ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಕಷ್ಟ ಸೀತೆಯ ಬೆನ್ನುಬಿದ್ದರೆ, ರಾಮನ ಪ್ರೀತಿಯೇ ಆಕೆಗೆ ಬೆಂಗಾವಲಾಗಿ ನಿಂತಿದೆ; ಫಲಿಸುತ್ತಾ ಕ್ರೇಜಿಸ್ಟಾರ್‌ ಪ್ರೇಮ ಪಾಠ?

Seetha Rama Serial: ಕಷ್ಟ ಸೀತೆಯ ಬೆನ್ನುಬಿದ್ದರೆ, ರಾಮನ ಪ್ರೀತಿಯೇ ಆಕೆಗೆ ಬೆಂಗಾವಲಾಗಿ ನಿಂತಿದೆ; ಫಲಿಸುತ್ತಾ ಕ್ರೇಜಿಸ್ಟಾರ್‌ ಪ್ರೇಮ ಪಾಠ?

Seetha Rama Serial Episode: 'ಸೀತಾ ರಾಮ' ಸೀರಿಯಲ್‌ ದಿನದಿಂದ ದಿನಕ್ಕೆ ಕುತೂಹಲದತ್ತ ಸಾಗುತ್ತಿದೆ. ಸಿಹಿ ಶಾಲೆಯ ಕಾರ್ಯಕ್ರಮದಲ್ಲಿ ಅಚ್ಚರಿಯ ರೀತಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ರಾಮನ ಎಂಟ್ರಿಯಾಗಿದೆ. ಸಿಹಿ ಮೊಗದಲ್ಲಿ ಖುಷಿಯ ಬುಗ್ಗೆ ಅರಳಿದೆ. ಇತ್ತ ಸೀತಾಳಿಗೆ ಕಷ್ಟವೂ ಬಂದೆರಗಿದೆ. ರಾಮ ಆಕೆಗೆ ಬೆಂಗಾವಲಾಗಿಯೂ ನಿಂತಿದ್ದಾನೆ.

Seetha Rama Serial: ಕಷ್ಟ ಸೀತೆಯ ಬೆನ್ನುಬಿದ್ದರೆ, ರಾಮನ ಪ್ರೀತಿಯೇ ಆಕೆಗೆ ಬೆಂಗಾವಲಾಗಿ ನಿಂತಿದೆ; ಫಲಿಸುತ್ತಾ ಕ್ರೇಜಿಸ್ಟಾರ್‌ ಪ್ರೇಮ ಪಾಠ?
Seetha Rama Serial: ಕಷ್ಟ ಸೀತೆಯ ಬೆನ್ನುಬಿದ್ದರೆ, ರಾಮನ ಪ್ರೀತಿಯೇ ಆಕೆಗೆ ಬೆಂಗಾವಲಾಗಿ ನಿಂತಿದೆ; ಫಲಿಸುತ್ತಾ ಕ್ರೇಜಿಸ್ಟಾರ್‌ ಪ್ರೇಮ ಪಾಠ?

Seetha Rama Serial: ಸಿಹಿಯ ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಚ್ಚರಿಯ ರೀತಿಯಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ದೇಸಾಯಿ ಗ್ರೂಪ್ಸ್‌ನ ಶ್ರೀರಾಮ್‌ ದೇಸಾಯಿ ಆಗಮಿಸಿದ್ದಾರೆ. ಕ್ರೇಜಿಸ್ಟಾರ್‌ ಪ್ರೇಕ್ಷಕರ ಬಾಲ್ಕನಿಯಲ್ಲಿ ಕೂತು ಮಕ್ಕಳ ಡಾನ್ಸ್‌ ಕಣ್ತುಂಬಿಕೊಂಡು, ಸ್ವೀಟ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ. ಇತ್ತ ರಾಮ್‌ ಸಹ ನೇರವಾಗಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ, ಸಿಹಿಗೆ ಶಾಕ್‌ ಕೊಟ್ಟಿದ್ದಾನೆ. ರಾಮ್‌ನನ್ನು ನೋಡುತ್ತಿದ್ದಂತೆ, ಸಿಹಿ ಮೊಗದಲ್ಲಿ ನಗು ಮೂಡಿದೆ.

