ಕನ್ನಡ ಸುದ್ದಿ  /  ಮನರಂಜನೆ  /  Tillu Square Ott: ಟಿಲ್ಲು ಸ್ಕ್ವೇರ್‌ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ; 120 ಕೋಟಿ ಕಮಾಯಿಸಿದ ಸಿನಿಮಾವನ್ನು ಮನೆಯಲ್ಲೇ ನೋಡಿ

Tillu Square OTT: ಟಿಲ್ಲು ಸ್ಕ್ವೇರ್‌ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ; 120 ಕೋಟಿ ಕಮಾಯಿಸಿದ ಸಿನಿಮಾವನ್ನು ಮನೆಯಲ್ಲೇ ನೋಡಿ

Tillu Square OTT Release Date: ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ತೆಲುಗು ಸಿನಿಮಾ ಟಿಲ್ಲು ಸ್ಕ್ವೇರ್‌ ಒಟಿಟಿ ಬಿಡುಗಡೆ ದಿನಾಂಕ ಖಚಿತಗೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ 120 ಕೋಟಿಗಿಂತಲೂ ಹೆಚ್ಚು ಗಳಿಕೆ ಮಾಡಿರುವ ಈ ಸಿನಿಮಾವನ್ನು ಮನೆಯಲ್ಲೇ ನೋಡಬಹುದಾಗಿದೆ.

Tillu Square OTT: ಟಿಲ್ಲು ಸ್ಕ್ವೇರ್‌ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ
Tillu Square OTT: ಟಿಲ್ಲು ಸ್ಕ್ವೇರ್‌ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಭಾರತದ ಚಿತ್ರರಂಗದಲ್ಲಿ ಟಿಲ್ಲು ಸ್ಕೇರ್‌ ಎಂಬ ತೆಲುಗು ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಇದೀಗ ಒಟಿಟಿ ಸಿನಿಮಾ ಪ್ರಿಯರಿಗೂ ಖುಷಿಯಾಗುವ ಸುದ್ದಿ ಬಂದಿದೆ. ಟಿಲ್ಲು ಸ್ಕ್ವೇರ್‌ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಇದೇ ಏಪ್ರಿಲ್‌ 26ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಟಿಲ್ಲು ಸ್ಕ್ವೇರ್‌ ಸಿನಿಮಾ ರಿಲೀಸ್‌ ಆಗಲಿದೆ ಎಂದು ಡೆಕ್ಕನ್‌ ಕ್ರಾನಿಕಲ್‌ ವರದಿ ಮಾಡಿದೆ. ಈ ಕುರಿತು ಇನ್ನಷ್ಟೇ ನೆಟ್‌ಫ್ಲಿಕ್ಸ್‌ ಕಡೆಯಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಟ್ರೆಂಡಿಂಗ್​ ಸುದ್ದಿ

