ಕನ್ನಡ ಸುದ್ದಿ  /  Entertainment  /  Kannada Television News A New Serial Brahmagantu Will Start Soon On Zee Kannada Brahmagantu Serial Caste Mnk

Bramhagantu New Serial: ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಸೀರಿಯಲ್‌ ಹೊಸ ವರ್ಷನ್‌; ಅಕ್ಕನಿಗಾಗಿ ತಂಗಿಯ ತ್ಯಾಗದ ಕಥೆಯಿದು

ಜೀ ಕನ್ನಡದಲ್ಲೀಗ ಹೊಸ ಸೀರಿಯಲ್‌ಗಳ ಪರ್ವ ಆರಂಭವಾಗಿದೆ. ಪಾರು, ಹಿಟ್ಲರ್‌ ಕಲ್ಯಾಣ ಧಾರಾವಾಹಿಗಳು ಮುಗಿಯುತ್ತಿದ್ದಂತೆ, ಹೊಸದಾಗಿ ಶ್ರಾವಣಿ ಸುಬ್ರಮಣ್ಯ ಆಗಮಿಸಿದೆ. ಈಗ ಬ್ರಹ್ಮಗಂಟು ಸೀರಿಯಲ್ ಪ್ರೋಮೋ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಅಕ್ಕ ತಂಗಿಯರ ಕಥೆ ಕಿರುತೆರೆಯ ಪರದೆ ಮೇಲೆ ಮೂಡಿಬರಲಿದೆ.

Bramhagantu New Serial: ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಸೀರಿಯಲ್‌ ಹೊಸ ವರ್ಷನ್‌; ಅಕ್ಕನಿಗಾಗಿ ತಂಗಿಯ ತ್ಯಾಗದ ಕಥೆಯಿದು
Bramhagantu New Serial: ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಸೀರಿಯಲ್‌ ಹೊಸ ವರ್ಷನ್‌; ಅಕ್ಕನಿಗಾಗಿ ತಂಗಿಯ ತ್ಯಾಗದ ಕಥೆಯಿದು

Bramhagantu New Serial: ಕನ್ನಡ ಕಿರುತೆರೆಯಲ್ಲೀಗ ಹಳೇ ಧಾರಾವಾಹಿಗಳ ಎರಾ ಮುಗಿಯುತ್ತ ಬಂದಿದೆ. ಈಗಾಗಲೇ ಸಾವಿರಾರು ಏಪಿಸೋಡ್‌ಗಳನ್ನು ಕಂಡಿದ್ದ ಒಂದಷ್ಟು ಸೀರಿಯಲ್‌ಗಳು ಪ್ರಸಾರದ ಓಟವನ್ನು ಮುಗಿಸಿಕೊಂಡಿವೆ. ಇತ್ತೀಚೆಗಷ್ಟೇ ಪಾರು ಮತ್ತು ಹಿಟ್ಲರ್‌ ಕಲ್ಯಾಣ ಸೀರಿಯಲ್‌ ಅಂತ್ಯಕಂಡಿದ್ದವು. ಆ ಸ್ಥಾನಕ್ಕೆ ಹೊಸ ಬಗೆಯ, ಹೊಸ ತಲೆಮಾರಿನ, ಕಲರ್‌ಫುಲ್‌ ಕಥೆಗಳನ್ನು ಹಿಡಿದು ಬರುತ್ತಿದೆ ಜೀ ಕನ್ನಡ. ಈಗಾಗಲೇ ಜೀ ಕನ್ನಡ, ಕಲರ್ಸ್‌ ಕನ್ನಡ, ಸ್ಟಾರ್‌ ಸುವರ್ಣ ಚಾನೆಲ್‌ಗಳಲ್ಲಿ ಹಲವು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿವೆ. ಈಗ ಮತ್ತೊಂದು ಕಥೆ ಶುರುವಾಗುತ್ತಿದೆ.

