Martin OTT Release: ಚಿತ್ರಮಂದಿರದ ಬಳಿಕ ಒಟಿಟಿ ಹಾದಿ ಹಿಡಿದ ಧ್ರುವ ಸರ್ಜಾ ಮಾರ್ಟಿನ್; ಯಾವ ಒಟಿಟಿ, ಯಾವಾಗಿನಿಂದ ಸ್ಟ್ರೀಮಿಂಗ್?
ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯನ್ ಸಿನಿಮಾ ಮಾರ್ಟಿನ್ ಚಿತ್ರದ ಒಟಿಟಿ ಅಪ್‌ಡೇಟ್ ಹೊರಬಿದ್ದಿದೆ. ಇನ್ನೇನು ಇದೇ ತಿಂಗಳಲ್ಲಿ ಈ ಸಿನಿಮಾ ಒಟಿಟಿಗೆ ಅಪ್ಪಳಿಸಲಿದೆ. ಯಾವ ಒಟಿಟಿ ವೇದಿಕೆ, ಯಾವಾಗಿನಿಂದ ಸ್ಟ್ರೀಮಿಂಗ್ ಶುರು? ಇಲ್ಲಿದೆ ಮಾಹಿತಿ.
Martin OTT Release: ಕಳೆದ ತಿಂಗಳ ಅಕ್ಟೋಬರ್ 11ರಂದು ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಬಿಡುಗಡೆ ಆಗಿತ್ತು ಮಾರ್ಟಿನ್ ಸಿನಿಮಾ. ಧ್ರುವ ಸರ್ಜಾ ಕೆರಿಯರ್‌ನ ದೊಡ್ಡ ಬಜೆಟ್‌ನ ಸಿನಿಮಾ ಎಂಬ ವಿಶೇಷಣದೊಂದಿಗೆ ಈ ಸಿನಿಮಾ ತೆರೆಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಹೈಪ್ ಕ್ರಿಯೆಟ್ ಆದರೂ, ಆ ಗಮ್ಯವನ್ನು ಮುಟ್ಟಲು ಈ ಸಿನಿಮಾ ಪ್ಲಾಪ್ ಆಯ್ತು. ಈಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೆ ಆಗಮಿಸಲು ಸಜ್ಜಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟಾಕ್
ಮಾರ್ಟಿನ್ ಸಿನಿಮಾ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಿಂತ ನೆಗೆಟಿವ್ ವಿಚಾರಗಳೇ ಹೆಚ್ಚು ಹೈಲೈಟ್ ಆಗಿದ್ದವು. ತೆಲುಗಿನಿಂದ ಹಿಡಿದು, ಹಿಂದಿವರೆಗೂ ಬಹುತೇಕ ಯೂಟ್ಯೂಬರ್‌ಗಳು ಈ ಸಿನಿಮಾವನ್ನು ಚೆನ್ನಾಗಿಲ್ಲ ಎಂದೇ ವಿಮರ್ಶೆ ಮಾಡಿದ್ದರು. ಆದರೆ, ಸಿನಿಮಾ ಮಾತ್ರ ಕಟು ವಿಮರ್ಶೆಗಳಿಂದ ಮೇಲೆ ಏಳಲೇ ಇಲ್ಲ. ಮೊದಲ ವಾರವಿದ್ದ ಕಲೆಕ್ಷನ್ ಓಟ, ಎರಡನೇ ವಾರಕ್ಕೆ ಅಂಗಾತ ಮಲಗಿತು. ಈ ಮೂಲಕ ಈ ವರ್ಷದ ಹೈಪ್ ಸೃಷ್ಟಿಸಿ ಸೋತ ಕನ್ನಡದ ದೊಡ್ಡ ಬಜೆಟ್‌ನ ಸಿನಿಮಾ ಎಂಬ ಹಣೆಪಟ್ಟಿಯನ್ನೂ ಪಡೆದುಕೊಂಡಿತು ಮಾರ್ಟಿನ್.
ಎಪಿ ಅರ್ಜುನ್ ನಿರ್ದೇಶನದ ಸಿನಿಮಾ
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವನ್ನು ಅದ್ದೂರಿ ನಿರ್ದೇಶಕ ಎ.ಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಆಕ್ಷನ್ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದರು. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ಕನ್ನಡದ ಜತೆಗೆ ಬಹುಭಾಷೆಯ ಹಲವು ನಟರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಈಗ ಇದೇ ಸಿನಿಮಾದ ಒಟಿಟಿ ಬಿಡುಗಡೆಯ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ ಮತ್ತು ಅನ್ವೇಶಿ ಜೈನ್ ನಟಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಎಪಿ ಅರ್ಜುನ್ ನಿರ್ದೇಶಿಸಿದ್ದಾರೆ. ಬರೋಬ್ಬರಿ 250ಕ್ಕೂ ಅಧಿಕ ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಕ್ಲೈಮ್ಯಾಕ್ಸ್‌ನ ಆಕ್ಷನ್ ಎಪಿಸೋಡ್‌ಅನ್ನು ಸುಮಾರು 52 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ಈ ಒಟಿಟಿಯಲ್ಲಿ ಮಾರ್ಟಿನ್
ಮಾರ್ಟಿನ್ ಸಿನಿಮಾದ ಒಟಿಟಿ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಅದೇ ರೀತಿ ಈ ಚಿತ್ರದ ಡಿಜಿಟಲ್ ಹಕ್ಕನ್ನು ಜೀ 5 ಪಡೆದುಕೊಂಡಿದೆ. ಅದರಂತೆ, ಇದೇ ತಿಂಗಳ 23 ರಿಂದ ಮಾರ್ಟಿನ್ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ಹೇಳಲಾಗುತ್ತಿದೆ. ಕನ್ನಡವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.
ಮಾರ್ಟಿನ್ ಕಥೆ ಏನು?
ಅರ್ಜುನ್ (ಧ್ರುವ ಸರ್ಜಾ) ಒಬ್ಬ ಕಸ್ಟಮ್ಸ್ ಅಧಿಕಾರಿ. ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಅಧಿಕಾರಿಗಳು ರಹಸ್ಯ ಕಾರ್ಯಾಚರಣೆಗಾಗಿ ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ. ಆದರೆ ಅಲ್ಲಿ ನಡೆದ ಅಪಘಾತದಲ್ಲಿ ಅರ್ಜುನ್ ತನ್ನ ಹಿಂದಿನದನ್ನು ಮರೆತುಬಿಡುತ್ತಾನೆ. ಅವನು ಯಾರೆಂದು ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ಈ ಅನ್ವೇಷಣೆಯಲ್ಲಿ ಅರ್ಜುನ್ ಜೊತೆ ಸೇರಲು ಬಯಸಿದವರೆಲ್ಲರೂ ಅವನ ಕಣ್ಣುಗಳ ಮುಂದೆ ಸಾಯುತ್ತಾರೆ. ಪ್ರೇಯಸಿಯ (ವೈಭವಿ ಸ್ಯಾಂಡಿಲ್ಯ) ಜೀವ ಅಪಾಯದಲ್ಲಿದೆ ಎಂದು ತಿಳಿದು ಅರ್ಜುನ್ ಭಾರತಕ್ಕೆ ಬರುತ್ತಾನೆ. ಅಷ್ಟಕ್ಕೂ ಅರ್ಜುನ್ ಮತ್ತು ಮಾರ್ಟಿನ್ ನಡುವಿನ ಸಂಬಂಧ ಏನು ಎಂಬುದೇ ಈ ಸಿನಿಮಾದ ಕಥೆ.