ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೊಚುವೇಲಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಸೇವೆ; ಯುಗಾದಿ, ಬೇಸಿಗೆ ರಜೆ ನಿಮಿತ್ತ ಹಲವು ಸ್ಪೆಷಲ್ ರೈಲುಗಳು

ಬೆಂಗಳೂರು ಕೊಚುವೇಲಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಸೇವೆ; ಯುಗಾದಿ, ಬೇಸಿಗೆ ರಜೆ ನಿಮಿತ್ತ ಹಲವು ಸ್ಪೆಷಲ್ ರೈಲುಗಳು

ಬೆಂಗಳೂರು ಕೊಚುವೇಲಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಸೇವೆ ಶುರುವಾಗಿದೆ. ಈ ನಡುವೆ, ಯುಗಾದಿ, ಬೇಸಿಗೆ ರಜೆ ನಿಮಿತ್ತ ಹಲವು ಸ್ಪೆಷಲ್ ರೈಲುಗಳು ಸಂಚರಿಸುತ್ತಿವೆ. ಈ ಎಲ್ಲದ ವಿವರ ಈ ವರದಿಯಲ್ಲಿದೆ.

ಬೆಂಗಳೂರು ಕೊಚುವೇಲಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಸೇವೆ (ಸಾಂಕೇತಿಕ ಚಿತ್ರ)
ಬೆಂಗಳೂರು ಕೊಚುವೇಲಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಸೇವೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಯುಗಾದಿ ಮತ್ತು ಬೇಸಗೆ ಪ್ರಯಾಣಿಕ ಬೇಡಿಕೆಯ ಒತ್ತಡ ಸರಿದೂಗಿಸುವುದಕ್ಕಾಗಿ ಬೆಂಗಳೂರಿನಿಂದ ದೇಶದ ವಿವಿಧ ಭಾಗಗಳಿಗೆ ಮತ್ತು ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಕೆಲವು ವಿಶೇಷ ರೈಲು ಸೇವೆಯನ್ನು ನೈಋತ್ಯ ರೈಲ್ವೆಯು ಶುರುಮಾಡಿದೆ.

ವಿಜಯವಾಡ -ಎಸ್‌ಎಸ್‌ಎಸ್‌ ಹುಬ್ಬಳ್ಳಿ- ವಿಜಯವಾಡ ವಿಶೇಷ ರೈಲು (ರೈಲು ಸಂಖ್ಯೆ 07001/07002) ನಾಳೆ (ಏಪ್ರಿಲ್‌ 10) ಮಧ್ಯಾಹ್ನ ನಂತರ 2.30ಕ್ಕೆ ವಿಜಯವಾಡದಿಂದ ಹೊರಟು ಮಾರನೇ ದಿನ (ಏಪ್ರಿಲ್ 11) ಬೆಳಗ್ಗೆ 7.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 9.25ಕ್ಕೆ ಹೊರಟು ಏಪ್ರಿಲ್ 12ರ ಮಧ್ಯಾಹ್ನ 1 ಗಂಟೆಗೆ ವಿಜಯವಾಡ ತಲುಪಲಿದೆ. ಈ ರೈಲು ಗುಂಟೂರು, ನರಸರಾವ್‌ಪೇಟ್‌, ವಿನುಕೊಂಡ, ದೋನಕೊಂಡ, ಮರ್ಕಾಪುರ ರೋಡ್‌, ಗಿಡ್ಡಲೂರು, ನಂದ್ಯಾಲ, ಧೋನೆ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್‌, ಕೊಪ್ಪಳ, ಗದಗ ಮತ್ತು ಅಣ್ಣಿಗೇರಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಈ ರೈಲಿನಲ್ಲಿ 21 ಬೋಗಿಗಳಿದ್ದು, ಇದರಲ್ಲಿ 8 ಸ್ಲೀಪರ್, 10 ಸೆಕೆಂಡ್ ಕ್ಲಾಸ್‌, ಎಸ್‌ಎಲ್‌ಆರ್ 2, ಎಸಿ ತ್ರೀ ಟೈರ್ 1 ಬೋಗಿಗಳಿವೆ.

ಯಶವಂತಪುರದಿಂದ ನಿನ್ನೆ (ಏಪ್ರಿಲ್ 8) ಹೊರಟ ಯಶವಂತಪುರ ಕಲಬುರಗಿ ಯಶವಂತ ಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06505/06506) ಇಂದು ಬೆಳಗ್ಗೆ 10.30ಕ್ಕೆ ಕಲಬುರಗಿಗೆ ಆಗಮಿಸಿ, ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ಹೊರಟು ಇಂದು (ಏಪ್ರಿಲ್ 9 ) ರಾತ್ರಿ 11 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು ಯಲಹಂಕ, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್‌, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್‌ಗಳಲ್ಲಿ ನಿಲುಗಡೆ ಹೊಂದಿದೆ.

ಬೆಂಗಳೂರು- ಕೊಚುವೇಲಿ ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ 8 ಟ್ರಿಪ್‌

ಬೇಸಿಗೆ ಮತ್ತು ವಿಷು ಹಬ್ಬದ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕೊಚುವೇಲಿ - ಬೆಂಗಳೂರು- ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನ 8 ಟ್ರಿಪ್‌ಗಳನ್ನು ನೈಋತ್ಯ ರೈಲ್ವೆ ಘೋ‍ಷಿಸಿದೆ.

ಕೊಚುವೇಲಿ- ಸರ್ ಎಂವಿ ಟರ್ಮಿನಲ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ (ರೈಲು ಸಂಖ್ಯೆ 06083) ಕೊಚುವೇಲಿಯಿಂದ ಪ್ರತಿ ಮಂಗಳವಾರ ಸಂಜೆ 6.05ಕ್ಕೆ ಹೊರಡಲಿದ್ದು, ಮಾರನೇ ದಿನ (ಬುಧವಾರ) ಬೆಳಗ್ಗೆ ಬೆಂಗಳೂರು ತಲುಪುತ್ತದೆ. ಈ ರೈಲು ಏಪ್ರಿಲ್ 8 ರಿಂದ ಮೇ 28ರ ತನಕ ಸಂಚರಿಸಲಿದೆ.

ಸರ್ ಎಂವಿ ಟರ್ಮಿನಲ್ ಬೆಂಗಳೂರು- ಕೊಚುವೇಲಿ ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ (ರೈಲು ಸಂಖ್ಯೆ 06084) ಬೆಂಗಳೂರಿನಿಂದ ಬೆಳಗ್ಗೆ 10.55ಕ್ಕೆ ಮತ್ತೆ ಹೊರಟು ಮಾರನೆ ದಿನ ಬೆಳಗ್ಗೆ 6.45ಕ್ಕೆ ಕೊಚುವೇಲಿ ತಲುಪುತ್ತದೆ. ಈ ರೈಲು ಏಪ್ರಿಲ್‌ ಏಪ್ರಿಲ್ 10 ರಿಂದ ಮೇ 29ರ ತನಕ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಈ ರೈಲುಗಳು ಕೊಲ್ಲಂ, ಕಾಯಂಕುಳಂ, ಮಾವೇಲಿಕರ, ಚೆಂಗನ್ನೂರು, ತಿರುವಲ್ಲಾ, ಚಂಗನಾಶ್ಶೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್‌, ಅಲುವಾ, ತ್ರಿಶ್ಶೂರ್‌, ಪಾಲಕ್ಕಾಡ್‌, ಪೊದನೂರ್‌, ತಿರುಪ್ಪೂರು, ಈರೋಡ್‌, ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ. ಈ ರೈಲಿನಲ್ಲಿ 21 ಬೋಗಿಗಳಿದ್ದು, ಇದರಲ್ಲಿ ತ್ರಿ ಟೈರ್ ಎಸಿ 16 ಬೋಗಿ, ಸ್ಲೀಪರ್‌ ಕ್ಲಾಸ್‌ 3 ಬೋಗಿ, ಒಂದು ಲಗೇಜ್‌/ ಬ್ರೇಕ್ ವ್ಯಾನ್, ಜನರೇಟರ್ ಬೋಗಿ ಇದೆ ಎಂದು ನೈಋತ್ಯ ರೈಲ್ವೆ ಪ್ರಕಟನೆ ತಿಳಿಸಿದೆ.

IPL_Entry_Point