ಜೀ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಾದ ಮೇಲೊಂದು ಹೊಸ ಸೀರಿಯಲ್‌ಗಳ ಆಗಮನವಾಗುತ್ತಿದೆ. ಹೊಸ ರಿಯಾಲಿಟಿ ಶೋ ಮಹಾನಟಿಯೂ ಇನ್ನೇನು ಶುರುವಾಗಲಿದೆ. ಈ ನಡುವೆ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸವನ್ನೂ ಮಾಡುತ್ತಿರುವ ಜೀ ಕನ್ನಡ, ಬ್ರೇಕ್‌ ಫ್ರೀ ಸಂಚಿಕೆಗಳನ್ನೂ ನೋಡುಗರ ಮುಂದಿಡುತ್ತಿದೆ. ಮೊನ್ನೆ ಸೋಮವಾರವಷ್ಟೇ ಶ್ರಾವಣಿ ಸುಬ್ರಮಣ್ಯ ಅನ್ನೋ ಹೊಸ ಸೀರಿಯಲ್‌ಅನ್ನು ಪರಿಚಯಿಸಿತ್ತು. ಈಗ ನೋಡುಗರ ಮಡಿಲಿಗೆ ಇನ್ನೊಂದು ಕಥೆಯನ್ನು ಹಾಕಲು ಸಿದ್ಧತೆ ಮಾಡಿಕೊಂಡಿದೆ. ಅದೇ ಬ್ರಹ್ಮಗಂಟು ಸೀರಿಯಲ್!‌

ಈ ಹಿಂದೆ ಜೀ ಕನ್ನಡದಲ್ಲಿ ಬ್ರಹ್ಮಗಂಟು ಹೆಸರಿನ ಸೀರಿಯಲ್‌ ಪ್ರಸಾರ ಕಂಡಿತ್ತು. ಗೀತಾ ಭಾರತಿ ಭಟ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸುದೀರ್ಘ ನಾಲ್ಕು ವರ್ಷಗಳ ಕಾಲ ಪ್ರಸಾರ ಕಂಡಿದ್ದ ಈ ಸೀರಿಯಲ್‌, 2021ರಲ್ಲಿ ಕೊನೆಯಾಗಿತ್ತು. ರಮೇಶ್‌ ಇಂದಿರಾ, ಶ್ರುತಿ ನಾಯ್ಡು ಈ ಸೀರಿಯಲ್‌ ನಿರ್ಮಾಣ ಮಾಡಿದ್ದರು. ಈಗ ಅದೇ ಹೆಸರಿನಲ್ಲಿ ಮತ್ತೊಂದು ನಂಟು ಗಂಟಿನ ಕಥೆಯ ಜತೆಗೆ ಆಗಮಿಸಿದೆ ಬ್ರಹ್ಮಗಂಟು ಸೀರಿಯಲ್‌. ಇಲ್ಲಿ ಅಕ್ಕ ತಂಗಿಯ ಕಥೆಯೇ ಹೈಲೈಟ್.

ಇದು ಅಕ್ಕ ತಂಗಿಯರ ಬ್ರಹ್ಮಗಂಟು

ಬ್ರಹ್ಮಗಂಟು ಸೀರಿಯಲ್‌ ಇನ್ನೇನು ಶುರುವಾಗಲಿದೆ. ಈಗ ಮೊದಲಾರ್ಥ ಈ ಧಾರಾವಾಹಿಯ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಅಕ್ಕ ತಂಗಿಯರ ಕಥೆಯನ್ನು ಹೊತ್ತು ತರುತ್ತಿದೆ ವಾಹಿನಿ. ಅಕ್ಕ ನೋಡಲು ಚೆಂದ, ತಂಗಿ ಒಂಚೂರು ಕಪ್ಪು. ಹೀಗೆ ಚಿಕ್ಕಂದಿನಿಂದಲೇ ಒಂದಷ್ಟು ತಾರತಮ್ಯದ ಜತೆಗೆ ಇವರಿಬ್ಬರು ದೊಡ್ಡವರಾಗುತ್ತಾರೆ. ತಂಗಿಯನ್ನು ಕಂಡರೆ ಅಕ್ಕನಿಗೂ ಅಷ್ಟಕಷ್ಟೇ. ಆದರೆ, ಅಕ್ಕ ಎಂದರೆ ತಂಗಿಗೆ ಬಲು ಇಷ್ಟ. ಚಿಕ್ಕ ವಯಸ್ಸಲ್ಲೇ ಅಕ್ಕನಿಗಾಗಿ ಒಂದಷ್ಟು ತ್ಯಾಗ ಮಾಡುವ ಗುಣದವಳು ತಂಗಿ.

