ಕಂಗುವಾ ಎಂದರೇನು? ನಟ ಸೂರ್ಯ ದ್ವಿಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾದ ಕಥಾ ಹಂದರ, ಬಜೆಟ್ ಕುರಿತು ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಕಂಗುವಾ ಎಂದರೇನು? ನಟ ಸೂರ್ಯ ದ್ವಿಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾದ ಕಥಾ ಹಂದರ, ಬಜೆಟ್ ಕುರಿತು ಇಲ್ಲಿದೆ ಮಾಹಿತಿ

ಕಂಗುವಾ ಎಂದರೇನು? ನಟ ಸೂರ್ಯ ದ್ವಿಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾದ ಕಥಾ ಹಂದರ, ಬಜೆಟ್ ಕುರಿತು ಇಲ್ಲಿದೆ ಮಾಹಿತಿ

ಕಂಗುವಾ ಸಿನಿಮಾ ಈ ವಾರದಲ್ಲೇ ರಿಲೀಸ್‌ ಆಗಲಿದೆ. ಈ ಸಿನಿಮಾ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. ಕಂಗುವಾ ಪದದ ಅರ್ಥವೇನು? ಎಂಬ ಮಾಹಿತಿ ಇಲ್ಲಿದೆ. ಅಷ್ಟೇ ಅಲ್ಲ ಈ ಸಿನಿಮಾದ ಬಜೆಟ್, ಕಥೆ ಸೇರಿದಂತೆ ಇನ್ನಷ್ಟು ಮಾಹಿತಿ ಇಲ್ಲೇ ಇದೆ.

ಕಂಗುವಾ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ನಟ ಸೂರ್ಯ
ಕಂಗುವಾ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ನಟ ಸೂರ್ಯ

ಇತ್ತೀಚಿನ ದಿನಗಳಲ್ಲಿ ಕಂಗುವಾ ಸಿನಿಮಾದ ಬಗ್ಗೆ ಜನರ ಕ್ರೇಜ್ ಹೆಚ್ಚುತ್ತಿದ್ದೆ. ಬಿಡುಗಡೆಗೆ ಸ್ವಲ್ಪ ದಿನ ಮಾತ್ರ ಬಾಕಿ ಉಳಿದಿದೆ. ಬಾಬಿ ಡಿಯೋಲ್ ಮತ್ತು ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಸ್ಟುಡಿಯೋ ಗ್ರೀನ್ ಫಿಲಂಸ್ ವತಿಯಿಂದ ಬರುತ್ತಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿದೆ. ಈ ವರ್ಷದ ದೊಡ್ಡ ಚಿತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ವಿಶಿಷ್ಟ ಕಥೆಯೊಂದಿಗೆ ಭಾರತೀಯ ಚಿತ್ರರಂಗದಲ್ಲಿ ಹೊಸ ಮಾನದಂಡಗಳನ್ನು ಹೊಂದಿರುವ ಕಥೆಯಾಗಿದೆ. ಈ ಸಿನಿಮಾ ಬಿಗ್‌ ಬಜೆಟ್‌ ಮೂವಿಯಾಗಿರುವುದರಿಂದ ಸಾಕಷ್ಟು ಜನ ಮನ್ನಣೆ ಕೂಡ ಚಿತ್ರತಂಡಕ್ಕೆ ಅಗತ್ಯವಿದೆ. ಆ ಕಾರಣದಿಂದ ಪ್ರಚಾರ ಕೂಡ ಚುರುಕಾಗಿ ನಡೆಯುತ್ತಿದೆ. ಆದರೆ ಈ ವರ್ಷ ಬಂದ ಬಿಗ್‌ ಬಜೆಟ್‌ ಸಿನಿಮಾಗಳು ಅಷ್ಟೊಂದು ಲಾಭಗಳಿಸಿಲ್ಲ. ಈ ಸಿನಿಮಾ ಎಷ್ಟು ಲಾಭಗಳಿಸಬಹುದು ಎಂಬ ಕುತೂಹಲವೂ ಜನರಿಗಿದೆ.

ಶಿವ ಕುಮಾರ್ ನಿರ್ದೆಶಕ ಮೂಲತಃ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅಣ್ಣಾತ್ತೆ, ವೇದಾಲಂ, ಸಿರುತೈ ಚಿತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ 'ಕಂಗುವಾ' ಕೂಡ ಅವರಿಗೆ ದೊಡ್ಡ ಪ್ರಾಜೆಕ್ಟ್ ಆಗಿದ್ದು ಅವರ ಕೆರಿಯರ್ ಅನ್ನು ಬದಲಾಯಿಸಬಲ್ಲ ತಾಕತ್ತು ಹೊಂದಿರುವ ಸಿನಿಮಾವಾಗಿದೆ.

