ಕನ್ನಡ ಸುದ್ದಿ  /  ಮನರಂಜನೆ  /  Jailer Twitter Review: ರಜಿನಿ ಫ್ಯಾನ್ಸ್‌ಗೆ ಹಬ್ಬದೂಟ ಹಾಕಿದ ಜೈಲರ್‌; ಸಿನಿಮಾ ನೋಡಿದ ಫ್ಯಾನ್ಸ್‌ ಏನಂದ್ರು? ಹೀಗಿದೆ ಟ್ವಿಟರ್‌ ರಿವ್ಯೂವ್‌

Jailer Twitter Review: ರಜಿನಿ ಫ್ಯಾನ್ಸ್‌ಗೆ ಹಬ್ಬದೂಟ ಹಾಕಿದ ಜೈಲರ್‌; ಸಿನಿಮಾ ನೋಡಿದ ಫ್ಯಾನ್ಸ್‌ ಏನಂದ್ರು? ಹೀಗಿದೆ ಟ್ವಿಟರ್‌ ರಿವ್ಯೂವ್‌

ಇಂದು (ಆ. 10) ಬಿಡುಗಡೆಯಾದ ರಜಿನಿಕಾಂತ್‌ ಅವರ ಜೈಲರ್‌ ಸಿನಿಮಾ ದೊಡ್ಡ ಮಟ್ಟದ ಓಪನಿಂಗ್‌ ಪಡೆದುಕೊಂಡಿದೆ. ವಿಮರ್ಶೆ ದೃಷ್ಟಿಯಿಂದಲೂ ಪಾಸಿಟಿವ್‌ ಪರಿಮಳವೇ ಹರಡುತ್ತಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅತ್ಯುತ್ತಮ ಕ್ಲೈಮ್ಯಾಕ್ಸ್‌ ಎಂಬ ಮೆಚ್ಚುಗೆ ಮಾತುಗಳೂ ಈ ಸಿನಿಮಾಕ್ಕೆ ಸಂದಾಯವಾಗುತ್ತಿವೆ. ಹೀಗಿದೆ ಟ್ವಿಟರ್‌ ವಿಮರ್ಶೆ.

Jailer Twitter Review: ರಜಿನಿ ಫ್ಯಾನ್ಸ್‌ಗೆ ಹಬ್ಬದೂಟ ಹಾಕಿದ ಜೈಲರ್‌; ಸಿನಿಮಾ ನೋಡಿದ ಫ್ಯಾನ್ಸ್‌ ಏನಂದ್ರು? ಹೀಗಿದೆ ಟ್ವಿಟರ್‌ ರಿವ್ಯೂವ್‌
Jailer Twitter Review: ರಜಿನಿ ಫ್ಯಾನ್ಸ್‌ಗೆ ಹಬ್ಬದೂಟ ಹಾಕಿದ ಜೈಲರ್‌; ಸಿನಿಮಾ ನೋಡಿದ ಫ್ಯಾನ್ಸ್‌ ಏನಂದ್ರು? ಹೀಗಿದೆ ಟ್ವಿಟರ್‌ ರಿವ್ಯೂವ್‌

Jailer Twitter Review: ಅಂತೂ ಸೂಪರ್ ಸ್ಟಾರ್ ರಜನೀಕಾಂತ್ ಗೆದ್ದಿದ್ದಾರೆ. ಜೈಲರ್ ಸಿನಿಮಾದ ಬಗ್ಗೆ ಪಾಸಿನಿಟಿವ್ ಟಾಕ್ ಕೇಳಿಬರುತ್ತಿದೆ. ಚಿತ್ರ ನೋಡಿದವರು ಜೈಲರ್ ಸಿನಿಮಾವನ್ನು ರಜನೀಕಾಂತ್ ಅಭಿನಯಿಸಿದ್ದ ಮೆಗಾ ಬ್ಲಾಕ್ ಬಸ್ಟರ್ ಬಾಷಾ ಜತೆಗೆ ಹೋಲಿಕೆ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ತಯಾರಾಗಿದ್ದ ಜೈಲರ್ ಸಿನಿಮಾಗೆ ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇನ್ನು ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ತಮನ್ನಾ ಭಾಟಿಯಾ ಅಭಿನಯಿಸಿದ್ದ “ನುವ್ವು ಕಾವಾಲಯ್ಯ” ಹಾಡು ಜೈಲರ್ ಸಿನಿಮಾದ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದರ ಜತೆಗೆ ಸಿನಿಮಾದ ಸ್ಟಾರ್ ಕಾಸ್ಟ್ ಕೂಡ ಭಾರೀ ಸುದ್ದಿ ಆಗಿತ್ತು. ಕನ್ನಡದಿಂದ ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಬಾಲಿವುಡ್ ನ ಜಾಕಿಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾ ಬಳಗವೇ ಜೈಲರ್ ಸಿನಿಮಾದಲ್ಲಿದೆ.

