ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಬೆಳ್ಳಿಪರ್ವ: ಚಾಲೆಂಜಿಂಗ್‌ ಸ್ಟಾರ್‌ ನಟಿಸಿದ ಸಿನಿಮಾಗಳೆಷ್ಟು? ಮಹಾಭಾರತದಿಂದ ಕಾಟೇರದವರೆಗೆ ಇಲ್ಲಿದೆ ಡಿಬಾಸ್‌ ಚಿತ್ರಗಳ ವಿವರ

ದರ್ಶನ್‌ ಬೆಳ್ಳಿಪರ್ವ: ಚಾಲೆಂಜಿಂಗ್‌ ಸ್ಟಾರ್‌ ನಟಿಸಿದ ಸಿನಿಮಾಗಳೆಷ್ಟು? ಮಹಾಭಾರತದಿಂದ ಕಾಟೇರದವರೆಗೆ ಇಲ್ಲಿದೆ ಡಿಬಾಸ್‌ ಚಿತ್ರಗಳ ವಿವರ

Challenging star Darshan Movies: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಇಲ್ಲಿಯವರೆಗೆ 58 ಸಿನಿಮಾಗಳಲ್ಲಿ ಪ್ರಮುಖ ಮಾತ್ರಗಳಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರಗಳು ಸೇರಿದಂತೆ ದಚ್ಚು ನಟಿಸಿದ ಇತರೆ ಸಿನಿಮಾಗಳನ್ನು ಸೇರಿಸಿದರೆ ಈ ಪಟ್ಟಿ 70 ದಾಟುತ್ತದೆ. ಸ್ಯಾಂಡಲ್‌ವುಡ್‌ಗೆ ದರ್ಶನ್‌ ಆಗಮಿಸಿ 25 ವರ್ಷಗಳಾಗಿದ್ದು ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ದರ್ಶನ್‌ ಬೆಳ್ಳಿಪರ್ವ: ಚಾಲೆಂಜಿಂಗ್‌ ಸ್ಟಾರ್‌ ನಟಿಸಿದ ಸಿನಿಮಾ
ದರ್ಶನ್‌ ಬೆಳ್ಳಿಪರ್ವ: ಚಾಲೆಂಜಿಂಗ್‌ ಸ್ಟಾರ್‌ ನಟಿಸಿದ ಸಿನಿಮಾ

ಕಾಟೇರ ಯಶಸ್ಸಿನ ಬಳಿಕ ದರ್ಶನ್‌ಗೆ ಸಾಲುಸಾಲು ಹಬ್ಬಗಳು. ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್‌ಗೆ ಇಂದು ಬೆಳ್ಳಿಹಬ್ಬದ ಸಂಭ್ರಮ. ಸ್ಯಾಂಡಲ್‌ವುಡ್‌ಗೆ ದರ್ಶನ್‌ ಆಗಮಿಸಿ 25 ವರ್ಷಗಳಾಗಿವೆ. ನಿನ್ನೆ ದರ್ಶನ್‌ ನಟನೆಯ 59ನೇ ಚಿತ್ರದ ಕುರಿತೂ ಘೋಷಣೆ ಮಾಡಲಾಗಿದೆ. ಆದರೆ, ದರ್ಶನ್‌ ಇಲ್ಲಿಯವರೆಗೆ ಕೇವಲ 58 ಸಿನಿಮಾಗಳಲ್ಲಿ ನಟಿಸಿದ್ದಲ್ಲ. ಬೇರೆ ಭಾಷೆಯ ಚಿತ್ರಗಳಲ್ಲಿ ನಟನೆ, ಕೆಲವು ಸಣ್ಣಪುಟ್ಟ ಪಾತ್ರಗಳ ನಟನೆ ಸೇರಿದರೆ ದರ್ಶನ್‌ ಅಭಿನಯಿಸಿದ ಚಿತ್ರಗಳ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಫೆಬ್ರವರಿ 18 ಅಂದರೆ ಇಂದು ಶ್ರೀರಂಗಪಟ್ಟಣದಲ್ಲಿ ದರ್ಶನ್‌ ರಜತ ಮಹೋತ್ಸವ ನಡೆಯಲಿದೆ. ದರ್ಶನ್‌ ಬೆಳ್ಳಿಹಬ್ಬದ ಸಮಯದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ನಟಿಸಿದ ಸಿನಿಮಾಗಳ ವಿವರ ಪಡೆಯೋಣ.

