ಲೈಂಗಿಕ ದೌರ್ಜನ್ಯ ಆರೋಪ, ಜಾನಿ ಮಾಸ್ಟರ್‌ ವಿರುದ್ಧ ಎಫ್‌ಐಆರ್‌; ಸಂತ್ರಸ್ತೆ ಬೆಂಬಲಕ್ಕೆ ನಿಂತ್ರಾ ಅಲ್ಲು ಅರ್ಜುನ್‌?-tollywood news fir against choreographer jani master allu arjun to support victim telugu film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಲೈಂಗಿಕ ದೌರ್ಜನ್ಯ ಆರೋಪ, ಜಾನಿ ಮಾಸ್ಟರ್‌ ವಿರುದ್ಧ ಎಫ್‌ಐಆರ್‌; ಸಂತ್ರಸ್ತೆ ಬೆಂಬಲಕ್ಕೆ ನಿಂತ್ರಾ ಅಲ್ಲು ಅರ್ಜುನ್‌?

ಲೈಂಗಿಕ ದೌರ್ಜನ್ಯ ಆರೋಪ, ಜಾನಿ ಮಾಸ್ಟರ್‌ ವಿರುದ್ಧ ಎಫ್‌ಐಆರ್‌; ಸಂತ್ರಸ್ತೆ ಬೆಂಬಲಕ್ಕೆ ನಿಂತ್ರಾ ಅಲ್ಲು ಅರ್ಜುನ್‌?

ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ಟಾರ್‌ ಕೊರಿಯೋಗ್ರಾಫರ್‌ ಆಗಿ ಹೆಸರು ಮಾಡಿರುವ ಜಾನಿ ಮಾಸ್ಟರ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜಾನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು , ಸ್ಟಾರ್‌ ನಟ ಅಲ್ಲು ಅರ್ಜುನ್‌, ಸಂತ್ರಸ್ತೆ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಲೈಂಗಿಕ ದೌರ್ಜನ್ಯ ಆರೋಪ, ಜಾನಿ ಮಾಸ್ಟರ್‌ ವಿರುದ್ಧ ಎಫ್‌ಐಆರ್‌; ಸಂತ್ರಸ್ತೆ ಬೆಂಬಲಕ್ಕೆ ನಿಂತ್ರಾ ಅಲ್ಲು ಅರ್ಜುನ್‌?
ಲೈಂಗಿಕ ದೌರ್ಜನ್ಯ ಆರೋಪ, ಜಾನಿ ಮಾಸ್ಟರ್‌ ವಿರುದ್ಧ ಎಫ್‌ಐಆರ್‌; ಸಂತ್ರಸ್ತೆ ಬೆಂಬಲಕ್ಕೆ ನಿಂತ್ರಾ ಅಲ್ಲು ಅರ್ಜುನ್‌?

ಚಿತ್ರರಂಗದಲ್ಲಿ ಮಿಟೂ ವಿವಾದ ಚರ್ಚೆಯಲ್ಲಿರುವ ಬೆನ್ನಲ್ಲೇ ಇದೀಗ ಖ್ಯಾತ ಕೊರಿಯೋಗ್ರಾಫರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲಾಗಿದೆ. ಅನೇಕ ಸ್ಟಾರ್‌ ಹಿರೋಗಳ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದ ಜಾನಿ ಮಾಸ್ಟರ್‌, ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅವರ ಸಹಾಯಕ ನೃತ್ಯ ನಿರ್ದೇಶಕಿ ಪೊಲೀಸರಿಗೆ ದೂರು ನೀಡಿದ್ದು ಜಾನಿ ಮಾಸ್ಟರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಧೀ, ಡ್ಯಾನ್ಸ್‌ ಶೋ ಮೂಲಕ ಪರಿಚಯವಾದ ಜಾನಿ ಮಾಸ್ಟರ್‌

ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರ ಈ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಜಾನಿ ತನಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳಾ ನೃತ್ಯ ನಿರ್ದೇಶಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಯದುರ್ಗಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಾನಿ ಮಾಸ್ಟರ್ ಅನೇಕ ಸ್ಟಾರ್ ಹೀರೋ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ . ಅನೇಕ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಧೀ, ಡ್ಯಾನ್ಸ್‌ ಶೋ ಮೂಲಕ ಪರಿಚಯವಾದ ಜಾನಿ ಮಾಸ್ಟರ್‌ ಈಗ ಟಾಲಿವುಡ್‌ನಲ್ಲಿ ಸ್ಟಾರ್ ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ. ಟಾಲಿವುಡ್‌ ಮಾತ್ರವಲ್ಲದೆ ಕನ್ನಡ, ತಮಿಳು, ಮಲಯಾಳಂ, ಹಿಂದಿಯ ಅನೇಕ ಸಿನಿಮಾಗಳಿಗೆ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಆದರೆ ಇದೀಗ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ.

