Bhagyalakshmi Serial: ರೂಮ್‌ನಲ್ಲಿ ಲಾಕ್ ಆದ ಸುಂದರಿಯನ್ನು ಕಾಪಾಡಿ ತಾನೂ ಸೇಫ್ ಆದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 30ರ ಸಂಚಿಕೆ ಹೀಗಿದೆ. ಸುಂದರಿ ಸಿಕ್ಕಿದರೆ ನಮಗೇ ತೊಂದರೆ ಎಂದು ಹೆದರುವ ತಾಂಡವ್ ಆಕೆಯನ್ನು ಯಾರಿಗೂ ತಿಳಿಯದಂತೆ ರೂಮ್‌ನಿಂದ ಹೊರ ಕಳಿಸಿ, ಇಲ್ಲಿ ಯಾರೂ ಇರಲಿಲ್ಲ ಎಂದು ಸುಳ್ಳು ಹೇಳುತ್ತಾನೆ.
Bhagyalakshmi Kannada Serial: ಅಮ್ಮನಿಂದ ದೂರಾಗಲೂ ನೀನೇ ಕಾರಣ ಎಂದು ಭಾಗ್ಯಾಳನ್ನು ದೂರುವ ತಾಂಡವ್, ಆಕೆಯ ಮೇಲೆ ಲಸ್ಸಿ ಎರಚುತ್ತಾನೆ. ಭಾಗ್ಯಾ ಸೀರೆ ಹಾಳಾಗಿರುವುದನ್ನು ನೋಡಿದ ಬಾಸ್ ಪತ್ನಿ ವೀಣಾ, ಆಕೆಯನ್ನು ಕರೆದೊಯ್ದು ತಮ್ಮ ಹೊಸ ಪಂಜಾಬಿ ಕುರ್ತಾ ನೀಡುತ್ತಾರೆ. ಭಾಗ್ಯಾ ಮುಜುಗರದಿಂದಲೇ ಅದನ್ನು ಧರಿಸುತ್ತಾಳೆ.
ಸುಂದರಿಯನ್ನು ರೂಮ್‌ನಲ್ಲಿ ನೋಡುವ ಗುಂಡಣ್ಣ
ಭಾಗ್ಯಾ ಹೊಸ ವೇಷ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜೊತೆಗೆ ಕಾಂಪ್ಲಿಮೆಂಟ್ಸ್ ಕೂಡಾ ನೀಡುತ್ತಾರೆ. ಶ್ರೇಷ್ಠಾ, ಸುಂದರಿಯನ್ನು ಎಳೆದೊಯ್ದು ರೂಮ್‌ನಲ್ಲಿ ಲಾಕ್ ಮಾಡುವುದನ್ನು ನೋಡುವ ಗುಂಡಣ್ಣ ಅದನ್ನು ಹೇಳಲು ಅಮ್ಮನ ಬಳಿ ಬರುತ್ತಾನೆ. ಅಷ್ಟರಲ್ಲಿ ಕಾರ್ಯಕ್ರಮ ಆರಂಭವಾಗುವ ಕಾರಣ ಎಲ್ಲರೂ ಅತ್ತ ಹೋಗುತ್ತಾರೆ. ಆದರೆ ಗುಂಡಣ್ಣ ಮಾತ್ರ, ನೀವೆಲ್ಲರೂ ಇಲ್ಲೇ ಇರಿ, ನಾನು ನಮ್ಮ ಅಜ್ಜಿಯ ಸೀರೆ, ನಮ್ಮ ಮನೆಯಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಕದ್ದ ಕಳ್ಳಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇನೆ ಎಂದು ಮನೆಯೊಳಗೆ ಹೋಗುತ್ತಾನೆ. ಅಲ್ಲೆಲ್ಲಾ ಹುಡುಕಾಡಿದಾಗ ಸುಂದರಿ, ಒಂದು ರೂಮ್‌ನಲ್ಲಿ ಲಾಕ್ ಆಗಿರುವುದು ತಿಳಿಯುತ್ತದೆ.
