ಜವಾನ್ ಸಿನಿಮಾ ನೋಡುತ್ತ ಕೆಲಸ ಮಾಡಿದ ಬೆಂಗಳೂರು ಉದ್ಯೋಗಿ, ಇದು ವರ್ಕ್ ಫ್ರಂ ಥಿಯೇಟರ್‌ ಎಂಬ ಚರ್ಚೆ ಶುರು
ಕನ್ನಡ ಸುದ್ದಿ  /  ಕರ್ನಾಟಕ  /  ಜವಾನ್ ಸಿನಿಮಾ ನೋಡುತ್ತ ಕೆಲಸ ಮಾಡಿದ ಬೆಂಗಳೂರು ಉದ್ಯೋಗಿ, ಇದು ವರ್ಕ್ ಫ್ರಂ ಥಿಯೇಟರ್‌ ಎಂಬ ಚರ್ಚೆ ಶುರು

ಜವಾನ್ ಸಿನಿಮಾ ನೋಡುತ್ತ ಕೆಲಸ ಮಾಡಿದ ಬೆಂಗಳೂರು ಉದ್ಯೋಗಿ, ಇದು ವರ್ಕ್ ಫ್ರಂ ಥಿಯೇಟರ್‌ ಎಂಬ ಚರ್ಚೆ ಶುರು

ಬೆಂಗಳೂರು ಎಂದರೆ ಬ್ಯುಸಿ ಲೈಫ್‌. ಬಹುತೇಕರು ಕೆಲಸದ ಒಳಗೆ ಹಾಸುಹೊಕ್ಕಂತೆ ಇರುತ್ತಾರೆ. ಇದಕ್ಕೆ ಪೂರಕವಾದ ಇತ್ತೀಚಿನ ದೃಶ್ಯ ಇದು. ಇನಾಕ್ಸ್ ಮಾಲ್‌ನಲ್ಲಿ ಜವಾನ್ ಸಿನಿಮಾ ನೋಡುತ್ತ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂಟರ್‌ನೆಟ್ ಜಗತ್ತಿನ ಗಮನಸೆಳೆದಿದ್ದಾರೆ.

ಜವಾನ್ ಸಿನಿಮಾ ನೋಡುವಾಗ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ಓಪನ್‌ ಮಾಡಿ ಕೆಲಸಕ್ಕೆ ಕುಳಿತಾಗ.. (ಚಿತ್ರ ಕೃಪೆ- ನೀಲಾಂಗನ ನೂಪುರ್)
ಜವಾನ್ ಸಿನಿಮಾ ನೋಡುವಾಗ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ಓಪನ್‌ ಮಾಡಿ ಕೆಲಸಕ್ಕೆ ಕುಳಿತಾಗ.. (ಚಿತ್ರ ಕೃಪೆ- ನೀಲಾಂಗನ ನೂಪುರ್)

ಶಾರುಖ್‌ ಖಾನ್‌ ಮತ್ತು ನಯನತಾರಾ ಅಭಿನಯದ ಜವಾನ್‌ ಸಿನಿಮಾ ಬಿಡುಗಡೆಯಾಗಿದೆ. ಬೆಂಗಳೂರಿನ ಥಿಯೇಟರ್‌ಗಳಲ್ಲೀ ಈ ಮೂವಿ ಪ್ರದರ್ಶನವಾಗ್ತಾ ಇದೆ. ಸಿನಿಮಾ ಪ್ರಿಯರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ಇದು. ಎಲ್ಲರೂ ಮೊದಲ ದಿನದ ಪ್ರದರ್ಶನವೇ ನೋಡಬೇಕು ಎಂದು ಹೋದವರು ಅನೇಕರು. ಹಾಗೆ ಸಿನಿಮಾ ನೋಡಲು ಹೋದವರ ಕಣ್ಣಿಗೆ ಬಿದ್ದದ್ದು ವರ್ಕ್‌ ಫ್ರಂ ಥಿಯೇಟರ್‌!

ಹೌದು, ವ್ಯಕ್ತಿಯೊಬ್ಬ ಸಿನಿಮಾ ಪ್ರದರ್ಶನವಾಗುತ್ತಿರುವಾಗಲೇ ತನ್ನ ಬ್ಯಾಗ್‌ನಿಂದ ಲ್ಯಾಪ್‌ಟಾಪ್ ಹೊರತೆಗೆದು ಆನ್ ಮಾಡಿ ಕೆಲಸಕ್ಕೆ ಕುಳಿತ. ಮಲ್ಟಿ ಟಾಸ್ಕಿಂಗ್‌ನಂತೆ ಸಿನಿಮಾ ನೋಡುತ್ತ ಕೆಲಸ ಮಾಡಿದ. ಹಿಂಬದಿ ಸೀಟಿನಲ್ಲಿ ಕುಳಿತವರು ಆ ವ್ಯಕ್ತಿ ಕೆಲಸ ಮಾಡುತ್ತಿದ್ದ ಫೋಟೋ ತೆಗೆದು ಎಕ್ಸ್‌ನಲ್ಲಿ ಶೇರ್ ಮಾಡಿದರು. ಇದು ಬಹುಬೇಕ ಇಂಟರ್‌ನೆಟ್‌ನಲ್ಲಿ ಸಕ್ರಿಯರಾಗಿದ್ದವರ ಗಮನಸೆಳೆಯಿತು.

