ಕನ್ನಡ ಸುದ್ದಿ  /  Entertainment  /  Kannada Serial Trp Puttakkana Makkalu Lakshmi Nivasa Ramachari Seetha Rama Serial Top 5 Kannada Serial Trp This Week Mnk

Kannada Serial TRP: ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಮತ್ತೆ ಅಗ್ರಸ್ಥಾನ, ಲಕ್ಷ್ಮೀ ನಿವಾಸ ಕುಸಿತ, ರಾಮಾಚಾರಿಗೂ ಸಿಕ್ತು ಬಡ್ತಿ

ಈ ವಾರ ಕಿರುತೆರೆಯ ಟಿಆರ್‌ಪಿಯಲ್ಲಿ ಅಚ್ಚರಿಯ ಬದಲಾವಣೆಗಳಾಗಿವೆ. ಟಾಪ್‌ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ, ಎರಡನೇ ಸ್ಥಾನಕ್ಕೆ ಕುಸಿತ ಕಂಡರೆ, ಮತ್ತೆ ನಂ. 1 ಸ್ಥಾನಕ್ಕೇರಿದೆ ಪುಟ್ಟಕ್ಕನ ಮಕ್ಕಳು.

Kannada Serial TRP: ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಮತ್ತೆ ಅಗ್ರಸ್ಥಾನ, ಲಕ್ಷ್ಮೀ ನಿವಾಸ ಕುಸಿತ, ರಾಮಾಚಾರಿಗೂ ಸಿಕ್ತು ಬಡ್ತಿ
Kannada Serial TRP: ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಮತ್ತೆ ಅಗ್ರಸ್ಥಾನ, ಲಕ್ಷ್ಮೀ ನಿವಾಸ ಕುಸಿತ, ರಾಮಾಚಾರಿಗೂ ಸಿಕ್ತು ಬಡ್ತಿ

Kannada Serial TRP Ratings: ಕನ್ನಡ ಕಿರುತೆರೆಯ ಈ ವಾರದ ಟಿಆರ್‌ಪಿಯಲ್ಲಿ ಹಲವು ಬದಲಾವಣೆಗಳು ಘಟಿಸಿವೆ. ಈ ಹಾವು ಏಣಿ ಆಟದಲ್ಲಿ, ಈ ವಾರ ಒಂದು ಸೀರಿಯಲ್‌ಗಳು ಮೇಲಕ್ಕೆ ಬಂದರೆ, ಇನ್ನು ಕೆಲವು ಕುಸಿತ ಕಂಡಿವೆ. ಹಾಗಾದರೆ, ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ ನೋಡೋಣ ಬನ್ನಿ.

ಪುಟ್ಟಕ್ಕನ ಮಕ್ಕಳು: ಹಿರಿಯ ನಟಿ ಉಮಾಶ್ರೀ, ಮಂಜು ಭಾಷಿಣಿ, ಸಂಜನಾ ಬುರ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದ ಮೂರು ವಾರಗಳಿಂದ ಎರಡನೇ ಸ್ಥಾನದಲ್ಲಿತ್ತು. ಇದೀಗ ಮತ್ತೆ ಟಿಆರ್‌ಪಿಯನ್ನು ಹೆಚ್ಚಿಸಿಕೊಂಡು, ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ.

ಲಕ್ಷ್ಮೀನಿವಾಸ: ಇತ್ತೀಚೆಗಷ್ಟೇ ಶುರುವಾದ ಲಕ್ಷ್ಮೀ ನಿವಾಸ ಸೀರಿಯಲ್‌ ಆರಂಭದಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಬರುತ್ತಿದೆ. ಅದರ ಪರಿಣಾಮವಾಗಿ, ಈ ಧಾರಾವಾಹಿ ಕಳೆ ಮೂರು ವಾರ ಟಾಪ್‌ ಸ್ಥಾನದಲ್ಲಿತ್ತು. ಈ ವಾರ ಅದ್ಯಾಕೋ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದೆ.

