ಗೋಪಿಲೋಲ ಸಿನಿಮಾ ಟ್ರೈಲರ್‌ ರಿಲೀಸ್‌; ಅಕ್ಟೋಬರ್‌ 4 ರಂದು ತೆರೆಗೆ ಬರ್ತಿದೆ ನಿರೂಪಕಿ ಜಾಹ್ನವಿ ಅಭಿನಯದ ಚಿತ್ರ-sandalwood news anchor jhanvi starring gopilola kannada movie trailer out cinema will release in october 4th rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಗೋಪಿಲೋಲ ಸಿನಿಮಾ ಟ್ರೈಲರ್‌ ರಿಲೀಸ್‌; ಅಕ್ಟೋಬರ್‌ 4 ರಂದು ತೆರೆಗೆ ಬರ್ತಿದೆ ನಿರೂಪಕಿ ಜಾಹ್ನವಿ ಅಭಿನಯದ ಚಿತ್ರ

ಗೋಪಿಲೋಲ ಸಿನಿಮಾ ಟ್ರೈಲರ್‌ ರಿಲೀಸ್‌; ಅಕ್ಟೋಬರ್‌ 4 ರಂದು ತೆರೆಗೆ ಬರ್ತಿದೆ ನಿರೂಪಕಿ ಜಾಹ್ನವಿ ಅಭಿನಯದ ಚಿತ್ರ

ನಿರೂಪಕಿ ಜಾಹ್ನವಿ ಅಭಿನಯದ ಗೋಪಿಲೋಲ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಸಿನಿಮಾ ಅಕ್ಟೋಬರ್‌ 4 ರಂದು ತೆರೆ ಕಾಣುತ್ತಿದೆ. ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್‌ಆರ್ ಸನತ್ ಕುಮಾರ್ ನಿರ್ಮಿಸಿದ್ದು, ಆರ್ ರವೀಂದ್ರ ನಿರ್ದೇಶನವಿದೆ. ಸಹ ನಿರ್ಮಾಪಕ ಮಂಜುನಾಥ್ ಅರಸ್‌ ನಾಯಕನಾಗಿ ನಟಿಸಿದ್ದಾರೆ.

ಗೋಪಿಲೋಲ ಸಿನಿಮಾ ಟ್ರೈಲರ್‌ ರಿಲೀಸ್‌; ಅಕ್ಟೋಬರ್‌ 4 ರಂದು ತೆರೆಗೆ ಬರ್ತಿದೆ ನಿರೂಪಕಿ ಜಾಹ್ನವಿ ಅಭಿನಯದ ಚಿತ್ರ
ಗೋಪಿಲೋಲ ಸಿನಿಮಾ ಟ್ರೈಲರ್‌ ರಿಲೀಸ್‌; ಅಕ್ಟೋಬರ್‌ 4 ರಂದು ತೆರೆಗೆ ಬರ್ತಿದೆ ನಿರೂಪಕಿ ಜಾಹ್ನವಿ ಅಭಿನಯದ ಚಿತ್ರ

ಆರ್ ರವೀಂದ್ರ ನಿರ್ದೇಶನದ ಗೋಪಿಲೋಲ ಸಿನಿಮಾ ಈಗಾಗಲೇ ಟೀಸರ್ ಹಾಗೂ ಹಾಡುಗಳ‌ ಮೂಲಕ ಗಮನ ಸೆಳೆದಿದೆ. ಇತ್ತೀಚೆಗೆ ಚಿತ್ರತಂಡ ಟ್ರೈಲರ್‌ ಬಿಡುಗಡೆ ಮಾಡಿದೆ. ಚಿತ್ರವನ್ನು ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್‌ಆರ್ ಸನತ್ ಕುಮಾರ್ ನಿರ್ಮಿಸಿದ್ದು, ಮಂಜುನಾಥ್ ಅರಸ್‌ ಅವರ ಸಹ ನಿರ್ಮಾಣವಿದೆ.

ಗೋಪಿಲೋಲ ಟ್ರೈಲರ್‌ ರಿಲೀಸ್

ಇತ್ತೀಚಿಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಕೆ.ಮಂಜು, ಎಂ.ಜಿ.ರಾಮಮೂರ್ತಿ, ಕೃಷ್ಣೇಗೌಡ, ಪಿ.ಸಿ.ಶೇಖರ್ ಮುಂತಾದ ಸಿನಿ ಗಣ್ಯರು ಗೋಪಿಲೋಲ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದರು. ಟ್ರೈಲರ್‌ ರಿಲೀಸ್‌ ನಂತರ ನಂತರ ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ನಿರೂಪಕಿ ಜಾಹ್ನವಿ ಕೂಡಾ ನಟಿಸಿರುವುದು ವಿಶೇಷ.

