ಕಸ್ತೂರಿ ಶಂಕರ್‌ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಕೋರ್ಟ್‌: ಯಾವುದೇ ಕ್ಷಣದಲ್ಲಾದರೂ ಜಾಣ ಸಿನಿಮಾ ನಾಯಕಿ ಅರೆಸ್ಟ್‌ ಸಾಧ್ಯತೆ
ಕನ್ನಡ ಸುದ್ದಿ  /  ಮನರಂಜನೆ  /  ಕಸ್ತೂರಿ ಶಂಕರ್‌ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಕೋರ್ಟ್‌: ಯಾವುದೇ ಕ್ಷಣದಲ್ಲಾದರೂ ಜಾಣ ಸಿನಿಮಾ ನಾಯಕಿ ಅರೆಸ್ಟ್‌ ಸಾಧ್ಯತೆ

ಕಸ್ತೂರಿ ಶಂಕರ್‌ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಕೋರ್ಟ್‌: ಯಾವುದೇ ಕ್ಷಣದಲ್ಲಾದರೂ ಜಾಣ ಸಿನಿಮಾ ನಾಯಕಿ ಅರೆಸ್ಟ್‌ ಸಾಧ್ಯತೆ

ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ನಟಿ ಕಸ್ತೂರಿ ಶಂಕರ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು ಯಾವುದೇ ಕ್ಷಣದಲ್ಲಾದರೂ ಜಾಣ ಸಿನಿಮಾ ನಟಿ ಕಸ್ತೂರಿ ಶಂಕರ್‌ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಸ್ತೂರಿ ಶಂಕರ್‌ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಕೋರ್ಟ್‌
ಕಸ್ತೂರಿ ಶಂಕರ್‌ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಕೋರ್ಟ್‌ (PC: Kasthuri Shankar)

ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಕಸ್ತೂರಿ ಶಂಕರ್‌ ಅರೆಸ್ಟ್‌ ಆಗುವುದು ಖಚಿತ ಎನ್ನಲಾಗುತ್ತಿದೆ. ಪ್ರಕರಣ ಸಂಬಂಧ ಕಸ್ತೂರಿ ಶಂಕರ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು ಯಾವುದೇ ಕ್ಷಣದಲ್ಲಾದರೂ ಆಕೆಯನ್ನು ಪೊಲೀಸರು ಅರೆಸ್ಟ್‌ ಮಾಡಬಹುದು ಎನ್ನಲಾಗುತ್ತಿದೆ.

ಕಸ್ತೂರಿ ಶಂಕರ್‌ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದ ತೆಲುಗು ಮಂದಿ

ಕಸ್ತೂರಿ ಶಂಕರ್‌ ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಈ ಬ್ಯೂಟಿ ರವಿಚಂದ್ರನ್‌ ಜೊತೆ ಜಾಣ, ರಮೇಶ್‌ ಜೊತೆ ತುತ್ತಾ ಮುತ್ತಾ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ದೂರಾದ ನಂತರವೂ ಕಸ್ತೂರಿ ಶಂಕರ್‌ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರು ತೆಲುಗು ಭಾಷೆ ಮತ್ತು ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಸ್ತೂರಿ ಶಂಕರ್‌ ಈ ಮಾತುಗಳು ವೈರಲ್‌ ಆಗುತ್ತಿದ್ದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಅಖಿಲ ಭಾರತ ತೆಲುಗು ಒಕ್ಕೂಟ ನಟಿ ಕಸ್ತೂರಿ ಶಂಕರ್‌ ವಿರುದ್ಧ ಚೆನೈನ ಎಗ್ಮೋರ್‌ ಪೊಲೀಸ್‌ ಠಾಣೆ ಸೇರಿ ಮಧುರೈನಲ್ಲಿಯೂ ದೂರು ದಾಖಲಿಸಲಾಗಿತ್ತು.

ವಿವಾದದ ನಂತರ ಕ್ಷಮೇ ಕೇಳಿದ್ದ ನಟಿ

ನವೆಂಬರ್‌ 4ರಂದು ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ಚೆನ್ನೈನಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಕಸ್ತೂರಿ ಶಂಕರ್‌ ಭಾಗವಹಿಸಿದ್ದರು. "300 ವರ್ಷಗಳ ಹಿಂದೆ ರಾಜನ ಸಂಗಾತಿಯ ಸಹಾಯಕರಾಗಿ ತೆಲುಗು ಮಂದಿ ತಮಿಳುನಾಡಿಗೆ ಬಂದವರು ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು" ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೆಲುಗು ಮಂದಿಯನ್ನು ಕೆರಳಿಸಿತ್ತು, ನಟಿಯ ಮಾತುಗಳಿಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಇದನ್ನು ನೋಡಿ ಕಸ್ತೂರಿ ಶಂಕರ್‌, ನಾನು ಹೇಳಿದ್ದೇ ಬೇರೆ, ನನ್ನ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ, ನಾನು ತೆಲುಗು ಜನರ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನಾನು ಎಷ್ಟೋ ತೆಲುಗು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದೇನೆ, ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದರು.

ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಕಸ್ತೂರಿ ಶಂಕರ್‌ ವಿರುದ್ಧ ಕೇಸ್‌ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ನೋಟೀಸ್‌ ಸಹ ನೀಡಲಾಗಿತ್ತು. ಆದರೆ ಕಸ್ತೂರಿ ಶಂಕರ್‌ ಅಜ್ಞಾತ ಸ್ಥಳದಲ್ಲಿದ್ದುಕೊಂಡು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದರೆ ಈಗ ಕೋರ್ಟ್‌ ಅರ್ಜಿಯನ್ನು ವಜಾ ಮಾಡಿದ್ದು, ಕಸ್ತೂರಿ ಶಂಕರ್‌ ಯಾವುದೇ ಕ್ಷಣದಲ್ಲಾದರೂ ಅರೆಸ್ಟ್‌ ಆಗುವ ಸಾಧ್ಯತೆ ಇದೆ.

 

Whats_app_banner