ಮದುವೆ ಹತ್ತಿರ ಬರ್ತಿದ್ದಂತೆ ಲಿಪ್‌ಲಾಕ್‌ ಫೋಟೋ ಶೇರ್‌ ಮಾಡಿದ ‘ನನ್ನರಸಿ ರಾಧೆ​’ ಸೀರಿಯಲ್‌ ಖ್ಯಾತಿಯ ಕೌಸ್ತುಭ ಮಣಿ-television news nannarasi radhe serial fame kaustubha mani siddhanth sathish pre wedding shoot photos goes viral mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮದುವೆ ಹತ್ತಿರ ಬರ್ತಿದ್ದಂತೆ ಲಿಪ್‌ಲಾಕ್‌ ಫೋಟೋ ಶೇರ್‌ ಮಾಡಿದ ‘ನನ್ನರಸಿ ರಾಧೆ​’ ಸೀರಿಯಲ್‌ ಖ್ಯಾತಿಯ ಕೌಸ್ತುಭ ಮಣಿ

ಮದುವೆ ಹತ್ತಿರ ಬರ್ತಿದ್ದಂತೆ ಲಿಪ್‌ಲಾಕ್‌ ಫೋಟೋ ಶೇರ್‌ ಮಾಡಿದ ‘ನನ್ನರಸಿ ರಾಧೆ​’ ಸೀರಿಯಲ್‌ ಖ್ಯಾತಿಯ ಕೌಸ್ತುಭ ಮಣಿ

ನನ್ನರಸಿ ರಾಧೆ ಸೀರಿಯಲ್‌ನಲ್ಲಿ ನಟಿಸಿ ಮನೆ ಮಾತಾದ ಕೌಸ್ತುಭ ಮಣಿ, ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮೆಹಂದಿ ಶಾಸ್ತ್ರ ನೆರವೇರಿದೆ. ಈ ನಡುವೆಯೇ ಪುಟ್ಟ ವಿಮಾನದ ಬಳಿ ಭಾವಿ ಪತಿ ಸಿದ್ಧಾಂತ್‌ ಜತೆಗೆ ವಿವಾಹ ಪೂರ್ವ ಫೋಟೋಶೂಟ್‌ನಲ್ಲಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

ಮದುವೆ ಹತ್ತಿರ ಬರ್ತಿದ್ದಂತೆ ಲಿಪ್‌ಲಾಕ್‌ ಫೋಟೋ ಶೇರ್‌ ಮಾಡಿದ ‘ನನ್ನರಸಿ ರಾಧೆ​’ ಸೀರಿಯಲ್‌ ಖ್ಯಾತಿಯ ಕೌಸ್ತುಭ ಮಣಿ
ಮದುವೆ ಹತ್ತಿರ ಬರ್ತಿದ್ದಂತೆ ಲಿಪ್‌ಲಾಕ್‌ ಫೋಟೋ ಶೇರ್‌ ಮಾಡಿದ ‘ನನ್ನರಸಿ ರಾಧೆ​’ ಸೀರಿಯಲ್‌ ಖ್ಯಾತಿಯ ಕೌಸ್ತುಭ ಮಣಿ

Kaustubha Mani Wedding: ಕನ್ನಡದ ಕಿರುತೆರೆ ನಟಿ ಕೌಸ್ತುಭ ಮಣಿ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಎರಡೂ ಮನೆಯಲ್ಲಿ ಮದುವೆಯ ತಯಾರಿ ಶುರುವಾಗಿದ್ದು, ಈ ಗ್ಯಾಪ್‌ನಲ್ಲಿಯೇ ಭಾವಿ ಪರಿಯ ಜತೆಗಿನ ರೊಮ್ಯಾಂಟಿಕ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಕೌಸ್ತುಭ ಮಣಿ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಮದುವೆಗೂ ಮುನ್ನ ರೊಮ್ಯಾನ್ಸಾ? ಎಂದು ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ನನ್ನರಸಿ ರಾಧೆ ಸೀರಿಯಲ್‌ನಲ್ಲಿ ನಟಿಸಿ ಮನೆ ಮಾತಾದ ಕೌಸ್ತುಭ ಮಣಿ, ಇತ್ತೀಚೆಗೆ ಗೌರಿ ಶಂಕರ ಸೀರಿಯಲ್‌ನಲ್ಲೂ ನಟಿಸಿ, ಅದರಿಂದ ಹಿಂದೆ ಸರಿದಿದ್ದರು. ಈಗ ಇವರ ಮನೆಯಲ್ಲಿ ಮದುವೆ ತಯಾರಿ ಶುರುವಾಗಿದೆ. ಈಗಾಗಲೇ ಮೆಹಂದಿ ಶಾಸ್ತ್ರವೂ ನೆರವೇರಿದೆ. ಈ ನಡುವೆಯೇ ಪುಟ್ಟ ವಿಮಾನದ ಬಳಿ ಭಾವಿ ಪತಿ ಸಿದ್ಧಾಂತ್‌ ಸತೀಶ್‌ ಅವರ ಜತೆಗೆ ನಿಂತು ವಿವಾಹ ಪೂರ್ವ ಫೋಟೋಶೂಟ್‌ನಲ್ಲಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. ಅಷ್ಟೇ ಅಲ್ಲ ತುಟಿಗೆ ತುಟಿ ಬೆಸೆದು ರೊಮ್ಯಾಂಟಿಕ್‌ ಮೂಡ್‌ಗೂ ಜಾರಿದ್ದಾರೆ.

