ಟಾಕ್ಸಿಕ್‌ ಚಿತ್ರಕ್ಕೆ ಕಾನೂನು ಸಂಕಷ್ಟ; ಶೂಟಿಂಗ್‌ ಸೆಟ್‌ನಲ್ಲಿ ಮರ ಕಡಿದ ತಪ್ಪಿಗೆ ಯಶ್‌, ಕೆವಿಎನ್‌ ಸಂಸ್ಥೆ ವಿರುದ್ಧ ಕೇಸ್‌ ದಾಖಲು
ಕನ್ನಡ ಸುದ್ದಿ  /  ಮನರಂಜನೆ  /  ಟಾಕ್ಸಿಕ್‌ ಚಿತ್ರಕ್ಕೆ ಕಾನೂನು ಸಂಕಷ್ಟ; ಶೂಟಿಂಗ್‌ ಸೆಟ್‌ನಲ್ಲಿ ಮರ ಕಡಿದ ತಪ್ಪಿಗೆ ಯಶ್‌, ಕೆವಿಎನ್‌ ಸಂಸ್ಥೆ ವಿರುದ್ಧ ಕೇಸ್‌ ದಾಖಲು

ಟಾಕ್ಸಿಕ್‌ ಚಿತ್ರಕ್ಕೆ ಕಾನೂನು ಸಂಕಷ್ಟ; ಶೂಟಿಂಗ್‌ ಸೆಟ್‌ನಲ್ಲಿ ಮರ ಕಡಿದ ತಪ್ಪಿಗೆ ಯಶ್‌, ಕೆವಿಎನ್‌ ಸಂಸ್ಥೆ ವಿರುದ್ಧ ಕೇಸ್‌ ದಾಖಲು

Toxic Movie: ಕಳೆದ ತಿಂಗಳಷ್ಟೇ ಬೆಂಗಳೂರಿನ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಶೂಟಿಂಗ್‌ ನೆಪದಲ್ಲಿ ಮರಗಳನ್ನು ಕಡಿದ ಆರೋಪ ಕೇಳಿಬಂದಿತ್ತು. ಈಗ ಯಶ್‌ ಸೇರಿ ಸಿನಿಮಾ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.

ಮರ ಕಡಿದ ತಪ್ಪಿಗೆ ಯಶ್‌, ಕೆವಿಎನ್‌ ಸಂಸ್ಥೆ ವಿರುದ್ಧ ಕೇಸ್‌ ದಾಖಲು
ಮರ ಕಡಿದ ತಪ್ಪಿಗೆ ಯಶ್‌, ಕೆವಿಎನ್‌ ಸಂಸ್ಥೆ ವಿರುದ್ಧ ಕೇಸ್‌ ದಾಖಲು

Toxic Movie: ಸಿನಿಮಾದ ಶೂಟಿಂಗ್‌ ಸಲುವಾಗಿ ಮರಗಳ ಮಾರಣಹೋಮ ಮಾಡಿದ ಆರೋಪ ಟಾಕ್ಸಿಕ್‌ ಸಿನಿಮಾ ಮೇಲಿದೆ. ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ, ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ತೆರೆ ಕಾಣಲಿರುವ ಚಿತ್ರ. ಈಗಾಗಲೇ ಈ ಸಿನಿಮಾದ ಶೂಟಿಂಗ್‌ ಆರಂಭಿಸಿರುವ ಚಿತ್ರತಂಡ, ಒಂದಷ್ಟು ಭಾಗದ ಚಿತ್ರೀಕರಣ ಮುಗಿಸಿಕೊಂಡಿದೆ. ಈ ನಡುವೆ ಕಳೆದ ತಿಂಗಳಷ್ಟೇ ಬೆಂಗಳೂರಿನ ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಶೂಟಿಂಗ್‌ ನೆಪದಲ್ಲಿ ಮರಗಳನ್ನು ಕಡಿದ ಆರೋಪ ಕೇಳಿಬಂದಿತ್ತು. ಈಗ ಯಶ್‌ ಸೇರಿ ಸಿನಿಮಾ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.

