ರಜನಿಕಾಂತ್‌ ಅಭಿನಯದ ಕೂಲಿ ಸಿನಿಮಾ ದೃಶ್ಯಗಳು ಲೀಕ್‌; ನೂರಾರು ಜನರ ಪರಿಶ್ರಮ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ನಿರ್ದೇಶಕ-kollywood news director lokesh kanagaraj felt bad about rajinikanth starring coolie movie shooting scenes leaked rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಜನಿಕಾಂತ್‌ ಅಭಿನಯದ ಕೂಲಿ ಸಿನಿಮಾ ದೃಶ್ಯಗಳು ಲೀಕ್‌; ನೂರಾರು ಜನರ ಪರಿಶ್ರಮ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ನಿರ್ದೇಶಕ

ರಜನಿಕಾಂತ್‌ ಅಭಿನಯದ ಕೂಲಿ ಸಿನಿಮಾ ದೃಶ್ಯಗಳು ಲೀಕ್‌; ನೂರಾರು ಜನರ ಪರಿಶ್ರಮ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ನಿರ್ದೇಶಕ

ಲೋಕೇಶ್‌ ಕನಕರಾಜು ನಿರ್ದೇಶನದಲ್ಲಿ ರಜನಿಕಾಂತ್‌ ಅಭಿನಯದ 171ನೇ ಸಿನಿಮಾ ಕೂಲಿ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಚಿತ್ರದಲ್ಲಿ ನಾಗಾರ್ಜುನ ಅಭಿನಯದ ದೃಶ್ಯಗಳು ಲೀಕ್‌ ಆಗಿದ್ದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ದಯವಿಟ್ಟು ಮತ್ತೊಬ್ಬರ ಪರಿಶ್ರಮವನ್ನು ಹಾಳು ಮಾಡಬೇಡಿ ಎಂದು ಕನಕರಾಜು ಮನವಿ ಮಾಡಿದ್ದಾರೆ.

ರಜನಿಕಾಂತ್‌ ಅಭಿನಯದ ಕೂಲಿ ಸಿನಿಮಾ ದೃಶ್ಯಗಳು ಲೀಕ್‌; ನೂರಾರು ಜನರ ಪರಿಶ್ರಮ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ನಿರ್ದೇಶಕ
ರಜನಿಕಾಂತ್‌ ಅಭಿನಯದ ಕೂಲಿ ಸಿನಿಮಾ ದೃಶ್ಯಗಳು ಲೀಕ್‌; ನೂರಾರು ಜನರ ಪರಿಶ್ರಮ ಹಾಳು ಮಾಡಬೇಡಿ ಎಂದು ಮನವಿ ಮಾಡಿದ ನಿರ್ದೇಶಕ (PC: @Dir_Lokesh)

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಸಿನಿಮಾ ಕೂಲಿ ಚಿತ್ರೀಕರನ ಭರದಿಂದ ಸಾಗುತ್ತಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಜೊತೆಗೆ ಟಾಲಿವುಡ್‌ನ ಅಕ್ಕಿನೇನಿ ನಾಗಾರ್ಜುನ ಕೂಡಾ ಈ ಚಿತ್ರದ ಭಾಗವಾಗಿದ್ದಾರೆ. ಈ ನಡುವೆ ಚಿತ್ರತಂಡಕ್ಕೆ ತಲೆನೋವೊಂದು ಎದುರಾಗಿದೆ. ಈ ವಿಚಾರದ ಬಗ್ಗೆ ನಿರ್ದೇಶಕ ಕನಕರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ನಾಗಾರ್ಜುನ ಅಭಿನಯದ ದೃಶ್ಯಗಳು ಲೀಕ್

ಸಾಮಾನ್ಯವಾಗಿ ಬಿಗ್‌ ಬಜೆಟ್‌, ಸ್ಟಾರ್‌ ಸಿನಿಮಾಗಳ ಸಿನಿಮಾಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಅಪ್‌ಡೇಟ್‌ ಹೊರತುಪಡಿಸಿ ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್‌ ಅಗುವವರೆಗೂ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಕಲಾವಿದರ ಲುಕ್‌, ಪಾತ್ರವರ್ಗ, ಕಥೆ ಬಗ್ಗೆ ಜನರು ಕುತೂಹಲದಿಂದ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲಿ ಅನ್ನೋದು ಚಿತ್ರತಂಡದ ಉದ್ದೇಶವಾಗಿರುತ್ತದೆ. ಆದ್ದರಿಂದ ಇದೇ ಕಾರಣಕ್ಕೆ ಚಿತ್ರೀಕರಣದ ಸಮಯದಲ್ಲಿ ಕೂಡಾ ಮೊಬೈಲ್‌ ನಿಷೇಧಿಸಲಾಗುತ್ತದೆ. ಇಷ್ಟೆಲ್ಲಾ ಎಚ್ಚರಿಕೆ ವಹಿಸಿದ್ದರೂ ಕೆಲವೊಮ್ಮೆ ಕೆಲವೊಂದು ಚಿತ್ರೀಕರಣದ ದೃಶ್ಯಗಳು ಲೀಕ್‌ ಆಗುತ್ತವೆ. ಇದೀಗ ಕೂಲಿ ಸಿನಿಮಾಗೂ ಇದೇ ಪರಿಸ್ಥಿತಿ ಉಂಟಾಗಿದೆ. ಚಿತ್ರೀಕರಣದ ಕೆಲವೊಂದು ದೃಶ್ಯಗಳು ಲೀಕ್‌ ಆಗಿದ್ದು ವೈರಲ್‌ ಆಗುತ್ತಿದೆ.‌‌