ಎಕ್ಸ್ ಬಳಕೆದಾರರಾದ ನೀಲಾಂಗನ ನೂಪುರ್‌ ಈ ಫೋಟೋ ಶೇರ್ ಮಾಡಿ, ಜವಾನ್‌ನ ಫಸ್ಟ್‌ ಡೇ ಎಷ್ಟು ಮುಖ್ಯವಾದುದು. ಆದರೆ ಬದುಕು ಎಂಬುದು ಬೆಂಗಳೂರಿನ ಮಟ್ಟಿಗೆ ಬಹಳ ತರಾತುರಿಯಲ್ಲಿ ಕೂಡಿತ್ತು. ಬೆಂಗಳೂರು ಇನಾಕ್ಸ್‌ನಲ್ಲಿ ಈ ರೀತಿ ದೃಶ್ಯ ಕಾಣಿಸಿತು. ಫೋಟೋ ತೆಗೆಯುವಾಗ ಆ ವ್ಯಕ್ತಿ ಇಮೇಲ್‌ ಅಥವಾ ಟೀಮ್ಸ್‌ನಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದು ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಒಂದು ಸಾಲನ್ನು ಹುಟ್ಟುಹಾಕಿದೆ. ಅಲ್ಲಿ ಕೆಲವು ಜನರು ವ್ಯಕ್ತಿಯ ಕೆಲಸದ ಜೀವನದ ಸಮತೋಲನದ ಬಗ್ಗೆ ಸಹಾನುಭೂತಿ ಹೊಂದುತ್ತಾರೆ. ಆದರೆ ಕೆಲವರು ಇದು ಸಮಸ್ಯಾತ್ಮಕ ಸಾರ್ವಜನಿಕ ನಡವಳಿಕೆ ಎಂದು ಹೇಳಿದರು.

ಒಬ್ಬ ಬಳಕೆದಾರರು, ನೀವು ದೂರು ನೀಡಿದ್ದೀರಾ? ಟ್ರಾಫಿಕಲ್ಲಿ ಬಂದು, ಕೆಲವು ಗಂಟೆಗಳ ಮನರಂಜನೆಗಾಗಿ 500 ರೂಪಾಯಿ ಖರ್ಚು ಮಾಡಿ ... ಇಂತಹ ಕಿರಿಕಿರಿ ಅನುಭವಿಸುವುದು ಥರವಲ್ಲ. ನಾನು ಕೆಲಸದ ಹೈಬ್ರಿಡ್ ಮಾದರಿಯನ್ನು ಇಷ್ಟಪಡುತ್ತೇನೆ. ಆದರೆ ಇದು ಅತ್ಯಂತ ಅಪಾಯಕಾರಿ ಹೈಬ್ರಿಡಿಟಿಯಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು “ವರ್ಕ್‌ ಫ್ರಂ ಹೋಮ್‌ ಬೆಂಗಳೂರು ಮಾತ್ರವಲ್ಲದೆ ಭಾರತದಾದ್ಯಂತ ಚಾಲ್ತಿಯಲ್ಲಿದೆ! ಇದು ಸಂಪೂರ್ಣವಾಗಿ ಶಿಷ್ಟಾಚಾರವಿಲ್ಲ. ಆದರೆ, ಶಾಂತಿಯುತವಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಇತರ ಚಲನಚಿತ್ರ ವೀಕ್ಷಕರಿಗೆ ತೊಂದರೆಯಾಗುವಂತಹ ಶಿಸ್ತಿನ ಕೊರತೆಯಿದೆ! ನಾನು ಬೌನ್ಸರ್‌ಗಳನ್ನು ಕರೆದು ಅವರನ್ನು ಹೊರಗೆ ಹಾಕಿಸುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂತಹ ದೃಶ್ಯಗಳೇನೂ ಹೊಸದಲ್ಲ. ಅಲ್ಲಲ್ಲಿ ಇಂತಹ ದೃಶ್ಯಗಳನ್ನು ಗಮನಿಸಬಹುದು. ವಾಹನ ಚಾಲನೆ ಮಾಡುತ್ತ, ಆಟೋ ರಿಕ್ಷಾದಲ್ಲಿ ಹೋಗುವಾಗ ಕೂಡ ಕೆಲಸ ಮಾಡುವವರ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಐಟಿ ಕ್ಯಾಪಿಟಲ್‌ನ ಬ್ಯುಸಿ ಲೈಫ್‌ನ ಭಾಗವಿದು.

Whats_app_banner