Lakshmi Baramma: ಲಾಯರ್ ಹೇಳಿದ ಮಾತಿನಲ್ಲಿ ನಂಬಿಕೆ ಇಟ್ಟ ವೈಷ್ಣವ್; ಜನ್ಮಕೊಟ್ಟ ತಾಯಿ ಬಗ್ಗೆ ಅನುಮಾನ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಳೆ ಎಂದು ಎಲ್ಲರಿಗೂ ಈಗ ಅರ್ಥ ಆಗುತ್ತಿದೆ. ವೈಷ್ಣವ್ ಈಗ ತನ್ನ ತಾಯಿಯ ಮೇಲೆ ಅನುಮಾನ ಪಡುತ್ತಿದ್ದಾನೆ. ಆದರೆ ಮುಂದೇನಾಯ್ತು ನೀವೇ ನೋಡಿ.
ಲಾಯರ್ ಹತ್ತಿರ ವೈಷ್ಣವ್ ಮಾತಾಡುತ್ತಾನೆ. ಆಗ ಲಾಯರ್ ತನಗೆ ಪೂರ್ತಿ ಸತ್ಯ ಗೊತ್ತಾಗದ ಹೊರತು ನಾನು ಏನನ್ನೂ ಮಾಡಲು ಸಾಧ್ಯ ಇಲ್ಲ ಎಂದು ಹೇಳುತ್ತಾರೆ. ಆಗ ವೈಷ್ಣವ್‌ಗೆ ತಲೆಬಿಸಿ ಆರಂಭವಾಗುತ್ತದೆ. ಯಾಕೆ ಇವರು ಈ ರೀತಿ ಮಾತಾಡ್ತಾ ಇದ್ದಾರೆ. ಇದರಲ್ಲಿ ಸತ್ಯ ಹಾಗೂ ಸುಳ್ಳು ಅಂತ ಏನಿದೆ. ಅಮ್ಮ ನಿಜವಾಗಿಯೂ ಕೊಲೆ ಮಾಡಲು ಪ್ರಯತ್ನ ಮಾಡಿದ್ದರಾ? ಎಂಬ ಪ್ರಶ್ನೆಗಳು ಅವನ ತಲೆಯೊಳಗಡೆ ಬರಲು ಆರಂಭವಾಗುತ್ತದೆ. ಆಗ ಕಾವೇರಿ ಲಾಯರ್ ಹಾಗೂ ವೈಷ್ಣವ್ ಇದ್ದ ಜಾಗದಲ್ಲಿ ಇರೋದಿಲ್ಲ. ಕಾವೇರಿ ಹತ್ತಿರ ಸತ್ಯ ಬಾಯ್ಬಿಡಿಸದೇ ಮುಂದೇನೂ ಆಗೋದಿಲ್ಲ ಎಂದು ಲಾಯರ್ ಹೇಳುತ್ತಾರೆ.
ಕಾವೇರಿ ನಿಜ ಹೇಳಿದರೆ ಮಾತ್ರ ನಾನು ವಾದ ಮಾಡಲು ಸಾಧ್ಯ. ಇಲ್ಲ ಎಂದರೆ ಅವರ ವಕೀಲರು ನಮ್ಮ ವಿರುದ್ಧವಾಗಿ ಏನಾದರೂ ಪ್ರಶ್ನೆ ಮಾಡಿದರೆ ನಮಗೆ ಉತ್ತರಿಸಲು ಸಾಧ್ಯ ಆಗೋದಿಲ್ಲ. ಹೀಗಾದಾಗ ನಮಗೆ ಸೋಲು ಖಚಿತ ಎಂದು ಹೇಳುತ್ತಾರೆ. ಆಯ್ತು ಅಮ್ಮನ ಹತ್ತಿರ ನಾನು ಮಾತಾಡ್ತೀನಿ ಎಂದು ವೈಷ್ಣವ್ ಹೇಳುತ್ತಾನೆ. ಲಾಯರ್ ಕೂಡ ಅದನ್ನೇ ಹೇಳುತ್ತಾರೆ. ಹೌದು ವೈಷ್ಣವ್ ಈಗ ನೀವೇ ಸತ್ಯ ತಿಳಿದುಕೊಳ್ಳಬೇಕು. ಇಲ್ಲ ಎಂದರೆ ಯಾವುದು ನಿಜ ಯಾವುದು ಸುಳ್ಳು ಎಂದು ಅರ್ಥ ಮಾಡಿಕೊಳ್ಳಲು ನಮಗೆ ಕಷ್ಟ ಆಗುತ್ತದೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ.
ವೈಷ್ಣವ್ - ಕಾವೇರಿ ಮಾತುಕತೆ
ವೈಷ್ಣವ್ ಸೀದಾ ಒಳಗಡೆ ಬರುತ್ತಾನೆ. ಅಲ್ಲೇ ಕಾವೇರಿ ಕುಳಿತು ವೈಷ್ಣವ್ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ಅವನು ಬಂದ ತಕ್ಷಣ ಎದ್ದು ನಿಂತು ಏನಂದ್ರು ಲಾಯರ್ ಎಂದು ಪ್ರಶ್ನೆ ಮಾಡುತ್ತಾಳೆ. ಈಗ ಕೀರ್ತಿ ಕಾವೇರಿ ವಿರುದ್ದ ದೂರು ನೀಡಿರುವುದರಿಂದ ಅವಳಿಗೆ ತಾನು ಬಚಾವ್ ಆಗೋದೊಂದೇ ತುಂಬಾ ಮುಖ್ಯ ಆಗಿರುತ್ತದೆ. ಅದನ್ನು ಹೊರತುಪಡಿಸಿ ಇನ್ನೇನೂ ಆಗಬೇಕಾಗಿರುವುದಿಲ್ಲ. ಆಗ ವೈಷ್ಣವ್ ಮತ್ತೆ ಅಮ್ಮ ನೀನು ನಿಜ ಹೇಳಿಬಿಡು ಎಂದು ಹೇಳುತ್ತಾನೆ. ಆದರೆ ಎಷ್ಟೇ ಹೇಳಿದರೂ ಯಾವ ವಿಷಯದ ಬಗ್ಗೆಯೂ ಕಾವೇರಿ ನಿಜ ಒಪ್ಪಿಕೊಳ್ಳೋದಿಲ್ಲ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.