ಸೋಲಿಲ್ಲದ ಸರದಾರ ಸಿನಿಮಾ ನಂತರ ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸುತ್ತಿರುವ ಮಾಲಾಶ್ರೀ-ಭವ್ಯಾ; ಯಾವುದು ಆ ಸಿನಿಮಾ?-sandalwood news malashree bhavya acting together again after solillada saradara kannada movie rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸೋಲಿಲ್ಲದ ಸರದಾರ ಸಿನಿಮಾ ನಂತರ ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸುತ್ತಿರುವ ಮಾಲಾಶ್ರೀ-ಭವ್ಯಾ; ಯಾವುದು ಆ ಸಿನಿಮಾ?

ಸೋಲಿಲ್ಲದ ಸರದಾರ ಸಿನಿಮಾ ನಂತರ ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸುತ್ತಿರುವ ಮಾಲಾಶ್ರೀ-ಭವ್ಯಾ; ಯಾವುದು ಆ ಸಿನಿಮಾ?

ಹೃದಯ ಹಾಡಿತು, ಸೋಲಿಲ್ಲದ ಸರದಾರ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದ ಮಾಲಾಶ್ರೀ ಹಾಗೂ ಭವ್ಯಾ ಇದೀಗ 32 ವರ್ಷಗಳ ನಂತರ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ತಾಯಿಯೇ ದೇವರ ಎಂಬ ಚಿತ್ರದಲ್ಲಿ ಈ ನಟಿಯರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಚಿತ್ರವನ್ನು ಡಾ ಸತೀಶ್‌ ತೋಟಯ್ಯ ನಿರ್ದೇಶಿಸುತ್ತಿದ್ದಾರೆ.

ಸೋಲಿಲ್ಲದ ಸರದಾರ ಸಿನಿಮಾ ನಂತರ ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸುತ್ತಿರುವ ಮಾಲಾಶ್ರೀ-ಭವ್ಯಾ; ಯಾವುದು ಆ ಸಿನಿಮಾ?
ಸೋಲಿಲ್ಲದ ಸರದಾರ ಸಿನಿಮಾ ನಂತರ ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸುತ್ತಿರುವ ಮಾಲಾಶ್ರೀ-ಭವ್ಯಾ; ಯಾವುದು ಆ ಸಿನಿಮಾ? (PC: Instagram)

ಕನ್ನಡ ಚಿತ್ರರಂಗದಲ್ಲಿ ಭವ್ಯಾ ಹಾಗೂ ಮಾಲಾಶ್ರೀ ಅದ್ಭುತ ನಟಿಯರು. ಈ ನಟಿಯರು ಚಿತ್ರರಂಗಕ್ಕೆ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಈಗ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿರದಿದ್ದರೂ ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬರೋಬ್ಬರಿ 32 ವರ್ಷಗಳ ನಂತರ ಈ ನಟಿಮಣಿಯರು ಮತ್ತೆ ತೆರೆ ಮೇಲೆ ಜೊತೆಯಾಗಿ ನಟಿಸುತ್ತಿದ್ದಾರೆ.

ಹೃದಯ ಹಾಡಿತು ಚಿತ್ರದಲ್ಲಿ ಮೊದಲ ಬಾರಿ ನಟನೆ

ಮಾಲಾಶ್ರೀ ಹಾಗೂ ಭವ್ಯಾ ಮೊದಲ ಬಾರಿಗೆ ಹೃದಯ ಹಾಡಿತು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ 1991 ರಲ್ಲಿ ತೆರೆ ಕಂಡಿತ್ತು. ಚಿತ್ರದಲ್ಲಿ ನಾಯಕನಾಗಿ ಅಂಬರೀಶ್‌ ನಟಿಸಿದ್ದರು. ಶ್ರೀನಿವಾಸ್‌ ಹಾಗೂ ಸೋಮು ಒಟ್ಟಿಗೆ ಸೇರಿ ನಿರ್ಮಿಸಿದ್ದ ಸಿನಿಮಾವನ್ನು ಎಂಎಸ್‌ ರಾಜಶೇಖರ್‌ ನಿರ್ದೇಶನ ಮಾಡಿದ್ದರು. ಚಿತ್ರದ ಹಾಡುಗಳಿಗೆ ಉಪೇಂದ್ರ ಕುಮಾರ್‌ ಸಂಗೀತ ನೀಡಿದ್ದರು. ನಲಿಯುತಾ ಹೃದಯ ಹಾಡನು ಹಾಡಿದೆ, ಕಣ್ಣಲ್ಲಿ ಜ್ಯೋತಿ ತಂದೋನು ನೀನೇ, ಗಿರಿ ನವಿಲು ಎಲ್ಲೋ.. ಸೇರಿದಂತೆ ಈ ಚಿತ್ರದ ಹಾಡುಗಳು ಒಂದಕ್ಕಿಂದ ಒಂದು ಸುಂದರ. ತನ್ನ ಆರೋಗ್ಯ ಸಮಸ್ಯೆಯನ್ನು ಗುಣಪಡಿಸುವ ವೈದ್ಯನನ್ನು ನಾಯಕಿ ಪ್ರೀತಿಸುತ್ತಾಳೆ. ಅದರೆ ನಾಯಕನಿಗೆ ಆಗಲೇ ಮದುವೆ ಆಗಿರುತ್ತದೆ. ಇದು ತಿಳಿದು ಆಕೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾಳೆ. ಮುಂದೇನಾಗುತ್ತದೆ ಅನ್ನೋದು ಚಿತ್ರಕಥೆ.

