ಕನ್ನಡ ಸುದ್ದಿ  /  ಕರ್ನಾಟಕ  /   Bharat Gaurav Kashi Darshan: ಕರ್ನಾಟಕ – ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಈಗಲೇ ಟಿಕೆಟ್‌ ಬುಕ್ಕಿಂಗ್‌ ಮಾಡಿ, ಇಲ್ಲಿದೆ ನೇರ ಲಿಂಕ್‌

Bharat Gaurav Kashi Darshan: ಕರ್ನಾಟಕ – ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಈಗಲೇ ಟಿಕೆಟ್‌ ಬುಕ್ಕಿಂಗ್‌ ಮಾಡಿ, ಇಲ್ಲಿದೆ ನೇರ ಲಿಂಕ್‌

karnataka bharat gaurav kashi darshan: ಕರ್ನಾಟಕ – ಭಾರತ್‌ ಗೌರವ್‌ ಕಾಶಿ ರೈಲು ಯಾತ್ರೆಯ ಮೂರನೇ ಟ್ರಿಪ್‌ ಆರಂಭವಾಗಿದ್ದು, ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಯಸುವವರು ತಕ್ಷಣ ಅರ್ಜಿ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

Bengaluru, Nov 23 (ANI): Passengers greet prior to boarding the Bharat Gaurav Kashi Darshan Train from the city railway station, in Bengaluru on Wednesday. (ANI Photo)
Bengaluru, Nov 23 (ANI): Passengers greet prior to boarding the Bharat Gaurav Kashi Darshan Train from the city railway station, in Bengaluru on Wednesday. (ANI Photo) (Savitha B)

ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಕರ್ನಾಟಕ – ಭಾರತ್‌ ಗೌರವ್‌ ಕಾಶಿ ರೈಲು ಯಾತ್ರೆಯ ಮೂರನೇ ಟ್ರಿಪ್‌ ಗೆ ರಾಜ್ಯದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬುಕ್ಕಿಂಗ್‌ ಈಗಾಗಲೇ ಪ್ರಾರಂಭವಾಗಿದ್ದು 300 ಕ್ಕೂ ಟಿಕೆಟ್‌ಗಳು ಭರ್ತಿಯಾಗಿವೆ ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನವೆಂಬರ್‌ 11, 2022 ರಂದು ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆಯಾದ ಈ ಯೋಜನೆಯ ಎರಡೂ ಟ್ರಿಪ್‌ಗಳಿಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ. ಚಳಿಗಾಲದ ಹಿನ್ನಲೆಯಲ್ಲಿ ಮುಂದೂಡಲಾಗಿದ್ದ ರೈಲು ಪ್ರವಾಸವನ್ನ ಫೆಬ್ರವರಿ 21, 2023 ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಾರಣಾಸಿಗೆ, ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್‌ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಇದು ಉತ್ತಮ ಸಮಯವಾಗಿದೆ.

ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ಯಾತ್ರಾರ್ಥಿಗೆ 5 ಸಾವಿರ ರೂಪಾಯಿಗಳ ಸಹಾಯಧನ ನೀಡಲಾಗುತ್ತಿದ್ದು, ರಾಜ್ಯದ ಭಕ್ತಾದಿಗಳೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ದಿವ್ಯ ಕಾಶಿ - ಭವ್ಯ ಕಾಶಿಯ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದು ಮಾನ್ಯ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8595931290/92/93/94

ಕರ್ನಾಟಕ – ಭಾರತ್‌ ಗೌರವ್‌ ಕಾಶಿ ಯಾತ್ರೆಗೆ ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ 5,೦೦೦ ರೂ.ಗಳನ್ನು ಸಹಾಯಧನವಾಗಿ ನೀಡಲಾಗುತ್ತದೆ. . ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು.

ಸಂದರ್ಶಿಸುವ ಯಾತ್ರಾಸ್ಥಳಗಳು ಯಾವುವು?

ವಾರಾಣಸಿ: ತುಳಸಿ ಮಾನಸ ದೇವಸ್ಥಾನ, ಸಂಕಷ್ಟ ಮೋಚನ್ ಹನುಮಾನ್ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಆರತಿ.

ಅಯೋಧ್ಯೆ: ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್.

ಪ್ರಯಾಗರಾಜ್: ಗಂಗಾ-ಯಮುನಾ ಸಂಗಮ, ಹನುಮಾನ್ ದೇವಸ್ಥಾನ

ಕಾಶಿ ಯಾತ್ರಾ ಪ್ಯಾಕೇಜ್‌ : ರೈಲಲ್ಲಿ ಎಷ್ಟು ದಿನ? ಎಲ್ಲೆಲ್ಲಿಗೆ ಭೇಟಿ? ಈ ಕುರಿತು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಯಾತ್ರೆಗೆ ಈಗಾಗಲೇ ಬುಕ್ಕಿಂಗ್‌ ಶುರುವಾಗಿದೆ. ಈ ಯಾತ್ರಾ ಪ್ಯಾಕೇಜ್‌ನಲ್ಲಿ ಏನೇನು ಸೇವೆ, ಸೌಲಭ್ಯಗಳಿವೆ ಎಂಬ ಕುತೂಹಲ ಸಹಜ. ಈ ಕುರಿತು ವಿಶೇಷ ಮಾಹಿತಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point