ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್!; ಇದಪ್ಪ ಸಂಸ್ಕಾರ‌, ಸಂಸ್ಕೃತಿ ಎಂದ ನೆಟ್ಟಿಗರು VIDEO-sandalwood news aishwarya rais daughter aaradhya bachchan fell on shiva rajkumars feet and was blessed at the siima mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್!; ಇದಪ್ಪ ಸಂಸ್ಕಾರ‌, ಸಂಸ್ಕೃತಿ ಎಂದ ನೆಟ್ಟಿಗರು Video

ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್!; ಇದಪ್ಪ ಸಂಸ್ಕಾರ‌, ಸಂಸ್ಕೃತಿ ಎಂದ ನೆಟ್ಟಿಗರು VIDEO

ಸೈಮಾ ಅವಾರ್ಡ್‌ ಕಾರ್ಯಕ್ರಮದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್, ಶಿವರಾಜ್‌ಕುಮಾರ್‌ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.

ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್.‌
ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್.‌

Shiva Rajkumar: ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌, ಇತ್ತೀಚಿನ ಕೆಲ ತಿಂಗಳಿಂದ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಸಿನಿಮಾಗಳಿಗಿಂತ, ವೈಯಕ್ತಿಕ ಬದುಕಿನ ಏರಿಳಿತಗಳ ಬಗ್ಗೆಯೇ ಅವರು ಸದ್ದು ಮಾಡುತ್ತಿದ್ದಾರೆ. ಇನ್ನೇನು ಅಭಿಷೇಕ್‌ ಬಚ್ಚನ್‌ ಜತೆಗೆ ಐಶ್ವರ್ಯಾ ರೈ ಅವರ ದಾಂಪತ್ಯ ಕೊನೆಯಾಗಲಿದೆ ಎಂಬ ಗಾಸಿಪ್‌ ನಿನ್ನೆ ಮೊನ್ನೆಯದಲ್ಲ. ಆ ವದಂತಿಗಳಿಗೆ ಕಿವಿಗೊಡದೆ, ಯಾವಾಯ್ತು ತಮ್ಮ ಕೆಲಸವಾಯ್ತು, ಮಗಳು ಆರಾಧ್ಯಾ ಜತೆಗಿನ ಸುತ್ತಾಟವಾಯ್ತು ಎಂದಷ್ಟೇ ಇರ್ತಾರೆ ಐಶ್ವರ್ಯಾ. ಇತ್ತೀಚೆಗಷ್ಟೇ ಇದೇ ಅಮ್ಮ ಮಗಳು ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮಕ್ಕೂ ಆಗಮಿಸಿದ್ದರು.

ಸೌತ್‌ ಇಂಡಿಯನ್‌ ಸಿನಿಮಾಗಳಿಗೆ ನೀಡುವ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಪ್ರಮುಖ ಆಕರ್ಷಣೆ ಆಗಿದ್ದರು. ಬಹುತೇಕ ವಿಶ್ವದ ಪ್ರತಿಷ್ಠಿತ ಸಿನಿಮೋತ್ಸಗಳಿಗೆ ತೆರಳಿ, ರೆಡ್‌ ಕಾರ್ಪೆಟ್‌ ಮೇಲೆ ರ್ಯಾಂಪ್‌ ವಾಕ್‌ ಮಾಡಿ ಎಲ್ಲರ ಮನಸೋರೆಗೊಳಿಸುವ ಐಶ್ವರ್ಯಾ, ಹೋದಲೆಲ್ಲ ಮಗಳು ಆರಾಧ್ಯಾ ಅವರನ್ನು ಕರೆದೊಯ್ಯುತ್ತಿರುತ್ತಾರೆ. ಅದೇ ರೀತಿ ಸೈಮಾ ಅವಾರ್ಡ್‌ ಕಾರ್ಯಕ್ರಮಕ್ಕೂ ಮಗಳ ಜತೆಗೆ ಆಗಮಿಸಿದ್ದರು ಐಶ್ವರ್ಯಾ. ಇದೀಗ ಇದೇ ಫಂಕ್ಷನ್‌ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶಿವರಾಜ್‌ಕುಮಾರ್‌ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾಳೆ ಐಶ್ವರ್ಯಾ ಪುತ್ರಿ ಆರಾಧ್ಯಾ!

ಐಶ್ವರ್ಯಾ ರೈ ಮೂಲತಃ ಕರ್ನಾಟಕದವರು. ಅದರಲ್ಲೂ ಮಂಗಳೂರಿನವರು. ಆಗೊಮ್ಮೆ ಈಗೊಮ್ಮೆ ಮಂಗಳೂರಿಗೋ ಅಥವಾ ಕೆಲ ಪುಣ್ಯ ಕ್ಷೇತ್ರಗಳಿಗೋ ಅವರ ಆಗಮನ ಆಗುತ್ತಲೇ ಇರುತ್ತದೆ. ಅದರಲ್ಲೂ ಸೌತ್‌ ಇಂಡಿಯನ್ಸ್‌ ಅಂದ್ರೆ ಉತ್ತರ ಭಾರತದವರಿಗಿಂತ ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರದಲ್ಲಿ ಮುಂದು. ಆ ಅನುಕರಣೆ ಐಶ್ವರ್ಯಾ ಪುತ್ರಿ ಆರಾಧ್ಯಗೂ ಬಳುವಳಿಯಾಗಿ ಬಂದಿದೆ. ಬಾಲಿವಡ್‌ನ ಶ್ರೇಷ್ಠ ಕಲಾವಿದನ ಮೊಮ್ಮಗಳಾದರೂ, ಹಮ್ಮು ಬಿಮ್ಮು ಇಲ್ಲದೆ, ನೂರಾರು ಮಂದಿ ಸೇರಿದ್ದ ಕಾರ್ಯಕ್ರಮದಲ್ಲಿ ಶಿವಣ್ಣ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾಳೆ ಆರಾಧ್ಯಾ.