ಟ್ರೆಂಡಿಂಗ್​ ಸುದ್ದಿ

ದರ್ಶನ್‌ ಸಿನಿಮಾಗಳ ಪಟ್ಟಿ

1997ರಲ್ಲಿ ಮಹಾಭಾರತ, 2000ರಲ್ಲಿ ದೇವರ ಮಗ,, ವಲ್ಲರಸು (ತಮಿಳು), ಎಲ್ಲರ ಮನೆ ದೋಸೆನೂ, ಮಿಸ್ಟರ್‌ ಹರಿಶ್ಚಂದ್ರ, 2002ರಲ್ಲಿ ಭೂತಯ್ಯನ ಮಕ್ಕಳು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2002ರಲ್ಲಿ ನಟಿಸಿದ ಮೆಜಿಸ್ಟಿಕ್‌ ಸಿನಿಮಾ ಇವರ ದಿಕ್ಕು ಬದಲಾಯಿಸಿತು. ಇದಾದ ಬಳಿಕ ಧ್ರುವ, ದಿಲ್‌, ನಿಂಗೋಸ್ಕರ, ಕಿಟ್ಟಿ, ಸಿನಿಮಾಗಳಲ್ಲಿ ನಟಿಸಿದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ 2003ರಲ್ಲಿ ಕರಿಯಾ, ಲಾಲಿಹಾಡು, ನೀನಂದ್ರ ಇಷ್ಟ, ನನ್ನ ಹೆಂಡತಿ ಮದುವೆ, ಕುಶಲವೇ ಕ್ಷೇಮವೇ, ಲಂಕೇಶ್‌ ಪತ್ರಿಕೆ, ನಮ್ಮ ಪ್ರೀತಿಯ ರಾಮು, ದಾಸಾ, ಅಣ್ಣಾವ್ರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2004ರಲ್ಲಿ ಧರ್ಮ, ದರ್ಶನ್‌, ಸರದಾರ, ಮೊನಾಲಿಸಾ, ಭಗವನ್‌, ಕಲಾಸಿಪಾಲ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದರ್ಶನ್‌ ಸಿನಿಮಾಗಳ ಪಟ್ಟಿ
ದರ್ಶನ್‌ ಸಿನಿಮಾಗಳ ಪಟ್ಟಿ (twitter daily kannada memes)

2005ರಲ್ಲಿ ಅಯ್ಯಾ, ಶಾಸ್ತ್ರಿ, ಸ್ವಾಮಿ, 2006ರಲ್ಲಿ ಮಂಡ್ಯ, ಸುಂಟರಗಾಳಿ, ದತ್ತಾ, ಜೊತೆಜೊತೆಯಲ್ಲಿ, ತಂಗಿಗಾಗಿ ಚಿತ್ರಗಳಲ್ಲಿ ನಟಿಸಿದ್ದಾರೆ. 2007ರಲ್ಲಿ ಅರಸು (ವಿಜಯ್‌ ಆಗಿ ಕಾಣಿಸಿಕೊಂಡಿದ್ದರು), ಭೂಪತಿ, ಸ್ನೇಹನಾ ಪ್ರೀತಿನಾ, ಅನಾಥರು, ಈ ಬಂಧನ ಚಿತ್ರಗಳಲ್ಲಿ ನಟಿಸಿದ್ದಾರೆ.

2008ರಲ್ಲಿ ಗಜ, ಇಂದ್ರ, ಅರ್ಜುನ್‌, ನವಗ್ರಹ ಚಿತ್ರಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ಯೋಧ, ಅಭಯ್‌, 2010ರಲ್ಲಿ ಪೋರ್ಕಿ, ಶೌರ್ಯ, 2011ರಲ್ಲಿ ಬಾಸ್‌, ಪ್ರಿನ್ಸ್‌, ಸಾರಥಿ ಚಿತ್ರಗಳಲ್ಲಿ ನಟಿಸಿದರು. 2012ರಲ್ಲಿ ಸಂಗೋಳ್ಳಿ ರಾಯಣ್ಣ, 2013ರಲ್ಲಿ ಬುಲ್‌ಬುಲ್‌, ಬೃಂದಾವನದಲ್ಲಿ, 2014ರಲ್ಲಿ ಅಗ್ರಜ, ಅಂಬರೀಶ, 2015ರಲ್ಲಿ ಮಿಸ್ಟರ್‌ ಐರಾವತ, ಮಮ್ತಾಜ್‌, 2016ರಲ್ಲಿ ವಿರಾಟ್‌, ಜಗ್ಗು ದಾದಾ, ನಾಗರಹಾವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ದರ್ಶನ್‌ ಸಿನಿಮಾಗಳು
ದರ್ಶನ್‌ ಸಿನಿಮಾಗಳು

2017ರಲ್ಲಿ ದರ್ಶನ್‌ ಅವರು ಚೌಕಾ, ಚಕ್ರವರ್ತಿ, ತಾರಾಕ್‌, 2018ರಲ್ಲಿ ಪ್ರೇಮ ಬರಹ, 2019ರಲ್ಲಿ ಯಜಮಾನ, ಅಮರ್‌, ಕುರುಕ್ಷೇತ್ರ ಮತ್ತು ಒಡೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 2021ರಲ್ಲಿ ಇನ್‌ಸ್ಪೆಕ್ಟರ್‌ ವಿಕ್ರಮ್‌, ರಾಬರ್ಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. 2023ರಲ್ಲಿ ಕ್ರಾಂತಿ, ಗರಡಿ ಮತ್ತು ಬ್ಲಾಕ್‌ಬಸ್ಟರ್‌ ಕಾಟೇರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡೆವಿಲ್: ದಿ ಹೀರೋ ಚಾಲೆಂಜಿಂಗ್‌ ಸ್ಟಾರ್‌ ಅವರು ನಟಿಸುತ್ತಿರುವ ಮುಂದಿನ ಸಿನಿಮಾವಾಗಿದೆ.

IPL_Entry_Point