ಕನ್ನಡ ಸುದ್ದಿ  /  Entertainment  /  Sandalwood News Movies Release March 29 In Theater Yuva Goat Life Tillu Square Godzilla Vs Kong Upcoming Films Pcp

Friday Release: ಕರ್ನಾಟಕದಲ್ಲಿ ಯುವ ಹವಾ; ಈ ಶುಕ್ರವಾರ ಆಡುಜೀವಿತಂ, ಟಿಲ್ಲೂ ಸ್ಕ್ವೇರ್‌, ಗಾಡ್ಜಿಲ್ಲಾ ಸೇರಿದಂತೆ 27 ಸಿನಿಮಾ ಬಿಡುಗಡೆ

Movies release on March 29: ಈ ವಾರ ಹಲವು ಬಹುನಿರೀಕ್ಷಿತ ಸಿನಿಮಾಗಳು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ರಾಜ್‌ಕುಮಾರ್‌ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಆಡುಜೀವಿತಂ, ಟಿಲ್ಲೂ ಸ್ಕ್ವೇರ್‌, ಗಾಡ್ಜಿಲ್ಲಾ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ.

ಈ ಶುಕ್ರವಾರ ಯುವ ಆಡುಜೀವಿತಂ, ಟಿಲ್ಲೂ ಸ್ಕ್ವೇರ್‌, ಗಾಡ್ಜಿಲ್ಲಾ ಸೇರಿದಂತೆ 27 ಸಿನಿಮಾ ಬಿಡುಗಡೆ
ಈ ಶುಕ್ರವಾರ ಯುವ ಆಡುಜೀವಿತಂ, ಟಿಲ್ಲೂ ಸ್ಕ್ವೇರ್‌, ಗಾಡ್ಜಿಲ್ಲಾ ಸೇರಿದಂತೆ 27 ಸಿನಿಮಾ ಬಿಡುಗಡೆ

Upcoming Movies: ಮಾರ್ಚ್‌ 29 ರಂದು ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡದಲ್ಲಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಗೋಟ್‌ ಲೈಫ್‌/ ಆಡುಜೀವಿತಂ ಸಿನಿಮಾವೂ ರಿಲೀಸ್‌ ಆಗುತ್ತಿದೆ. ಪಕ್ಕದ ಆಂದ್ರದಲ್ಲಿ ಟಿಲ್ಲೂ ಸ್ಕ್ವೇರ್‌ ನಿರೀಕ್ಷೆ ಹುಟ್ಟಿದೆ. ಇದೇ ಸಮಯದಲ್ಲಿ ಗಾಡ್ಜಿಲ್ಲಾ ವರ್ಸಸ್‌ ಕೋಂಗ್‌ ಸಿನಿಮಾ ನೋಡಲು ಸಾಕಷ್ಟು ಯುವ ಜನರು ಕಾಯುತ್ತಿದ್ದಾರೆ.

ಯುವ ಸಿನಿಮಾ ಮಾರ್ಚ್‌ 29ರಂದು ಬಿಡುಗಡೆ

ಯುವ ಸಿನಿಮಾ ಅನೇಕ ಕಾರಣಗಳಿಂದ ನಿರೀಕ್ಷೆ ಹುಟ್ಟುಹಾಕಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಸಿನಿಮಾವಾಗಿರುವುದರಿಂದ ನಿರೀಕ್ಷೆ ತುಸು ಹೆಚ್ಚಾಗಿದೆ. ಇದೇ ಸಮಯದಲ್ಲಿ ಡಾ. ರಾಜ್‌ ಕುಮಾರ್‌ ಕುಟುಂಬದ ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಕಾಲೇಜು ಲೈಫ್‌, ಡೆಲಿವರಿ ಬಾಯ್‌ ಲೈಫ್‌, ಅಪ್ಪ ಮತ್ತು ಮಗನನ ಬಾಂಧವ್ಯ ಹಾಗೂ ರೌಡಿಯಿಸಂ ಇತ್ಯಾದಿಗಳು ಇರಲಿವೆ. ಜತೆಗೆ, ಒಂದು ಸುಂದರವಾದ ಲವ್‌ ಸ್ಟೋರಿ ಇರುವ ಸೂಚನೆಯೂ ಇದೆ.

