ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಜನರಿಗೆ ಸಿಹಿ ಸುದ್ದಿ; 2025ರ ಏಪ್ರಿಲ್ ಅಂತ್ಯದ ವೇಳೆಗೆ ನಗರದಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ

ಬೆಂಗಳೂರು ಜನರಿಗೆ ಸಿಹಿ ಸುದ್ದಿ; 2025ರ ಏಪ್ರಿಲ್ ಅಂತ್ಯದ ವೇಳೆಗೆ ನಗರದಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ

ಪ್ರಸ್ತುತ ಬೆಂಗಳೂರಿನ ವಿವಿಧ ಮಾರ್ಗಗಳಲ್ಲಿ ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಬಿಎಂಟಿಸಿಯಿಂದ ಎಸಿ ಎಲೆಕ್ಟ್ರಾನಿಕ್ ಬಸ್‌ಗಳ ಸೇವೆ ಆರಂಭವಾಗಲಿದೆ.

2025ರ ಏಪ್ರಿಲ್ ವೇಳೆಗೆ ಬೆಂಗಳೂರಿನಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ.
2025ರ ಏಪ್ರಿಲ್ ವೇಳೆಗೆ ಬೆಂಗಳೂರಿನಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ.

ಬೆಂಗಳೂರು: ಇಡೀ ದೇಶದಲ್ಲಿ ಅತ್ಯುತ್ತಮ ಸಾರಿಗೆ ಸಂಸ್ಥೆಗಳಲ್ಲಿ ಕರ್ನಾಟಕದ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC). ಗುಣಮಟ್ಟದ ಸೇವೆೆಗಾಗಿ ಪ್ರತಿ ವರ್ಷ ಈ ಎರಡೂ ಸಂಸ್ಥೆಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಹುಡುಕಿ ಬರುತ್ತವೆ. ಸಾರಿಗೆ ಸಂಸ್ಥೆಗಳು ದಿನದಿಂದ ದಿನಕ್ಕೆ ಗುಣಮಟ್ಟದ ಸೇವೆಯನ್ನು ಹೆಚ್ಚಿಸುತ್ತಲೇ ಹೋಗುತ್ತಿವೆ. ಮಾರುಕಟ್ಟೆಗೆ ಯಾವುದೇ ರೀತಿಯ ಆಧುನಿಕ ತಂತ್ರಜ್ಞಾನದ ಬಸ್‌ಗಳು ಬಂದರೆ ಅದನ್ನು ಈ ಸಾರಿಗೆ ಸಂಸ್ಥೆಗಳು ಖರೀದಿಸಿ ಜನರ ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ. ಕೆಲ ದಿನಗಳ ಹಿಂದಷ್ಟೇ ಬಿಎಂಟಿಸಿ ಎಲೆಕ್ಟ್ರಿಕ್ ವಾಹನಗಳ ಸಂಚಾರವನ್ನು ಆರಂಭಿಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಎಸಿ ಬಸ್‌ಗಳ ಸೇವೆಗೆ ಮುಂದಾಗಿದೆ.

ಟ್ರೆಂಡಿಂಗ್​ ಸುದ್ದಿ

ಎಲ್ಲವೂ ಅಂದುಕೊಂಡಂತೆ ಆಗಿದ್ದೇ ಆದರೆ 2025ರ ಏಪ್ರಿಲ್ ವೇಳೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರು ಮಹಾ ಸಾರಿಗೆ ನಿಗಮ (ಬಿಎಂಟಿಸಿ) ಅಗತ್ಯ ನಗರ ಮಾರ್ಗಗಳಲ್ಲಿ ಹೊಸ ಎಲೆಕ್ಟ್ರಿಕ್ ಹವಾನಿಯಂತ್ರಿತ (ಎಸಿ) ಬಸ್ಸುಗಳನ್ನು ಸೇರಿಸಲು ಸಜ್ಜಾಗಿದೆ. ಮಾರ್ಚ್ 2025 ರಿಂದ ಬೆಂಗಳೂರಿನಲ್ಲಿ ಒಟ್ಟು ಎಸಿ ಎಲೆಕ್ಟ್ರಿಕ್ 320 ಬಸ್ಸುಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ಎಲೆಕ್ಟ್ರಿಕ್ ಬಸ್‌ಗಳ ಅಪ್‌ಗ್ರೇಡ್‌ನಲ್ಲಿ ಬಿಎಂಟಿಸಿಗೆ ಇದು ಪ್ರಮುಖ ಹೆಜ್ಜೆ