ಅರಣ್ಯ ಕಾಯ್ದೆ ಅಡಿ ಕೇಸ್‌

ಟಾಕ್ಸಿಕ್‌ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್‌ ಮತ್ತು ಯಶ್ ಅವ​ರ ಮಾನ್‌ಸ್ಟರ್‌ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅದರಂತೆ, ಈಗ ಅನುಮತಿ ಇಲ್ಲದೆ ಪೀಣ್ಯ ಪ್ಲಾಂಟೇಷನ್‌ ಸರ್ವೇ ನಂಬರ್‌ 2ರ ಮೀಸಲು ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಕಡಿದ ಆರೋಪದ ಮೇಲೆ, ಅರಣ್ಯ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾಗಿದೆ. . ಕರ್ನಾಟಕ ಅರಣ್ಯ ಕಾಯ್ಡೆ 1963ರ ಪ್ರಕಾರ ಸೆಕ್ಷನ್‌ 24 ರ ಪ್ರಕಾರ ಮೀಸಲು ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ ಸಲುವಾಗಿ ಸೆಟ್‌ ನಿರ್ಮಿಸಲು ನೈಸರ್ಗಿಕವಾಗಿ ಬೆಳೆದ ಮರಗಿಡಗಳನ್ನು ಡೋಜ್‌ ಮಾಡಿ ತೆರವುಗೊಳಿಸಿದ ಬಗ್ಗೆ ದೂರು ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ಸಹ ನೀಡಲಾಗಿದೆ.

ಅರಣ್ಯ ಸಚಿವರು ಹೇಳಿದ್ದೇನು?

ಅಕ್ಟೋಬರ್‌ 29ರಂದೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, "ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ" ಎಂದಿದ್ದರು.

ಸ್ಪಷ್ಟನೆ ನೀಡಿದ್ದ ಎಚ್‌ಎಂಟಿ

ಹಿಂದೂಸ್ಥಾನ್‌ ಮಷಿನ್‌ ಟೂಲ್ಸ್‌ (ಎಚ್‌ಎಂಟಿ)ಗೆ ಸಂಬಂಧಿಸಿದ ಜಾಗದಲ್ಲಿ ಕಳೆದ ಐದು ತಿಂಗಳಿಂದ ಟಾಕ್ಸಿಕ್‌ ಸಿನಿಮಾ, ಶೂಟಿಂಗ್‌ ಸಲುವಾಗಿ ಬೃಹತ್‌ ಸೆಟ್‌ ಹಾಕುತ್ತಿದೆ. ಈಗಾಗಲೇ ಸೆಟ್‌ ಕೆಲಸವೂ ಪೂರ್ಣಗೊಂಡಿದೆ. ಹೀಗಿರುವಾಗಲೇ ಸೆಟ್‌ ಸಲುವಾಗಿ, ಅಲ್ಲಿದ್ದ ಮರಗಳನ್ನು ನೆಲಸಮ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ ಎಚ್‌ಎಂಟಿ, ಇದು ನಮ್ಮ ಜಾಗ ಅಲ್ಲ. ಈ ಜಾಗವು ಕೆನರಾ ಬ್ಯಾಂಕ್ ಒಡೆತನದಲ್ಲಿದೆ. ಕೆನರಾ ಬ್ಯಾಂಕ್​ಗೆ ಸೇರಿದ ಸ್ಥಳವನ್ನು ನಾವು ಬಾಡಿಗೆಗೆ ಕೊಡುವ ಪ್ರಶ್ನೆಯೇ ಇಲ್ಲ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಎಚ್​​ಎಂಟಿ ಸ್ಪಷ್ಟನೆ ನೀಡಿತ್ತು.

ಬಹುಕೋಟಿ ಬಜೆಟ್‌ನ ಸಿನಿಮಾ

ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಶೀರ್ಷಿಕೆ ಟೀಸರ್‌ ಮೂಲಕ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿರುವ ಈ ಸಿನಿಮಾದಲ್ಲಿ ಬಾಲಿವುಡ್‌ ಮತ್ತು ಸೌತ್‌ನ ಸಾಕಷ್ಟು ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.

ದೂರಿನ ಪ್ರತಿ
ದೂರಿನ ಪ್ರತಿ
Whats_app_banner