ಗೋಟ್‌ ಲೈಫ್‌

ಈ ಸಿನಿಮಾ ಮಲಯಾಳಂ ಚಿತ್ರರಂಗ ಮಾತ್ರವಲ್ಲದೆ, ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾವಾಗಿದೆ. ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ನಟನೆಯ ಗೋಟ್‌ ಲೈಫ್‌ (ಆಡುಜೀವಿತಂ)ಚಿತ್ರವೂ ಇದೇ ಶುಕ್ರವಾರ (ಮಾರ್ಚ್ 29) ಥಿಯೇಟರ್‌ಗಳಿಗೆ ಬರಲಿದೆ. 2008ರಲ್ಲಿ ಪ್ಲಾನ್ ಮಾಡಿದ್ದ ಚಿತ್ರ ಈಗ ಬಿಡುಗಡೆಯಾಗುತ್ತಿದೆ. ಈ ಸರ್ವೈವಲ್ ಥ್ರಿಲ್ಲರ್ ಮಲಯಾಳಂನಲ್ಲಿ ಮತ್ತೊಂದು 100 ಕೋಟಿ ಕಲೆಕ್ಷನ್ ಸಿನಿಮಾವಾಗುವ ಸೂಚನೆ ಇದೆ. ಗೋಟ್‌ ಲೈಪ್‌ ಅನ್ನು ಕನ್ನಡದಲ್ಲಿ ಮತ್ತು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್‌ ವಿತರಣೆ ಮಾಡುತ್ತಿದೆ.

ಟಿಲ್ಲೂ ಸ್ಕ್ವೇರ್

ಸೂಪರ್ ಹಿಟ್ ಡಿಜೆ ಟಿಲ್ಲು ಚಿತ್ರದ ಮುಂದುವರಿದ ಭಾಗವಾಗಿ ಟಿಲ್ಲು ಸ್ಕ್ವೇರ್ ಚಿತ್ರ ಟಾಲಿವುಡ್‌ನಲ್ಲಿ ಆಗಮಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಮುಂದೂಡಲಾಗಿತ್ತು. ಇದೀಗ ಈ ವಾರ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಸಿದ್ದು ಜೊನ್ನಲಗಡ್ಡ ಹಾಗೂ ಅನುಪಮಾ ಪರಮೇಶ್ವರನ್ ಅಭಿನಯದ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಕುತೂಹಲ ಮೂಡಿಸುತ್ತಿವೆ.

ಕಲಿಯುಗ ಪಟ್ಟಣಂಲು

ತೆಲುಗಿನಲ್ಲಿ ಈ ವಾರ ಬಿಡುಗಡೆಯಾಗಲಿರುವ ಮತ್ತೊಂದು ಕುತೂಹಲಕಾರಿ ಸಿನಿಮಾ ಕಲಿಯುಗ ಪಟ್ಟಣಂಲ್‌. ವಿಶ್ವ ಕಾರ್ತಿಕೇಯ ಮತ್ತು ಆಯುಷಿ ಪಟೇಲ್ ಅಭಿನಯದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಶುಕ್ರವಾರ ಬಿಡುಗಡೆಯಾಗಲಿದೆ. ರಮಾಕಾಂತ್ ರೆಡ್ಡಿ ನಿರ್ದೇಶನದ ಈ ಚಿತ್ರವು ತಾಯಿ ಸೆಂಟಿಮೆಂಟ್ ಮತ್ತು ಥ್ರಿಲ್ ಅನ್ನು ಒದಗಿಸುವ ಚಿತ್ರವಾಗಿದೆ ಎಂದು ನಿರ್ಮಾಪಕರು ಹೇಳುತ್ತಾರೆ.