ಟ್ರೆಂಡಿಂಗ್​ ಸುದ್ದಿ

ಇತ್ತ ರಾಮ್‌ ವೇದಿಕೆ ಏರುತ್ತಿದ್ದಂತೆ, ಸಿಹಿ ಸಹ ಆತನ ಬಳಿ ಅಂಟಿಕೊಂಡು ನಿಂತಿದ್ದಾಳೆ. ಈ ದೃಶ್ಯ ನೋಡಿದ ಸೀತಾ, ಇದ್ಯಾವ ಥರದ ನಂಟು, ನಾನು ಸಿಹಿಯನ್ನು ರಾಮ್‌ ಅವರಿಂದ ದೂರ ಮಾಡಿದಷ್ಟು, ಇವರಿಬ್ಬರೂ ಇನ್ನಷ್ಟು ಹತ್ತಿರವಾಗ್ತಿದ್ದಾರೆ. ಇಷ್ಟು ದಿನ ನಾನೇ ತಪ್ಪಾಗಿ ಯೋಚನೆ ಮಾಡದ್ನಾ? ಇವರಿಬ್ಬರದ್ದು ನಿಜವಾಗಲೂ ಸ್ಪೇಷಲ್‌ ಫ್ರೆಂಡ್‌ಶಿಪ್‌ ಎಂದು ಮನಸ್ಸಲ್ಲೇ ಮಾತನಾಡಿಕೊಂಡಿದ್ದಾಳೆ ಸೀತಾ.

ವೇದಿಕೆ ಮೇಲೆ ಗೆಸ್ಟ್‌ ಆಗಿ ಬಂದ ರವಿಮಾಮ, ಪ್ರೀತಿಯನ್ನು ಸೆಲೆಬ್ರೇಟ್‌ ಮಾಡೋ ನಾನು, ಮೈಕ್‌ ಕೊಟ್ಟರೆ ಏನು ಮಾತನಾಡಲಿ ಎಂದು ಮಾತು ಆರಂಭಿಸಿದ್ದಾರೆ. ಮಕ್ಕಳ ಮುಂದೆ ಯಾವತ್ತೂ ಸುಳ್ಳು ಹೇಳಬಾರದು. ಪ್ರತಿ ಕ್ಷಣವನ್ನೂ ಜೀವನದಲ್ಲಿ ಎಂಜಾಯ್‌ ಮಾಡಿ. ಮಕ್ಕಳ ಜತೆ ಮಕ್ಕಳಂತೆ ಇರಿ. ತಂದೆ ತಾಯಿಯನ್ನು ಮನಸಾರೆ ಪ್ರೀತಿಸ್ತಾಯಿರಿ ಎಂದು ಅತಿಥಿ ಭಾಷಣ ಮಾಡಿದ್ದಾರೆ. ರಾಮ್‌ ಸಹ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