ಅಕ್ಕನಿಗೆ ತಂಗಿಯೇ ದೃಷ್ಟಿಬೊಟ್ಟು

ಅಕ್ಕ ಮಾಡಿದ ತಪ್ಪುಗಳನ್ನೆಲ್ಲ ತನ್ನ ತಲೆಮೇಲೆ ಹಾಕಿಕೊಳ್ಳುತ್ತ ಅಮ್ಮನಿಂದಲೇ ಪೆಟ್ಟು ತಿನ್ನುತ್ತಿರುತ್ತಾಳೆ ತಂಗಿ. ಚೆಂದುಳ್ಳಿ ಚೆಲುವಿ ಅಕ್ಕನ ಮೇಲೆ ಯಾರ ಕಣ್ಣೂ ಬೀಳಬಾರದೆಂದು, ಆಕೆಗೆ ದೃಷ್ಟಿಬೊಟ್ಟಾಗಿ ತಂಗಿ ಅಲ್ಲಿ ಇದ್ದೇ ಇರ್ತಾಳೆ. ಊರ ದೇವರ ಜಾತ್ರೆಯಲ್ಲೂ ನನಗೆ ಏನೂ ಬೇಡ, ನನ್ನಕ್ಕನಿಗೇ ಎಲ್ಲವನ್ನೂ ಕೊಟ್ಟು ಬಿಡು ತಾಯಿ ಅಂತ ಬೇಡಿಕೊಳ್ಳುವ ಗುಣದವಳು ತಂಗಿ. ಹೀಗೆ ಅಕ್ಕನಿಗಾಗಿ ಮಿಡಿಯುವ, ಅಕ್ಕನಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ತಂಗಿಯ ಕತೆಯೇ ಈ ಬ್ರಹ್ಮಗಂಟು.

ದಿಯಾ ಪಾಲಕ್ಕಲ್‌ ನಾಯಕಿಯಾಗಿ ಎಂಟ್ರಿ...

ಅಂದಹಾಗೆ, ಬ್ರಹ್ಮಗಂಟು ಸೀರಿಯಲ್‌ ಮೂಲಕ ಹೊಸ ಮುಖ ಕನ್ನಡಿಗರ ಮುಂದೆ ಬರುತ್ತಿದೆ. ಬಾಲನಟಿಯಾಗಿ ಗುರುತಿಸಿಕೊಂಡು, ಈಗ ಈ ಧಾರಾವಾಹಿ ಮೂಲಕ ಆಗಮಿಸುತ್ತಿದ್ದಾರೆ ನಟಿ ದಿಯಾ ಪಾಲಕ್ಕಲ್‌. ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಮೂಡಿಬಂದಿದ್ದ ಕಿನ್ನರಿ ಸೀರಿಯಲ್‌ನಲ್ಲಿ ಬಾಲನಟಿಯಾಗಿ, ಲಕ್ಷ್ಮೀ ಸ್ಟೋರ್ಸ್‌ ಸೀರಿಯಲ್‌ನಲ್ಲೂ ದಿಯಾ ಪಾಲಕ್ಕಲ್‌ ನಟಿಸಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಅಮ್ಮಚ್ಚಿ ಎಂಬ ನೆನಪು ಸಿನಿಮಾದಲ್ಲೂ ನಟಿಸಿದ್ದರು. ಈಗ ಪೂರ್ಣ ಪ್ರಮಾಣದ ನಾಯಕಿಯಾಗಿ ಬ್ರಹ್ಮಗಂಟು ಸೀರಿಯಲ್‌ ಮೂಲಕ ಎಂಟ್ರಿಕೊಟ್ಟಿದ್ದಾರೆ.

IPL_Entry_Point