SSLC Exam 2025 Time Table: ಕರ್ನಾಟಕದಲ್ಲಿ ಮಾರ್ಚ್‌ 24ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ , ಹೀಗಿದೆ ವೇಳಾಪಟ್ಟಿ; ಇಂದು ಅಧಿಕೃತ ಪ್ರಕಟಣೆ
ಕನ್ನಡ ಸುದ್ದಿ  /  ಕರ್ನಾಟಕ  /  Sslc Exam 2025 Time Table: ಕರ್ನಾಟಕದಲ್ಲಿ ಮಾರ್ಚ್‌ 24ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ , ಹೀಗಿದೆ ವೇಳಾಪಟ್ಟಿ; ಇಂದು ಅಧಿಕೃತ ಪ್ರಕಟಣೆ

SSLC Exam 2025 Time Table: ಕರ್ನಾಟಕದಲ್ಲಿ ಮಾರ್ಚ್‌ 24ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ , ಹೀಗಿದೆ ವೇಳಾಪಟ್ಟಿ; ಇಂದು ಅಧಿಕೃತ ಪ್ರಕಟಣೆ

SSLC Exam 2025 Time Table: ಕರ್ನಾಟಕದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯು 2025ರ ಮಾರ್ಚ್‌ 24ರಿಂದ ಅರಂಭಗೊಂಡು ಏಪ್ರಿಲ್‌ 17ವರೆಗೂ ಇರಲಿದೆ. ತಾತ್ಕಾಲಿಕ ವೇಳಾಪಟ್ಟಿ ಶುಕ್ರವಾರ (ನವೆಂಬರ್ 29) ಬಿಡುಗಡೆಯಾಗಲಿದ್ದು, ಅಂತಿಮ ವೇಳಾಪಟ್ಟಿ ಡಿಸೆಂಬರ್‌ ಎರಡನೇ ವಾರ ಪ್ರಕಟವಾಗಲಿದೆ.

2024-25ನೇ ಸಾಲಿನ ಕರ್ನಾಟಕೆ ಎಸ್‌ಎಸ್‌ಎಲ್ಸಿ ಪರೀಕ್ಷೆಯು ಮಾರ್ಚ್‌ 24ರಿಂದ ಅರಂಭವಾಗಲಿದೆ.
2024-25ನೇ ಸಾಲಿನ ಕರ್ನಾಟಕೆ ಎಸ್‌ಎಸ್‌ಎಲ್ಸಿ ಪರೀಕ್ಷೆಯು ಮಾರ್ಚ್‌ 24ರಿಂದ ಅರಂಭವಾಗಲಿದೆ.

SSLC Exam 2025 Time Table: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯ ವೇಳಾಪಟ್ಟಿ ದಿನಾಂಕವನ್ನು ನಿಗದಿಪಡಿಸಿದೆ. ಈ ಪ್ರಕಾರ 2025ರ ಮಾರ್ಚ್‌ 24ರಿಂದ ಆರಂಭಗೊಂಡು ಏಪ್ರಿಲ್‌ 17ರವರೆಗೆ ಪರೀಕ್ಷೆಗಳು ಮುಂದುವರಿಯಲಿವೆ. ಒಟ್ಟು 25 ದಿನಗಳ ಅವಧಿಯಲ್ಲಿ ಪರೀಕ್ಷೆಯನ್ನು ನಡೆಸಲು ಮಂಡಳಿಯು ದಿನಾಂಕವನ್ನು ತಾತ್ಕಾಲಿವಾಗಿ ಸಿದ್ದಪಡಿಸಿಕೊಂಡಿದೆ. ನವೆಂಬರ್‌ 27ರ ಬುಧವಾರ ಬೆಂಗಳೂರಿನಲ್ಲಿರುವ ಮಂಡಳಿ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಸಂಬಂಧ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ. ಈ ಸಭೆ ದಿನಾಂಕಗಳನ್ನು ಅಂತಿಮಗೊಳಿಸಿದೆ. ಶುಕ್ರವಾರದಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾ ಪಟ್ಟಿಯನ್ನು ವೆಬ್‌ಸೈಟ್‌ ಮೂಲಕ ಪ್ರಕಟಿಸಲಿದೆ. ಹದಿನೈದು ದಿನಗಳ ಆಕ್ಷೇಪಣೆ ಅವಧಿ ನಂತರ ಬಹುತೇಕ ಡಿಸೆಂಬರ್‌ ಎರಡನೇ ವಾರ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ತಾತ್ಕಾಲಿಕ ವೇಳಾ ಪಟ್ಟಿ ಹೀಗಿದೆ