ಬೇಸರ ವ್ಯಕ್ತಪಡಿಸಿದ ಲೋಕೇಶ್‌ ಕನಕರಾಜು

ಮೈನಿಂಗ್‌ ಪ್ರದೇಶದಲ್ಲಿ ನೂರಾರು ಜನ ಚದುರಿ ಓಡುವ ದೃಶ್ಯ ಹಾಗೂ ಬಿಳಿ ಸೂಟ್‌ ಧರಿಸಿರುವ ನಾಗಾರ್ಜುನ ವಿಲನ್‌ಗೆ ಸುತ್ತಿಗೆಯಲ್ಲಿ ಹೊಡೆಯುತ್ತಿರುವ ದೃಶ್ಯಗಳನ್ನು ರೆಕಾರ್ಡ್‌ ಮಾಡಿ ವೈರಲ್‌ ಮಾಡಲಾಗಿದೆ. ಈ ಸೀನ್‌ ವೈರಲ್‌ ಆಗುತ್ತಿದ್ದಂತೆ ಚಿತ್ರದ ನಿರ್ದೇಶಕ ಲೋಕೇಶ್‌ ಕನಕರಾಜು ಬೇಸರ ಹೊರ ಹಾಕಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದಾರೆ. ನಮ್ಮೆಲ್ಲರ 2 ತಿಂಗಳ ಕಠಿಣ ಪರಿಶ್ರಮ ಒಂದೇ ಒಂದು ವಿಡಿಯೋ ರೆಕಾರ್ಡ್‌ನಿಂದ ಹಾಳಾಯ್ತು. ದಯವಿಟ್ಟು ಮತ್ತೊಬ್ಬರ ಪ್ರಯತ್ನಗಳನ್ನು ಹಾಳುಮಾಡುವಂತ ಈ ಅಭ್ಯಾಸಗಳನ್ನು ಬಿಡಿ ಎಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ, ಧನ್ಯವಾದಗಳು ಎಂದು ಲೋಕೇಶ್‌ ಕನಕರಾಜು ಬೇಸರದಿಂದ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ರಚಿತಾ ರಾಮ್‌ ವಿಲನ್?

ಕೂಲಿ ಚಿತ್ರವನ್ನು ಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಕಲಾನಿಧಿ ಮಾರನ್‌ ನಿರ್ಮಾಣ ಮಾಡುತ್ತಿದ್ದು ಲೋಕೇಶ್‌ ಕನಕರಾಜು ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನವಿದೆ. ಚಿತ್ರತಂಡ ಘೋಷಿಸಿರುವ ಪ್ರಕಾರ ಈ ಸಿನಿಮಾದಲ್ಲಿ ರಜನಿಕಾಂತ್‌ ದೇವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಉಪೇಂದ್ರ ಕಾಳೇಶ ಎಂಬ ಪಾತ್ರದಲ್ಲಿ , ನಾಗಾರ್ಜುನ ಸಿಮೊನ್‌ ಆಗಿ ಬಣ್ಣ ಹಚ್ಚಿದ್ದಾರೆ. ಶ್ರುತಿ ಹಾಸನ್‌, ಸತ್ಯರಾಜ್‌, ಸೌಬಿನ್‌ ಶಾಹಿರ್‌, ಮಹೇಂದ್ರನ್‌, ರೆಬಾ ಮೋನಿಕಾ ಜಾನ್‌ ಕೂಡಾ ಚಿತ್ರದಲ್ಲಿದ್ದಾರೆ. ಕೂಲಿ ಸಿನಿಮಾದಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕೂಡಾ ನಟಿಸುತ್ತಿದ್ದು ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಈ ವಿಚಾರವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ. ರಜನಿಕಾಂತ್‌ ಜೊತೆ ಉಪೇಂದ್ರ ತೆರೆ ಹಂಚಿಕೊಳ್ಳುತ್ತಿರುವುದು ಅವರು ಅಭಿಮಾನಿಗಳಿಗೆ ಖುಷಿ ನೀಡಿದೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಕೂಲಿ ರಜನಿಕಾಂತ್‌ ಅಭಿನಯದ 171ನೇ ಸಿನಿಮಾ. ಚಿತ್ರ 2025 ರಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು ಕನ್ನಡ, ತೆಲುಗು, ಹಿಂದಿಯಲ್ಲಿ ಡಬ್‌ ಆಗಿ ರಿಲೀಸ್‌ ಆಗಿದೆ. ಈ ಚಿತ್ರದ ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ.

mysore-dasara_Entry_Point