Mahanati Promo: ಟ್ಯಾಲೆಂಟ್‌ ತೋರಿಸೋಕೆ ಕರ್ನಾಟಕದ ಹೆಣ್ಮಕ್ಕಳು ರೆಡಿ; ಮಹಾನಟಿ ಶೋ ಪ್ರೋಮೋ ಬಿಡುಗಡೆ-kannada television news the promo of the new reality show mahanati released to be aired on zee kannada soon mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Mahanati Promo: ಟ್ಯಾಲೆಂಟ್‌ ತೋರಿಸೋಕೆ ಕರ್ನಾಟಕದ ಹೆಣ್ಮಕ್ಕಳು ರೆಡಿ; ಮಹಾನಟಿ ಶೋ ಪ್ರೋಮೋ ಬಿಡುಗಡೆ

Mahanati Promo: ಟ್ಯಾಲೆಂಟ್‌ ತೋರಿಸೋಕೆ ಕರ್ನಾಟಕದ ಹೆಣ್ಮಕ್ಕಳು ರೆಡಿ; ಮಹಾನಟಿ ಶೋ ಪ್ರೋಮೋ ಬಿಡುಗಡೆ

ಜೀ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಆರಂಭವಾಗಲಿರುವ ಮಹಾನಟಿ ರಿಯಾಲಿಟಿ ಶೋನ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ರಿಹರ್ಸಲ್ ಅಲ್ಲೇ ಪ್ರತಿಭೆ ತೋರಿಸಿ, ರಿಯಾಲಿಟಿ ಶೋಗೆ ಬರಲು ರೆಡಿ ಆಗ್ತಿದ್ದಾರೆ ಕರುನಾಡ ಹೆಣ್ಣುಮಕ್ಕಳು.

Mahanati Promo: ಟ್ಯಾಲೆಂಟ್‌ ತೋರಿಸೋಕೆ ಕರ್ನಾಟಕದ ಹೆಣ್ಮಕ್ಕಳು ರೆಡಿ; ಮಹಾನಟಿ ಶೋ ಪ್ರೋಮೋ ಬಿಡುಗಡೆ
Mahanati Promo: ಟ್ಯಾಲೆಂಟ್‌ ತೋರಿಸೋಕೆ ಕರ್ನಾಟಕದ ಹೆಣ್ಮಕ್ಕಳು ರೆಡಿ; ಮಹಾನಟಿ ಶೋ ಪ್ರೋಮೋ ಬಿಡುಗಡೆ

Mahanati Show Promo: ಕನ್ನಡದ ನಂ 1 ಮನರಂಜನಾ ವಾಹಿನಿ ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ ರಿಯಾಲಿಟಿ ಶೋ ಮೂಲಕ ನಾಡಿನ ನಟಿಮಣಿಯರನ್ನು ಗುರುತಿಸುವ ಕೆಲಸವಾಗುತ್ತಿದೆ. ನೋಡುಗರ ಮನಸ್ಸಿನಿಂದ ಸದಾ ಹಸಿರಾಗಿ ಉಳಿಯೋ ನಾಯಕ ನಟಿಯಾಗೋ ಗುರಿ ನಿಮ್ಮೊಳಗಿದ್ದರೆ, ಆ ಪ್ರತಿಭೆಯನ್ನು ಗುರುತಿಸಲು ಜೀ ಕನ್ನಡದಲ್ಲಿ ಹೊಸ ಶೋ ಆರಂಭವಾಗುತ್ತಿದೆ. ಅದೇ ಮಹಾನಟಿ. ಈಗಾಗಲೇ ಕಳೆದ ಒಂದು ತಿಂಗಳಿಂದ ಆಡಿಷನ್‌ ಕಾಲ್‌ ಮೂಲಕವೇ ಸುದ್ದಿಯಲ್ಲಿದ್ದ ಈ ಶೋ ಈಗ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ.

ಈಗಾಗಲೇ ರಾಜ್ಯದ ತುಂಬೆಲ್ಲ ಮಹಾನಟಿ ಶೋನ ಆಡಿಷನ್‌ ನಡೆದಿದ್ದು, ಸಾವಿರಾರು ಮಂದಿ ತಮ್ಮ ಕಲೆಯನ್ನು ಹೊರಹಾಕಿದ್ದರು. ಆದರೆ, ಆ ಪೈಕಿ ಬೆರಳೆಣಿಕೆಯ ಹತ್ತಾರು ಹೊಸಮುಖಗಳು ಈ ಶೋ ಮೂಲಕ ನಾಡಿನ ಜನರಿಗೆ ಮನರಂಜನೆ ನೀಡಲಿವೆ. ಸದ್ಯ ಆಯ್ಕೆ ಪ್ರಕ್ರಿಯೆ ಕೊನೇ ಹಂತಕ್ಕೆ ಬಂದಿದ್ದು, ಶೋ ಪ್ರಸಾರ ಯಾವಾಗ ಎಂಬ ಅಧಿಕೃತ ದಿನಾಂಕ ಇನ್ನೇನು ಹೊರಬೀಳಲಿದೆ. ಸದ್ಯ ಹೊರಬಿದ್ದಿರುವ ಪ್ರೋಮೋದಲ್ಲಿ ಒಬ್ಬಳೇ ಯುವತಿ, ಹತ್ತು ಹಲವು ಹಾವ ಭಾವಗಳನ್ನು ಹೊಟೇಲ್‌ವೊಂದರಲ್ಲಿ ತೆರೆದಿಟ್ಟಿದ್ದಾಳೆ. ನೋಡುಗರನ್ನು ಮಂತ್ರಮುಗ್ಧಗೊಳಿಸಿದ್ದಾಳೆ.

ಬಹುತೇಕರಿಗೆ ಸಿನಿಮಾ ನಟಿಯಾಗಬೇಕು, ಕಿರುತೆರೆಯಲ್ಲಿ ಮಿಂಚಬೇಕು, ನನ್ನೊಳಗಿನ ನಟನೆಯನ್ನು ಹೊರಜಗತ್ತಿಗೆ ತೆರೆದಿಡಬೇಕು ಎಂದು ಎಷ್ಟೋ ಮಂದಿಯ ಆಸೆ. ಆದರೆ ಆ ಆಸೆಗೆ ತಕ್ಕ ವೇದಿಕೆ ಸಿಕ್ಕಿರುವುದಿಲ್ಲ. ಅಂಥ ಪ್ರತಿಭಾವಂತರಿಗಾಗಿಯೇ ಜೀ ಕನ್ನಡ ಮಹಾನಟಿ ಶೋವನ್ನು ಆರಂಭಿಸಿದೆ. ಕರ್ನಾಟಕದಾದ್ಯಂತ ಕಳೆದೊಂದು ತಿಂಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಆಡಿಷನ್‌ ಮಾಡಿ, ಒಂದಷ್ಟು ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿದೆ.

ಹೀಗೆ ಆಯ್ಕೆಯಾದ ಪ್ರತಿಭೆಗಳಿಗೆ ಬಣ್ಣದ ಲೋಕದ ಕನಸನ್ನು ನಸನು ಮಾಡಿಕೊಳ್ಳಲು ಮಹಾನಟಿ ರಿಯಾಲಿಟಿ ಶೋ ವೇದಿಕೆ ಕಲ್ಪಿಸುತ್ತಿದೆ. ಅದರಂತೆ, ಇದೀಗ ಮೊದಲ ಸಲ ಈ ಶೋನ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಒಬ್ಬ ಯುವತಿ ತನ್ನೊಳಗಿನ ಬಹುಮುಖ ಪ್ರತಿಭೆಯನ್ನು ಹೇಗೆಲ್ಲ ತೋರಿಸಬಹುದು ಎಂಬುದನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ. ಬಿಡುಗಡೆಯಾಗಿರುವ ಪ್ರೋಮೋ ವಿಭಿನ್ನವಾಗಿದ್ದು, ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಬಿಡುಗಡೆಯಾದ ಮಹಾನಟಿ ಶೋನ ಪ್ರೋಮೋದಲ್ಲಿ ಇತ್ತೀಚೆಗೆ ಟ್ರೋಲ್‌ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸೌಂಡ್‌ ಮಾಡಿದ ಮಾತುಗಳೂ ಸಂಭಾಷಣೆ ರೂಪದಲ್ಲಿವೆ. ನಮ್ಮ ಮನ್ಸು ನಮಗೆ ಒಳ್ಳೆದ್‌ ಮಾಡಿದ್ರೆ ದೇವ್ರು.. ಏನಂತೀರಾ? ರಾವುಲ್ಲಾ ಎಂದೂ ಯುವತಿ ಡೈಲಾಗ್‌ ಹೇಳಿದ್ದಾಳೆ.

ಫಿನಾಲೆ ಹಂತಕ್ಕೆ ಬಂದ ಸರಿಗಮಪ ಸಿಂಗಿಂಗ್‌ ಶೋ

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಹಾನಟಿ ಶೋ ಕೆಲ ವಾರಗಳ ಹಿಂದೆಯೇ ಶುರುವಾಗಬೇಕಿತ್ತು. ವಾರಾಂತ್ಯದ ಸಮಯವನ್ನು ನಿಭಾಯಿಸಲು ಮೂರು ಧಾರಾವಾಹಿಗಳನ್ನು ವಾರದ ಏಳು ದಿನವೂ ಪ್ರಸಾರ ಮಾಡಬೇಕಾಯ್ತು. ಇನ್ನೇನು ಶೀಘ್ರದಲ್ಲಿ ಮಹಾನಟಿ ಶೋ ಪ್ರಸಾರ ಶುರುವಾಗಲಿದೆ.

ಇತ್ತ ಸರಿಗಮಪ ಸೀಸನ್‌ 20ಕ್ಕೆ ತೆರೆಬೀಳಲಿದೆ. ಇದೇ ಭಾನುವಾರ ಸಂಜೆ 6ರಿಂದ 10:30ರವರೆಗೆ‌‌ ಫಿನಾಲೆ ನಡೆಯಲಿದ್ದು, ಸೀಸನ್‌ 20ರ ವಿಜೇತರು ಯಾರೆಂದು ಗೊತ್ತಾಗಲಿದೆ. ಅದಾದ ಬಳಿಕ ಅದೇ ಸ್ಥಾನಕ್ಕೆ ಮಹಾನಟಿ ಶೋ ಆಗಮನವಾಗಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

mysore-dasara_Entry_Point