Dharwad Krishi Mela: ಧಾರವಾಡದಲ್ಲಿ ಸೆಪ್ಟಂಬರ್‌ 21ರಿಂದ 4 ದಿನ ಕೃಷಿ ಮೇಳ; ಹವಾಮಾನ ವೈಪರೀತ್ಯದ ಕುರಿತೇ ಹೆಚ್ಚು ಜಾಗೃತಿ-dharwad news dharwad agriculture university organizing krishi mela on climate changes in dharwad for 4 days prh ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Dharwad Krishi Mela: ಧಾರವಾಡದಲ್ಲಿ ಸೆಪ್ಟಂಬರ್‌ 21ರಿಂದ 4 ದಿನ ಕೃಷಿ ಮೇಳ; ಹವಾಮಾನ ವೈಪರೀತ್ಯದ ಕುರಿತೇ ಹೆಚ್ಚು ಜಾಗೃತಿ

Dharwad Krishi Mela: ಧಾರವಾಡದಲ್ಲಿ ಸೆಪ್ಟಂಬರ್‌ 21ರಿಂದ 4 ದಿನ ಕೃಷಿ ಮೇಳ; ಹವಾಮಾನ ವೈಪರೀತ್ಯದ ಕುರಿತೇ ಹೆಚ್ಚು ಜಾಗೃತಿ

Dharwad Krishi Mela ಧಾರವಾಡ ಕೃಷಿ ವಿಶ್ವವಿದ್ಯಾನಿಲಯವು ಸೆಪ್ಟಂಬರ್‌ 21ರಿಂದ ನಾಲ್ಕು ದಿನಗಳ ಕಾಲ ಕೃಷಿಮೇಳ 2024 ಅನ್ನು ಆಯೋಜಿಸಿದೆ. ಇದಕ್ಕಾಗಿ ಸಿದ್ದತೆಗಳು ಧಾರವಾಡದಲ್ಲಿ ನಡೆದಿವೆ.ವರದಿ: ಪ್ರಸನ್ನಕುಮಾರ ಹಿರೇಮಠ, ಹುಬ್ಬಳ್ಳಿ

ಧಾರವಾಡದಲ್ಲಿ ಕೃಷಿ ಮೇಳಕ್ಕೆ ಸಿದ್ದತೆಗಳು ನಡೆದಿದು,. ಈ ಬಾರಿ ಹವಾಮಾನ ವೈಪರಿತ್ಯದ ಕುರಿತು ಹೆಚ್ಚು ಮಾಹಿತಿ ನೀಡಲಾಗುತ್ತದೆ.
ಧಾರವಾಡದಲ್ಲಿ ಕೃಷಿ ಮೇಳಕ್ಕೆ ಸಿದ್ದತೆಗಳು ನಡೆದಿದು,. ಈ ಬಾರಿ ಹವಾಮಾನ ವೈಪರಿತ್ಯದ ಕುರಿತು ಹೆಚ್ಚು ಮಾಹಿತಿ ನೀಡಲಾಗುತ್ತದೆ.

ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹವಾಮಾನ ವೈಪರೀತ್ಯ ನಿವ೯ಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಶೀರ್ಷಿಕೆಯಡಿಯಲ್ಲಿ ಸೆಪ್ಟೆಂಬರ್‌ 21 ರಿಂದ 24 ರವರೆಗೆ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮುಖ್ಯ ಉದ್ದೇಶವಾಗಿದ್ದು, ಮೇಳದಲ್ಲಿ ಸುಮಾರು 14-16 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲಬಾರಿಗೆ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡುವ ವ್ಯವಸ್ಥೆಯನ್ನು ಈ ಕೃಷಿ ಮೇಳದಲ್ಲಿ ಕಲ್ಪಿಸಲಾಗಿದೆ.

ಮೇಳದಲ್ಲಿ ಪ್ರಾಯೋಗಿಕ ತಾಕುಗಳ ವೀಕ್ಷಣೆ, ತಜ್ಞರಿಂದ ಕೃಷಿ ಸಮಸ್ಯೆಗಳ ಕುರಿತು ವಿಚಾರ ವಿನಿಮಯ, ಕೃಷಿ ಮತ್ತು ವಸ್ತು ಪ್ರದರ್ಶನ, ಫಲ-ಪುಷ್ಪ ಪ್ರದರ್ಶನ, ಗಡ್ಡೆ ಗೆಣಸು ಪ್ರದರ್ಶನ, ವಿಸ್ಮಯಕಾರಿ ಕೀಟ / ಪ್ರಪಂಚ, ಸಾವಯವ ಕೃಷಿ ವಸ್ತು ಪ್ರದರ್ಶನ, ಕೃಷಿ ಪರಿಕರಗಳ ಮಾರಾಟ, ಕೃಷಿ ಪ್ರಕಟಣೆಗಳ ಮಾರಾಟ ಇತ್ಯಾದಿ ಇರುತ್ತದೆ. ಕೃಷಿಮೇಳದಲ್ಲಿ ವಸ್ತು ಪ್ರದರ್ಶನದ ಮಳಿಗೆಗಳು -- ಕೃಷಿ ವಸ್ತು ಪ್ರದರ್ಶನದಲ್ಲಿ 150 ಹೈಟೆಕ್ ಮಳಿಗೆಗಳು, 214 ಸಾಮಾನ್ಯ ಮಳಿಗೆಗಳು, 110 ಯಂತ್ರೋಪಕರಣ ಮಳಿಗೆಗಳು, 27 ಟ್ರ್ಯಾಕ್ಟರ್ ಇತ್ಯಾದಿ ಭಾರಿ ಯಂತ್ರೋಪಕರಣಗಳ ಮಳಿಗೆಗಳು, ಹಾಗೂ 28 ಆಹಾರ ಮಳಿಗೆಗಳು ಈಗಾಗಲೇ ಬುಕ್ ಆಗಿವೆ.