ರಾಮಾಚಾರಿ: ಇನ್ನು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಸೀರಿಯಲ್‌ ಟಾಪ್‌ ಐದರಲ್ಲಿ ಕಾಣಿಸಿದ್ದು ಕಡಿಮೆ. ಆದರೆ, ಈ ವಾರ ಟಾಪ್‌ ಐದರಲ್ಲಿ ಪ್ರವೇಶ ಪಡೆದು, ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಶ್ರೀರಸ್ತು ಶುಭಮಸ್ತು: ಸುಧಾರಾಣಿ, ಅಜಿತ್‌ ಹಂದೆ ಮುಖ್ಯಭೂಮಿಕೆಯಲ್ಲಿನ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್‌ ಸಹ ಒಂದಿಲ್ಲೊಂದು ಕುತೂಹಲದ ಮೂಲಕ ನೋಡುಗರ ಗಮನ ಸೆಳೆಯುತ್ತಿದೆ. ಈ ವಾರ ಈ ಸೀರಿಯಲ್‌ ನಾಲ್ಕನೇ ಸ್ಥಾನದಲ್ಲಿದೆ.

ಅಮೃತಧಾರೆ: ರಾಜೇಶ್‌ ನಟರಂಗ ಮತ್ತು ಛಾಯಾಸಿಂಗ್‌ ನಟನೆಯ ಅಮೃತಧಾರೆ ಸೀರಿಯಲ್‌ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಟಿಆರ್‌ಪಿ ವಿಚಾರದಲ್ಲೂ ಏರಿಳಿತ ಕಾಣುತ್ತ ಟಾಪ್‌ ಐದರಲ್ಲಿಯೇ ಈ ಸೀರಿಯಲ್‌ ಸ್ಥಾನ ಗಿಟ್ಟಿಸಿಕೊಳ್ಳುತ್ತಲೇ ಬರುತ್ತಿದೆ. ಈ ವಾರವೂ ಐದನೇ ಸ್ಥಾನದಲ್ಲಿದೆ.

ಸೀತಾ ರಾಮ: ಸೀತಾ ರಾಮ ಸೀರಿಯಲ್‌ನಲ್ಲಿ ಪ್ರೇಮಾಯಣಕ್ಕೆ ಶರಾ ಬಿದ್ದಿದೆ. ಅಶೋಕ- ಪ್ರಿಯಾ, ಸೀತಾ-ರಾಮ ಜೋಡಿ ಪ್ರೀತಿಯಲ್ಲಿ ಬಿದ್ದಿದೆ. ನೋಡುಗರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಇದೇ ಸೀರಿಯಲ್‌ ಈ ವಾರದ ಟಿಆರ್‌ಪಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.

ಸತ್ಯ: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸತ್ಯ ಸೀರಿಯಲ್‌ನಲ್ಲೀಗ ಸತ್ಯಳ ಪೊಲೀಸ್‌ ಖದರ್‌ ಎಲ್ಲರ ಆಕರ್ಷಣೆ. ಗೌತಮಿ ಜಾಧವ್‌, ಸಾಗರ್‌ ಬಿಳಿಗೌಡ ಮುಖ್ಯಭೂಮಿಕಯಲ್ಲಿನ ಈ ಸೀರಿಯಲ್‌ ಈ ವಾರ ಏಳನೇ ಸ್ಥಾನದಲ್ಲಿದೆ.

ಶ್ರೀಗೌರಿ: ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಮುಗಿದ ಬಳಿಕ ಶುರುವಾದ ಶ್ರೀಗೌರಿ ಟಾಪ್‌ 10ರಲ್ಲಿ ಆಗಮಿಸಿದೆ. ಅಮೂಲ್ಯ ಗೌಡ, ಸುನೀಲ್‌ ಪುರಾಣಿಕ್‌ ಮುಖ್ಯಭೂಮಿಕೆಯಲ್ಲಿರುವ ಈ ಸೀರಿಯಲ್‌ ಈ ವಾರ ಟಾಪ್‌ 8ನೇ ಸ್ಥಾನದಲ್ಲಿದೆ.