ಕನ್ನಡ ಸುದ್ದಿ  /  ಮನರಂಜನೆ  /  ‘ನಾಯಿ ಮರೀನಾದ್ರೂ ಸಾಕ್ತಿನಿ, ಆದ್ರೆ ಯಾವುದೇ ಕಾರಣಕ್ಕೂ ಮಕ್ಕಳು ಮಾಡಿಕೊಳ್ಳಲ್ಲ’; ತಾಯ್ತನದ ಬಗ್ಗೆ ಹಿತಾ ಚಂದ್ರಶೇಖರ್‌ ವ್ಯಾಖ್ಯಾನ

‘ನಾಯಿ ಮರೀನಾದ್ರೂ ಸಾಕ್ತಿನಿ, ಆದ್ರೆ ಯಾವುದೇ ಕಾರಣಕ್ಕೂ ಮಕ್ಕಳು ಮಾಡಿಕೊಳ್ಳಲ್ಲ’; ತಾಯ್ತನದ ಬಗ್ಗೆ ಹಿತಾ ಚಂದ್ರಶೇಖರ್‌ ವ್ಯಾಖ್ಯಾನ

ನಟಿ ಹಿತಾ ಚಂದ್ರಶೇಖರ್‌ ಮತ್ತು ಕಿರಣ್‌ ಶ್ರೀನಿವಾಸ್‌ ಮದುವೆಯಾಗಿ 4 ವರ್ಷದ ಮೇಲಾಯ್ತು. ಆದರೆ, ಮಕ್ಕಳು ಮಾಡಿಕೊಳ್ಳುವ ವಿಚಾರ ಈ ಜೋಡಿಗಿಲ್ಲ. ಈ ಬಗ್ಗೆ ಹೇಳುವ ಹಿತಾ, “ತಾಯ್ತನ, ಪೇರೆಂಟಿಂಗ್‌ ಅನುಭವಿಸಲು ಮಕ್ಕಳೇ ಮಾಡಿಕೊಳ್ಳಬೇಕು ಅಂತೇನಿಲ್ಲ. ನಮ್ಮದೇ ಮಗುನೇ ಆಗಿರಬೇಕು ಎಂದೂ ಇಲ್ಲ. ಒಂದು ನಾಯಿ ಮರಿಯನ್ನೂ ಕೂಡ ನಾವು ನಮ್ಮದೇ ಎಂದು ಸಾಕಬಹುದು” ಎಂದಿದ್ದಾರೆ

‘ನಾಯಿ ಮರೀನಾದ್ರೂ ಸಾಕ್ತಿನಿ, ಆದ್ರೆ ಯಾವುದೇ ಕಾರಣಕ್ಕೂ ಮಕ್ಕಳು ಮಾಡಿಕೊಳ್ಳಲ್ಲ’; ತಾಯ್ತನದ ಬಗ್ಗೆ ಹಿತಾ ಚಂದ್ರಶೇಖರ್‌ ಮಾತು
‘ನಾಯಿ ಮರೀನಾದ್ರೂ ಸಾಕ್ತಿನಿ, ಆದ್ರೆ ಯಾವುದೇ ಕಾರಣಕ್ಕೂ ಮಕ್ಕಳು ಮಾಡಿಕೊಳ್ಳಲ್ಲ’; ತಾಯ್ತನದ ಬಗ್ಗೆ ಹಿತಾ ಚಂದ್ರಶೇಖರ್‌ ಮಾತು

Hitha Chandrashekar about Motherhood: ಕಾಲ ಬದಲಾಗ್ತಿದೆ. ಜನರ ಮನಸ್ಥಿತಿಗಳು ಬದಲಾಗ್ತಿದೆ. ದೊಡ್ಡ ಕುಟುಂಬಗಳೀಗ ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡನೆ ಆಗ್ತಿವೆ. ಆಧುನಿಕತೆಯ ಓಟದಲ್ಲಿ ಕುಟುಂಬ ಎಂಬ ಪದದ ವ್ಯಾಖ್ಯಾನವೂ ಬದಲಾಗುತ್ತಿದೆ. ಮದುವೆ ಬೇಡ, ಆದರೂ ಕೊನೆವರೆಗೂ ಜತೆಗಿರೋಣ, ಮಕ್ಕಳು ಬೇಕು ಆದ್ರೆ ಮದುವೆ ಬೇಡ.. ಹೀಗೆ ಸಾಕಷ್ಟು ಏರಿಳಿತಗಳು ಸದ್ಯದ ಸಮಾಜದಲ್ಲಿದೆ. ಇದು ಅವರವರ ವೈಯಕ್ತಿಯ ಅಭಿಲಾಷೆಯಾದರೂ, ಭವಿಷ್ಯದ ಚಿಂತನೆಯ ಭಾಗವೂ ಹೌದು. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟ ಸಿಹಿ ಕಹಿ ಚಂದ್ರು ಅವರ ಪುತ್ರಿ ಹಿತಾ ಚಂದ್ರಶೇಖರ್‌, ಜೀವನದಲ್ಲಿ ಮಕ್ಕಳೇ ಬೇಡ ಎಂದು ನಿರ್ಧರಿಸಿದ್ದಾರೆ! ಅದಕ್ಕೆ ಕಾರಣ ಏನಿರಬಹುದು?