ಮೇಳದಲ್ಲಿ ಏನೇನು ಇರಲಿದೆ

ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿಗಳು ಹಾಗೂ ಕೃಷಿ ತಾಂತ್ರಿಕತೆಗಳು, ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳು ಎಣ್ಣೆಕಾಳು, ದ್ವಿದಳ ಧಾನ್ಯಗಳು ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ದು ಮತ್ತು ಅಂತರ್ಜಲ ಮರುಪೂರಣ

ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ಹೈಟೆಕ್ ತೋಟಗಾರಿಕೆ. ಹಣ್ಣು-ಹೂವಿನ ಪ್ರದರ್ಶನ ಮತ್ತು ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡೋನ್ ಪ್ರದರ್ಶನ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ, ಕೃಷಿ ಅರಣ್ಯ, ಮೇವಿನ ಬೆಳೆಗಳ ತಾಂತ್ರಿಕತೆ, ಪಶು ಸಂಗೋಪನೆ ಹಾಗೂ ಜಾನುವಾರುಗಳ ಪ್ರದರ್ಶನ, ಮೌಲ್ಯವರ್ಧನೆ, ದ್ವಿತೀಯ ಕೃಷಿ ಮತ್ತು ಸಮುದಾಯ ವಿಜ್ಞಾನ ತಾಂತ್ರಿಕತೆಗಳು ಈ ಬಾರಿ ಮೇಳದ ಆಕಷ೯ಣೆಗಳಾಗಲಿವೆ.

ವಿವಿಧ ಪ್ರಕಾರದ ಮಳಿಗೆಗಳು

ಕೃಷಿ ಪರಿಕರಗಳು (ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ, ರೋಗನಾಶಕ, ಕಳೆನಾಶಕ, ಬೆಳೆವರ್ಧಕ), ನರ್ಸರಿ ಮಳಿಗೆಗಳು, ಪ್ರಕಟಣೆಗಳ ಮಳಿಗೆಗಳು/ ಹಣಕಾಸು ಸಂಸ್ಥೆಗಳು,ನೀರಾವರಿ ಮತ್ತು ಕೃಷಿ ಉಪಕರಣಗಳು, ಕೃಷಿ ಯಂತ್ರೋಪಕರಣಗಳ ಮಳಿಗೆಗಳು, ಭಾರಿ ಯಂತ್ರೋಪಕರಣಗಳ ಮಳಿಗೆಗಳು, ಕೃಷಿ ಬಳಕೆಯ ಪ್ಲಾಸ್ಟಿಕ್ ಮಳಿಗೆಗಳು. ಆಹಾರ ಮಳಿಗೆಗಳು, ಜಾನುವಾರು ಪ್ರದರ್ಶನ ಮಳಿಗೆಗಳು, ಸಂಶೋಧನಾ ತಾಕುಗಳು, ವಿಶ್ವವಿದ್ಯಾಲಯದ ಮಳಿಗೆಗಳು. ಬೀಜ ಘಟಕದ ಮಳಿಗೆಗಳು ಮತ್ತು ಇತರೆ ಮಳಿಗೆಗಳು ಇರಲಿವೆ

ವಿಮಾ ವ್ಯಾಪ್ತಿಗೆ ಅಳವಡಿಸಿರುವ ಕೃಷಿ ಮೇಳದ ಆವರಣ, ಸನ್ನದ್ಧ ಸ್ಥಿತಿಯಲ್ಲಿರುವ ಅಗ್ನಿ ಶ್ಯಾಮಕ ವಾಹನ ಮೊಬೈಲ್ ಎ.ಟಿ.ಎಂ. ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಮತ್ತು ಪೋಲೀಸ್ ಸಹಾಯ ಕೇಂದ್ರಗಳು ಇರುತ್ತವೆ.

ನಾಲ್ಕು ದಿನವೂ ಗೋಷ್ಠಿ. ಸಂವಾದ

ಮೇಳದ ಮೊದಲನೆಯ ದಿನದಂದು ದಿ. 21 ಮುಂಜಾನೆ 10.30 ಗಂಟೆಗೆ ಕೃಷಿಮೇಳ ವೇದಿಕೆಯಲ್ಲಿ ಬೀಜ ಮೇಳ ಉದ್ಘಾಟನೆ, ಮಧ್ಯಾಹ್ನ 2.30 ರಿಂದ ಕೃಷಿ ಮೇಳ ವೇದಿಕೆಯಲ್ಲಿ "ಆಧುನಿಕ ಕೃಷಿ ತಾಂತ್ರಿಕ ಅಳವಡಿಕೆಯಲ್ಲಿ ಯುವ ಪೀಳಿಗೆ ಮತ್ತು ನವೋದ್ಯಮಿಗಳ ಪಾತ್ರ" ಕುರಿತ ವಿಚಾರಗೋಷ್ಠಿ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3.30 ರಿಂದ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆಗಳು) ಏರ್ಪಡಿಸಲಾಗಿದೆ.

ಎರಡನೆಯ ದಿನದಂದು ದಿ.22 ರಂದು ಕೃಷಿಮೇಳ ಮುಖ್ಯ ವೇದಿಕೆಯಲ್ಲಿ ಮುಂಜಾನೆ 10.30 ಘಂಟೆಗೆ ಕೃಷಿ ಮೇಳ-2024 ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರಿಂದ ನೆರವೇರುವುದು ಹಾಗೂ ಮಧ್ಯಾಹ್ನ 2.30 ಘಂಟೆಗೆ ಕೃಷಿ ಮೇಳ ವೇದಿಕೆಯಲ್ಲಿ "ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಪಾತ್ರ" ಕುರಿತ ವಿಚಾರಗೋಷ್ಠಿ ಕಾರ್ಯಕ್ರಮ ಮಧ್ಯಾಹ್ನ 3.30 ಘಂಟೆಗೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆಗಳು) ಏರ್ಪಡಿಸಲಾಗಿದೆ.

ಮೂರನೇ ದಿನದಂದು ದಿ.23 ರ ಮುಂಜಾನೆ 10.00 ಗಂಟೆಗೆ "ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ", ಮುಂಜಾನೆ 11.30 ಗಂಟೆಗೆ "ಬರ ನಿರ್ವಹಣೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮಗಳು" ಹಾಗೂ ಮಧ್ಯಾಹ್ನ 2.30 ಗಂಟೆಗೆ "ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿಗಳು ಹಾಗೂ ಕೃಷಿ ತಾಂತ್ರಿಕತೆಗಳು" ಕುರಿತ ವಿಚಾರಗೋಷ್ಠಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 3.30 ಗಂಟೆಗೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆಗಳು) ನಡೆಯಲಿದೆ.

ನಾಲ್ಕನೇಯ ದಿನದಂದು ದಿ. 24 ರ ಮುಂಜಾನೆ 10.30 ಗಂಟೆಗೆ ಕೃಷಿಮೇಳ ವೇದಿಕೆಯಲ್ಲಿ "ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು" ಚರ್ಚಾಗೋಷ್ಠಿ, ಮುಂಜಾನೆ 11.30 ಗಂಟೆಗೆ ಕನ್ನಡ ಕೃಷಿ ಗೋಷ್ಠಿ,ಮಧ್ಯಾಹ್ನ 2.30 ಗಂಟೆಗೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ (ಪ್ರಗತಿಪರ ರೈತರ ಅನಿಸಿಕೆಗಳು) ಇರಲಿವೆ ಎನ್ನುವುದು ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ವಿವರಣೆ.

ಸಿಎಂ ಉದ್ಘಾಟನೆ

ಸೆ. 22 ರಂದು ಬೆಳಿಗ್ಗೆ 10-30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಸಚಿವ ಡಿ.ಕೆ.ಶಿವಕುಮಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯ ಸಚೇತಕ ಸಲೀಂ ಅಹ್ಮದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಉಪಸ್ಥಿತರಿರುವರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕಾರ್ಯಕ್ರಮದಲ್ಲಿ ಕೃಷಿ ಪ್ರಕಟಣೆಗಳ ಬಿಡುಗಡೆ ಮಾಡುವರು. ಸಚಿವರಾದ ಹೆಚ್.ಕೆ.ಪಾಟೀಲ, ಎಮ್.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಂಕಾಳ್ ವೈದ್ಯ ಗೌರವ ಅತಿಥಿಗಳಾಗಿ ಭಾಗವಹಿಸವರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧ್ಯಕ್ಷ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.

ವರದಿ: ಪ್ರಸನ್ನಕುಮಾರ ಹಿರೇಮಠ, ಹುಬ್ಬಳ್ಳಿ

mysore-dasara_Entry_Point