Konkan Railway: ಕೋಂಕಣ್ ರೈಲ್ವೆ ಮಾನ್ಸೂನ್ ವೇಳಾಪಟ್ಟಿ ಜಾರಿ, ಜೂನ್ 10 ರಿಂದ 5 ರೈಲುಗಳ ಸಂಚಾರ
ಕೊಂಕಣ್ ರೈಲ್ವೆ ಮಾನ್ಸೂನ್ ವೇಳಾಪಟ್ಟಿ(Monsoon 2024 Timetable) ಅನ್ನು ಪ್ರಕಟಿಸಿದ್ದು, ಐದು ರೈಲುಗಳು ನಾಲ್ಕು ತಿಂಗಳ ಕಾಲ ಸಂಚರಿಸಲಿವೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ಮಂಗಳೂರು, ಉಡುಪಿ, ಕಾರವಾರವನ್ನು ಸಂಪರ್ಕಿಸುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾನ್ಸೂನ್ ವೇಳಾಪಟ್ಟಿಯನ್ನು ಜೂನ್ 10 ರಿಂದ ಅಕ್ಟೋಬರ್ 31, 2024 ರವರೆಗೆ ಜಾರಿಗೆ ತರಲಾಗುವುದು ಎಂದು ಕೊಂಕಣ ರೈಲ್ವೆ ಸೂಚಿಸಿದೆ. ಈ ಕುರಿತು ಸಂಚರಿಸುವ ರೈಲುಗಳ ವಿವರವನ್ನು ನೀಡಲಾಗಿದೆ. ಕರಾವಳಿ ಭಾಗದಲ್ಲಿ ಸಂಚರಿಸುವ ರೈಲುಗಳಿಂದ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ. ಅಲ್ಲದೇ ಗೋವಾ, ಬೆಂಗಳೂರು, ಕೇರಳ, ಮಹಾರಾಷ್ಟ್ರ ಸಂಚಾರಕ್ಕೂ ಈ ರೈಲುಗಳ ಪ್ರಯಾಣ ಸಹಕಾರಿಯಾಗಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಮಾನ್ಸೂನ್ ವೇಳಾಪಟ್ಟಿಗೆ ಅನುಗುಣವಾಗಿ ಈ ಕೆಳಗಿನ ರೈಲುಗಳು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತವೆ.
1. ರೈಲು ಸಂಖ್ಯೆ 12741/12742 ವಾಸ್ಕೋ-ಡ-ಗಾಮಾ-ಪಾಟ್ನಾ-ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್
2. ರೈಲು ಸಂಖ್ಯೆ 16515/16516 ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್ ಪ್ರೆಸ್
3. ರೈಲು ಸಂಖ್ಯೆ 11097/11098 ಪುಣೆ-ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್
4. ರೈಲು ಸಂಖ್ಯೆ 16595/16596 ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್
5. ರೈಲು ಸಂಖ್ಯೆ 16586/16585 ಮುರುಡೇಶ್ವರ-ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್.
ಈ ಅವಧಿಯಲ್ಲಿ, ಈ ಐದು ಜೋಡಿ ರೈಲುಗಳು ಮಾನ್ಸೂನ್ ಸಮಯಕ್ಕೆ ಅನುಗುಣವಾಗಿ ಚಲಿಸುತ್ತವೆ. ಪ್ರಯಾಣಿಕರು ಕೆಳಗೆ ನೀಡಲಾದ ಪರಿಷ್ಕೃತ ಸಮಯವನ್ನು ಗಮನಿಸಲು ಸೂಚಿಸಲಾಗಿದೆ.
ಪ್ರಯಾಣಿಕರು ಈ ಮೇಲಿನ ರೈಲುಗಳ ಮಾನ್ಸೂನ್ ವೇಳಾಪಟ್ಟಿ ತಿಳಿಯಲು ಈ ಲಿಂಕ ಮೇಲೆ ಕ್ಲಿಕ್ ಮಾಡಬಹುದು ಎಂದು ತಿಳಿಸಲಾಗಿದೆ.
https://swr.indianrailways.gov.in/view_detail.jsp?lang=0&dcd=7326&id=0,4,268 ಅಥವಾ www.enquiry.indianrail.gov.in ಗೆ ಭೇಟಿ ನೀಡಬಹುದು.