ಟ್ರೆಂಡಿಂಗ್​ ಸುದ್ದಿ

ಹಿತಾ ಚಂದ್ರ ಶೇಖರ್‌, ಸಿಹಿ ಕಹಿ ಚಂದ್ರಶೇಖರ ಅವರ ಹಿರಿಮಗಳು. 2019ರ ಡಿಸೆಂಬರ್‌ನಲ್ಲಿ ನಟ ಕಿರಣ್‌ ಶ್ರೀನಿವಾಸ್‌ ಜತೆಗೆ ಬಾಳ ಬಂಧನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಇದೀಗ ನಾಲ್ಕುವರೆ ವರ್ಷಗಳಾಗುತ್ತ ಬಂದರೂ ಈ ದಂಪತಿ ಮಕ್ಕಳು ಮಾಡಿಕೊಳ್ಳುವ ನಿರ್ಧಾರ ಮಾಡಿಲ್ಲ. ಹೋದಲ್ಲಿ ಬಂದಲ್ಲಿ, ಸಂಬಂಧಿಕರ ವಲಯದಲ್ಲೂ, ನಮ್ಮ ಕೈಗೆ ಮುದ್ದಾದ ಮೊಮ್ಮಗುವನ್ನು ಯಾವಾಗ ಕೊಡ್ತಿಯಾ ಎಂದು ಕೇಳಿದವರೇ ಹೆಚ್ಚು. ಆದರೆ, ಹಿತಾ ಅವರ ಆಲೋಚನೆಯೇ ಬೇರೆ. ಈ ಬಗ್ಗೆ ರ್ಯಾಪಿಡ್‌ ರಶ್ಮಿ ಅವರ ಚಾಟ್‌ ಶೋನಲ್ಲಿ ಮಾತನಾಡಿದ್ದಾರೆ.

"ಮೊದಲನೇದಾಗಿ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಫೀಲಿಂಗ್‌ ಇಲ್ಲ. ನಾನು ಮತ್ತು ಕಿರಣ್‌ ಫ್ರೆಂಡ್ಸ್‌ ಆಗಿದ್ದಾಗಲೇ ಈ ವಿಚಾರವನ್ನು ಮಾತನಾಡಿಕೊಂಡಿದ್ವಿ. ಆತನಿಂದಲೂ ಇದಕ್ಕೆ ಪಾಸಿಟಿವ್‌ ಉತ್ತರವೇ ಸಿಕ್ಕಿತ್ತು. ಯಾಕೆ ನನ್ನದೇ ಆದ ಮಗು ಬೇಕು? ಎಂಬ ಭಾವನೆ ನನಗಿಲ್ಲ. ಈ ನಡುವೆ ಈ ಜಗತ್ತಿನಲ್ಲಿ ಏನೆನೆಲ್ಲ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಪ್ರಪಂಚಕ್ಕೆ ಇನ್ನೊಂದು ಮಗು ತರಲೇಬೇಕಾ? ಎಂಬ ಪ್ರಶ್ನೆ ಇತ್ತು. ನನ್ನ ಥಾಟ್ಸ್‌ ರೀತಿಯಲ್ಲಿಯೇ ಕಿರಣ್‌ಗೂ ಹಾಗೇ ಅನಿಸಿತ್ತು"

ಮಕ್ಕಳು ಮಾಡಿಕೊಳ್ಳಲೇಬೇಕಾ?

"ಅಷ್ಟಕ್ಕೂ ತಾಯ್ತನ, ಪೇರೆಂಟಿಂಗ್‌ ಅನುಭವಿಸಲು ಮಕ್ಕಳೇ ಮಾಡಿಕೊಳ್ಳಬೇಕು ಅಂತೇನಿಲ್ಲವಲ್ಲ? ಅದರಲ್ಲೂ ನಮ್ಮದೇ ಮಗುನೇ ಆಗಿರಬೇಕು ಎಂದೂ ಇಲ್ಲ. ಒಂದು ನಾಯಿ ಮರಿಯನ್ನೂ ಕೂಡ ನಾವು ನಮ್ಮದೇ ಎಂದು ಸಾಕಬಹುದು. ಹೋದಲ್ಲಿ ಬಂದಲ್ಲಿ ತುಂಬ ಜನ ಕೇಳ್ತಾರೆ, ಈಗೇನೋ ವಯಸ್ಸಿದೆ, ಮುಂದೆ ವಯಸ್ಸಾದ ಮೇಲೆ ಏನ್‌ ಕಥೆ? ಇಳಿವಯಸ್ಸಿಗೆ ಬಂದ ಮೇಲೆ ಯಾರು ಗತಿ? ಕೊನೆಗಾಲಕ್ಕೆ ಯಾರು ನೋಡಿಕೊಳ್ತಾರೆ? ಎಂದು ಎಷ್ಟೋ ಜನ ನನ್ನನ್ನು ಪ್ರಶ್ನೆ ಮಾಡಿದ್ದಾರೆ. ಆದರೆ, ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ."