ಸಿದ್ಧಾಂತ್‌ ಸತೀಶ್‌ ಜತೆ ಶೀಘ್ರ ಕಲ್ಯಾಣ

ಇತ್ತೀಚೆಗಷ್ಟೇ ಬೆಂಗಳೂರಿನ ಸಾಫ್ಟ್‌ವೇರ್ ಡೆವಲಪರ್ ಸಿದ್ದಾಂತ್ ಸತೀಶ್ ಅವರೊಂದಿಗೆ ಕೌಸ್ತುಭ ಮಣಿ ಅದ್ಧೂರಿ ನಿಶ್ಚಿತಾರ್ಥ ನೆರವೇರಿತ್ತು. ಮನೆಯವರೇ ನಿಶ್ಚಯಿಸಿದ್ದ ಈ ಶುಭ ಕಾರ್ಯದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡು ಸಂಭ್ರಮಿಸಿದ್ದರು. ಅಂದಹಾಗೆ, ಸಿದ್ಧಾಂತ್‌ ಕೆನಡಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇತ್ತ ಮದುವೆ ಬಳಿಕ ಪತಿ ಜತೆಗೆ ವಿದೇಶಕ್ಕೆ ಹಾರಲಿದ್ದಾರೆ ಕೌಸ್ತುಭ.

"ಮದುವೆ, ನನ್ನ ಪಾಲಿಗೆ ಎರಡು ಆತ್ಮಗಳನ್ನು ಮೀರಿದ ಬಂಧವಷ್ಟೇ ಅ.ಲ್ಲ ಇದು ಕುಟುಂಬಗಳನ್ನು ಒಂದುಗೂಡಿಸುವ ಶುಭಕಾರ್ಯವೂ ಹೌದು. ಸಿದ್ದಾಂತ್ ನನ್ನ ಕೆಲಸವನ್ನು ಅರ್ಥಮಾಡಿಕೊಂಡಿದ್ದಾರೆ. ಪೋಷಕರ ಆಶೀರ್ವಾದದೊಂದಿಗೆ, ಈ ಹೊಸ ಅಧ್ಯಾಯಕ್ಕೆ ಒಟ್ಟಿಗೆ ಹೆಜ್ಜೆ ಹಾಕಲು ಇದು ಸರಿಯಾದ ಸಮಯ" ಎಂದು ಕೌಸ್ತುಭ ಈ ಹಿಂದೆ ಪೋಸ್ಟ್‌ ಹಂಚಿಕೊಂಡಿದ್ದರು.

ಬಹುತಾರಾಗಣದ 45 ಚಿತ್ರದಲ್ಲೂ ನಟನೆ

ಮಾಂಗಲ್ಯಂ ತಂತುನಾನೇನ, ನನ್ನರಸಿ ರಾಧೆ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಕೌಸ್ತುಭ ಮಣಿ, ಸೀರಿಯಲ್‌ ಜತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾದಲ್ಲೂ ನಾಯಕಿಯಾಗಿ ಕೌಸ್ತುಭ ನಟಿಸುತ್ತಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್‌ ಮುಗಿದಿದ್ದು, ಒಪ್ಪಿಕೊಂಡ ಪ್ರಾಜೆಕ್ಟ್‌ಗಳ ಕೆಲಸಗಳನ್ನು ಪೂರ್ತಿ ಮುಗಿಸಿಕೊಡಲಿದ್ದಾರೆ. ಸದ್ಯ ಕೌಸ್ತುಭ ಮಣಿ ಮತ್ತು ಸಿದ್ಧಾಂತ್‌ ಮನೆಯಲ್ಲಿ ಮದುವೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ.

ಡೇಟ್ಸ್‌ ಸಮಸ್ಯೆಯಿಂದ ಗೌರಿಶಂಕರದಿಂದ ಔಟ್‌

ಸ್ಟಾರ್‌ ಸುವರ್ಣದ ಗೌರಿ ಶಂಕರ ಸೀರಿಯಲ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕೌಸ್ತುಭ ಮಣಿ, ಸೀರಿಯಲ್‌ ಶುರುವಾಗಿ ಒಂದೇ ತಿಂಗಳಿಗೆ ಅದರಿಂದ ಹೊರಬಂದಿದ್ದರು. ಒಪ್ಪಿಕೊಂಡ ಸಿನಿಮಾಕ್ಕೆ ಡೇಟ್ಸ್‌ ಸಮಸ್ಯೆ ಆಗಿದ್ದರಿಂದ ಸೀರಿಯಲ್‌ನಿಂದಲೇ ಆಚೆ ಬಂದಿದ್ದರು. ಈ ನಡುವೆ ಮದುವೆಯ ಫಿಕ್ಸ್‌ ಆಗಿದ್ದರಿಂದ. ಒಪ್ಪಿಕೊಂಡ ಕಮಿಟ್‌ಮೆಂಟ್‌ಗಳನ್ನು ಮುಗಿಸುವ ನಿಟ್ಟಿನಲ್ಲಿಯೂ ಕೌಸ್ತುಭ ಕೆಲಸ ಮಾಡಿದ್ದರು. ಈಗ ಅರ್ಜುನ್‌ ಜನ್ಯ ಅವರ 45 ಚಿತ್ರದ ಬಹುತೇಕ ಚಿತ್ರೀಕರಣ ಕೆಲಸ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

mysore-dasara_Entry_Point