ಕನ್ನಡ ಸುದ್ದಿ  /  ಮನರಂಜನೆ  /  ಜನಪ್ರಿಯ ಯೂಟ್ಯೂಬರ್‌ಗಳ ಗೆಳೆತನ ಕಂಡು ಕನ್ನಡಿಗರು ಮೂಕವಿಸ್ಮಿತ; ಡಾ ಬ್ರೋ ಗ್ಲೋಬಲ್‌ ಕನ್ನಡಿಗ ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಸ್ನೇಹಗೀತೆ

ಜನಪ್ರಿಯ ಯೂಟ್ಯೂಬರ್‌ಗಳ ಗೆಳೆತನ ಕಂಡು ಕನ್ನಡಿಗರು ಮೂಕವಿಸ್ಮಿತ; ಡಾ ಬ್ರೋ ಗ್ಲೋಬಲ್‌ ಕನ್ನಡಿಗ ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಸ್ನೇಹಗೀತೆ

Youtubers Friendship Story: ಕನ್ನಡದ ಜನಪ್ರಿಯ ಯೂಟ್ಯೂಬರ್‌ಗಳಾದ ಡಾ. ಬ್ರೋ ಖ್ಯಾತಿಯ ಗಗನ್‌ ಶ್ರೀನಿವಾಸ್‌, ಫ್ಲೈಯಿಂಗ್‌ ಪಾಸ್‌ಪೋರ್ಟ್‌ನ ಆಶಾ ಮತ್ತು ಕಿರಣ್‌, ಗ್ಲೋಬಲ್‌ ಕನ್ನಡಿಗ ಯೂಟ್ಯೂಬ್‌ ಚಾನೆಲ್‌ನ ಮಹಾಬಲ ರಾಮ್‌ ಅವರ ಸ್ನೇಹದ ಕಥೆ ಇಲ್ಲಿದೆ.

ಜನಪ್ರಿಯ ಯೂಟ್ಯೂಬರ್‌ಗಳ ಗೆಳೆತನದ ಕಥೆ
ಜನಪ್ರಿಯ ಯೂಟ್ಯೂಬರ್‌ಗಳ ಗೆಳೆತನದ ಕಥೆ

ಈಗ ಯೂಟ್ಯೂಬರ್‌ಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಅವಳಿಗಿಂತ, ಅವನಿಗಿಂತ ನಾನು ಹೆಚ್ಚು ಗಳಿಸಬೇಕು. ಅವರಿಗಿಂತ ಹೆಚ್ಚು ಫಾಲೋವರ್ಸ್‌ ನನಗಿರಬೇಕು ಇತ್ಯಾದಿ ಕಾಂಪಿಟೇಷನ್‌ ಇರುತ್ತದೆ. ಯೂಟ್ಯೂಬ್‌ ಚಾನೆಲ್‌ಗಳ ನಡುವೆ ಇಂತಹ ಸ್ಪರ್ಧೆ ಇರುತ್ತದೆ, ಯೂಟ್ಯೂಬರ್‌ಗಳಿಗೆ ಒಬ್ಬರನೊಬ್ಬರನ್ನು ನೋಡಿದರೆ ಆಗೋದಿಲ್ಲ ಎಂಬ ನಂಬಿಕೆಯೂ ಕೆಲವರಿಗೆ ಇರಬಹುದು. ಆದರೆ, ಕನ್ನಡದ ಮೂರು ಯೂಟ್ಯೂಬ್‌ ಚಾನೆಲ್‌ಗಳು ಇಂತಹ ನಂಬಿಕೆಯನ್ನು ಸುಳ್ಳಾಗಿಸಿವೆ. ಡಾ. ಬ್ರೋ ಖ್ಯಾತಿಯ ಗಗನ್‌ ಶ್ರೀನಿವಾಸ್‌, ಫ್ಲೈಯಿಂಗ್‌ ಪಾಸ್‌ಪೋರ್ಟ್‌ನ ಆಶಾ ಮತ್ತು ಕಿರಣ್‌, ಗ್ಲೋಬಲ್‌ ಕನ್ನಡಿಗ ಯೂಟ್ಯೂಬ್‌ ಚಾನೆಲ್‌ನ ಮಹಾಬಲ ರಾವ್‌ ಅವರ ಸ್ನೇಹ ಕಂಡು ಕನ್ನಡಿಗರು ಖುಷಿಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಮೂರು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಇರುವವರ ಸ್ನೇಹದ ಕಥೆ ಬಹುತೇಕರಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ಕೆಲವು ದಿನಗಳಿಂದ ಜನಪ್ರಿಯ ಯೂಟ್ಯೂಬರ್‌ ಗಗನ್‌ ಶ್ರೀನಿವಾಸ್‌ (ಡಾ. ಬ್ರೋ) ತಮ್ಮ ಚಾನೆಲ್‌ನಲ್ಲಿ ವಿಡಿಯೋಗಳನ್ನು ಅಪ್ಲೋಡ್‌ ಮಾಡುತ್ತಿರಲಿಲ್ಲ. ಡಾಕ್ಟರ್‌ ಬ್ರೋ ಮಿಸ್ಸಿಂಗ್‌ ಎಂದು ಸುದ್ದಿಯಾಗಿತ್ತು. ಡಾಕ್ಟರ್‌ ಬ್ರೋ ಎಲ್ಲಿಗೆ ಹೋಗಿದ್ದಾರೆ? ಅವರನ್ನು ಚೀನಾ ಸರಕಾರ ಬಂಧಿಸಿದೆಯೇ? ಇತ್ಯಾದಿ ಸುಳ್ಳುಸುದ್ದಿಗಳು, ಊಹಾಪೋಹಗಳು ಹಬ್ಬಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಗ್ಲೋಬಲ್‌ ಕನ್ನಡಿಗ ಯೂಟ್ಯೂಬ್‌ ಚಾನೆಲ್‌ನ ಮಹಾಬಲ ರಾಮ್‌ ಅವರು ಒಂದು ವಿಡಿಯೋ ಹಾಕಿದ್ದು, ಇಂತಹ ವದಂತಿಗಳಿಗೆ ಬ್ರೇಕ್‌ ಬಿದ್ದಿತ್ತು.

