ಕನ್ನಡ ಸುದ್ದಿ  /  ಮನರಂಜನೆ  /  Raghavendra Stores Ott: ಒಟಿಟಿಗೆ ಬಂದೇ ಬಿಡ್ತು ಜಗ್ಗೇಶ್‌ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ; ಸದ್ದಿಲ್ಲದೆ ಶುರುವಾಯ್ತು ಸ್ಟ್ರೀಮಿಂಗ್‌

Raghavendra Stores OTT: ಒಟಿಟಿಗೆ ಬಂದೇ ಬಿಡ್ತು ಜಗ್ಗೇಶ್‌ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ; ಸದ್ದಿಲ್ಲದೆ ಶುರುವಾಯ್ತು ಸ್ಟ್ರೀಮಿಂಗ್‌

ನಟ ಜಗ್ಗೇಶ್‌ ಅಭಿನಯದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಯಾವುದೇ ಸದ್ದು ಮಾಡದೆ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

ಒಟಿಟಿಗೆ ಬಂದೇ ಬಿಡ್ತು ಜಗ್ಗೇಶ್‌ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ; ಸದ್ದಿಲ್ಲದೆ ಶುರುವಾಯ್ತು ಸ್ಟ್ರೀಮಿಂಗ್‌
ಒಟಿಟಿಗೆ ಬಂದೇ ಬಿಡ್ತು ಜಗ್ಗೇಶ್‌ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ; ಸದ್ದಿಲ್ಲದೆ ಶುರುವಾಯ್ತು ಸ್ಟ್ರೀಮಿಂಗ್‌

Raghavendra Stores OTT: ನವರಸನಾಯಕ ಜಗ್ಗೇಶ್‌ (Jaggesh) ಅಭಿನಯದ ರಾಘವೇಂದ್ರ ಸ್ಟೋರ್ಸ್‌ (Raghavendra Stores) ಸಿನಿಮಾ ಏಪ್ರಿಲ್‌ 28ರಂದು ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಎಲ್ಲೆಡೆ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ಮಧ್ಯ ವಯಸ್ಕನ ಮದುವೆ ಪ್ರಸಂಗವನ್ನು ಹಾಸ್ಯಮಯವಾಗಿಯೇ ಕಟ್ಟಿಕೊಟ್ಟಿದ್ದರು ನಿರ್ದೇಶಕ ಸಂತೋಷ್‌ ಆನಂದ್‌ರಾಮ್.‌ ಹೀಗಿರುವಾಗಲೇ ಈ ಸಿನಿಮಾ ಇದೀಗ ದಿಢೀರ್‌ ಒಟಿಟಿಗೆ (OTT) ಎಂಟ್ರಿಕೊಟ್ಟಿದೆ. ಅದೂ ಯಾವುದೇ ಸದ್ದು ಗದ್ದಲವಿಲ್ಲದೆ.

ಟ್ರೆಂಡಿಂಗ್​ ಸುದ್ದಿ

ರಾಜ್ಯದಲ್ಲಿ ಚುನಾವಣೆ ಬಿರುಸುಗೊಳ್ಳುವುದಕ್ಕೂ ಮುನ್ನ ಅಂದರೆ ಏ. 28ರಂದು ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಕೇವಲ 20 ದಿನಕ್ಕೆ ನೇರವಾಗಿ ಒಟಿಟಿಯಲ್ಲಿ ಸ್ಕ್ರೀಮಿಂಗ್‌ ಆರಂಭಿಸಿದೆ. ಮೇ 18ರ ಮಧ್ಯರಾತ್ರಿ ಅಮೆಜಾನ್‌ ಪ್ರೈಂ (Amazon Prime Video) ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭವಾಗಿದೆ. ಚಿತ್ರನಿರ್ಮಾಣ ಸಂಸ್ಥೆಯಾಗಲಿ, ನಾಯಕ, ನಿರ್ದೇಶಕರಾಗಲಿ ಯಾವುದೇ ಸುಳಿವು ನೀಡದೇ, ನೇರವಾಗಿ ಪ್ರಸಾರ ಆರಂಭಿಸಿದೆ.

