ಕನ್ನಡ ಸುದ್ದಿ  /  Entertainment  /  Sandalwood News Arun Amukta Directs Chandan Shetty Starrer Vidyarthi Vidyarthiniyare Movie Shooting Complete Mnk

ಶೂಟಿಂಗ್‌ ಮುಗಿಸಿಕೊಂಡ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’; ಎಲೆಕ್ಷನ್‌ ಮುಗೀತಿದ್ದಂತೆ ಚಿತ್ರಮಂದಿರಕ್ಕೆ ಚಂದನ್‌ ಶೆಟ್ಟಿ ಸಿನಿಮಾ

ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಶೂಟಿಂಗ್‌ ಮುಗಿಸಿಕೊಂಡು, ಪೋಸ್ಟ್‌ ಪ್ರೊಡಕ್ಷನ್‌ ಅಂಗಳದಲ್ಲಿದೆ. ಈಗ ಈ ಸಿನಿಮಾ ಬಗ್ಗೆ ಚಿತ್ರತಂಡ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ.

ಶೂಟಿಂಗ್‌ ಮುಗಿಸಿಕೊಂಡ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’; ಎಲೆಕ್ಷನ್‌ ಮುಗೀತಿದ್ದಂತೆ ಚಿತ್ರಮಂದಿರಕ್ಕೆ ಚಂದನ್‌ ಶೆಟ್ಟಿ ಸಿನಿಮಾ
ಶೂಟಿಂಗ್‌ ಮುಗಿಸಿಕೊಂಡ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’; ಎಲೆಕ್ಷನ್‌ ಮುಗೀತಿದ್ದಂತೆ ಚಿತ್ರಮಂದಿರಕ್ಕೆ ಚಂದನ್‌ ಶೆಟ್ಟಿ ಸಿನಿಮಾ

Vidyarthi Vidyarthiniyare: ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಶೂಟಿಂಗ್‌ ಮುಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಒಂದು ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮಗಳನ್ನು ಮುಖಾಮುಖಿಯಾಗಿರುವ ಚಿತ್ರತಂಡ ಖುಷಿಯನ್ನು ಹಂಚಿಕೊಂಡಿದೆ. ಒಟ್ಟಾರೆ ಸಿನಿಮಾ ಬಗ್ಗೆ, ಮುಂದಿನ ಕಾರ್ಯವೈಖರಿಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದೆ. ಇದೇ ವೇದಿಕೆಯಲ್ಲಿ ಸಿನಿಮಾದಲ್ಲಿನ ಪಾತ್ರಗಳು ಹೇಗಿವೆ, ಯಾರೆಲ್ಲ ನಟಿಸಿದ್ದಾರೆ ಎಂಬುದನ್ನು ಹೇಳುವ ಸಲುವಾಗಿ, ಪಾತ್ರ ಪರಿಚಯದ ಝಲಕ್‌ ತೋರಿಸಲಾಯ್ತು.

ನಿರ್ದೇಶಕ ಅರುಣ್ ಅಮುಕ್ತ ಪಕ್ಕಾ ಪ್ಲಾನ್ ಮಾಡಿಕೊಂಡು, ಅಂದುಕೊಂಡಂತೆಯೇ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಚಿಕ್ಕಮಗಳೂರು ಸೇರಿ ಹಲವೆಡೆ ಐವತ್ತು ದಿನಗಳ ಚಿತ್ರೀಕರಣ ನಡೆಸಲಾಗಿದೆ. ಶೂಟಿಂಗ್‌ ಮುಗಿದ ಬಳಿಕ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಜೂನ್ ಹೊತ್ತಿಗೆಲ್ಲ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡು, ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲಿಯೇ ಈ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ನಿರ್ದೇಶಕ ಅರುಣ್ ಅಮುಕ್ತ ಪಾಲಿಗಿದು ವಿಶೇಷ ಸಿನಿಮಾ. ಹಿರಿದಾದ ತಾರಾ ಬಳಗ ಮತ್ತು ತಾಂತ್ರಿಕ ವಿಚಾರದಲ್ಲೂ ಒಂದಷ್ಟು ಪ್ರಯೋಗಗಳನ್ನು ತೆರೆಮೇಲೆ ತಂದ ಚಿತ್ರವಿದು. ಆ ಕಾರಣಕ್ಕೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಅವರ ಪಾಲಿಗೆ ವಿಶೇಷ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಚಂದನ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದಾರೆ. ಇಲ್ಲಿ ಅವರಿಗೆ ಹಲವು ಶೇಡ್‌ಗಳು ಇವೆ. ಒಟ್ಟು ಮೂರು ರೀತಿಯಲ್ಲಿ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬದಲಾವಣೆಗೆ ತಿಂಗಳುಗಟ್ಟಲೇ ತಯಾರಿಯನ್ನೂ ನಡೆಸಿದ್ದಾರೆ ಎಂದೂ ನಿರ್ದೇಶಕರು ಹೇಳಿಕೊಂಡಿದ್ದಾರೆ. ಆ ಮೂರೂ ಶೇಡುಗಳು ಒಂದಕ್ಕೊಂದು ತದ್ವಿರುದ್ಧ ದಿಕ್ಕಿನವುಗಳು. ಚಂದನ್ ಅಸಲಿ ವ್ಯಕ್ತಿತ್ವಕ್ಕೆ ವಿರುದ್ಧವಾಗಿರೋ ಆ ಪಾತ್ರಗಳನ್ನು ನಿಭಾಯಿಸೋದು ಸವಾಲಾಗಿತ್ತಂತೆ. ಆದರೆ, ಸತತ ಶ್ರಮದಿಂದ, ನೀಡಿದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಖುಷಿ ಚಂದನ್ ಅವರದ್ದು.

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಭರ್ಜರಿ ಚೇತನ್, ವಾಸುಕಿ ವೈಭವ್ ಹಾಡುಗಳಿಗೆ ಸಾಹಿತ್ಯ ಒದಗಿಸಿದರೆ, ಕುಮಾರ್ ಗೌಡ ಕ್ಯಾಮರಾ ಹಿಡಿದಿದ್ದಾರೆ. ಪವನ್ ಗೌಡ ಸಂಕಲನದ ಜವಾಬ್ದಾರಿ ವಹಿಸಿದರೆ, ಟೈಗರ್ ಶಿವು, ನರಸಿಂಹ ಚಿತ್ರದ ಸಾಹಸ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಅಮರ್, ಭಾವನಾ, ಭವ್ಯ, ಮಾನಸಿ, ಮನೋಜ್ ವಿವಾನ್, ಸುನೀಲ್ ಪುರಾಣಿಕ್, ಸಿಂಚನಾ, ರಘು ರಾಮನಕೊಪ್ಪ, ಅರವಿಂದ ರಾವ್, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ನಟಿಸಿದ್ದಾರೆ.

IPL_Entry_Point