ನಿನಗೆ ಫ್ಯಾಷನ್‌ ಸೆನ್ಸ್‌ ಇಲ್ಲ ಅದಕ್ಕೆ ಭಾವ ನಿನ್ನ ಗುಗ್ಗು, ಎಮ್ಮೆ ಅನ್ನೋದು, ತಂಗಿ ಮಾತಿಗೆ ಕಣ್ಣೀರಿಟ್ಟ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನಿನಗೆ ಫ್ಯಾಷನ್‌ ಸೆನ್ಸ್‌ ಇಲ್ಲ ಅದಕ್ಕೆ ಭಾವ ನಿನ್ನ ಗುಗ್ಗು, ಎಮ್ಮೆ ಅನ್ನೋದು, ತಂಗಿ ಮಾತಿಗೆ ಕಣ್ಣೀರಿಟ್ಟ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ನಿನಗೆ ಫ್ಯಾಷನ್‌ ಸೆನ್ಸ್‌ ಇಲ್ಲ ಅದಕ್ಕೆ ಭಾವ ನಿನ್ನ ಗುಗ್ಗು, ಎಮ್ಮೆ ಅನ್ನೋದು, ತಂಗಿ ಮಾತಿಗೆ ಕಣ್ಣೀರಿಟ್ಟ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 1ರ ಎಪಿಸೋಡ್‌ನಲ್ಲಿ ತಾಂಡವ್‌ ತನಗಾಗಿ ತಂದ ಡ್ರೆಸ್‌ ಧರಿಸಲು ಭಾಗ್ಯಾ ಬಹಳ ಮುಜುಗರ ಪಡುತ್ತಾಳೆ. ನಿನಗೆ ಫ್ಯಾಷನ್‌ ಸೆನ್ಸ್‌ ಇಲ್ಲ ಅದಕ್ಕೆ ಭಾವ ನಿನ್ನ ಗುಗ್ಗು, ಎಮ್ಮೆ ಅನ್ನೋದು ಎಂದು ಪೂಜಾ ರೇಗುತ್ತಾಳೆ. ತಂಗಿ ಮಾತಿಗೆ ಭಾಗ್ಯಾ ಕಣ್ಣೀರಿಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 1ರ ಎಪಿಸೋಡ್‌ನಲ್ಲಿ ತಂಗಿ ರೇಗಿದ್ದಕ್ಕೆ ಕಣ್ಣೀರಿಟ್ಟ ಭಾಗ್ಯಾ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 1ರ ಎಪಿಸೋಡ್‌ನಲ್ಲಿ ತಂಗಿ ರೇಗಿದ್ದಕ್ಕೆ ಕಣ್ಣೀರಿಟ್ಟ ಭಾಗ್ಯಾ (PC: Jio Cinema)

Bhagyalakshmi Kannada Serial: ಭಾಗ್ಯಾಗೆ ಅವಮಾನ ಮಾಡಬೇಕು ಎಂದು ತಾಂಡವ್‌ ಶ್ರೇಷ್ಠಾ ಎಷ್ಟೇ ಪ್ರಯತ್ನ ಪಟ್ಟರೂ ಅವರ ಪ್ರಯತ್ನ ಯಶಸ್ವಿಯಾಗುತ್ತಿಲ್ಲ. ಎಲ್ಲಾ ಕಡೆಯೂ ಭಾಗ್ಯಾಗೆ ಸನ್ಮಾನ ದೊರೆಯುತ್ತಿದೆ. ಇದೇ ಕಾರಣಕ್ಕೆ ಈ ಬಾರಿ ಹೇಗಾದರೂ ಮಾಡಿ ಭಾಗ್ಯಾಗೆ ಎಲ್ಲರೂ ಛೀಮಾರಿ ಹಾಕುವಂತೆ ಮಾಡೇ ತೀರುತ್ತೇನೆ ಎಂದು ತಾಂಡವ್‌ ನಿರ್ಧರಿಸುತ್ತಾನೆ. ಇದೇ ಕಾರಣಕ್ಕೆ ಪಾರ್ಟಿ ಅರೇಂಜ್‌ ಮಾಡಿದ್ದಾನೆ.