ಜಾನಿ ವಿರುದ್ಧ ಕ್ರಮ ಕೈಗೊಳ್ಳಲು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ

ಜಾನಿ ಮಾಸ್ಟರ್‌ ಪೂರ್ತಿ ಹೆಸರು ಶಾಯಿಕ್‌ ಜಾನಿ ಭಾಷಾ. ಇತ್ತೀಚೆಗೆ ನಡೆದ ಎಪಿ ಚುನಾವಣೆಯಲ್ಲಿ ಜನಸೇನಾ ಪಕ್ಷದ ಸ್ಟಾರ್ ಪ್ರಚಾರಕರಾಗಿ ಜಾನಿ ಕೆಲಸ ಮಾಡಿದ್ದರು. ಆದರೆ, ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಜಾನಿ ಮಾಸ್ಟರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜನಸೇನಾ ಹೇಳಿಕೆ ಬಿಡುಗಡೆ ಮಾಡಿದೆ. ಮತ್ತೊಂದೆಡೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಜಾನಿ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ಜಾನಿ ಶಾಸ್ತ್ರೀಯ ನೃತ್ಯಗಾರ್ತಿ ಆಯೇಷಾ ಎಂಬುವವರನ್ನು ಮದುವೆಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಯುವರತ್ನ ಚಿತ್ರದ ಹಾಡುಗಳು, ವಿಕ್ರಾಂತ್‌ ರೋಣ ಚಿತ್ರದ ರಾ ರಾ ರಕ್ಕಮ್ಮ ಸೇರಿದಂತೆ ಅನೇಕ ಹಾಡುಗಳಿಗೆ ಜಾನಿ ಮಾಸ್ಟರ್‌ ಡ್ಯಾನ್ಸ್‌ ಕೊರಿಯೋಗ್ರಫಿ ಮಾಡಿದ್ದಾರೆ. ತೆಲುಗಿನ ಬುಟ್ಟ ಬೊಮ್ಮಾ, ರೌಡಿ ಬೇಬಿ, ಮಲಮ ಪಿತಾ ಪಿತಾದೆ, ಮಾಟೆ ಮಾಣಿಕ್ಯಮಾಯೆನೆ, ರಾ ನೀ ಕಾವಾಲಯ್ಯ ಸೇರಿದಂತೆ ಜಾನಿ ಮಾಸ್ಟರ್‌ ನೃತ್ಯ ಸಂಯೋಜನೆ ಮಾಡಿದ ಬಹುತೇಕ ಹಾಡುಗಳು ಹಿಟ್‌ ಆಗಿವೆ. ನೃತ್ಯ ಸಂಯೋಜನೆಗೆ ಜಾನಿಗೆ ರಾಷ್ಟ್ರಪ್ರಶಸ್ತಿ ಕೂಡಾ ದೊರೆತಿದೆ.

ಸಂತ್ರಸ್ತೆಗೆ ಅಲ್ಲು ಅರ್ಜುನ್‌ ಬೆಂಬಲ

ಈ ನಡುವೆ ಸಂತ್ರಸ್ತೆಗೆ ತೆಲುಗು ಸ್ಟಾರ್‌ ಹೀರೋ ಅಲ್ಲು ಅರ್ಜುನ್‌ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಜಾನಿ ಮಾಸ್ಟರ್‌ ವಿರುದ್ಧ ಆರೋಪ ಮಾಡಿರುವ ನೃತ್ಯ ಸಂಯೋಜಕಿ ಈಗ ಪುಷ್ಪ ಭಾಗ 2 ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ವಿಚಾರವಾಗಿ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಸಾರ್ವಜನಿಕವಾಗಿ ಹೇಳಿಕೆ ನೀಡಿಲ್ಲ.

mysore-dasara_Entry_Point