  • 2025 ರ ಮಾರ್ಚ್‌ 24 ಸೋಮವಾರ ಗಣಿತಶಾಸ್ತ್ರ
  • 2025 ರ ಮಾರ್ಚ್‌ 28 ಶುಕ್ರವಾರ ಇಂಗ್ಲೀಷ್‌( ದ್ವಿತೀಯ ಭಾಷೆ)
  • 2025 ರ ಏಪ್ರಿಲ್‌ 1 ಮಂಗಳವಾರ ವಿಜ್ಞಾನ
  • 2025 ರ ಏಪ್ರಿಲ್‌ 4 ಶುಕ್ರವಾರ ಸಮಾಜಶಾಸ್ತ್ರ
  • 2025 ರ ಏಪ್ರಿಲ್‌ 7 ಸೋಮವಾರ ಕನ್ನಡ (ಮೊದಲ ಭಾಷೆ)
  • 2025 ರ ಏಪ್ರಿಲ್‌ 11 ಶುಕ್ರವಾರ ಹಿಂದಿ(ತೃತೀಯ ಭಾಷೆ)

ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ ( ಎನ್‌ಸಿಇಆರ್‌ಟಿ), ಸಂಸ್ಕೃತ

ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ

ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್‌ ವಿಷಯಗಳು.

ಮಾರ್ಚ್‌ನಲ್ಲಿ ಶುರು

ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ನಲ್ಲಿ ಆರಂಭಗೊಂಡು ಏಪ್ರಿಲ್‌ವರೆಗೂ ನಡೆಯುತ್ತವೆ.ಮುಖ್ಯ ವಿಷಯಗಳು, ಭಾಷಾ ವಿಷಯಗಳು, ಕೋರ್‌ ವಿಷಯಗಳು ಸೇರಿ ಒಟ್ಟು ಪರೀಕ್ಷೆಗೆ ಮೂರು ವಾರಗಳ ಸಮಯವನ್ನು ಮೀಸಲಿಡಲಾಗುತ್ತದೆ. ಕನಿಷ್ಠ ಒಂದು ಅಥವಾ ಎರಡು ದಿನಗಳ ಬಿಡುವು ನೀಡಿ ಪರೀಕ್ಷೆ ನಿಗದಿ ಮಾಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಮುಖವಾಗಿರುವುದರಿಂದ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಹೆಚ್ಚಿನ ಗಮನವನ್ನೂ ನೀಡುತ್ತದೆ. ಈ ವರ್ಷದ ವೇಳಾಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ. ಬುಧವಾರ ಹಿರಿಯ ಅಧಿಕಾರಿಗಳ ಹಂತದಲ್ಲಿ ಸಭೆ ನಡೆದು ಮಂಡಳಿಗೆ ಸಲ್ಲಿಸಲಾಗುತ್ತದೆ, ಮಂಡಳಿಯು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸುತ್ತದೆ. ಹದಿನೈದು ದಿನಗಳ ಕಾಲ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕ ಅಂತಿಮ ವೇಳಾ ಪಟ್ಟಿ ಪ್ರಕಟಿಸಲಾಗುತ್ತದೆ. ಆದರೆ ಮೊದಲು ನಿಗದಿಯಾಗುವ ವೇಳಾಪಟ್ಟಿಯೇ ಅಂತಿವಾಗುವುದೇ ಹೆಚ್ಚು ಎನ್ನುವುದು ಅಧಿಕಾರಿಗಳ ವಿವರಣೆ.

ಕಳೆದ ವರ್ಷ ಯಾವಾಗ ಆಗಿತ್ತು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ವೇಳಾಪಟ್ಟಿ ಹೀಗಿತ್ತು.

  • ಮಾರ್ಚ್ 25 - ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ ಎನ್‌ಸಿಇಆರ್‌ಟಿ, ಸಂಸ್ಕೃತ)
  • ಮಾರ್ಚ್ 27 -ಸಮಾಜ ವಿಜ್ಞಾನ (ಕೋರ್‌ ಸಬ್ಜೆಕ್ಟ್‌)
  • ಮಾರ್ಚ್ 30 - ವಿಜ್ಞಾನ, ರಾಜ್ಯಶಾಸ್ತ್ರ
  • ಏಪ್ರಿಲ್ 2- ಗಣಿತ, ಸಮಾಜ ಶಾಸ್ತ್ರ
  • ಏಪ್ರಿಲ್ 3 - ಅರ್ಥಶಾಸ್ತ್ರ
  • ಏಪ್ರಿಲ್ 4 - ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು).
  • ಏಪ್ರಿಲ್ 6 - ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ).

 

Whats_app_banner