ಕನ್ನಡ ಸುದ್ದಿ  /  ಮನರಂಜನೆ  /  Ott Hit Movies: ಥಿಯೇಟರ್ಸ್‌ನಲ್ಲಿ ಪ್ಲಾಪ್‌, ಒಟಿಟಿಯಲ್ಲಿ ಹಿಟ್‌; ಹೀಗಿವೆ ಡಿಜಿಟಲ್‌ ವೇದಿಕೆಯಲ್ಲಿ ಮ್ಯಾಜಿಕ್‌ ಮಾಡಿದ ಐದು ಸಿನಿಮಾಗಳು

OTT Hit Movies: ಥಿಯೇಟರ್ಸ್‌ನಲ್ಲಿ ಪ್ಲಾಪ್‌, ಒಟಿಟಿಯಲ್ಲಿ ಹಿಟ್‌; ಹೀಗಿವೆ ಡಿಜಿಟಲ್‌ ವೇದಿಕೆಯಲ್ಲಿ ಮ್ಯಾಜಿಕ್‌ ಮಾಡಿದ ಐದು ಸಿನಿಮಾಗಳು

Ott Hit Bollywood Movies: ಥಿಯೇಟರ್‌ಗಳಲ್ಲಿ ಸೋತ ಎಷ್ಟೋ ಸಿನಿಮಾಗಳು, ಒಟಿಟಿಯಲ್ಲಿ ಯಶಸ್ವಿಯಾಗಿವೆ. ಆ ಪೈಕಿ ಬಾಲಿವುಡ್‌ನ ಈ ಐದು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ಲಾಪ್‌ ಆಗಿ ಒಟಿಟಿಯಲ್ಲಿ ಹಿಟ್‌ ಆಗಿವೆ.

OTT Hit Movies: ಚಿತ್ರಮಂದಿರದಲ್ಲಿ ಪ್ಲಾಪ್‌, ಒಟಿಟಿಯಲ್ಲಿ ಹಿಟ್‌; ಹೀಗಿವೆ ಡಿಜಿಟಲ್‌ ವೇದಿಕೆಯಲ್ಲಿ ಮ್ಯಾಜಿಕ್‌ ಮಾಡಿದ ಐದು ಸಿನಿಮಾಗಳು
OTT Hit Movies: ಚಿತ್ರಮಂದಿರದಲ್ಲಿ ಪ್ಲಾಪ್‌, ಒಟಿಟಿಯಲ್ಲಿ ಹಿಟ್‌; ಹೀಗಿವೆ ಡಿಜಿಟಲ್‌ ವೇದಿಕೆಯಲ್ಲಿ ಮ್ಯಾಜಿಕ್‌ ಮಾಡಿದ ಐದು ಸಿನಿಮಾಗಳು

OTT Hit Movies: ಕಳೆದ ವರ್ಷ ಅನೇಕ ಬಾಲಿವುಡ್ ಸಿನಿಮಾಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದವು. ನಿರೀಕ್ಷೆ ಮೂಡಿಸಿದರೂ, ಗಳಿಕೆ ವಿಚಾರದಲ್ಲಿ ಸೋತು ಸುಣ್ಣವಾದವು. ವಿಮರ್ಶೆ ದೃಷ್ಟಿಯಿಂದಲೂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಆ ಸಿನಿಮಾಗಳು, ನಿರ್ಮಾಪಕರಿಗೆ ಹಾಕಿದ ಹಣವನ್ನೂ ತಂದುಕೊಡುವಲ್ಲಿ ವಿಫಲವಾದವು. ಆದರೆ, ಥಿಯೇಟರ್‌ಗಳಲ್ಲಿ ಪ್ಲಾಪ್‌ ಆದ ಈ ಚಿತ್ರಗಳು ಡಿಜಿಟಲ್ ವೇದಿಕೆಗೆ ಹಿಟ್‌ ಹಣೆಪಟ್ಟಿ ಪಡೆದುಕೊಂಡಿವೆ. ಹಾಗಾದರೆ, ಆ ಸಿನಿಮಾಗಳಾವವು? ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಮೇರಿ ಕ್ರಿಸ್‌ಮಸ್‌