ಕಂಗುವಾ ಎಂದರೇನು?
10 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಹೆಸರಿನ ಅರ್ಥವನ್ನು ನಾವಿಲ್ಲಿ ನೀಡಿದ್ದೇವೆ. ಕಂಗುವಾ ಎಂದರೆ ‘ಬೆಂಕಿಯ ಶಕ್ತಿಯುಳ್ಳ ಮನುಷ್ಯ’ ಎಂದರ್ಥ. ಈ ಸಿನಿಮಾವನ್ನು ಪ್ರೇಕ್ಷಕರು 3D ಯಲ್ಲಿ ವೀಕ್ಷಿಸಬಹುದು.

ದ್ವಿಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಸೂರ್ಯ

ಸೂರ್ಯ ಈ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫ್ರಾನ್ಸಿಸ್ ಜೊತೆಗೆ 'ಕಂಗುವಾ' ಪಾತ್ರದಲ್ಲಿ ನಟಿಸಲಿದ್ದಾರೆ. ದಿಶಾ ಪಟಾನಿ ಏಂಜೆಲಿಯಾ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಾಬಿ ಡಿಯೋಲ್ ಖಳನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಉಧಿರನ್' ಪಾತ್ರದಲ್ಲಿ ಬಾಬಿ ಡಿಯೋಲ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು, ನಟರಾಜನ್, ಕೋವೈ ಸರಳಾ, ಆನಂದರಾಜ್, ದೀಪಾ ವೆಂಕಟ್, ಪ್ರೇಮ್ ಕುಮಾರ್ ಸೇರಿದಂತೆ ಹಲವು ಕಲಾವಿದರಿದ್ದಾರೆ.

ಕಂಗುವಾ ಬಜೆಟ್‌

ಕಂಗುವಾ ಈ ವರ್ಷದ ದುಬಾರಿ ಚಿತ್ರಗಳಲ್ಲೊಂದು ಎನ್ನಲಾಗಿದೆ. ಇವರ ಬಜೆಟ್ 350 ಕೋಟಿಗೂ ಹೆಚ್ಚು. ಭಾರತವಲ್ಲದೆ, 7 ವಿವಿಧ ದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಆಕ್ಷನ್ ಮತ್ತು ಸಿನಿಮಾಟೋಗ್ರಫಿಯಂತಹ ತಾಂತ್ರಿಕ ವಿಭಾಗಗಳಿಗೆ ತಯಾರಕರು ಹಾಲಿವುಡ್ ತಜ್ಞರನ್ನು ನೇಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಒಟ್ಟು 10 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಚಿತ್ರೀಕರಿಸಲಾದ ಅತಿ ದೊಡ್ಡ ವಾರ್ ಸೀಕ್ವೆನ್ಸ್ ಕೂಡ ಚಿತ್ರದಲ್ಲಿದೆ.

ಕಂಗುವಾ ಕಥೆ ಹೇಗಿದೆ?

ಎಸ್ ವೆಂಕಟೇಶನ್ ಅವರ 'ವೇಲ್ ಪರಿ' ಪುಸ್ತಕವನ್ನು ಆಧರಿಸಿ ‘ಕಂಗುವಾ’ ಕಥೆಯನ್ನು ನಿರ್ಮಾಣ ಮಾಡಲಾಗಿದೆಯಂತೆ. ಹಾಗಾಗಿ 1500 ವರ್ಷಗಳ ಹಿಂದಿನ ತಮಿಳುನಾಡಿನ ಐತಿಹಾಸಿಕ ಅಂಶಗಳನ್ನು ಈ ಸಿನಿಮಾ ತೋರಿಸಲಿದೆ ಎನ್ನುತ್ತಾರೆ ಕೆಲವರು. ಎರಡು ವಿಭಿನ್ನ ಅವಧಿಗಳ ಕಥೆ ಎಲ್ಲಿ ಹೋಗುತ್ತದೆ. ಟ್ರೇಲರ್ ನೋಡಿದ ನಂತರ, ಇದು ಒಬ್ಬ ಯೋಧನ ಕಥೆಯಾಗಿದ್ದು, ಕಂಗುವ ತನ್ನ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ರಕ್ಷಿಸುವುದು ಅರ್ಥವಾಗುತ್ತದೆ.

Whats_app_banner