ಕನ್ನಡ ಸುದ್ದಿ  /  ಮನರಂಜನೆ  /  Bbk 10: ಬಿಗ್‌ ಬಾಸ್‌ ಮನೆಯಲ್ಲಿ ಚಿಕನ್ ಬಿರಿಯಾನಿ, ಕಬಾಬ್‌ ಘಮ! ಹಸಿವಿನಿಂದ ಕಂಗೆಟ್ಟ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಕೊಡುಗೆ

BBK 10: ಬಿಗ್‌ ಬಾಸ್‌ ಮನೆಯಲ್ಲಿ ಚಿಕನ್ ಬಿರಿಯಾನಿ, ಕಬಾಬ್‌ ಘಮ! ಹಸಿವಿನಿಂದ ಕಂಗೆಟ್ಟ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಕೊಡುಗೆ

ಬಿಗ್‌ ಬಾಸ್‌ ಮನೆಮಂದಿಗೆ ಕಿಚ್ಚನ ಕೈ ಅಡುಗೆ ತಲುಪಿದೆ. ಚಿಕನ್‌ ಬಿರಿಯಾನಿ, ಚಿಕನ್‌ ಕಬಾಬ್‌, ಸಿಹಿ ಖಾದ್ಯದ ಜತೆಗೆ ವಿಶೇಷ ಪತ್ರ ಎಲ್ಲರಿಗೂ ಇಷ್ಟವಾಗಿದೆ.

BBK 10: ಬಿಗ್‌ ಬಾಸ್‌ ಮನೆಯಲ್ಲಿ ಬಿರಿಯಾನಿ, ಕಬಾಬ್‌ ಘಮ! ಹಸಿವಿನಿಂದ ಕಂಗೆಟ್ಟ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಕೊಡುಗೆ
BBK 10: ಬಿಗ್‌ ಬಾಸ್‌ ಮನೆಯಲ್ಲಿ ಬಿರಿಯಾನಿ, ಕಬಾಬ್‌ ಘಮ! ಹಸಿವಿನಿಂದ ಕಂಗೆಟ್ಟ ಸದಸ್ಯರಿಗೆ ಕಿಚ್ಚನ ಕೈಯಡುಗೆಯ ಕೊಡುಗೆ

BBK 10: ನಟನೆ ಹೊರತುಪಡಿಸಿದರೆ, ಸುದೀಪ್‌ ಅತಿಯಾಗಿ ಇಷ್ಟಪಡುವ ಕೆಲಸ ಎಂದರೆ ಅದು ಅಡುಗೆ ಮತ್ತು ಕ್ರಿಕೆಟ್‌. ಇದೀಗ ಇದೇ ಕಿಚ್ಚನ ಕೈ ರುಚಿಯನ್ನು ಬಿಗ್‌ಬಾಸ್‌ ಮಂದಿಯೂ ಸವಿದಿದ್ದಾರೆ. ಪ್ರತಿ ವರ್ಷ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಕಿಚ್ಚನ ಕಡೆಯಿಂದ ಭರ್ಜರಿ ಭೋಜನ ಇದ್ದೇ ಇರುತ್ತದೆ. ಇದೀಗ ಇಂದಿನ ಏಪಿಸೋಡ್‌ನಲ್ಲಿ ಎಲ್ಲ ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿ ಸಿಕ್ಕಿದೆ. ಬಿಗ್‌ ಮನೆಯಲ್ಲಿ ಮುದ್ದೆ ರಾಮಾಯಣದ ಬಳಿಕ, ಕಿಚ್ಚನ ಅಡುಗೆ ಎಲ್ಲರ ಕೈ ಸೇರಿದೆ.

ಟ್ರೆಂಡಿಂಗ್​ ಸುದ್ದಿ

ಮುದ್ದೆಯೂಟದ ನಂತರ ಬಿಗ್‌ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಡಿಸ್‌ಕನೆಕ್ಟ್‌ ಆಗಿದ್ದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿದುಕೊಂಡೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಅಸಮಧಾನವೂ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ ಸಿಕ್ಕಿದೆ. ಆ ಸರ್ಪೈಸ್‌ ಏನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿದ ಪ್ರೋಮೊದಲ್ಲಿ ಜಾಹೀರಾಗಿದೆ.

ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಇದೆಯೇ? ಆ ಖುಷಿಯಂತೂ ಬಿಗ್‌ಬಾಸ್ ಸದಸ್ಯರಿಗೆ ಸಿಕ್ಕೇ ಸಿಕ್ಕಿದೆ. ಆದರೆ ಸ್ಪೆಷಲ್‌ ಸರ್ಪೈಸ್ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನದು. ಊಟ ಎಷ್ಟು ಮುಖ್ಯವೋ ಎಷ್ಟೋ ಸಲ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತದೆ? ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಸಿಕ್ಕ ಅಡುಗೆ ಅಷ್ಟು ಸ್ಪೆಷಲ್ ಆಗಿದ್ದು!

ಹಾಗಾದರೆ ಯಾರು ಅಡುಗೆ ಮಾಡಿದ್ದು?

ಮತ್ಯಾರೂ ಅಲ್ಲ, ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಳುಹಿಸಿದ್ದಾರೆ ಕಿಚ್ಚ ಸುದೀಪ್‌. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದಾರೆ. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ. ‘ಇದು ಸರ್ಪೈಸ್‌. ಇವತ್ತಿನ ಅಡುಗೆ, ಕಿಚ್ಚನ ಕೈಯಡುಗೆ’ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೊದಲ್ಲಿ ಸೆರೆಯಾಗಿವೆ.

ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದಾಡಿದ್ದಾರೆ. ಒಬ್ಬೊಬ್ಬರೂ ಕ್ಯಾಮೆರಾ ಎದುರಿಗೆ ಬಂದು ಥ್ಯಾಂಕ್ಸ್ ಹೇಳಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲ ಸ್ಪರ್ಧಿಗಳೂ ಅನಿಸಿದೆ. ಇಷ್ಟು ಹೊತ್ತು ಹಸಿದುಕೊಂಡಿದ್ದಕ್ಕೂ ಸಾರ್ಥಕವಾಯ್ತು ಎಂದೂ ಅನಿಸಿರಬೇಕು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.

IPL_Entry_Point