ತಾಳ್ಮೆ ಕಳೆದುಕೊಂಡು ಅಕ್ಕನ ಮೇಲೆ ರೇಗಾಡಿದ ಪೂಜಾ

ಭಾಗ್ಯಾಗಾಗಿ ತಾಂಡವ್‌ ತಂದ ಡ್ರೆಸ್‌ ಹಾಕಿಕೊಳ್ಳುವಂತೆ ಕುಸುಮಾ ಹೇಳುತ್ತಾಳೆ. ಒಲ್ಲದ ಮನಸ್ಸಿನಿಂದ ಭಾಗ್ಯಾ ಕೂಡಾ ಸರಿ ಎನ್ನುತ್ತಾಳೆ. ಆದರೆ ಆ ಡ್ರೆಸ್‌ ಹಾಕಿ ಕನ್ನಡಿಯಲ್ಲಿ ನೋಡಿಕೊಂಡಾಗ ಭಾಗ್ಯಾಗೆ ಮುಜುಗರವಾಗುತ್ತದೆ. ನೀನು ತುಂಬಾ ಚೆಂದ ಕಾಣುತ್ತಿದ್ದೀಯ ಈ ಹೈ ಹೀಲ್ಸ್‌ ಚಪ್ಪಲಿ ಹಾಕಿದರೆ ಇನ್ನೂ ಚೆನ್ನಾಗಿ ಕಾಣುತ್ತೀಯ ಎಂದು ಪೂಜಾ ಹೇಳುತ್ತಾಳೆ. ಚಪ್ಪಲಿ ಹಾಕುವ ಭಾಗ್ಯಾಗೆ ನಡೆಯಲು ಕಷ್ಟವಾಗುತ್ತದೆ. ಆದರೆ ಬ್ಯಾಲೆನ್ಸ್‌ ತಪ್ಪಿ ಬೀಳುತ್ತಾಳೆ. ಪ್ರಯತ್ನಿಸು ಎಂದು ತಂಗಿ ಹೇಳುತ್ತಾಳೆ. ಆದರೆ ತಾಳ್ಮೆ ಕಳೆದುಕೊಳ್ಳುವ ಭಾಗ್ಯಾ ನನಗೆ ಇದೆಲ್ಲಾ ಆಗುವುದಿಲ್ಲ ದಯವಿಟ್ಟು ಬಿಡು ಎನ್ನುತ್ತಾಳೆ. ಇದಕ್ಕೆ ಬೇಸರಗೊಳ್ಳುವ ಪೂಜಾ, ನೀನು ಹೀಗೆ ಮಾಡಿದರೆ ಸರಿ ಇರುವುದಿಲ್ಲ ನೋಡು.

ನಿನಗೆ ಈ ಚಪ್ಪಲಿ ಹಾಕಿ ನಡೆಯಲೂ ಗೊತ್ತಿಲ್ಲ. ಅದಕ್ಕೆ ನಿನ್ನನ್ನು ಭಾವ ಎಮ್ಮೆ, ಗೂಬೆ ಅನ್ನೋದು, ಹೀಗೆ ಇದ್ದರೆ ಭಾವನಿಗೆ ನೀನು ಹೇಗೆ ಇಷ್ಟವಾಗುವೆ ಹೇಳು ಎನ್ನುತ್ತಾಳೆ. ತಂಗಿ ಮಾತು ಕೇಳಿ ಭಾಗ್ಯಾಗೆ ಬಹಳ ನೋವಾಗುತ್ತದೆ. ಇಷ್ಟು ದಿನ ನಿಮ್ಮ ಭಾವ ದಡ್ಡಿ, ಹಳ್ಳಿಗುಗ್ಗು, ಎಮ್ಮೆ ಎನ್ನುತ್ತಿದ್ದರು, ಈಗ ನೀನೂ ಹೀಗೆ ಕರೆಯುತ್ತಿದ್ದೀಯ, ಒಂದು ಚಪ್ಪಲಿ ಹಾಕಿಕೊಳ್ಳುವುದಿಲ್ಲ ಎನ್ನುವುದಕ್ಕೆ ಇಷ್ಟೆಲ್ಲಾ ಮಾತು ಬೇಕಾ ಎನ್ನುತ್ತಾಳೆ. ತಾನು ಅಡಿದ ಮಾತಿನಿಂದ ಅಕ್ಕನಿಗೆ ಬಹಳ ನೋವಾಗಿದೆ ಅನ್ನೋದು ಪೂಜಾಗೆ ಅರ್ಥವಾಗುತ್ತದೆ. ಅಕ್ಕ ಮಾತಿನ ಭರದಲ್ಲಿ ಹಾಗೆ ಹೇಳಿದೆ, ಸಾರಿ , ಇನ್ಮುಂದೆ ಈ ರೀತಿ ಮಾತನಾಡುವುದಿಲ್ಲ ಎಂದು ಕ್ಷಮೆ ಕೇಳುತ್ತಾಳೆ. ಅಷ್ಟರಲ್ಲಿ ಕೆಳಗೆ ಬರುವಂತೆ ಕುಸುಮಾ ಇಬ್ಬರನ್ನೂ ಕರೆಯುತ್ತಾಳೆ. ನೀನು ಹೋಗು ನಾನು ಬರುತ್ತೇನೆ ಎಂದು ಭಾಗ್ಯಾ ಪೂಜಾಗೆ ಹೇಳುತ್ತಾಳೆ.