ಇತ್ತ ಲೊಹ್ರಿ ಕಾರ್ಯಕ್ರಮ ಆರಂಭವಾಗುತ್ತದೆ. ಎಲ್ಲರೂ ಬೆಂಕಿ ಕಟ್ಟಿಗೆ ಸುತ್ತ ನಿಲ್ಲುತ್ತಾರೆ. ಚಳಿಗಾಲ ಮುಗಿದು ಹೊಸ ಸೀಸರ್ ಆರಂಭವಾಗುವಷ್ಟರಲ್ಲಿ ಸುಗ್ಗಿ ಕೂಡಾ ಆರಂಭವಾಗುತ್ತದೆ. ಹಬ್ಬದ ಊಟ ಮಾಡಿ ಈ ಬೆಂಕಿ ಸುತ್ತಲೂ ಹಾಡುತ್ತಾ, ಕುಣಿಯುತ್ತಾ ಹಬ್ಬ ಆಚರಿಸುತ್ತೇವೆ. ಹಾಗೇ ಪ್ರಕೃತಿಗೆ ಕೂಡಾ ಧನ್ಯವಾದ ಅರ್ಪಿಸಬೇಕು. ಜೊತೆಗೆ ಬೆಂಕಿ ಸುತ್ತಲೂ ಸುತ್ತುತ್ತಾ ಹರಳು ಹಾಕಬೇಕು ಎಂದು ವೀಣಾ ತಮ್ಮ ಪಂಜಾಬಿ ಸಂಪ್ರದಾಯವನ್ನು ಎಲ್ಲರಿಗೂ ವಿವರಿಸುತ್ತಾರೆ. ಜೋಡಿಗಳೆಲ್ಲರೂ ಬೆಂಕಿ ಸುತ್ತ ಸುತ್ತಿ ಹರಳು ಹಾಕಿದರೆ ಆ ದಂಪತಿ ನೂರು ಕಾಲ ಸುಖವಾಗಿ ಜೊತೆಗೆ ಬಾಳುತ್ತಾರೆ ಎಂದೂ ಹೇಳುತ್ತಾರೆ. ವೀಣಾ ಸೂಚನೆಯಂತೆ ಪಾರ್ಟಿಗೆ ಬಂದಿದ್ದ ಜೋಡಿ ಬೆಂಕಿ ಸುತ್ತಲೂ ಸುತ್ತಿ ಹರಳು ಅರ್ಪಿಸುತ್ತಾರೆ. ಆದರೆ ಭಾಗ್ಯಾ, ತಾಂಡವ್ ದೂರ ನಿಂತಿದ್ದನ್ನು ನೋಡಿ ವೀಣಾ ಅನುಮಾನಗೊಂಡು ಇಬ್ಬರನ್ನೂ ಒಟ್ಟಿಗೆ ನಿಲ್ಲಲು ಹೇಳುತ್ತಾರೆ.
