಅವಕಾಶಕ್ಕಾಗಿ ನಾನು ನನ್ನನ್ನು ಮಾರಿಕೊಳ್ಳಲಾರೆ

"ಈಗ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಏಜೆನ್ಸಿಗಳು ದಕ್ಷಿಣ ಭಾರತದ ಸಿನಿಮಾ ಮಾರುಕಟ್ಟೆಗೂ ನುಸುಳಿವೆ. ಹಿಂದಿಯ ವಿಷಯಕ್ಕೆ ಬಂದರೆ ಹೆಚ್ಚು ಸ್ಪರ್ಧೆಯಿದೆ. ನನ್ನ ವಿಷಯ ಹೇಳುವುದಾದರೆ ಉದ್ಯೋಗಕ್ಕಾಗಿ, ಕೆಲಸಕ್ಕಾಗಿ, ಕರಿಯರ್‌ಗಾಗಿ ನಾನು ನನ್ನನ್ನು ಮಾರಿಕೊಳ್ಳುವಂತಹ ವ್ಯಕ್ತಿಯಲ್ಲ. ಯಾವುದೇ ಕಾರಣಕ್ಕೆ ಚೌಕಾಶಿ ಮಾಡಲಾರೆ. ನಾನ ಲಾಬಿ ಮಾಡಲಾರೆ. ಆದರೆ, ಇದನ್ನು ನಾನು ಮಾಡದೆ ಇದ್ದೆ ಹೆಚ್ಚು ಅವಕಾಶ ಪಡೆಯುವುದಿಲ್ಲ ಎನ್ನುವುದೂ ನನಗೆ ಅರ್ಥವಾಗಿದೆ" ಎಂದು ಅವರು ಹೇಳಿದ್ದಾರೆ.

"ನಾನು ಲಾಬಿ ಮಾಡಬೇಕು, ಅವಕಾಶಕ್ಕಾಗಿ ಪ್ರಯತ್ನಿಸಬೇಕು ಎಂದು ಅರ್ಥಮಾಡಿಕೊಂಡಿದ್ದೇನೆ. ನಾನು ನನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಆಕ್ರಮಣಕಾರಿಯಲ್ಲ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಇದು ಸುಲಭ ಅಥವಾ ಕಷ್ಟದ ವಿಷಯ ಅಲ್ಲ. ಇದು ನನಗೆ ಬಲವಂತ ಎನಿಸುತ್ತದೆ. ಜೀವನ ಸಹಜವಾಗಿರಬೇಕು. ಇಲ್ಲದೆ ಇದ್ದರೆ ಜೀವನದಲ್ಲಿ ಅರ್ಥವಿಲ್ಲ. ಈಗ ನಾನು ನನಗಾಗಿ ಲಾಬಿ ಮಾಡುವ ತಂಡವನ್ನು ಹೊಂದಿದ್ದೇನೆ. ನಾನು ಕೇವಲ ಆಡಿಷನ್‌ಗೆ ಹೋಗುವೆ ಅಷ್ಟೇ. ಈ ತಂಡದ ಜತೆ ಸಂತೋಷವಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.

Whats_app_banner