ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವು; ರಘು ದೀಕ್ಷಿತ್‌ ಹಾಡಿರುವ ಕಂಗುವಾ ಸಿನಿಮಾ ಮನ್ನಿಸು ಹಾಡಿನ ಲಿರಿಕ್ಸ್‌ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವು; ರಘು ದೀಕ್ಷಿತ್‌ ಹಾಡಿರುವ ಕಂಗುವಾ ಸಿನಿಮಾ ಮನ್ನಿಸು ಹಾಡಿನ ಲಿರಿಕ್ಸ್‌ ಇಲ್ಲಿದೆ

ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವು; ರಘು ದೀಕ್ಷಿತ್‌ ಹಾಡಿರುವ ಕಂಗುವಾ ಸಿನಿಮಾ ಮನ್ನಿಸು ಹಾಡಿನ ಲಿರಿಕ್ಸ್‌ ಇಲ್ಲಿದೆ

Kanguva Mannisu Song: ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಮನ್ನಿಸು ಹಾಡು ಇತ್ತೀಚೆಗೆ ರಿಲೀಸ್‌ ಆಗಿದೆ. ವರದರಾಜ್‌ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿರುವ ಹಾಡಿಗೆ ರಘು ದೀಕ್ಷಿತ್‌ ದನಿಗೂಡಿಸಿದ್ದಾರೆ. ಶಿವ ನಿರ್ದೇಶನದ ಕಂಗುವಾ ಸಿನಿಮಾ ನವೆಂಬರ್‌ 14ಕ್ಕೆ ವಿಶ್ವಾದ್ಯಂತ ರಿಲೀಸ್‌ ಆಗಲಿದೆ.

ಕಂಗುವಾ ಚಿತ್ರದ ಮನ್ನಿಸು ಹಾಡಿಗೆ ದನಿಯಾದ ರಘು ದೀಕ್ಷಿತ್‌
ಕಂಗುವಾ ಚಿತ್ರದ ಮನ್ನಿಸು ಹಾಡಿಗೆ ದನಿಯಾದ ರಘು ದೀಕ್ಷಿತ್‌ (Courtesy: The Raghu Dixit Project , Saregama Kannada, @StudioGreen2)

Kanguva Mannisu Song: ಸೂರ್ಯ ದ್ವಿಪಾತ್ರದಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಕಂಗುವಾ ನವೆಂಬರ್‌ 14ಕ್ಕೆ ರಿಲೀಸ್‌ ಆಗುತ್ತಿದೆ. ತಮಿಳು ಭಾಷೆಯ ಜೊತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಭಾನುವಾರ ರಾತ್ರಿ ಚಿತ್ರತಂಡ ಟ್ರೈಲರ್‌ ಹಂಚಿಕೊಂಡಿದ್ದು ಸಿನಿಮಾ ಅಡ್ವಾನ್ಸ್‌ ಬುಕ್ಕಿಂಗ್‌ ಕೂಡಾ ಆರಂಭವಾಗಿದೆ.

ರಘು ದೀಕ್ಷಿತ್‌ ಹಾಡಿರುವ ಹಾಡು

ಕಂಗುವಾ ಚಿತ್ರತಂಡ ಚಿತ್ರದ ಲಿರಿಕಲ್‌ ಹಾಡುಗಳನ್ನು ಕೂಡಾ ರಿಲೀಸ್‌ ಮಾಡಿದೆ. ಎಲ್ಲಾ ಹಾಡುಗಳು ಸಿನಿಪ್ರಿಯರ ಗಮನ ಸೆಳೆದಿದೆ. ಅದರಲ್ಲಿ ಮನ್ನಿಸು ಹಾಡನ್ನು ಖ್ಯಾತ ಗಾಯಕ ರಘು ದೀಕ್ಷಿತ್‌ ಹಾಡಿರುವುದು ವಿಶೇಷ. ಕನ್ನಡ , ತಮಿಳು, ತೆಲುಗು ಭಾಷೆಗಳಲ್ಲಿ ಈ ಹಾಡನ್ನು ರಘುದೀಕ್ಷಿತ್‌ ಹಾಡಿದ್ದಾರೆ. ಮಲಯಾಳಂನಲ್ಲಿ ಶರತ್‌ ಸಂತೋಷ್‌, ಹಿಂದಿಯಲ್ಲಿ ನಕಾಶ್‌ ಅಜಿಜ್‌ ಈ ಹಾಡಿಗೆ ದನಿಯಾಗಿದ್ದಾರೆ. ಕನ್ನಡದಲ್ಲಿ ವರದರಾಜ್‌ ಚಿಕ್ಕಬಳ್ಳಾಪುರ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕಂಗುವಾ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ಸೂರ್ಯ ಅಭಿನಯದ ಮಾಯಾವಿ, ಆರು, ಸಿಂಗಂ, ವೀರಂ ಸಿನಿಮಾಗಳಿಗೆ ದೇವಿಶ್ರೀ ಸಂಗೀತ ನೀಡಿದ್ದು ಇದು 5ನೇ ಸಿನಿಮಾ ಆಗಿದೆ. ಚಿತ್ರದ ಆಡಿಯೋ ಹಕ್ಕನ್ನು ಸರಿಗಮ ಆಡಿಯೋ ಸಂಸ್ಥೆ ಪಡೆದುಕೊಂಡಿದೆ.