ಸುಂದರಿಯನ್ನು ಕಾಪಾಡಿ ತಾನೂ ಸೇಫ್ ಆಗುವ ತಾಂಡವ್
ತಾಂಡವ್ ಮಾತ್ರ, ಭಾಗ್ಯಾಳನ್ನು ದುರುಗುಡುತ್ತಾ, ಜೊತೆಗೆ ಬಂದು ನಿಲ್ಲದಂತೆ ಸನ್ನೆ ಮಾಡುತ್ತಾನೆ. ಆದರೆ ವೀಣಾ ಮಾತ್ರ ಇಬ್ಬರನ್ನೂ ಒಟ್ಟಿಗೆ ಕರೆ ತಂದು ನಿಲ್ಲಿಸುತ್ತಾರೆ. ಒಲ್ಲದ ಮನಸ್ಸಿನಿಂದಲೇ ತಾಂಡವ್ ಭಾಗ್ಯಾ ಜೊತೆ ಅಗ್ನಿ ಸುತ್ತಲೂ ಸುತ್ತಿ ಹರಳು ಹಾಕುತ್ತಾನೆ. ಅಷ್ಟರಲ್ಲಿ ಗುಂಡಣ್ಣ, ಕಳ್ಳಿಯನ್ನು ಕಂಡು ಹಿಡಿದಿದ್ದಾಗಿ ಅರಚುತ್ತಾ ಎಲ್ಲರ ಬಳಿ ಓಡಿ ಬರುತ್ತಾನೆ. ತನ್ಮಯ್ ಮಾತನ್ನು ಕೇಳಿ ತಾಂಡವ್, ಶ್ರೇಷ್ಠಾ ಗಾಬರಿ ಆಗುತ್ತಾರೆ. ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ ಕಳ್ಳಿ ರೂಮ್‌ನಲ್ಲಿ ಲಾಕ್ ಆಗಿದ್ದಾಳೆ ಬನ್ನಿ ತೋರಿಸುವೆ ಎಂದು ಗುಂಡಣ್ಣ ಕರೆದೊಯ್ಯುತ್ತಾನೆ. ಇನ್ನು ಸುಂದರಿ ಸಿಕ್ಕರೆ ನಾನೂ ತಾಂಡವ್ ಸಿಕ್ಕಿಹಾಕಿಕೊಂಡಂತೆ ಹಾಗೇನಾದರೂ ಆದರೆ ನನಗೆ ಮದುವೆ ಆಗುವುದಿಲ್ಲ, ತಾಂಡವ್ ನನಗೆ ಸಿಗುವುದಿಲ್ಲ ಎಂಬ ಭಯದಿಂದಲೇ ಶ್ರೇಷ್ಠಾ ಪ್ರಜ್ಞೆ ತಪ್ಪಿ ಬೀಳುತ್ತಾಳೆ.
ಸುಂದರಿಯನ್ನು ನೋಡಲು ಮನೆಯೊಳಗೆ ಹೋಗುತ್ತಿದ್ದ ಕುಸುಮಾ, ಭಾಗ್ಯಾ ಶ್ರೇಷ್ಠಾಳ ಪರಿಸ್ಥಿತಿ ನೋಡಿ ಅಲ್ಲೇ ನಿಲ್ಲುತ್ತಾರೆ. ಇದೇ ಸರಿಯಾದ ಸಮಯ ಎಂದುಕೊಂಡು ತಾಂಡವ್, ಮನೆಯೊಳಗೆ ಹೋಗಿ ಸುಂದರಿಯನ್ನು ಕಾಪಾಡುತ್ತಾನೆ. ಶ್ರೇಷ್ಠಾ ಎಚ್ಚರ ಆದಾಗ ಎಲ್ಲರೂ ಸುಂದರಿಯನ್ನು ಹಿಡಿದು ತರಲು ಮನೆಯೊಳಗೆ ಹೋಗುತ್ತಾರೆ. ಆದರೆ ಅಲ್ಲಿ ರೂಮ್‌ನಲ್ಲಿ ಸುಂದರಿ ಇರದಿದ್ದನ್ನು ನೋಡಿ ತನ್ಮಯ್ ಬೇಸರ ವ್ಯಕ್ತಪಡಿಸುತ್ತಾನೆ. ರೂಮ್‌ನಲ್ಲಿ ಯಾರೂ ಇರಲಿಲ್ಲ ಎಂದು ತಾಂಡವ್ ಸುಳ್ಳು ಹೇಳುತ್ತಾನೆ.
ಸುಂದರಿ ಎಸ್ಕೇಪ್ ಆಗಲು ಅಪ್ಪನೇ ಕಾರಣ ಎಂದು ತನ್ಮಯ್‌ಗೆ ತಿಳಿಯುವುದಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.