ವರದಿ ಪ್ರಕಾರ, ಪ್ರಸ್ತುತ ವಾಯುವಜ್ರ ಬಸ್‌ಗಳನ್ನು ಈ ಎಸಿ ಎಲೆಕ್ಟ್ರಿಕ್ ಬಸ್‌ಗಳೊಂದಿಗೆ ಬದಲಾಯಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಗುತ್ತಿಗೆಯನ್ನು ಒಎಚ್‌ಎಂ ಗ್ಲೋಬಲ್ ಮೊಬಿಲಿಟಿಗೆ ಹಸ್ತಾಂತರಿಸಿದೆ. ಈ ಎಲೆಕ್ಟ್ರಿಕ್ ಎಸಿ ಬಸ್‌ಗಳನ್ನು ಒಎಚ್ಎಂ ಸ್ವತಃ ನಿರ್ವಹಿಸಲಿದ್ದು, ಬಿಎಂಟಿಸಿ ಪ್ರತಿ ಕಿಲೋಮೀಟರ್‌ಹಗೆ 65 ರೂ.ಗಳನ್ನು ಪಾವತಿಸಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲ ಮಾದರಿ ಬಸ್ ಮೂರು ತಿಂಗಳಲ್ಲಿ ಬರಲಿದೆ ಮತ್ತು ಮಾರ್ಚ್ 2025 ರ ವೇಳೆಗೆ ಸುಮಾರು 320 ಬಸ್ಸುಗಳನ್ನು ತಲುಪಿಸಲಾಗುವುದು. ಎಲೆಕ್ಟ್ರಿಕ್ ಬಸ್‌ಗಳ ಅಪ್‌ಗ್ರೇಡ್‌ನಲ್ಲಿ ಬಿಎಂಟಿಸಿಗೆ ಇದು ಪ್ರಮುಖ ಹೆಜ್ಜೆಯಾಗಲಿದೆ. ಪ್ರಸ್ತುತ, ಬಿಎಂಟಿಸಿ ಬೆಂಗಳೂರಿನ ವಿವಿಧ ಮಾರ್ಗಗಳಲ್ಲಿ ನಾನ್ ಎಸಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾತ್ರ ಹೊಂದಿದೆ.

ಒಎಚ್ಎಂ ಈ ಬಸ್ಸುಗಳ ಚಾರ್ಜಿಂಗ್ ಮತ್ತು ಚಾಲಕರನ್ನು ಮಾತ್ರ ನಿಯೋಜಿಸುತ್ತದೆ. ಆದರೆ ನಿರ್ವಾಹಕರು ಬಿಎಂಟಿಸಿಯವರಾಗಿರುತ್ತಾರೆ. ಎಲೆಕ್ಟ್ರಿಕ್ ಬಸ್‌ಗಳೊಂದಿಗೆ ಡಬಲ್ ಡೆಕ್ಕರ್ ಬಸ್‌ಗಳನ್ನು ಮರಳಿ ತರಲು ಇಲಾಖೆ ಯೋಜಿಸುತ್ತಿದೆ. ಈ ಎಸಿ ಎಲೆಕ್ಟ್ರಿಕ್ ಬಸ್ಸುಗಳು ಸುಭಾಷ್ ನಗರ, ಕತ್ರಿಗುಪ್ಪೆ, ವೈಟ್‌ಫೀಲ್ಡ್ ಮತ್ತು ಎಚ್ಎಸ್ಆರ್ ಲೇಔಟ್‌ನಿಂದ ಕಾರ್ಯನಿರ್ವಹಿಸಲಿವೆ ಎಂದು ವರದಿಯಾಗಿದೆ. ಈ ವರ್ಷ ಒಟ್ಟು 1,400 ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಎಂಟಿಸಿಗೆ ಸೇರಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಈ ಹಿಂದೆ ಘೋಷಿಸಿತ್ತು. ಬಿಎಂಟಿಸಿಯು ಪ್ರಸ್ತುತ ಬೆಂಗಳೂರು ರಸ್ತೆಗಳಲ್ಲಿ ಒಟ್ಟು 390 ಎಲೆಕ್ಟ್ರಿಕ್ ಬಸ್ಸುಗಳನ್ನು ಓಡಿಸುತ್ತಿದೆ.

IPL_Entry_Point