ಮನ್ನಿಸು ಹಾಡಿನ ಸಾಹಿತ್ಯ ಹೀಗಿದೆ

 

ಭೂಮಿಯ ತೊಡೋ ಮನುಜನಿಗೂ

ದಾಹವ ತೀರಿಸೋ ನೆಲ ನೋಡು

ಕಡಿಯಲು ಬಂದ ಶತ್ರುವಿಗೂ

ನೇರಳನು ನೀಡೋ ಮರ ನೋಡು

ಅರಳಿದ ಹೂವನು ಕಿತ್ತವಗೆ

ಪರಿಮಳ ನೀಡೋ ಗುಣ ನೋಡು

ಉಳಿಯ ಪೆಟ್ಟನು ಕೊಡುವ ಕೈಗೆ

ಶಿಲ್ಪವ ಕೊಡುವ ಶಿಲೆ ನೋಡು

ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವು

ಮನ್ನಿಸಿದ ನಿನಗೆಂದು ಎದೆಯಲಿ ಭಾರವೇ ಇರದು

 

ಹೊಳೆ ಹೊಳೆವ ಕಡಲ ಅಲೆಯ ಹಿಂದೆ

ಅಡಗಿದೆ ವಂಚನೆ ಕಣಜ

ಆ ಸಾಗರದಾಳದ ಮೌನದ

ಲೋಕದ ಹಾಗಿರು ನೀ ಮನುಜ

ತಿಳಿದೋ ತಿಳಿಯದೆ ಮಾಡುವ ತಪ್ಪನು

ಕಲಿಯುತ ಸರಿ ಹೋಗುವನು

ಎಲ್ಲಾ ತಪ್ಪಿಗೆ ದಂಡನೆ ಕೊಟ್ಟರೆ

ಬೂದಿಯೆ ಉಳಿಯುವುದು

ಎಲೆ ಅನ್ನೋ ಕಣ್ಣೀರುದಿರಿಸಿ

ಮರ ಮಾಡಿದ ಪಾಪವು ಏನು?

ಎಲೆ ಬೇಸಿಗೆ ಕಾಲದಲ್ಲು

ನಲಿಯುತ ಹೂವಿನ ಗಂಧವ ಪಸರಿಸದೆ

ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವು

ಮನ್ನಿಸಿದ ನಿನಗೆಂದು ಎದೆಯಲಿ ಭಾರವೇ ಇರದು

 

ಒಂದು ಆನೆಯ ಸಗಣಿಯ ಬಿಸಿ ತಿಳಿದು

ಅದು ಸಾಗಿದ ದೂರ ಹೇಳ್ವೆ

ಹುಲಿಯ ಹೆಜ್ಜೆಯ ಆಳವ ಕಂಡು

ತೂಕವ ನಾ ಹೇಳ್ವೆ

ಒಂದು ಚಿಟ್ಟೆಯು ಹಾರಿ ಬರುವುದ ನೋಡಿ

ಮಳೆ ಬರೋ ಸಮಯ ಹೇಳ್ವೆ

ಒಂದು ಹಕ್ಕಿಯು ಹಾರುವ ದಿಕ್ಕನು ಕಂಡು

ಝರಿ ಎಲ್ಲಿದೆ ಹೆಲ್ವೆ

ತಿರುಗೋ ಈ ಗೊಂಡಾರಣ್ಯದ ಪ್ರತಿ ಮೂಲೆ

ಅರಿತವ ನಾನು

ಒಗಟಾದ ನಿನ್ನ ಮನಸನ್ನು

ಬಗೆದು ಅರಿವಾಗದೆ ನಾ ಸೋತೆನು

ಮನ್ನಿಸುವ ಗುಣವಿಲ್ಲದ ಈ ಲೋಕವೇ ಬರೀ ಶೂನ್ಯವು

ಮನ್ನಿಸಿದ ನಿನಗೆಂದು ಎದೆಯಲಿ ಭಾರವೇ ಇರದು

Whats_app_banner