ಬೆಂಗಳೂರಿನಲ್ಲೇ ಚಿತ್ರ ಬಿಡುಗಡೆ ಆದ ಮೊದಲ ದಿನ 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ಈ ಸಿನಿಮಾ ಕಾಣುತ್ತಿದೆ. ಜೈಲರ್ ಸಿನಿಮಾ ಬಗ್ಗೆ ವಿಮರ್ಶೆ (Jailer Review) ಹೇಗಿದೆ, ಚಿತ್ರ ನೋಡಿದ ಪ್ರೇಕ್ಷಕರು ಏನು ಹೇಳುತ್ತಿದ್ದಾರೆ (Jailer Public Opinion), ಮೊದಲ ಪ್ರದರ್ಶನ ನೋಡಿ ಬಂದ ಪ್ರೇಕ್ಷಕ ಅಭಿಮಾನಿಗಳ ಸಿನಿಮಾ ರೇಟಿಂಗ್ (First Day First Show Jailer Review), ಜೈಲರ್ ಸಿನಿಮಾದ ಟ್ವಿಟ್ಟರ್ ವಿಮರ್ಶೆ (Twitter Review of Jailer) ಏನಿದೆ ಎಲ್ಲವನ್ನೂ ತಿಳಿಯುವುದಕ್ಕೆ ಮುಂದೆ ಓದಿ.

ಅಪ್‌ಡೇಟೆಡ್‌ ಪೀಳಿಗೆಯಲ್ಲೂ ಕ್ರೇಜ್‌

ರಜನಿಕಾಂತ್‌ ಅಂದರೆ ಅಲ್ಲಿ ಕೇವಲ ಅವರ ಕಾಲಘಟ್ಟದ ಅಭಿಮಾನಿಗಳು ಮಾತ್ರವಲ್ಲ, ಈಗಿನ ಅಪ್‌ಡೇಟೆಡ್‌ ಯುವಪೀಳಿಗೆಯೂ ಕಣ್ಣುಮಿಟುಕಿಸದೇ ರಜಿನಿ ಅವರ ಸಿನಿಮಾ ನೋಡುತ್ತಾರೆ. ಇದೀಗ ಅದೇ ಕುತೂಹಲ ಜೈಲರ್‌ ಸಿನಿಮಾದ ಮೇಲೆಯೂ ಇತ್ತು. ಸದ್ಯದ ವಿಮರ್ಶೆಗಳನ್ನು ನೋಡುತ್ತಿದ್ದರೆ, ರಜಿನಿ ಮತ್ತೊಮ್ಮೆ ಗೆದ್ದಿದ್ದಾರೆ. ಮಾಸ್‌ ಆಕ್ಷನ್‌ ಜತೆಗೆ ನೋಡುಗರನ್ನು ಸೆಳೆಯುವ ಕಥೆಯೂ ಈ ಸಿನಿಮಾದಲ್ಲಿರುವುದು ಪಕ್ಕಾ ಆಗಿದೆ. ಎರಡು ಶೇಡ್‌ಗಳಲ್ಲಿ ಎದುರಾಗಿರುವ ರಜಿನಿ ಅವರ ಕ್ಲಾಸ್‌ ಮತ್ತು ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಜೈಲರ್‌ ಟ್ರೆಂಡಿಂಗ್‌ನಲ್ಲಿದೆ. ಸಿನಿಮಾ ನೋಡಿದ ಅಭಿಮಾನಿಗಳು ತಮ್ಮ ವಿಮರ್ಶೆಯನ್ನು ಟ್ವಿಟ್‌ ಪುಟಕ್ಕೆ ಇಳಿಸುತ್ತಿದ್ದಾರೆ. ಚಿತ್ರ ಮೂಡಿ ಬಂದ ರೀತಿಗೆ, ಅದನ್ನೆ ಹೆಣೆದ ನಿರ್ದೇಶಕರ ಕೌಶಲಕ್ಕೆ ಪೂರ್ಣಾಂಕ ಸಂದಾಯವಾಗುತ್ತಿವೆ. ನಿರ್ದೇಶನ, ಮೇಕಿಂಗ್‌, ಛಾಯಾಗ್ರಹಣ, ಸಂಗೀತ ಹೀಗೆ ಎಲ್ಲ ವಿಭಾಗಗಳಿಂದಲೂ ಈ ಸಿನಿಮಾ ಫುಲ್‌ ಮಾರ್ಕ್ಸ್‌ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ ಪಾಸಿಟಿವ್‌ ವಿಮರ್ಶೆಗಳೇ ಸಂದಾಯವಾಗುತ್ತಿವೆ.

ನೆಟ್ಟಿಗರು ಸಿನಿಮಾ ಬಗ್ಗೆ ಮಾಡಿದ ಟ್ವಿಟ್‌ಗಳು ಹೀಗಿವೆ..

  • ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಜೈಲರ್‌ ಚಿತ್ರದ ಕ್ಲೈಮ್ಯಾಕ್ಸ್‌ ಅತ್ಯುತ್ತಮ ಕ್ಲೈಮ್ಯಾಕ್ಸ್‌
  • ತಲೈವಾ ಅವರನ್ನು ಇಷ್ಟೊಂದು ಅಚ್ಚುಕಟ್ಟಾಗಿ ಬಳಸಿಕೊಳ್ಳಬಹುದೆ ಎಂಬುದಕ್ಕೆ ಈ ಸಿನಿಮಾ ಸಾಕ್ಷಿ. ಚಿತ್ರಕಥೆ, ಸಂಭಾಷಣೆ ಎಲ್ಲವೂ ಸೂಪರ್.‌
  • ಜೈಲರ್ ಚಿತ್ರವು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪಾತ್ ಬ್ರೇಕಿಂಗ್ ಚಿತ್ರಗಳಲ್ಲಿ ಒಂದಾಗಲಿದೆ. ಇದು ತಮಿಳಿನಲ್ಲಿ ಮುರಿಯಲಾಗದ ದಾಖಲೆಗಳನ್ನು ಸೃಷ್ಟಿಸಲಿದೆ

ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point