SS Rajamouli: ಟಾಲಿವುಡ್ ಜಕ್ಕಣ್ಣ ಈಗ ಹೀರೋ; ವೈರಲ್ ಆಗ್ತಿದೆ ಸ್ಟಾರ್ ನಿರ್ದೇಶಕ ರಾಜಮೌಳಿ ಸ್ಟೈಲಿಷ್ ಲುಕ್ ವಿಡಿಯೋ, ನೀವೂ ನೋಡಿಬಿಡಿ
ರಾಜಮೌಳಿ ಈಗ ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತ ಹಾಗೂ ಹಾಲಿವುಡ್ ಸಿನಿಪ್ರಿಯರು, ಫಿಲ್ಮ್ ಮೇಕರ್‌ಗಳಿಗೂ ಚಿರಪರಿಚಿತ ಇದೇ ಕಾರಣಕ್ಕೆ ಒಪ್ಪೋ, ರಾಜಮೌಳಿಯನ್ನು ತನ್ನ ಕಂಪನಿಯ ಅಂಬಾಸಿಡರ್ ಆಗಿ ಕರೆ ತಂದಿದೆ. ಇದಕ್ಕಾಗಿ ಭಾರೀ ಮೊತ್ತ ಕೂಡಾ ನೀಡಿದೆ ಎಂಬ ಮಾಹಿತಿ ಇದೆ.
ಸ್ಟಾರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ 'ಆರ್‌ಆರ್‌ಆರ್' ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪಡೆದ ಸಂಭ್ರಮವನ್ನು ಇಂದಿಗೂ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾಗೂ ರೆಡಿ ಆಗುತ್ತಿದ್ದಾರೆ. ಈಗಾಗಲೇ ಅವರು ಮಹೇಶ್ ಬಾಬು ಜೊತೆ ಸಿನಿಮಾ ಅನೌನ್ಸ್ ಮಾಡಿದ್ದು ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಸ್ಟಾರ್ ನಿರ್ದೇಶಕನಾಗಿ ಹೆಸರು ಮಾಡಿರುವ ರಾಜಮೌಳಿ ಈಗ ಹೀರೋ ಆಗಿದ್ದಾರೆ. ಅರೆ! ಹೌದಾ ಯಾವ ಸಿನಿಮಾ? ನಾಯಕಿ ಯಾರು? ನಿರ್ದೇಶನ ಮಾಡ್ತಿರೋದು ಅವರೇನಾ ಎಂಬ ಪ್ರಶ್ನೆಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಡಿ. ರಾಜಮೌಳಿ ಹೀರೋ ಆಗಿರುವುದು ಯಾವುದೇ ಸಿನಿಮಾದಲ್ಲಿ ಅಲ್ಲ, ಫೋನ್ ಒಂದರ ಜಾಹೀರಾತಿನಲ್ಲಿ. ಈ ಜಾಹಿರಾತಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದವರು ರಾಜಮೌಳಿ ಲುಕ್‌ಗೆ ಫಿದಾ ಆಗಿದ್ದಾರೆ. ನೀವು ನಿಜಕ್ಕೂ ಸಿನಿಮಾದಲ್ಲಿ ಕೂಡಾ ಹಿರೋ ಆಗಬಹುದು ಏಕೆ ಮನಸ್ಸು ಮಾಡುತ್ತಿಲ್ಲ? ಎಂದು ಕೇಳುತ್ತಿದ್ದಾರೆ.
ಅಂದ ಹಾಗೆ ರಾಜಮೌಳಿ, ಒಪ್ಪೋ ಫೋನ್ ಜಾಹೀರಾತಿನಲ್ಲಿ ಸ್ಟೈಲಿಷ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಜಾಹೀರಾತಿನ ಚಿತ್ರೀಕರಣ ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರ್‌ನ ಹಳೆಯ ಅರಮನೆಯೊಂದರ ಬಳಿ ನಡೆದಿದೆ. ರಾಜಮೌಳಿ, ಬಾದಾಮಿ ಬಣ್ಣದ ಪ್ಯಾಂಟ್, ಟಿ ಷರ್ಟ್ ಹಾಗೂ ಬಿಳಿ ಬಣ್ಣದ ಬ್ಲೇಸರ್ ಧರಿಸಿದ್ದಾರೆ. ಬಲಕೈನಲ್ಲಿ ಫೋನ್ ಹಿಡಿದು ಎಡಕೈನ್ನು ಪ್ಯಾಂಟ್ ಜೇಬಿನ ಒಳಗೆ ಇಟ್ಟು ಸ್ಟೈಲಿಷ್ ಆಗಿ ನಡೆದು ಬರುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ರಾಜಮೌಳಿ ಈಗ ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತ ಹಾಗೂ ಹಾಲಿವುಡ್ ಸಿನಿಪ್ರಿಯರು, ಫಿಲ್ಮ್ ಮೇಕರ್‌ಗಳಿಗೂ ಚಿರಪರಿಚಿತ ಇದೇ ಕಾರಣಕ್ಕೆ ಒಪ್ಪೋ, ರಾಜಮೌಳಿಯನ್ನು ತನ್ನ ಕಂಪನಿಯ ಅಂಬಾಸಿಡರ್ ಆಗಿ ಕರೆ ತಂದಿದೆ. ಇದಕ್ಕಾಗಿ ಭಾರೀ ಮೊತ್ತ ಕೂಡಾ ನೀಡಿದೆ ಎಂಬ ಮಾಹಿತಿ ಇದೆ. ಈ ಜಾಹಿರಾತನ್ನು ಟಿವಿಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
'ಆರ್‌ಆರ್‌ಆರ್' ಚಿತ್ರ ದೊಡ್ಡ ಯಶಸ್ಸಿನ ನಂತರ ಕೆಲವು ದಿನಗಳು ರೆಸ್ಟ್‌ನಲ್ಲಿದ್ದ ರಾಜಮೌಳಿ, ಈಗ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಗನ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಇದೊಂದು ಆಕ್ಷನ್ ಅಡೆಂಚರ್ ಸಿನಿಮಾ ಆಗಿದ್ದು ಸಿನಿಮಾದ ಮುಂದಿನ ಅಪ್‌ಡೇಟ್ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ಮಹೇಶ್ ಬಾಬು 'ಗುಂಟೂರು ಖಾರಂ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಮುಗಿದು ರಿಲೀಸ್ ಆಗುವುದರ ಒಳಗೆ ರಾಜಮೌಳಿ ಕೂಡಾ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುತ್ತಾರೆ. ನಂತರ ಇಬ್ಬರೂ ಹೊಸ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಶೂಟಿಂಗ್ ಆರಂಭವಾದ ನಂತರ ಮಹೇಶ್ ಬಾಬು ಮೂರು ವರ್ಷಗಳ ಕಾಲ ಬೇರೆ ಸಿನಿಮಾದಲ್ಲಿ ನಟಿಸುವುದಿಲ್ಲವಂತೆ. ರಾಜಮೌಳಿ, ಮಹೇಶ್ ಬಾಬುಗೆ ಇಂಥದೊಂದು ಕಂಡಿಷನ್ ಹಾಕಿದ್ದು ಈ ಚಿತ್ರಕ್ಕೆ ಮಹೇಶ್ ಬಾಬು ಲುಕ್ ಕಂಪ್ಲೀಟ್ ಬದಲಾಗಲಿದೆಯಂತೆ.