Kaatera Movie: ಲಾಕ್‌ಡೌನ್‌ ದಿನಗಳಿಂದ 2023 ಡಿ 29ವರೆಗೆ; ಕಾಟೇರ ಹುಟ್ಟಿದ ಕಥೆ ವಿವರಿಸಿದ ತರುಣ್‌ ಸುಧೀರ್‌
ಕನ್ನಡ ಸುದ್ದಿ  /  ಮನರಂಜನೆ  /  Kaatera Movie: ಲಾಕ್‌ಡೌನ್‌ ದಿನಗಳಿಂದ 2023 ಡಿ 29ವರೆಗೆ; ಕಾಟೇರ ಹುಟ್ಟಿದ ಕಥೆ ವಿವರಿಸಿದ ತರುಣ್‌ ಸುಧೀರ್‌

Kaatera Movie: ಲಾಕ್‌ಡೌನ್‌ ದಿನಗಳಿಂದ 2023 ಡಿ 29ವರೆಗೆ; ಕಾಟೇರ ಹುಟ್ಟಿದ ಕಥೆ ವಿವರಿಸಿದ ತರುಣ್‌ ಸುಧೀರ್‌

Kaatera Movie: ಕಾಟೇರ ಸಿನಿಮಾ ಕಥೆ ಆರಂಭವಾಗಿದ್ದು ಲಾಕ್‌ ಡೌನ್‌ ಆರಂಭದ ದಿನಗಳಲ್ಲಿ. ಜಡೇಶ್‌ ಹೇಳಿದ ಆ ಕಥೆಯಿಂದ ನಾನು ಇಂಪ್ರೆಸ್‌ ಆಗಿ ಸ್ಟೋರಿ ಡೆವಲಪ್‌ ಮಾಡಿ ಚಿತ್ರದಲ್ಲಿ ನಟಿಸಲು ದರ್ಶನ್‌ ಅವರನ್ನು ಕೇಳಿದ್ದಾಗಿ ನಿರ್ದೇಶಕ ತರುಣ್‌ ಸುಧೀರ್‌ ಹೇಳಿದ್ದಾರೆ.

ಕಾಟೇರನ ಬಗ್ಗೆ ತರುಣ್‌ ಸುಧೀರ್‌ ಮಾತು
ಕಾಟೇರನ ಬಗ್ಗೆ ತರುಣ್‌ ಸುಧೀರ್‌ ಮಾತು

Kaatera Movie: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಇಂದು ರಿಲೀಸ್‌ ಆಗಿದೆ. ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದು ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದಕ್ಕೂ ಮುನ್ನ ತರುಣ್‌ ಸುಧೀರ್‌, 2 ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ಈ ಜೋಡಿ ಸಕ್ಸಸ್‌ ಆಗಿದೆ. ಕಾಟೇರ ಚಿತ್ರದ ಬಗ್ಗೆ ನಿರ್ದೇಶಕ ತರುಣ್‌ ಸುಧೀರ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಜನರನ್ನು ಸೆಳೆಯಲು ಪೋಸ್ಟರ್‌ ತಂತ್ರ

ಇತ್ತೀಚಿನ ದಿನಗಳಲ್ಲಿ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವುದು ಕಡಿಮೆ ಆಗುತ್ತಿದೆ. ಅಂತದ್ದರಲ್ಲಿ ಜನರನ್ನು ನಮ್ಮ ಸಿನಿಮಾ ನೋಡುವಂತೆ ಮಾಡುವುದು ನಮಗೆ ನಿಜಕ್ಕೂ ಚಾಲೆಂಜಿಂಗ್‌ ಆಗಿತ್ತು. ಆದ್ದರಿಂದ ಸಿನಿಮಾ ಆರಂಭದಿಂದಲೂ ನಾವು ಪ್ರಚಾರ ಮಾಡುತ್ತಲೇ ಬಂದೆವು. ಸಿನಿಮಾ ಬಗ್ಗೆ ಜನರಿಗೆ ಆಸಕ್ತಿ ಉಂಟಾಗುವಂತ ಪೋಸ್ಟರ್‌ಗಳನ್ನು ಕ್ರಿಯೇಟ್‌ ಮಾಡಿದ್ದೆವು. ರಾಬರ್ಟ್‌ ಹಾಗೂ ಗುರು ಶಿಷ್ಯ ಸಿನಿಮಾಗೆ ಕೂಡಾ ನಾವು ಇದೇ ಟೆಕ್ನಿಕ್‌ ಬಳಸಿದ್ದೆವು. ಈಗ ಅದು ಕಾಟೇರ ಸಿನಿಮಾದಲ್ಲೂ ಮುಂದುವರೆದಿದೆ ಎಂದು ಕಾಟೇರ ಯಶಸ್ಸಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಹುಟ್ಟಿದ ಕಥೆ

ಇನ್ನು ಕಾಟೇರ ಕಥೆ ಹುಟ್ಟಿದ ಬಗ್ಗೆ ಮಾತನಾಡಿರುವ ತರುಣ್‌, ಲಾಕ್‌ಡೌನ್‌ ಆರಂಭಿಕ ದಿನಗಳಲ್ಲಿ ನನ್ನ ಸ್ನೇಹಿತ ಜಡೇಶ್‌, ನೈಜ ಘಟನೆಯೊಂದನ್ನು ನನ್ನ ಬಳಿ ಹಂಚಿಕೊಂಡರು. ಆ ಕಥೆ ನಿಜಕ್ಕೂ ನನ್ನ ಗಮನ ಸೆಳೆಯಿತು. ನಂತರ ಸ್ಟೋರಿ ಡೆವಲಪ್‌ ಮಾಡಿದೆವು. ಆ ಚಿತ್ರವನ್ನು ನಾನೇ ನಿರ್ದೇಶನ ಮಾಡಬೇಕೆಂದು ನಿರ್ಧರಿಸಿದೆ. ದರ್ಶನ್‌ ಅವರೇ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕೆಂಬುದು ನನ್ನ ಮನಸ್ಸಿನಲ್ಲಿ ಇತ್ತು. ಕಥೆಯನ್ನು ಅವರ ಬಳಿ ಕೂಡಾ ಹೇಳಿದೆವು. ಅವರೂ ಕೂಡಾ ಕಥೆ ಕೇಳಿ ಬಹಳ ಎಕ್ಸೈಟ್‌ ಆದರು. ರಾಕ್‌ ಲೈನ್‌ ವೆಂಕಟೇಶ್‌ ಅವರೊಂದಿಗೆ ಚರ್ಚಿಸಿದ ನಂತರ ಅವರು ಕೂಡಾ ಸಿನಿಮಾ ನಿರ್ಮಿಸಲು ಒಪ್ಪಿಕೊಂಡರು.

ಪ್ರತಿಭಾವಂತೆ ಆರಾಧನಾ ರಾಮ್‌

ಇನ್ನು ಸಿನಿಮಾ ಕಾಟೇರ ಎಂದು ಹೆಸರಿಟ್ಟಿದ್ದು ದರ್ಶನ್‌ ಅವರೇ. ಕಾಟಿ ಎಂದರೆ ಕಾಡೆಮ್ಮೆ ಎಂದು ಅರ್ಥ. ಈ ಚಿತ್ರಕ್ಕೆ ಒಂದು ವಿಭಿನ್ನ ಶೀರ್ಷಿಕೆಯನ್ನು ನೀಡುವುದು ಮುಖ್ಯವಾಗಿತ್ತು. ದರ್ಶನ ಕೊಟ್ಟ ಹೆಸರು ನಿಜಕ್ಕೂ ನಮಗೆ ಬಹಳ ಇಷ್ಟವಾಯ್ತು. ಕಾಟೇರಮ್ಮ ಗ್ರಾಮ ದೇವತೆ. ಚಿತ್ರದ ನಾಯಕಿ ಬಗ್ಗೆ ಹೇಳೋದಾದ್ರೆ, ಈ ಸಿನಿಮಾಗೆ ಹೊಸ ಮುಖದ ಹುಡುಕಾಟದಲ್ಲಿದ್ದೆವು. ಅದೇ ಸಮಯದಲ್ಲಿ ಮಾಲಾಶ್ರೀ ಮೇಡಂ ರಾಕ್‌ಲೈನ್‌ ವೆಂಕಟೇಶ್‌ ಅವರನ್ನು ಸಂಪರ್ಕಿಸಿ ಆರಾಧನಾ ಸಿನಿಮಾ ಎಂಟ್ರಿ ಬಗ್ಗೆ ಚರ್ಚಿಸುತ್ತಿದ್ದರು. ಆಕೆಯ ಫೋಟೋಗಳನ್ನು ನೋಡಿ ಆಡಿಷನ್‌ ಮಾಡಿದ ನಂತರ ಅಮ್ಮನಷ್ಟೇ ಪ್ರತಿಭಾವಂತೆ ಅನ್ನೋದು ಗೊತ್ತಾಯ್ತು. ಜನರಿಗೂ ಆರಾಧನಾ ನಟನೆ ಇಷ್ಟ ಆಗುವುದೆಂದು ನಿರ್ಧರಿಸಿ ನಾವು ಫೈನಲ್‌ ಆಗಿ ಆಕೆಯನ್ನೇ ಆಯ್ಕೆ ಮಾಡಿಕೊಂಡೆವು ಎಂದು ತರುಣ್‌ ಸುಧೀರ್‌ ವಿವರಣೆ ನೀಡಿದ್ದಾರೆ.

Whats_app_banner