ಇದೇ ವೇಳೆ ರವಿಚಂದ್ರನ್‌ ಬಳಿ ಬಂದ ಅಶೋಕ, ತನ್ನನ್ನು ಪರಿಚಯಿಸಿಕೊಂಡು ರಾಮನ ಬಗ್ಗೆ ಮಾತು ಆರಂಭಿಸಿದ್ದಾನೆ. ರಾಮ್‌ ಮನಸ್ಸಲ್ಲಿನ ಪ್ರೀತಿಯನ್ನು ಕ್ರೇಜಿಸ್ಟಾರ್‌ ಮುಂದೆ ಬಿಚ್ಚಿಟ್ಟಿದ್ದಾನೆ. ಇದೇ ವೇಳೆ ಸಿಹಿ, ರಾಮನನ್ನು ವೇದಿಕೆ ಮೇಲೆ ಕರೆದೊಯ್ದು ಲೆಟ್ಸ್‌ ಡಾನ್ಸ್‌ ಜೊತೆ ಜೊತೆ ಹಾಡಿಗೆ ಡಾನ್ಸ್‌ ಮಾಡಿದ್ದಾಳೆ. ಫ್ರೆಂಡ್‌ ರಾಮ್‌ ಜತೆ ಡಾನ್ಸ್‌ ಮಾಡಿ ಮನಸ್ಸು ಹಗುರಾಗುವಷ್ಟು ಕುಣಿದಿದ್ದಾಳೆ ಸಿಹಿ.

ಇದೆಲ್ಲ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪಕ್ಕದಲ್ಲಿಯೇ ಕೂತಿದ್ದ ಅಶೋಕನನ್ನು ನೋಡಿ, ಪ್ರಿಯಾ ಮನಸಲ್ಲೂ ಏನೇನೋ ಓಡುತ್ತಿದೆ. ಅಶೋಕ ಜತೆ ಪ್ರೇಮಲೋಕದ ಪಾರಿಜಾತವೇ ಹಾಡಿಗೆ ಕನಸಲ್ಲೇ ಡಾನ್ಸ್‌ ಮಾಡಿದ್ದಾಳೆ ಪ್ರಿಯಾ. ಅಶೋಕನನ್ನು ನೋಡುತ್ತ, ನಿನ್ನ ಜತೆ ಕೂತಿದ್ದಾಗ ಎಷ್ಟೊಂದು ಕಂಫರ್ಟ್‌ ಫೀಲ್‌ ಆಗುತ್ತೆ ಎಂದು ಮನಸ್ಸಲ್ಲಿಯೇ ಮಾತನಾಡಿಕೊಂಡಿದ್ದಾಳೆ ಪ್ರಿಯಾ.

ರವಿಮಾಮನಿಂದ ಸಿಕ್ತು ಟಿಪ್ಸ್‌

ಇತ್ತ ಸೀತಾ ಮತ್ತು ರಾಮ್‌ ಮತ್ತೆ ಒಂದೇ ಕಡೆ ಕೂಡಿದ್ದಾರೆ. ಆದರೆ, ಇಬ್ಬರಲ್ಲೂ ಮಾತಿಲ್ಲ ಕಥೆಯಿಲ್ಲ. ಇವರಿಬ್ಬರ ನಡುವೆ ಪ್ರವೇಶಿಸಿದ ರವಿಚಂದ್ರನ್‌, ಎಲ್ಲರಿಗೂ ಫೇಸ್‌ ರೀಡಿಂಗ್‌ ಗೊತ್ತಾಗಲ್ಲ ರಾಮ್.‌ ಸ್ವಲ್ಪ ಬಾಯಿ ಬಿಟ್ಟು ಹೇಳಬೇಕು. ಪರಿಶುದ್ಧವಾದ ಸ್ನೇಹಕ್ಕೆ ಯಾವ ಲೇಬಲ್‌ ಬೇಕಾಗಿಲ್ಲ. ಆಕಾಶ ಅಲ್ಲಿದೆ, ಭೂಮಿ ಇಲ್ಲಿದೆ.. ಹಾಗಂತ ಇವರಿಬ್ಬರ ಸಂಬಂಧ ದೂರ ಅಂತ ಹೇಳೋಕಾಗುತ್ತಾ? ಶುದ್ಧವಾದ ಸ್ನೇಹಕ್ಕೆ, ಮುಗ್ಧವಾದ ಪ್ರೀತಿಗೆ ಯಾವ ಹಂಗೂ ಇರಬಾರದು ಎಂದಿದ್ದಾರೆ.

