ಬಾಲಿವುಡ್‌ನಿಂದ ಬುಲಾವ್‌; ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್ಸ್‌ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರ ಸಮರ್ಜಿತ್‌ ಲಂಕೇಶ್‌-sandalwood news director indrajit son samarjit lankesh flying to bollywood to work in karan johar dharma productions rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಾಲಿವುಡ್‌ನಿಂದ ಬುಲಾವ್‌; ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್ಸ್‌ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರ ಸಮರ್ಜಿತ್‌ ಲಂಕೇಶ್‌

ಬಾಲಿವುಡ್‌ನಿಂದ ಬುಲಾವ್‌; ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್ಸ್‌ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರ ಸಮರ್ಜಿತ್‌ ಲಂಕೇಶ್‌

ಗೌರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಈಗ ಪರಭಾಷೆಗೆ ಹಾರಲು ಸಜ್ಜಾಗಿದ್ದಾರೆ. ಈಗಾಗಲೇ ಬಾಲಿವುಡ್‌ ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್‌ನಿಂದ ಸರ್ಮಜಿತ್‌ಗೆ ಕರೆ ಬಂದಿದ್ದು ಶೀಘ್ರದಲ್ಲೇ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್‌ನಿಂದ ಬುಲಾವ್‌; ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್‌ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರ ಸಮರ್ಜಿತ್‌ ಲಂಕೇಶ್‌
ಬಾಲಿವುಡ್‌ನಿಂದ ಬುಲಾವ್‌; ಕರಣ್‌ ಜೋಹರ್‌ ಧರ್ಮ ಪ್ರೊಡಕ್ಷನ್‌ ಸಿನಿಮಾದಲ್ಲಿ ಇಂದ್ರಜಿತ್‌ ಪುತ್ರ ಸಮರ್ಜಿತ್‌ ಲಂಕೇಶ್‌

ಸಿನಿಮಾ ಹಿನ್ನೆಲೆ ಇದ್ದರೂ ಚಿತ್ರರಂಗಕ್ಕೆ ಬಂದು ಯಶಸ್ಸು ಗಳಿಸೋದು ಕಷ್ಟದ ಕೆಲಸ. ಕೆಲವೇ ಕೆಲವರಿಗೆ ಮಾತ್ರ ಆ ಅದೃಷ್ಟ ದಕ್ಕುತ್ತದೆ. ಗೌರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸಮರ್ಜಿತ್‌ ಲಂಕೇಶ್‌ ಸ್ಯಾಂಡಲ್‌ವುಡ್‌ನ ಭರವಸೆಯ ಹೀರೋ ಎನಿಸಿಕೊಂಡಿದ್ದಾರೆ. ಸಿನಿಮಾ ನೋಡಿದವರು ಸಮರ್ಜಿತ್‌ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ಹುಡುಗ ಬಾಲಿವುಡ್‌ಗೆ ಹೊರಡಲು ಸಜ್ಜಾಗಿದ್ದಾರೆ.

ಸಮರ್ಜಿತ್‌ಗೆ ಲುಮಿಯರ್ ನ್ಯಾಷನಲ್ ಅವಾರ್ಡ್

ದೊಡ್ಡ ಸ್ಟಾರ್ ಆಗಬೇಕು ಎಂದು ಕನಸು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮರ್ಜಿತ್ ಲಂಕೇಶ್‌, ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಅಪ್ಪನ ನಿರ್ದೇಶನದಲ್ಲಿ ಚಿತ್ರರಂಗಕ್ಕೆ ಬಂದ ಸಮರ್ಜಿತ್‌ಗೆ ಗೌರಿ ಚಿತ್ರದ ನಟನೆಗಾಗಿ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಕೂಡಾ ದೊರೆತಿದೆ.

ಅವಾರ್ಡ್ ಪಡೆದ ಖುಷಿಯಲ್ಲಿರುವ ಹ್ಯಾಂಡಮ್ ಹಂಕ್ ಸಮರ್ಜಿತ್ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ಹಿಂದಿ ಸಿನಿಮಾರಂಗ ಮಾತ್ರವಲ್ಲ ಪಕ್ಕದ ತೆಲುಗು ಮತ್ತು ತಮಿಳಿನಿಂದನೂ ಆಫರ್‌ಗಳು ಬರುತ್ತಿದ್ದು ಪರಭಾಷೆಯ ಕಡೆ ಸಮರ್ಜಿತ್ ಗಮನ ಹರಿಸುತ್ತಿದ್ದಾರೆ. ಈಗಾಗಲೇ ಹಿಂದಿಯ ದೊಡ್ಡ ಪ್ರೊಡಕ್ಷನ್ ಹೌಸ್‌ ಒಂದು ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಮರ್ಜಿತ್ ಜೊತೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ. ಈಗಾಗಲೇ ಧರ್ಮ ಪ್ರೊಡಕ್ಷನ್ ಕಡೆಯಿಂದ ಕರೆ ಬಂದಿದ್ದು ಸಮರ್ಜಿತ್ ಮುಂಬೈಗೆ ಹಾರಿದ್ದಾರೆ. ಕರಣ್ ಜೊಹರ್ ಸಂಸ್ಥೆ ಜೊತೆ ಮಾತುಕತೆ ನಡೆಸಿರುವ ಸಮರ್ಜಿತ್ ಹಿಂದಿಯಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ತಮಿಳಿನ ಲೈಕಾ ಪ್ರೊಡಕ್ಷನ್ಸ್‌ ಜೊತೆ ಮಾತುಕತೆ

ಇತ್ತೀಚಿನ ದಿನಗಳಲ್ಲಿ ಹಿಂದಿ ನಿರ್ಮಾಣ ಸಂಸ್ಥೆಗಳು ಅದರಲ್ಲೂ ಕರಣ್ ಜೋಹರ್‌, ದಕ್ಷಿಣ ಸಿನಿಮಾರಂಗದ ಕಡೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಒಂದುವೇಳೆ ಸಮರ್ಜಿತ್ ಲಂಕೇಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡಿದರೆ ಮೊದಲ ಬಾರಿಗೆ ಕರಣ್ ಸಂಸ್ಥೆ ಕನ್ನಡ ನಟನ ಜೊತೆ ಸಿನಿಮಾ ಮಾಡಿದಂತೆ ಆಗಲಿದೆ. ಇದಿಷ್ಟೇ ಅಲ್ಲ, ತಮಿಳಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಕೂಡಾ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದೆಯಂತೆ. ಈಗಾಗಲೇ ಲೈಕಾ ಸಂಸ್ಥೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದೆ. ಆ ಸಿನಿಮಾ ಪೂರ್ಣಗೊಳ್ಳುವ ಮೊದಲೇ ಲೈಕಾ, ಕನ್ನಡದ ಮತ್ತೊಬ್ಬ ನಟ ಸಮರ್ಜಿತ್‌ಗೆ ಸಿನಿಮಾ ಮಾಡಲು ನಿರ್ಧರಿಸಿದ್ದು ಸಿನಿಮಾ ಮಾತುಕತೆ ಹಂತದಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕನ್ನಡದ ಯುವ ನಟನೊಬ್ಬನಿಗೆ ಪರಭಾಷೆಯ ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಸಿನಿಮಾ ಮಾಡಲು ಮುಂದಾಗಿರುವುದು ಖುಷಿಯ ವಿಚಾರ.

mysore-dasara_Entry_Point