ಕತ್ರಿನಾ ಕೈಫ್ ಮತ್ತು ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅಭಿನಯದ ಮೇರಿ ಕ್ರಿಸ್‌ಮಸ್‌ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆಕಂಡು, ಅಲ್ಲಿಂದ ಒಟಿಟಿಗೂ ಆಗಮಿಸಿತ್ತು. ಮೊದಲ ಸಲ ಒಂದಾಗಿದ್ದ ಈ ಜೋಡಿಯ ಚಿತ್ರಕ್ಕೆ ನಿರೀಕ್ಷೆ ಹೆಚ್ಚಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತವಾಗಿ ಸೋಲುಂಡಿತು. ಆದರೆ, ಈ ಮಿಸ್ಟರಿ ಥ್ರಿಲ್ಲರ್ ಶೈಲಿಯ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾದಾಗ, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಮೇನ್ ಅಟಲ್ ಹೂನ್

ಬಾಲಿವುಡ್‌ನ ಬಹುಮುಖ ಪ್ರತಿಭೆ ಪಂಕಜ್ ತ್ರಿಪಾಠಿ ಮೈ ಅಟಲ್ ಹೂನ್ ಚಿತ್ರದ ಮೂಲಕ ಇತ್ತೀಚೆಗಷ್ಟೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಈ ಚಿತ್ರ ವಿಫಲವಾಗಿತ್ತು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಸಾಧನೆ ಮಾಡಿತ್ತು. ಆದರೆ, ತಕ್ಷಣವೇ OTT ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ನೆಟಿಜನ್‌ಗಳಿಂದ ಬಹುಪರಾಕ್‌ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದಿರುವ ಈ ಸಿನಿಮಾ ಜಿ5ನಲ್ಲಿ ಪ್ರಸಾರವಾಗುತ್ತಿದೆ.

ತೇಜಸ್ (2023)

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಕಳೆದ ಕೆಲ ವರ್ಷಗಳಿದಂದ ಪ್ಲಾಪ್‌ ಶೋ ನೀಡುತ್ತಲೇ ಬಂದಿದ್ದಾರೆ. ಆ ಪೈಕಿ ಇತ್ತೀಚೆಗಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ತೇಜಸ್ ಸಿನಿಮಾ ಸಹ ಹೀನಾಯವಾಗಿ ಸೋಲನುಭವಿಸಿತ್ತು. ಗಳಿಕೆ ವಿಚಾರದಲ್ಲೂ ಮಕಾಡೆ ಮಲಗಿತ್ತು. ಹೀಗೆ ಸಿನಿಮಾ ಸೋತ ಎರಡು ತಿಂಗಳ ಬಳಿಕ ಡಿಜಿಟಲ್‌ ವೇದಿಕೆಗೆ ಬಂದ ಈ ಚಿತ್ರ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಕಂಗನಾ ಅಭಿನಯಕ್ಕೂ ಪೂರ್ಣಾಂಕ ಸಿಗುತ್ತಿದೆ. ಅಂದಹಾಗೆ ಈ ಸಿನಿಮಾ Zee5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ತ್ರಿ ಆಫ್‌ ಅಸ್‌ (2023)

ಶೆಫಾಲಿ ಶಾ ಮತ್ತು ಜೈದೀಪ್ ಅಹ್ಲಾವತ್ ಅಭಿನಯದ ತ್ರಿ ಆಫ್‌ ಅಸ್‌ ಚಿತ್ರವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಗಳಿಕೆ ವಿಚಾರದಲ್ಲಿ ಹೇಳಿಕೊಳ್ಳುವ ಗುರಿ ಮುಟ್ಟಲಿಲ್ಲ. ಆದಾಗ್ಯೂ, ನೆಟ್‌ಫ್ಲಿಕ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ಬಂದಾಗ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಶೆಫಾಲಿ ಷಾ ಮತ್ತೊಮ್ಮೆ ತನ್ನ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ.

ಸುಖಿ (2023)

ಸುಖಿ ಚಿತ್ರ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಅವರ ಕಮ್ ಬ್ಯಾಕ್ ಸಿನಿಮಾ. ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡೆ ಮುನ್ನಡೆದಿದ್ದರು ಈ ನಟಿ. ಆದರೆ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋಲನುಭವಿಸಿತು. ಆದರೆ OTTಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

IPL_Entry_Point