ಕಮರ್ಷಿಯಲ್‌ ಸಕ್ಸಸ್‌ ಕಾಣದ ಈ ಸಿನಿಮಾ, ಬಿಡುಗಡೆಗೂ ಮುನ್ನ ಸದ್ದು ಮಾಡಿತ್ತಾದರೂ, ಅದಾದ ಬಳಿಕ ಎಲೆಕ್ಷನ್‌ ಮತ್ತು ಐಪಿಎಲ್‌ ಸುಳಿಗೆ ಸಿಲುಕಿ ಚಿತ್ರಮಂದಿರದಿಂದಲೂ ಮಿಸ್‌ ಆಗಿತ್ತು. ಇದೆಲ್ಲದರ ಗ್ಯಾಪ್‌ನಲ್ಲಿಯೇ ಇದೀಗ ಒಟಿಟಿಯಲ್ಲೂ ಪ್ರಸಾರ ಶುರುವಿಟ್ಟುಕೊಂಡಿದೆ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ. ‌

ಸಿನಿಮಾ ಗೆದ್ದಿದೆ ಎಂದಿದ್ದ ಜಗ್ಗೇಶ್

ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆದ ಒಂದೇ ವಾರಕ್ಕೆ ಸಕ್ಸಸ್‌ ಮೀಟ್‌ ಮಾಡಿದ್ದ ತಂಡ ಸಿನಿಮಾಕ್ಕೆ ರೆಸ್ಪಾನ್ಸ್‌ ಬಗ್ಗೆಯೂ ಖುಷಿ ವ್ಯಕ್ತಪಡಿಸಿತ್ತು. "ಚುನಾವಣೆ, ಐಪಿಎಲ್ ನಡುವೆ ಈ ಚಿತ್ರ ಬಿಡುಗಡೆ ಮಾಡುತ್ತಾರಾ? ಎಂದು ಎಷ್ಟೋ ಜನ‌ ಕೇಳುತ್ತಿದ್ದರು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರು ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತವಾಗಿ ನೋಡೇ ನೋಡುತ್ತಾರೆ. ಆ ನಂಬಿಕೆಯಿಂದ ಈ ಚಿತ್ರವನ್ನು ಬಿಡುಗಡೆ ಮಾಡಿದರು.‌ ಅವರ ಮಾತು ನಿಜವಾಯಿತು. ಜನ ನಮ್ಮ ಚಿತ್ರಕ್ಕೆ ತೋರುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ. ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ‌. ರಾಯರ ಹೆಸರಿನ ಈ ಚಿತ್ರಕ್ಕೆ ರಾಯರೆ ಯಶಸ್ಸು ನೀಡುತ್ತಿದ್ದಾರೆ ಎಂದಿದ್ದರು ಜಗ್ಗೇಶ್.

ಜಗ್ಗೇಶ್‌ ಚಿತ್ರಕ್ಕೆ ತಗುಲಿತ್ತು ನೀತಿ ಸಂಹಿತೆ

ಚುನಾವಣಾ ಪ್ರಚಾರದ ಸಮಯದಲ್ಲಿ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್‌ ಚಿತ್ರ ಪ್ರದರ್ಶನ ಕಾಣುತ್ತಿತ್ತು. ಇದೆಲ್ಲದರ ಜತೆಗೆ ನಟ ಜಗ್ಗೇಶ್‌ ರಾಜ್ಯ‌ ಸಭಾ ಸದಸ್ಯರಾಗಿದ್ದು, ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿಯೂ ರಾಜ್ಯ ಸುತ್ತುತ್ತಿದ್ದರು. ಹೀಗೆ ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಲ್ಲಿ ಜಗ್ಗೇಶ್‌ ಪೋಸ್ಟರ್‌ಗಳನ್ನು ತೆಗೆಯಬೇಕು ಎಂಬ ದೂರು ಬಂದ ಹಿನ್ನೆಲೆಯಲ್ಲಿ, ಚುನಾವಣೆ ಆಯೋಗದ ಅಧಿಕಾರಿಗಳು, ಚಿತ್ರದ ಪೋಸ್ಟರ್‌ಗಳಲ್ಲಿ ಜಗ್ಗೇಶ್‌ ಅವರ ಮುಖ ಮುಚ್ಚಿ ಮುಖಕ್ಕೆ ಬಿಳಿ ಹಾಳೆ ಅಂಟಿಸಿದ್ದರು.

IPL_Entry_Point