ಯೂಟ್ಯೂಬರ್‌ಗಳ ಗೆಳೆತನ

ಡಾ ಬ್ರೋ, ಗ್ಲೋಬಲ್‌ ಕನ್ನಡಿಗ, ಫ್ಲೈಯಿಂಗ್‌ ಪಾಸ್‌ಪೋರ್ಟ್‌ ಚಾನೆಲ್‌ನವರು ಹಲವು ವರ್ಷಗಳಿಂದ ಒಳ್ಳೆಯ ಫ್ರೆಂಡ್ಸ್‌ ಎಂಬ ವಿವರವನ್ನು ಮಹಾಬಲ ರಾಮ್‌ ಅವರು ಬಹಿರಂಗಪಡಿಸಿದ್ದಾರೆ. ಇವರು ವರ್ಷಕ್ಕೊಮ್ಮೆ ಒಟ್ಟಾಗಿ ಪ್ರವಾಸ ಕೈಗೊಳ್ಳುವ ಕುರಿತೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ತಮ್ಮ ಸ್ನೇಹ ಸಾರುವ ವಿಶೇಷ ಹಾಡೊಂದನ್ನೂ ನೀಡಿದ್ದಾರೆ. ಇವರೆಲ್ಲರೂ ಮೊದಲ ಬಾರಿಗೆ ಪರಿಚಯವಾಗಿ ಭೇಟಿಯಾದಗ ವರ್ಷಕ್ಕೊಮ್ಮೆ ಒಟ್ಟಿಗೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರು. ಈ ವರ್ಷ ಇವರು ಶೃಂಗೇರಿ, ಆಗುಂಬೆಗೆ ಹೋಗಿದ್ದರು. ವಿಶ್ವಕಪ್‌ ಸಮಯದಲ್ಲಿ ಡಾ. ಬ್ರೋ ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡದ ಜತೆ ಕೆಲಸ ಮಾಡಿದ್ದರು.