ಗಾಡ್ಜಿಲ್ಲಾ ವರ್ಸಸ್ ಕಾಂಗ್: ದಿ ನ್ಯೂ ಎಂಪೈರ್

ಹಿಂದಿನ ಗಾಡ್ಜಿಲ್ಲಾ ವರ್ಸಸ್ ಕಾಂಗ್ ಚಿತ್ರ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ಹಿಟ್‌ ಆಗಿತ್ತು. ಈಗ ಮಾನ್‌ಸ್ಟರ್‌ವರ್ಸ್ ಫ್ರಾಂಚೈಸ್‌ನಿಂದ ಗಾಡ್ಜಿಲ್ಲಾ ವರ್ಸಸ್ ಕಾಂಗ್: ದಿ ನ್ಯೂ ಎಂಪೈರ್ ಎಂಬ ಶೀರ್ಷಿಕೆಯ ಮತ್ತೊಂದು ಚಲನಚಿತ್ರ ಬರುತ್ತಿದೆ. ಈ ಚಿತ್ರವು ಇದೇ ಶುಕ್ರವಾರ ಇಂಗ್ಲಿಷ್ ಜೊತೆಗೆ ಇತರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಗಾಡ್ಜಿಲ್ಲಾ ಮತ್ತು ಕಾಂಗ್ ಜಗತ್ತು ಎದುರಿಸುತ್ತಿರುವ ಹೊಸ ಸವಾಲಿನ ವಿರುದ್ಧ ಹೋರಾಟ ಇರಲಿದೆ.

ಕ್ರ್ಯೂ

ಈ ವಾರ ಬಿಡುಗಡೆಯಾಗುತ್ತಿರುವ ಇನ್ನೊಂದು ಹಿಂದಿ ಸಿನಿಮಾ ಇದಾಗಿದೆ. ಬಾಲಿವುಡ್ ನಟಿಯರಾದ ಟಬು, ಕರೀನಾ ಕಪೂರ್ ಮತ್ತು ಕೃತಿ ಸನೋನ್ ಈ ಚಿತ್ರದಲ್ಲಿ ಗಗನಸಖಿಯರಾಗಿ ನಟಿಸಿದ್ದಾರೆ. ಚಿನ್ನದ ಕಳ್ಳಸಾಗಣೆ ಸುತ್ತ ಕಥೆ ಸಾಗುತ್ತದೆ. ಈ ಚಿತ್ರವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್ ಕುತೂಹಲ ಮೂಡಿಸಿದೆ.

ಈ ವಾರ ಬಿಡುಗಡೆಯಾಗುವ ಇನ್ನಷ್ಟು ಸಿನಿಮಾಗಳು

ತಾರಿಣಿ (ಕನ್ನಡ)

ದಿ ಯುಪಿ ಫೈಲ್ಸ್‌ (ಹಿಂದಿ)

ಯಸ್‌ ಪಪ್ಪಾ (ಹಿಂದಿ)

ಬೆಂಗಾಲ್‌ 1947 (ಹಿಂದಿ)

3ರ್ಡ್‌ ಅಕ್ಟೋಬರ್‌ (ಹಿಂದಿ)

ಏಲಿಯನ್‌ ಫ್ರಾಂಕ್‌ (ಹಿಂದಿ)

ವೆಲ್‌ಕಂ ವೆಡ್ಡಿಂಗ್‌ (ಹಿಂದಿ)

ಅಗ್ರಿಕೊಸ್‌ (ತೆಲುಗು)

ಮಾರ್ಕೆಟ್‌ ಮಹಾಲಕ್ಷ್ಮಿ (ತೆಲುಗು)

ಬಹುಮುಖಂ (ತೆಲುಗು)

ತಾಲಕೋನ (ತೆಲುಗು

ವಯಸ್ಸೆತ್ರಯೀ ಮುಪ್ಪತಿ (ಮಲಯಾಳಂ)

ಹಾಟ್‌ ಸ್ಪಾಟ್‌ (ತಮಿಳು)

ಅಜಾಗಿ (ತಮಿಳು)

ಬೂಮರ್‌ ಅಂಕಲ್‌ (ತಮಿಳು)

ವೇಪಂ ಕುಲಾರ್‌ ಮಜಾಯ್‌ (ತಮಿಳು)

ದಿ ಬಾಯ್ಸ್‌ (ತಮಿಳು)

ಏಪುರಾ (ತಮಿಳು)

ನೆಟ್ರು ಇಂದ ನೆರಮ್‌ (ತಮಿಳು)

ಇದಿ ಮಿನಲ್‌ ಕಾದಲ್‌ (ತಮಿಳು)

ಉದಿ ಗೀತಾವಿನ್‌ ಅಜಾಯ್‌ (ತಮಿಳು)

IPL_Entry_Point