ರವಿಚಂದ್ರನ್‌ ಪ್ರೇಮಪಾಠ ಫಲಿಸುತ್ತಾ?

ನಮ್ಮ ಹುಡುಗ ಸ್ವಲ್ಪ ಸ್ಲೋ. ನೀವೇ ಲೀಡ್‌ ತಗೋಳಿ. ಇವ್ರು ನಿಮ್ಮ ಬಾಸ್‌ ಅನ್ನೋದನ್ನು ಮನಸ್ಸಿಂದ ತೆಗೆದಾಕಿ. ಇವ್ರನ್ನ ಕಣ್ಣಿಂದ ನೋಡಬೇಡಿ, ಮನಸ್ಸಿಂದ ನೋಡಿ. ನೀನು ಮನಸ್ಸಲ್ಲಿರೋದನ್ನು ಬಾಯಿ ಬಿಟ್ಟು ಹೇಳು ಎಂದು ರಾಮ್‌ಗೆ ಕಿವಿಮಾತು ಹೇಳೆ ಅಲ್ಲಿಂದ ಹೊರಟಿದ್ದಾರೆ ರವಿಚಂದ್ರನ್. ‌ಅವರಿಬ್ಬರಿಗೂ ತಾವಿಬ್ಬರೂ ಸೀತಾ ರಾಮ ಎಂದು ಜ್ಞಾನೋದಯವಾದ ದಿನ ಬೊಂಬಾಟ್‌ ಆಗಿರುತ್ತೆ. ಕಾಂಪ್ಲಿಕೇಷನ್‌ ಇಲ್ಲದೆ ಲೈಫಿಲ್ಲ. ಅದರಲ್ಲಿಯೇ ನಾವು ಸ್ಯಾಟಿಸ್ಫ್ಯಾಕ್ಷನ್‌ ಹುಡುಕಿಕೊಳ್ಳಬೇಕು ಎಂದು ಅಶೋಕನ ಮುಂದೆ ಹೇಳಿಕೊಂಡಿದ್ದಾರೆ ರವಿಚಂದ್ರನ್.

ಸೀತೆಯ ಕಷ್ಟಕ್ಕೆ ಬೆಂಗಾವಲಾದ ರಾಮ..

ಮತ್ತೊಂದು ಕಡೆ ಕಾರ್ಯಕ್ರಮ ಮುಗಿಸಿ ಸಿಹಿ ಜತೆಗ ಮನೆಗೆ ಹೊರಟಿದ್ದಾಳೆ ಸೀತಾ. ಬನ್ನಿ ಡ್ರಾಪ್‌ ಮಾಡ್ತಿನಿ ಎಂದೂ ರಾಮ್‌ ಕೇಳಿದ್ದಾನೆ. ಇದಕ್ಕೆ ಬೇಡ ಸರ್‌, ನಿಮಗ್ಯಾಕೆ ತೊಂದರೆ, ನಾವೇ ಹೋಗ್ತಿವಿ ಎಂದಿದ್ದಾಳೆ. ಇತ್ತ ಒಂಟಿ ಹೆಣ್ಣು ರೋಡಲ್ಲಿ ಹೋಗ್ತಿದ್ದಂತೆ, ಕೆಲವು ಪುಡಾರಿಗಳ ಆಗಮನವಾಗಿದೆ. ಸೀತಾಳ ಬೆನ್ನು ಬಿದ್ದು ಚುಡಾಯಿಸಿದ್ದಾರೆ. ಅಷ್ಟೊತ್ತಿಗೆ ರಾಮನ ಎಂಟ್ರಿಯಾಗಿದೆ. ಕಷ್ಟ ಸೀತೆಯ ಬೆನ್ನುಬಿದ್ದಿದೆಯಾದರೂ, ರಾಮನ ಪ್ರೀತಿಯೇ ಆಕೆಗೆ ಬೆಂಗಾವಲಾಗಿ ನಿಂತಿದೆ!

IPL_Entry_Point