ಹೇಗಿತ್ತು ಈ ಪ್ರಸಂಗ..

ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದು ಐಶ್ವರ್ಯಾ ರೈ, ಕಾಲಿವುಡ್‌ ನಟ ಚಿಯಾನ್‌ ವಿಕ್ರಮ್‌ ಜತೆಗೆ ವೇದಿಕೆಯಿಂದ ಕೆಳಗೆ ಇಳಿದು ಬರುತ್ತಿದ್ದಾರೆ. ಐಶ್ವರ್ಯಾ ಕಾಲಿಗೆ ಹಿಲ್ಸ್‌ ಚಪ್ಪಲಿ ಧರಿಸಿದ್ದರಿಂದ, ಜತೆಗಿದ್ದ ವಿಕ್ರಮ್‌ ಅವರ ಕೈ ಹಿಡಿದು ಮೆಟ್ಟಲಿನಿಂದ ಕೆಳಕ್ಕೆ ಇಳಿದಿದ್ದಾರೆ. ಅಮ್ಮನಿಗೆ ಅವಾರ್ಡ್‌ ಸಿಕ್ಕ ಖುಷಿಯಲ್ಲಿ ಆರಾಧ್ಯಾ ಓಡಿ ಬಂದು ಅಮ್ಮನನ್ನು ಬಾಚಿ ತಬ್ಬಿಕೊಂಡು ಅಭಿನಂದಿಸಿದ್ದಾಳೆ. ಮತ್ತೊಂದು ಬದಿಯಲ್ಲಿ ಶಿವಣ್ಣ ವೇದಿಕೆಯ ಕೆಳಗೆ ನಡೆದು ಬರುತ್ತಿದ್ದಾರೆ. ಶಿವಣ್ಣನ ನೋಡಿದ ಕೆಲವು ತಮಿಳು ನಟರು ಎದ್ದು ನಿಂತು ಕೈ ಕುಲುಕಿ ಮಾತಿಗಿಳಿದಿದ್ದಾರೆ. ವಿಕ್ರಮ್‌ ಸಹ ಶಿವಣ್ಣನ ಜತೆ ಮಾತಿಗಿಳಿದಿದ್ದಾರೆ.

ಶಿವಣ್ಣನ ಕಾಲಿಗೆ ನಮಸ್ಕರಿಸಿದ ಆರಾಧ್ಯಾ

ಅಲ್ಲೇ ಇದ್ದ ಐಶ್ವರ್ಯಾ ರೈ ಸಹ ಶಿವಣ್ಣನಿಗೆ ಕೈ ಮುಗಿದಿದ್ದಾರೆ. ಶಿವಣ್ಣನೂ ಸಹ ಅವರಿಗೆ ಕೈಮುಗಿದು ಅಭಿನಂದಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಐಶ್ವರ್ಯಾ, ಮಗಳು ಆರಾಧ್ಯಾಳನ್ನು ಶಿವಣ್ಣನಿಗೆ ಇಂಟ್ರಡ್ಯೂಸ್‌ ಮಾಡಿಕೊಟ್ಟಿದ್ದಾರೆ. ಆಗ ನೇರವಾಗಿ ಶಿವಣ್ಣನ ಪಾದಕ್ಕೆರಗಿ ಆಶೀರ್ವಾದ ಪಡೆದಿದ್ದಾಳೆ ಆರಾಧ್ಯ. ಶಿವಣ್ಣ ಆರಾಧ್ಯಳ ತಲೆ ಮುಟ್ಟಿ ಶುಭ ಹಾರೈಸಿದ್ದಾರೆ. ಈ ಒಂದೊಳ್ಳೆ ವಿಡಿಯೋ ಇದೀಗ ಎಷ್ಟೋ ಮಂದಿಯ ಹೃದಯ ಗೆದ್ದಿದೆ. ಶಿವಣ್ಣನ ದೊಡ್ಡತನಕ್ಕೆ, ಆರಾಧ್ಯಳ ಸಂಸ್ಕಾರಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ. ಇದಪ್ಪ ಸಂಸ್ಕಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಹೃದಯ ಗೆದ್ದ ವಿಡಿಯೋ..

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ, ತುಳುನಾಡು ಕರುನಾಡನ್ನು ಭೇಟಿಯಾದಾಗ ಎಂದು ಕೆಲವರು ಕಾಮೆಂಟ್‌ ಹಾಕಿದ್ದಾರೆ. ಇಂಥ ಸಂಸ್ಕಾರ, ಸಂಸ್ಕೃತಿ ನೋಡೋದೆ ಚಂದ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಐಶ್ವರ್ಯಾ ರೈ ಮಗಳ ಸಂಸ್ಕಾರವನ್ನು ಮೆಚ್ಚಲೇಬೇಕು. ಇಂಥ ಟೀನೇಜರ್‌ಗಳು ಇನ್ನು ಮುಂದೆ ಸಿಗುವುದಿಲ್ಲ.. ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ..

mysore-dasara_Entry_Point