ನಡೆದ ಘಟನೆ ಬಗ್ಗೆ ತಾಂಡವ್‌ಗೆ ವರದಿ ಒಪ್ಪಿಸಿದ ಶ್ರೇಷ್ಠಾ

ಮತ್ತೊಂದೆಡೆ ಕುಸುಮಾ ತನ್ನನ್ನು ಹೊಡೆಯುವುದಕ್ಕೆ ಕೋಪಗೊಂಡ ಶ್ರೇಷ್ಠಾ, ನನ್ನ ಅಪ್ಪ ಅಮ್ಮನೇ ನನಗೆ ಹೊಡೆಯುವುದಿಲ್ಲ ನೀವು ಯಾರು ನನಗೆ ಹೊಡೆಯೋಕೆ ಎನ್ನುತ್ತಾಳೆ. ನಿನ್ನ ತಂದೆ ತಾಯಿ ನಿನಗೆ ಹೊಡೆದು ಬುದ್ಧಿ ಕಲಿಸದೆ ಇರುವುದಕ್ಕೆ ಇಂದು ನೀನು ಈ ರೀತಿ ಆಗಿರುವುದು, ನೀನು ಪೊರಕೆ ಬಿಸಾಡಿದರೆ ಏನಂತೆ ಇಲ್ಲಿಂದ ನೀನು ಹೋಗದಿದ್ದರೆ ನನ್ನ ಕೈ ಮಾತನಾಡುತ್ತದೆ ಎನ್ನುತ್ತಾಳೆ. ಅಷ್ಟರಲ್ಲಿ ಧರ್ಮರಾಜ್‌ ಅಲ್ಲಿಗೆ ಬರುತ್ತಾನೆ. ನಡೆದ ಘಟನೆ ತಿಳಿದು ನೀನು ಇಷ್ಟ ಬಂದಂತೆ ಮಾತನಾಡುವುದ ತಪ್ಪು ಎಂದು ಶ್ರೇಷ್ಠಾಗೆ ಹೇಳುತ್ತಾನೆ. ಕುಸುಮಾ ಅವಳನ್ನು ಹೊರ ದೂಡುತ್ತಾಳೆ.

ಹೊರಗೆ ಹೋಗುವ ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡಿ ಎಲ್ಲಾ ವಿಚಾರವನ್ನೂ ತಿಳಿಸುತ್ತಾಳೆ. ಇದರಿಂದ ಸಿಟ್ಟಾಗುವ ತಾಂಡವ್‌ ಇಷ್ಟೆಲ್ಲಾ ನಡೆಯಿತಾ? ಎಂದು ಅಮ್ಮನ ಮೇಲೆ ಸಿಟ್ಟಾಗುತ್ತಾನೆ. ಸೊಸೆಗಾಗಿ ಇಷ್ಟೆಲ್ಲಾ ಮಾಡುತ್ತಿದ್ದೀರಿ, ಅವಳಿಗೆ ಹೇಗೆ ಅವಮಾನ ಮಾಡುವೆ ನೋಡ್ತಿರಿ ಎಂದುಕೊಳ್ಳುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner