ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾ 25 ರಿಂದ, ಪಿಯು ಪರೀಕ್ಷೆ ಮಾ 1 ರಿಂದ; ಎಕ್ಸಾಂ ಬರೆಯಲಿದ್ದಾರೆ 15 ಲಕ್ಷ ವಿದ್ಯಾರ್ಥಿಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾ 25 ರಿಂದ, ಪಿಯು ಪರೀಕ್ಷೆ ಮಾ 1 ರಿಂದ; ಎಕ್ಸಾಂ ಬರೆಯಲಿದ್ದಾರೆ 15 ಲಕ್ಷ ವಿದ್ಯಾರ್ಥಿಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾ 25 ರಿಂದ, ಪಿಯು ಪರೀಕ್ಷೆ ಮಾ 1 ರಿಂದ ಶುರುವಾಗಲಿದೆ. ಒಟ್ಟು 15 ಲಕ್ಷ ವಿದ್ಯಾರ್ಥಿಗಳು ಎಕ್ಸಾಂ ಬರೆಯಲಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾ 25 ರಿಂದ ಮತ್ತು ದ್ವಿತೀಯ ಪಿಯು ಪರೀಕ್ಷೆ ಮಾ 1 ರಿಂದ ಶುರುವಾಗಲಿದೆ. 15 ಲಕ್ಷ ವಿದ್ಯಾರ್ಥಿಗಳು  ಎಕ್ಸಾಂ ಬರೆಯಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾ 25 ರಿಂದ ಮತ್ತು ದ್ವಿತೀಯ ಪಿಯು ಪರೀಕ್ಷೆ ಮಾ 1 ರಿಂದ ಶುರುವಾಗಲಿದೆ. 15 ಲಕ್ಷ ವಿದ್ಯಾರ್ಥಿಗಳು ಎಕ್ಸಾಂ ಬರೆಯಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರು: ಪ್ರಸಕ್ತ ವರ್ಷದ ದ್ವಿತೀಯ ಪಿಯು ಪರೀಕ್ಷೆ (2nd PUC Exam) ಹಾಗೂ ಎಸ್ಎಸ್ಎಲ್​ಸಿ ಪರೀಕ್ಷೆ (SSLC exam) ಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಒಟ್ಟು 15 ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಅವರು ಮಂಗಳವಾರ (ಫೆ.20) ಬೆಂಗಳೂರಿನ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ದ್ವಿತೀಯ ಪಿಯು ಪರೀಕ್ಷೆ ಮಾರ್ಚ್ 1ರಿಂದ 22ರ ತನಕ ನಡೆಯಲಿದೆ. ಈ ಬಾರಿ 6,98, 624 ಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ಕಳೆದ ವರ್ಷದಿಂದ ಈ ಮಾದರಿ ಜಾರಿಯಲ್ಲಿದೆ. ವಿದ್ಯಾರ್ಥಿಗಳು 80 ಅಂಕಗಳಿಗೆ ಲಿಖಿತ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ್ದಾಗಿರುತ್ತದೆ ಎಂದು ಸಚಿವ ಮಧುಬಂಗಾರಪ್ಪ ವಿವರಿಸಿದರು.

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ 2024

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ 2024 

ದಿನಾಂಕ ಪರೀಕ್ಷಾ ವಿಷಯಸಮಯ
01/03/2024ಕನ್ನಡ / ಅರೇಬಿಕ್‌ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
04/03/2024ಗಣಿತ / ಶಿಕ್ಷಣ ಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
05/03/2024ರಾಜ್ಯಶಾಸ್ತ್ರ/ ಸಂಖ್ಯಾ ಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
06/03/2024ಮಾಹಿತಿ ತಂತ್ರಜ್ಞಾನ/ ರಿಟೇಲ್/ ಆಟೋಮೊಬೈಲ್ / ಹೆಲ್ತ್ ಕೇರ್/ ಬ್ಯೂಟಿ ಆಂಡ್ ವೆಲ್ನೆಸ್‌ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
07/03/2024ಇತಿಹಾಸ/ ಭೌತ ಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
09/03/2024ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/ ಭೂಗರ್ಭ ಶಾಸ್ತ್ರ / ಗೃಹ ವಿಜ್ಞಾನಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
11/03/2024ತರ್ಕ ಶಾಸ್ತ್ರ/ ವ್ಯವಹಾರ ಅಧ್ಯಯನಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
13/03/2024ಇಂಗ್ಲಿಷ್ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
15/03/2024ಹಿಂದೂಸ್ತಾನಿ ಸಂಗೀತ/ ಮನಃಶಾಸ್ತ್ರ/ ರಸಾಯನ ಶಾಸ್ತ್ರ / ಮೂಲಗಣಿತಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
16/03/2024ಅರ್ಥ ಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
18/03/2024ಭೂಗೋಳ ಶಾಸ್ತ್ರ/ ಜೀವ ಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
20/03/2024ಸಮಾಜ ಶಾಸ್ತ್ರ/ ವಿದ್ಯುನ್ಮಾನ ಶಾಸ್ತ್ರ/ ಗಣಕ ವಿಜ್ಞಾನಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
21/03/2024ತಮಿಳು/ ತೆಲುಗು/ ಮಲಯಾಳಂ / ಮರಾಠಿ / ಉರ್ದು/ ಸಂಸ್ಕೃತ/ ಫ್ರೆಂಚ್‌ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ
22/03/2024ಹಿಂದಿಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ

ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್​​ 25 ರಿಂದ ಏಪ್ರಿಲ್ 06ರವರೆಗೆ ನಡೆಯಲಿವೆ. ಈ ವರ್ಷ ರಾಜ್ಯದಲ್ಲಿ 8,96,271 ಮಕ್ಕಳು ಎಸ್​ಎಸ್​ಎಲ್​ಸಿ ಪರೀಕ್ಷೆ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ 2024

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ 2024

ದಿನಾಂಕಪರೀಕ್ಷಾ ವಿಷಯಸಮಯ
25/03/2024ಕನ್ನಡ/ ತೆಲುಗು/ ಹಿಂದಿ / ಮರಾಠಿ/ ತಮಿಳು/ ಉರ್ದು/ ಇಂಗ್ಲಿಷ್‌ / ಇಂಗ್ಲಿಷ್ ಎನ್‌ಸಿಇಆರ್‌ಟಿ/ ಸಂಸ್ಕೃತಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30
27/03/2024ಸಮಾಜ ವಿಜ್ಞಾನಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 
30/03/2024ವಿಜ್ಞಾನ/ ರಾಜ್ಯ ಶಾಸ್ತ್ರಹಿಂದೂಸ್ತಾನಿ ಸಂಗೀತ/ ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತಮಧ್ಯಾಹ್ನ 2.00 ರಿಂದ ಸಂಜೆ 5.15
02/04/2024ಗಣಿತ / ಸಮಾಜ ಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30
03/04/2024ಎಲಿಮೆಂಟ್ಸ್​ ಆಫ್​ ಎಲೆಕ್ಟ್ರಿಕ್​ ಇಂಜಿನಿಯರಿಂಗ್ – IV/ ಎಲಿಮೆಂಟ್ಸ್​ ಆಫ್​ ಮೆಕಾನಿಕಲ್​ & ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​-2/ ಎಲಿಮೆಂಟ್ಸ್​ ಆಫ್​ ಮೆಕ್ಯಾನಿಕಲ್​ ಇಂಜಿನಿಯರಿಂಗ್​- IV / ಎಲಿಮೆಂಟ್ಸ್​ ಆಫ್​ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​- IV /ಎಲಿಮೆಂಟ್ಸ್​ ಆಫ್​ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ / ಎಲಿಮೆಂಟ್ಸ್ ಆಫ್​ ಕಂಪ್ಯೂಟರ್​ ಸೈನ್ಸ್​​/ ಅರ್ಥಶಾಸ್ತ್ರಬೆಳಗ್ಗೆ 10.15ರಿಂದ ಮಧ್ಯಾಹ್ನ 1.30
 ಇಂಜಿನಿಯರಿಂಗ್​ ಗ್ರಾಫಿಕ್ಸ್​-2ಮಧ್ಯಾಹ್ನ 2.00 ರಿಂದ ಸಂಜೆ 5.15
04/04/2024(ತೃತೀಯ ಭಾಷೆ) ಹಿಂದಿ (NCERT)/ ಹಿಂದಿ/ ಕನ್ನಡ/ ಇಂಗ್ಲಿಷ್/ ಅರೇಬಿಕ್ / ಪರ್ಷಿಯನ್ / ಉರ್ದು/ ಸಂಸ್ಕೃತ/ ಕೊಂಕಣಿ/ ತುಳು / (ಎನ್​.ಎಸ್​.ಕ್ಯೂ. ಎಫ್​ ವಿಷಯಗಳು) ಮಾಹಿತಿ ತಂತ್ರಜ್ಞಾನ/ ರೀಟೇಲ್​​/ 
ಆಟೋಮೊಬೈಲ್‌ / ಹೆಲ್ತ್ ಕೇರ್‌/ ಬ್ಯೂಟಿ ಆಂಡ್ ವೆಲ್ನೆಸ್ / ಅಪರೆಲ್​ ಮೇಡ್​ ಅಪ್ಸ್​​ & ಹೋಮ್​ ಫರ್ನಿಷಿಂಗ್​​/ ಎಲೆಕ್ಟ್ರಾನಿಕ್​ & ಹಾರ್ಡ್​ವೇರ್​
ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30
06/04/2024(ತೃತೀಯ ಭಾಷೆ) ಇಂಗ್ಲಿಷ್​/ ಕನ್ನಡಬೆಳಗ್ಗೆ 10.15ರಿಂದ ಮಧ್ಯಾಹ್ನ 1.30

ದ್ವಿತೀಯ ಪಿಯುಸಿ ಪರೀಕ್ಷೆ-2, ಎಸ್ ಎಸ್ಎಲ್​ಸಿ ಪರೀಕ್ಷೆ-2 ಅನ್ನು ಎಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಧರಿಸಿ ಬರುವುದಕ್ಕೆ ಅವಕಾಶ ನೀಡುವ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಸಮವಸ್ತ್ರ ನಿಯಮ ಪಾಲನೆ ಮಾಡಲಾಗುತ್ತದೆ. ಅಡ್ವೋಕೇಟ್ ಜನರಲ್ ಅವರ ಸಲಹೆ ಪಡೆದು ಹಿಜಾಬ್ ಧರಿಸಿ ಪರೀಕ್ಷೆ ಬರೆಯುವುದಕ್ಕೆ ಬಿಡುವ ವಿಚಾರ ನಿರ್ಧರಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point