ಟಿಲ್ಲು ಸ್ಕ್ವೇರ್‌ ಒಟಿಟಿ ಬಿಡುಗಡೆ ದಿನಾಂಕ

ಬಾಕ್ಸ್‌ ಆಫೀಸ್‌ನಲ್ಲಿ ನೂರು ಕೋಟಿಗೂ ಮಿಗಿಲು ಕಮಾಯಿಸಿದ ಟಿಲ್ಲು ಸ್ಕ್ವೇರ್‌ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವುದು ವಿಳಂಬವಾಗಬಹುದೆಂದು ಬಹುತೇಕರು ಭಾವಿಸಿದ್ದರು. ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿರುವ ಸಿನಿಮಾ ಒಟಿಟಿಗೆ ತುಸು ತಡವಾಗಿ ಬರಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಈ ಅಂದಾಜು ಸುಳ್ಳಾಗಿದೆ. ಒಟಿಟಿ ವರದಿಗಳ ಪ್ರಕಾರ ಟಿಲ್ಲು ಸ್ಕ್ವೇರ್‌ ಸಿನಿಮಾ ಸದ್ಯದಲ್ಲಿಯೇ ರಿಲೀಸ್‌ ಆಗಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಏಪ್ರಲ್‌ 26ರಂದು ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ನಟನೆಯ ಟಿಲ್ಲು ಸ್ಕ್ವೇರ್‌ ಸಿನಿಮಾ ರಿಲೀಸ್‌ ಆಗಲಿದೆ. ಏಪ್ರಿಲ್‌ 26ರಂದೇ ಒಟಿಟಿಯಲ್ಲಿ ರಿಲೀಸ್‌ ಆದ್ರೆ ಇದು ಒಂದು ತಿಂಗಳೊಳಗೆ ಒಟಿಟಿಗೆ ಪ್ರವೇಶಿಸಿದ ಸಿನಿಮಾವಾಗಲಿದೆ. ಮಾರ್ಚ್‌ 29ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಟಿಲ್ಲು ಸ್ಕ್ವೇರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಇನ್ನೊಂದೆಡೆ ಬಾಕ್ಸ್‌ ಆಫೀಸ್‌ನಲ್ಲಿ ಟಿಲ್ಲು ಸ್ಕ್ವೇರ್‌ ಕಲೆಕ್ಷನ್‌ ಮುಂದುವರೆದಿದೆ. ಇತ್ತೀಚಿನ ವರದಿಗಳ ಪ್ರಕಾರ ಟಿಲ್ಲು ಸ್ಕ್ವೇರ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 119 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಈ ಗಳಿಕೆ 120 ಕೋಟಿ ದಾಟಿದೆ. ಕಳೆದ ಕೆಲವು ದಿನಗಳಿಂದ ಟಿಲ್ಲು ಸ್ಕ್ವೇರ್‌ ಕಲೆಕ್ಷನ್‌ ಕಡಿಮೆಯಾಗಿದೆ. ಹೀಗಾಗಿ, ಒಟಿಟಿಯಲ್ಲಿ ರಿಲೀಸ್‌ ಮಾಡಲು ಚಿತ್ರತಂಡ ಉದ್ದೇಶಿಸಿರಬಹುದು. ಮೊದಲ ದಿನವೇ ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್‌ ಅಭಿನಯದ ಟಿಲ್ಲು ಸ್ಕ್ವೇರ್ ಸಿನಿಮಾವು ಮಧ್ಯಮ ರೇಂಜ್‌ನ ಹೀರೋಗಳ ಮಟ್ಟದಲ್ಲಿ ಕಲೆಕ್ಷನ್ ಮಾಡಿದಂತಿದೆ. ಅದರಲ್ಲೂ ನಿಜಾಮ್ ಏರಿಯಾದಲ್ಲಿ ಹೆಚ್ಚು ಹಣ ಗಳಿಕೆ ಮಾಡಿದೆ.. ನಿಜಾಮ್‌ ಏರಿಯಾದಲ್ಲಿ ನಾನಿ ನಟನೆಯ ದಸರಾ ಸಿನಿಮಾ ಮೊದಲ ದಿನ 6.78 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ವಿಜಯ್ ದೇವರಕೊಂಡ ಅವರ ಖುಷಿ ಚಿತ್ರ 5.15 ಕೋಟಿ ಗಳಿಸಿತ್ತು. ಇದೀಗ ಈ ಏರಿಯಾದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾವೆಂಬ ಹೆಗ್ಗಳಿಕೆಗೆ ತೆಲುಗಿನ ಈ ಟಿಲ್ಲು ಸ್ಕ್ವೇರ್‌ ಸಿನಿಮಾದ್ದಾಗಿದೆ.

ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಟಿಲ್ಲು ಸ್ಕ್ವೇರ್‌ 2022ರಲ್ಲಿ ಬಿಡುಗಡೆಯಾದ ಡಿಜೆ ಟಿಲ್ಲು ಎಂಬ ಚಲನಚಿತ್ರದ ಮುಂದುವರೆದ ಭಾಗ. ಡಿಜಿ ಟಿಲ್ಲು ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಅತ್ಯುತ್ತಮವಾಗಿ ಗಳಿಕೆ ಮಾಡಿತ್ತು. ಈ ಸಿನಿಮಾ ಬಿಡುಗಡೆಗೆ ಮುನ್ನವೇ ಹೊಸ ಕ್ರೇಜ್‌ ಹುಟ್ಟುಹಾಕಿತ್ತು. ಇದರ ಟ್ರೇಲರ್‌, ಟೀಸರ್‌, ಪೋಸ್ಟರ್‌, ಹಾಡುಗಳು ಹೊಸ ಕ್ರೇಜ್‌ ಹುಟ್ಟುಹಾಕಿತ್ತು.

IPL_Entry_Point