ಈಗಿನ ಪರಿಸ್ಥಿತಿ ಅರ್ಥಮಾಡಿಕೊಳ್ಳಿ

"ನಾನು ಈ ನಿರ್ಧಾರಕ್ಕೆ ಬರಲು ಕಾರಣ, ಇವತ್ತು ಎಷ್ಟೋ ಜನ ಅವರ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ತಿದ್ದಾರಾ? ಈ ಬಗ್ಗೆ ನಾವು ಪ್ರಶ್ನೆ ಮಾಡಬೇಕಿದೆ. ಸದ್ಯ ಸಮಾಜದಲ್ಲಿ ಏನಾಗ್ತಿದೆ ಅನ್ನೋದನ್ನು ನಾವಿಲ್ಲಿ ಪ್ರಶ್ನೆ ಮಾಡ್ತಿದ್ದೀವಿ. ಮಗ ಅಥವಾ ಮಗಳು ಎಲ್ಲೋ ದೂರದ ಅಮೆರಿಕಾದಲ್ಲಿ ಇರ್ತಾರೆ. ಇಲ್ಲಿ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೇ ಇರ್ತಾರೆ. ಇವಾಗ ಮಕ್ಕಳನ್ನು ಮಾಡಿಕೊಂಡರೂ ನಿಜವಾಗಲೂ ಅದರಿಂದ ಏನು ಪ್ರಯೋಜನ ಅನ್ನೋ ಪ್ರಶ್ನೆ ಬರುತ್ತೆ. ಸಮಯ ಕಳೆಯುವುದಕ್ಕೇ ಆಗ್ತಿಲ್ಲ ಈಗ. ಒಬ್ಬರಿಗೊಬ್ಬರಿಗೇ ಸಮಯ ಸಿಗ್ತಿಲ್ಲ. ಹೀಗಿರುವಾಗಲ ಮಕ್ಕಳು ಮಾಡಿಕೊಂಡು ಉಪಯೋಗವಾದ್ರೂ ಏನು?"

ಮನೆಯವರಿಂದಲೂ ಒಪ್ಪಿಗೆ ಸಿಕ್ಕಿದೆ

"ಇಬ್ಬರಲ್ಲಿ ಒಬ್ಬ ಪೇರೆಂಟ್‌ ಹೋಗಿಬಿಟ್ಟರೆ, ಸಿಂಗಲ್‌ ಆಗಿ ಇರ್ತಾರಲ್ಲ ಅವರ ಜೀವನ ಹೇಗೆ? ಅವರನ್ನು ನೋಡಿಕೊಳ್ಳುವವರಾರು? ಹಾಗಂತ ನಾನು ಇಲ್ಲಿ ಯಾರಿಗೂ ಮಕ್ಕಳನ್ನು ಮಾಡಿಕೊಳ್ಳಬೇಡಿ ಎಂದು ಹೇಳುತ್ತಿಲ್ಲ. ಇದು ನನ್ನ ನಿರ್ಧಾರ. ಅದನ್ನಿಲ್ಲಿ ಹೇಳುತ್ತಿದ್ದೇನೆ. ಹೆಮ್ಮೆಯ ವಿಷಯ ಏನು ಅಂದ್ರೆ, ಈ ವಿಚಾರವನ್ನು ನನ್ನ ಅಪ್ಪ ಅಮ್ಮನಿಗೂ ಹೇಳಿದ್ದೇನೆ. ಅವರಿಂದಲೂ ನನಗೆ ಬೆಂಬಲ ಸಿಕ್ಕಿದೆ. ಯಾರೂ ನನಗೆ ಒತ್ತಡ ಹೇರಿಲ್ಲ. ನನಗೆ ಸೆಕೆಂಡ್‌ ಸರ್ಕಲ್‌ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ಆಲೋಚನೆ ಏನು, ನಿರ್ಧಾರ ಏನು ಎಂಬುದನ್ನು ನನ್ನ ಹೆತ್ತವರು ಅರ್ಥ ಮಾಡಿಕೊಂಡಿದ್ದಾರೆ. ನನಗೆ ಅಷ್ಟೇ ನನಗೆ. ಕಿರಣ್‌ ಅವರ ತಂದೆ ಅಂದರೆ ನಮ್ಮ ಮಾವ ಕೂಡ ನಮ್ಮ ಈ ನಿರ್ಧಾರಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ವಯಸ್ಸಾದ ಮೇಲೂ ನಾವು ಹೀಗೆ ನಮ್ಮ ಸ್ನೇಹಿತ ವಲಯ ಒಟ್ಟಾಗಿ ಕಾಲ ಕಳೆಯುವ ನಿರ್ಧಾರ ಮಾಡಿದ್ದೇವೆ" ಎಂದಿದ್ದಾರೆ ಹಿತಾ.

IPL_Entry_Point