"ಡಾ. ಬ್ರೋ ಅವರು ಮುಂದಿನ ದಿನಗಳಲ್ಲಿ ಯೂಟ್ಯೂಬ್‌ ಅಪ್ಲೋಡ್‌ ಮಾಡಿಯೇ ಮಾಡುತ್ತಾರೆ. ನಿಮ್ಮೆಲ್ಲರ ಪ್ರೀತಿ ಅವರ ಮೇಲೆ ಸದಾ ಇರಲಿ. ಯಾರಾದರೂ ಮನುಷ್ಯರು ಕಾಣದೆ ಇದ್ದರೆ ಯಾರೂ ಅಷ್ಟು ತಲೆ ಕೆಡಿಸಿಕೊಳ್ಳೋದಿಲ್ಲ. ಎಲ್ಲೋ ಇರ್ತಾನೆ, ಏನೋ ಮಾಡ್ತಾ ಇರ್ತಾನೆ ಅಂದುಕೊಳ್ಳುತ್ತಾರೆ. ಆದರೆ, ಡಾ. ಬ್ರೋ ಕುರಿತು ಎಲ್ಲರೂ ಕೇಳುತ್ತಿದ್ದಾರೆ ಎಂದರೆ ಎಲ್ಲರೂ ಅವನನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಅರ್ಥ. ಅವರ ಗುಣ, ಅವರ ಮೆಚ್ಯೂರಿಟಿ ಎಲ್ಲರ ಮನಸ್ಸನ್ನು ಮುಟ್ಟಿದೆ. ಮತ್ತೆ ಅವರಲ್ಲಿ ಯಾವುದೇ ರೀತಿಯ ಕರಪ್ಟ್‌, ಕ್ಯಾಲ್ಕುಲೇಷನ್‌ ಇಲ್ಲ. ಅದೇ ಎಲ್ಲಾ ಕನ್ನಡಿಗರಿಗೆ ಖುಷಿ ಕೊಟ್ಟ ವಿಚಾರ" ಎಂದು ಮಹಾಬಲರಾವ್‌ ತಮ್ಮ ಗ್ಲೋಬಲ್‌ ಕನ್ನಡಿಗ ಚಾನೆಲ್‌ನಲ್ಲಿ ಹೇಳಿದ್ದಾರೆ.

ಯೂಟ್ಯೂಬರ್‌ಗಳ ಸ್ನೇಹಗೀತೆ

ಇದೇ ವಿಡಿಯೋದಲ್ಲಿ ಯೂಟ್ಯೂಬರ್‌ ಮಹಾಬಲರಾವ್‌ ಅವರು ಒಂದು ಹಾಡು ಹಾಡಿದ್ದಾರೆ. "ಈ ಸ್ನೇಹ ಅಮರವಾಗಿದೆ, ಮನಸ್ಸೆಂಬ ಮಂದಿರದಲ್ಲಿ ಮೂಡಿದೆ. ಹಾಡೊಂದ ನಾನು ಹಾಡಿದೆ. ಗೆಳೆತನವೇ ಈ ಬದುಕಾಗಿದೆ" ಎಂಬ ಹಾಡಿನ ಮೂಲಕ ಮೂವರು ಯೂಟ್ಯೂಬರ್‌ಗಳ ಸ್ನೇಹ ಸಂಬಂಧವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಮಹಾಬಲರಾವ್‌ ಅವರು ಮಾಡಿರುವ ವಿಡಿಯೋ ಕಂಡು ಸಾಕಷ್ಟು ಜನರು ಖುಷಿಪಟ್ಟಿದ್ದಾರೆ. ಯೂಟ್ಯೂಬರ್‌ಗಳ ನಡುವೆ ಪೈಪೋಟಿ ಇರುವ ಕಾಲದಲ್ಲಿ ನಿಮ್ಮ ಸ್ನೇಹ ಅದ್ಭುತ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ನಿಜವಾಗಿ ನಿಮ್ಮಸ್ನೇಹ ಚಿರಕಾಲ ಇರಲಿ, ನಿಮ್ಮ ಸ್ನೇಹಕ್ಕೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ", "ನಮ್ಮ ಕನ್ನಡದ 4 ಬ್ಯುಟಿಫುಲ್ ರೊಸಸ್" "ನಿಮ್ಮ ಮೂರು ಜನಕ್ಕೂ ಒಳ್ಳೇದ್ ಆಗ್ಲಿ ಜೈ ಕನ್ನಡ" "ನಿಮ್ಮ ಗೆಳೆತನ ಸಾಂಗ್ ತುಂಬಾ ಚೆನ್ನಾಗಿದೆ" ಹೀಗೆ ನೂರಾರು ಕಾಮೆಂಟ್‌ಗಳ ಮೂಲ ಯೂಟ್ಯೂಬರ್‌ಗಳ ಸ್ನೇಹವನ್ನು ಕನ್ನಡಿಗರು ಸಂಭ್ರಮಿಸುತ್ತಿದ್ದಾರೆ.

IPL_Entry_Point