Lakshmi Baramma: ಅಶೋಕವನದಲ್ಲಿ ಸೀತೆಯಾದ ಲಕ್ಷ್ಮೀ; ಇದು ಆಸ್ಪತ್ರೆಯೋ, ಆಶ್ರಮವೋ ಎಂದು ಪ್ರಶ್ನಿಸಿದ ವೀಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಅಶೋಕವನದಲ್ಲಿ ಸೀತೆಯಾದ ಲಕ್ಷ್ಮೀ; ಇದು ಆಸ್ಪತ್ರೆಯೋ, ಆಶ್ರಮವೋ ಎಂದು ಪ್ರಶ್ನಿಸಿದ ವೀಕ್ಷಕರು

Lakshmi Baramma: ಅಶೋಕವನದಲ್ಲಿ ಸೀತೆಯಾದ ಲಕ್ಷ್ಮೀ; ಇದು ಆಸ್ಪತ್ರೆಯೋ, ಆಶ್ರಮವೋ ಎಂದು ಪ್ರಶ್ನಿಸಿದ ವೀಕ್ಷಕರು

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆ ಮಾತ್ರ ಯಾಕೋ ಆಸ್ಪತ್ರೆಯಂತಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಲಕ್ಷ್ಮಿಯಂತು ಈಗ ಸೀತೆಯಾಗಿ ಬದಲಾಗಿದ್ದಾಳೆ.

ಅಶೋಕ ವನದಲ್ಲಿ ಸೀತೆಯಾದ ಲಕ್ಷ್ಮೀ
ಅಶೋಕ ವನದಲ್ಲಿ ಸೀತೆಯಾದ ಲಕ್ಷ್ಮೀ (ಕಲರ್ಸ್‌ ಕನ್ನಡ)

ಕಾವೇರಿ ಬೇಕು ಎಂದೇ ಲಕ್ಷ್ಮೀಗೆ ಹುಚ್ಚು ಹಿಡಿದಿದೆ ಎಂದು ಸಾಬೀತು ಮಾಡಿ ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆದರೆ ವೈಷ್ಣವ್‌ ಹಾಗೂ ಮನೆಯ ಇತರರಿಗೆ ಅವಳನ್ನು ಈ ಆಸ್ಪತ್ರೆಗೆ ಸೇರಿಸಲು ಇಷ್ಟ ಇರುವುದಿಲ್ಲ. ಆದರೂ ವೈಷ್ಣವ್ ಗತಿ ಇಲ್ಲದೆ ಅಮ್ಮನ ಮಾತನ್ನು ಕೇಳಲೇಬೇಕು ಎಂದು ಅಂದುಕೊಂಡು ಅವಳನ್ನು ಇಲ್ಲಿ ಸೇರಿಸಿದ್ದಾನೆ. ಇದು ಹುಚ್ಚಾಸ್ಪತ್ರೆ ಎಂದು ಹೇಳಿದರೂ ನಂಬಲು ಸಾಧ್ಯವಿಲ್ಲ ಆ ರೀತಿಯಾಗಿ ಅಲ್ಲಿನ ಚಟುವಟಿಕೆಗಳಿದೆ ಎಂದು ಕೃಷ್ಣ ಹೇಳುತ್ತಾನೆ. ಡಾಕ್ಟರ್ ಕೂಡ ಅದನ್ನೇ ಹೇಳುತ್ತಾರೆ. ನಾವು ಇಲ್ಲಿಯ ವಾತಾವರಣವನ್ನು ಬೇರೆ ರೀತಿ ಇಟ್ಟಿದ್ದೇವೆ ಎನ್ನುತ್ತಾರೆ.

ಆದರೆ ವೀಕ್ಷಕರು ಮಾತ್ರ ಈ ದೃಶ್ಯಗಳನ್ನು ಒಪ್ಪುತ್ತಿಲ್ಲ. ಈಗ ಆಸ್ಪತ್ರೆಯೋ? ಇದು ಆಶ್ರಮವೋ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನು ಕಾರಣವೆಂದರೆ ಲಕ್ಷ್ಮೀ ಒಂದು ನಾಟಕದಲ್ಲಿ ಸೀತೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಆಸ್ಪತ್ರೆಯಲ್ಲಿ ನಾಟಕ ಇರುತ್ತದೆ. ಆ ನಾಟಕದಲ್ಲಿ ಲಕ್ಷ್ಮೀ ಸೀತೆಯ ಉಡುಪು ಧರಿಸಿ ತನ್ನ ರಾಮನಿಗಾಗಿ ಕಾಯುತ್ತಿದ್ದಂತೆ ಕಾಣುತ್ತಾಳೆ. ನಂತರ ಅವಳು ಮಾತನಾಡುತ್ತಾಳೆ. ಇನ್ನು ಹನುಮಂತ ಬಂದು ಮುದ್ರೆಯುಂಗುರವನ್ನೂ ನೀಡುತ್ತಾನೆ. ಈ ರೀತಿ ಯಾವ ಆಸ್ಪತ್ರೆಯಲ್ಲಿ ಆಗುತ್ತದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ನಂತರ ಅಶೋಕವನದಲ್ಲಿ ಸೀತೆ ರಾಮನನ್ನು ನೆನೆಸಿಕೊಂಡು ನೃತ್ಯ ಮಾಡುತ್ತಾಳೆ. ಹೀಗೆಲ್ಲ ಮಾಡಿರುವುದು ವೀಕ್ಷಕರಿಗೆ ಗೊಂದಲ ಉಂಟು ಮಾಡಿದೆ. “ಅಯ್ಯೋ ಡೈರೆಕ್ಟರ್, ಗಣೇಶ, ಗೌರಿ, ಮಹಾದೇವಿ, ಮಹದೇವ, ಗೊಂಬೆ ಶಾಸ್ತ್ರ ಎಲ್ಲಾ ವೇಸ್ಟ್, ಅದ್ರಿಂದ ದುಷ್ಟರ ಸಂಹಾರ ಸಾಧ್ಯ ಇಲ್ಲ ಅಂತ ತೋರಿಸಿ ಆಯ್ತು ನೀನು. ಈಗ ಸೀತೆ ರಾಮ ಕೂಡಾ ಸುಳ್ಳು ಅಂತ ತೋರಿಸೋಕೆ ಹೋಗ್ತಾ ಇದ್ದೀಯ?” ಎಂದು ಕಿರಣ್ ಶೆಟ್ಟಿ ಎಂಬುವವರು ಕಾಮೆಂಟ್ ಮಾಡಿದ್ದಾರೆ.

ಲಕ್ಷ್ಮಿ ಸೀತೆ ಆಗಿ ಮುದ್ದಾಗಿ ಕಾಣುತ್ತಾ ಇದ್ಲು.ಸೀತೆಯ ನೃತ್ಯವೂ ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಧಾರಾವಾಹಿ ಬೋರಿಂಗ್ ಆಗುತ್ತಿದೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner