ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮುಂದುವರೆದ ಚಳಿ, ಮಂಜು ಮುಸುಕಿದ ವಾತಾವರಣ; ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮುಂದುವರೆದ ಚಳಿ, ಮಂಜು ಮುಸುಕಿದ ವಾತಾವರಣ; ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮುಂದುವರೆದ ಚಳಿ, ಮಂಜು ಮುಸುಕಿದ ವಾತಾವರಣ; ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಕಳೆದೊಂದು ವಾರದಿಂದ ಉಷ್ಣಾಂಶ ಕಡಿಮೆ ಆಗಿದ್ದು ಚಳಿ ಹೆಚ್ಚಾಗಿದೆ. ಬಹುತೇಕ ಕಡೆ ಉಷ್ಣಾಂಶ 20 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 36.4 ಡಿ.ಸೆ. ಕಾರವಾರದಲ್ಲಿ ದಾಖಲಾಗಿದ್ದರೆ, ಬೀದರ್‌ನಲ್ಲಿ ಕಡಿಮೆ ಉಷ್ಣಾಂಶ 12.8 ಡಿ.ಸೆ. ದಾಖಲಾಗಿದೆ.

ನವೆಂಬರ್‌ 23ರ ಕರ್ನಾಟಕ ಹವಾಮಾನ
ನವೆಂಬರ್‌ 23ರ ಕರ್ನಾಟಕ ಹವಾಮಾನ (PC: Pixabay, wiki commons)

ಬೆಂಗಳೂರು: ರಾಜ್ಯದೆಲ್ಲೆಡೆ ಚಳಿ ಶುರುವಾಗಿದೆ. ತಾಪಮಾನ ಕುಸಿಯುತ್ತಿದ್ದು ಬಹಳಷ್ಟು ಕಡೆ ಬೆಳಂ ಬೆಳಗ್ಗೆ ಮಂಜು ಮುಸುಕಿದ ವಾತಾವರಣ ಇದೆ. ಬೆಂಗಳೂರು, ಬೆಳಗಾವಿ, ಗದಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕೆಳಗೆ ಕುಸಿದಿದ್ದು ಚಳಿ ಆವರಿಸಿದೆ. ಇಂದು ರಾಜ್ಯದ ಇತರ ಜಿಲ್ಲೆಗಳ ಹವಾಮಾನ ಹೇಗಿದೆ? ಯಾವ ಜಿಲ್ಲೆಯಲ್ಲಿ ಕನಿಷ್ಠ ಹಾಗೂ ಯಾವ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಇದೆ ನೋಡೋಣ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೀದರ್‌ನಲ್ಲಿ ಕಡಿಮೆ ಉಷ್ಣಾಂಶ ದಾಖಲು

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 06:22ಕ್ಕೆ ಸೂರ್ಯೋದಯವಾಗಿದ್ದು, ಸಂಜೆ 05:50ಕ್ಕೆ ಸೂರ್ಯಾಸ್ತವಾಗಲಿದೆ. ಶುಕ್ರವಾರ ರಾಜ್ಯದಲ್ಲಿ ಈಶಾನ್ಯ ಮುಂಗಾರು ದುರ್ಬಲವಾಗಿತ್ತು ಬಹುತೇಕ ಚಳಿ ಇತ್ತು. ಯಾವುದೇ ಮುಖ್ಯ ಮಳೆಯ ಪ್ರಮಾಣ ವರದಿಯಾಗಿಲ್ಲ. ಉತ್ತರ ಒಳಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಉಷ್ಣಾಂಶ ಗಮನಾರ್ಹವಾಗಿ ಇಳಿಕೆ ಆಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳ ಕರ್ನಾಟಕದದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಕೆಲವೆಡೆ ಉಷ್ಣಾಂಶ ಗಮನಾರ್ಹವಾಗಿ ಏರಿಕೆ ಆಗಿದೆ. ಶುಕ್ರವಾರ ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 36.4 ಡಿ.ಸೆ. ಕಾರವಾರದಲ್ಲಿ ದಾಖಲಾಗಿದ್ದರೆ, ಬೀದರ್‌ನಲ್ಲಿ ಕಡಿಮೆ ಉಷ್ಣಾಂಶ 12.8 ಡಿ.ಸೆ. ದಾಖಲಾಗಿದೆ.

ಸಿನೊಪ್ಟಿಕ್‌ ಹವಾಮಾನ ಲಕ್ಷಣ

ಸೈಕ್ಲೋನಿಕ್‌ ಪರಿಚಲನೆಯು ದಕ್ಷಿಣ ಕೇರಳ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ಎತ್ತರದಲ್ಲಿದೆ. ಸುಮಾತ್ರ ಕರಾವಳಿಯ ಈಕ್ವಟೋರಿಲ್‌ ಹಿಂದೂ ಮಹಾಸಾಗರದ ಮೇಲಿನ ವಾಯು ಚಂಡಮಾರುತದ ಪರಿಚಲನೆ ಮತ್ತು ದಕ್ಷಿಣ ಅಂಡಮಾನ್‌ ಸಮುದ್ರದ ಪಕ್ಕದಲ್ಲಿ ಪಶ್ಚಿಮ ವಾಯುವ್ಯಕ್ಕೆ ಚಲಿಸಿದೆ, ಇಂದು ಈಕ್ವಟೋರಿಯಲ್‌ ಹಿಂದೂ ಮಹಾಸಾರ ಹಾಗೂ ದಕ್ಷಿಣ ಅಂಡಮಾನ್‌ ಸಮುದ್ರದ ಮೇಲೆ ಮಧ್ಯ ಟ್ರೋಪೋಸ್ಟಿಯರ್‌ ಮಟ್ಟದವರೆಗೆ ವಿಸ್ತರಿಸಿದೆ. ಇದರ ಪ್ರಭಾವದಿಂದ ಇಂದು (ನ.23)ರಂದು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆ ಇದೆ. ಅದರ ನಂತರ ಇದು ಪಶ್ಚಿಮ ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದ್ದು ನಂತರದ 2 ದಿನಗಳಲ್ಲಿ ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯಭಾಗಗಳಲ್ಲಿ ವಾಯುಭಾರ ಕುಸಿತವಾಗಲಿದೆ.

ಇಂದು ರಾಜ್ಯದ ಬಹುತೇಕ ಕಡೆ ಚಳಿ, ಕೆಲವೆಡೆ ಒಣಹವೆ ಇರಲಿದೆ. ಕರಾವಳಿ ಕರ್ನಾಟಕ , ಕರ್ನಾಟಕದ ಒಳಭಾಗದ ಒಂದೆರಡು ಕಡೆಗಳಲ್ಲಿ ಮಂಜು ಮುಸುಕುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ.

ಬೆಂಗಳೂರು, ಸುತ್ತಮುತ್ತಲಿನ ವಾತಾವರಣ

ಭಾಗಶಃ ಮೋಡ ಕವಿದ ಆಕಾಶ, ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಮುಸುಕುವು ಸಾಧ್ಯತೆ ಇದೆ. ಗರಿಷ್ಠ , ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿ.ಸೆ. ಹಾಗೂ 17 ಡಿ.ಸೆ. ಆಗಿರಬಹುದು. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಹವಾಮಾನ ಹೀಗಿದೆ

ಬೆಂಗಳೂರು - 19.2°

ಮಂಗಳೂರು - 24°

ಚಿತ್ರದುರ್ಗ - 16.6°

ಗದಗ - 16.4°

ಹೊನ್ನಾವರ - 20.4°

ಕಲಬುರಗಿ - 28°

ಬೆಳಗಾವಿ - 19°

ಕಾರವಾರ - 34.8°

ಬೀದರ್‌ - 12.8°

Whats_app_banner