ಸೋಲಿಲ್ಲದ ಸರದಾರ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದ ನಟಿಯರು

ಇದಾದ ಮರು ವರ್ಷವೇ , 1992ರಲ್ಲಿ ಮತ್ತೆ ಅಂಬರೀಶ್‌ ನಾಯಕನಾಗಿ ನಟಿಸಿದ್ದ ಸೋಲಿಲ್ಲದ ಸರದಾರ ಚಿತ್ರದಲ್ಲಿ ಮಾಲಾಶ್ರೀ, ಭವ್ಯಾ ನಾಯಕಿಯರಾಗಿ ನಟಿಸಿದ್ದರು. ಬುದ್ಧಿ ಬಂದಾಗಿನಿಂದ ಮಾವನನ್ನು ಪ್ರೀತಿಸುವ ರಾಧಾ, ಆದರೆ ಅವನಿಗೆ ಬಾಲ್ಯದಲ್ಲೇ ರುಕ್ಮಿಣಿ ಎಂಬಾಕೆಯೊಂದಿಗೆ ಮದುವೆ ಆಗಿರುತ್ತದೆ. ಇಬ್ಬರೂ ನಾಯಕನನ್ನು ಪ್ರೀತಿಸುತ್ತಾರೆ, ಕೊನೆಗೆ ಕೃಷ್ಣ ಯಾರನ್ನು ಮದುವೆ ಆಗುತ್ತಾನೆ ಅನ್ನೋದು ಈ ಸಿನಿಮಾದ ಕಥೆ. ಈ ಚಿತ್ರವನ್ನು ಕೆ ಪ್ರಭಾಕರ್‌ ನಿರ್ಮಿಸಿ ಓಂ ಸಾಯಿ ಪ್ರಕಾಶ್‌ ಕಥೆ ಬರೆದು ಆಕ್ಷನ್‌ ಕಟ್‌ ಹೇಳಿದ್ದರು. ಚಿತ್ರದ ಹಾಡುಗಳಿಗೆ ಹಂಸಲೇಖ ಸಂಗೀತ ನೀಡಿದ್ದರು. ಇವೆರಡೂ ಸಿನಿಮಾಗಳು ಸೂಪರ್‌ ಹಿಟ್‌ ಎನಿಸಿದ್ದವು. ಇದೀಗ ಸುಮಾರು 32 ವರ್ಷಗಳ ನಂತರ ಮಾಲಾಶ್ರೀ ಹಾಗೂ ಭವ್ಯಾ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.

32 ವರ್ಷಗಳ ನಂತರ ಮತ್ತೆ ಒಟ್ಟಿಗೆ ನಟಿಸುತ್ತಿರುವ ಮಾಲಾಶ್ರೀ-ಭವ್ಯಾ

ತಾಯಿಯೇ ದೇವರ ಎಂಬ ಹೊಸ ಸಿನಿಮಾದಲ್ಲಿ ಮಾಲಾಶ್ರೀ-ಭವ್ಯಾ ಜೊತೆಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಮುಹೂರ್ತ ನೆರವೇರಿದೆ. ಡಾ ಸತೀಶ್‌ ತೋಟಯ್ಯ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಾಯಿ ಮಕ್ಕಳ ಬಾಂಧವ್ಯದ ಕಥೆ ಹೊಂದಿರುವ ಈ ಚಿತ್ರದಲ್ಲಿ ಮಾಲಾಶ್ರೀ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೆ ಜೊತೆಯಾಗಿ ನಟಿಸುತ್ತಿರುವುದಕ್ಕೆ ಇಬ್ಬರೂ ನಟಿಯರು ಸಂತೋಷ ವ್ಯಕ್ತಪಡಿಸಿದ್ದಾರೆ.

mysore-dasara_Entry_Point