ನಿರ್ಮಾಪಕ ಎಸ್ ಆರ್ ಸನತ್ ಕುಮಾರ್‌ ಮಾತನಾಡಿ. ಈ ಸಿನಿಮಾ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ನಂಬಿಕೆ ಇದೆ. ಅಂತಹ ಉತ್ತಮ ಅಂಶಗಳು ನಮ್ಮ ಚಿತ್ರದಲ್ಲಿದೆ. ಕಥೆಯನ್ನು ನಾನೇ ಬರೆದಿದ್ದೇನೆ. ನಾನು ಕೃಷಿ ಕುಟುಂಬದಿಂದ ಬಂದವನು. ಇದೂ ಕೂಡಾ ಕೃಷಿಕನ ಕಥೆ ಆಧರಿಸಿದ ಸಿನಿಮಾ. ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಚಿತ್ರ ಮಾಡಿದ ಸಂತೋಷವಿದೆ. ಮಿಥುನ್ ಅಶೊಕನ್ ಅವರ ಸಂಗೀತ ಸಂಯೋಜನೆಯಲ್ಲಿ 6 ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಗೋಪಿಲೋಲ ಉತ್ತಮ ಚಿತ್ರವಾಗಿ ಖ್ಯಾತಿ ಗಳಿಸಲಿದೆ. ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದಗಳು ಎಂದರು.‌

ಅಕ್ಟೋಬರ್‌ 4 ರಂದು ತೆರೆಗೆ ಬರುತ್ತಿರುವ ಸಿನಿಮಾ

ನಿರ್ದೇಶಕ ಆರ್ ರವೀಂದ್ರ ಮಾತನಾಡಿ, ನಿರ್ಮಾಪಕ ಸನತ್‌ ಕುಮಾರ್‌, ಚಿತ್ರದ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಅವರು ಹೇಳಿದಂತೆ ಗೋಪಿಲೋಲ ನೈಸರ್ಗಿಕ ಕೃಷಿಯ ಕುರಿತಾದ ಹಾಗೂ ಸುಂದರ ಪ್ರೇಮಕಥೆಯುಳ್ಳ ಚಿತ್ರ. ನಮ್ಮ ಸಿನಿಮಾದಲ್ಲಿ ಜನರಿಗೆ ಒಂದೊಳ್ಳೆ ಸಂದೇಶ ಕೂಡಾ ಇದೆ ಎಂದರು. ಚಿತ್ರದ ಸಹ ನಿರ್ಮಾಪಕ ಮಂಜುನಾಥ್ ಅರಸ್‌, ಈ ಸಿನಿಮಾದಲ್ಲಿ ನಾಯಕನಾಗಿ ಕೂಡಾ ನಟಿಸಿದ್ದಾರೆ. ಇದು ನಾಯಕನಾಗಿ ನನ್ನ ಮೊದಲ ಚಿತ್ರ. ಸನತ್ ಕುಮಾರ್ ಅವರು ಉತ್ತಮ ಕಥೆ ಬರದಿದ್ದಾರೆ. ಅಷ್ಟೇ ಚೆನ್ನಾಗಿ ರವೀಂದ್ರ ಅವರು ನಿರ್ದೇಶನ‌ ಕೂಡಾ ಮಾಡಿದ್ದಾರೆ‌. ನನ್ನ ಪಾತ್ರ ಕೂಡ ಚೆನ್ನಾಗಿದೆ. ಚಿತ್ರದಲ್ಲಿ ಆಕ್ಷನ್, ಲವ್, ಸಸ್ಪೆನ್ಸ್‌ ಎಲ್ಲಾ ಮಿಶ್ರಣವಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆ ಕಂಟೆಂಟ್ ಇದೆ. ಅದೇ ನಮ್ಮ ಚಿತ್ರದ ಹೀರೋ ಎನ್ನಬಹುದು. ಅಕ್ಟೋಬರ್‌ 4 ರಂದು ಸಿನಿಮಾ ತೆರೆಗೆ ಬರ್ತಿದೆ. ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿದರು. ನಾಯಕಿ‌ ನಿಮಿಷ, ಹಿರಿಯ ನಟಿ ಪದ್ಮಾ ವಾಸಂತಿ, ನಟ ಕೆಂಪೇಗೌಡ ಹಾಗೂ ಇನ್ನಿತರರು ಗೋಪಿಲೋಲ ಸಿನಿಮಾ ಕುರಿತು ಮಾತನಾಡಿದರು.

mysore-dasara_Entry_Point