ಕನ್ನಡ ಸುದ್ದಿ  /  ಕರ್ನಾಟಕ  /  Mandya Crime: ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನು ಕೊಂದ ದುಷ್ಕರ್ಮಿಗಳು; ಮಂಡ್ಯದಲ್ಲಿ ಭಯಾನಕ ಘಟನೆ

Mandya Crime: ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನು ಕೊಂದ ದುಷ್ಕರ್ಮಿಗಳು; ಮಂಡ್ಯದಲ್ಲಿ ಭಯಾನಕ ಘಟನೆ

Mandya Murder: ಭೀಮೇಶ್ ಹಾಗೂ ವಿನಯ್ ಎನ್ನುವರು ಹಣಕಾಸಿನ ವಿಚಾರಕ್ಕೆ ಕೊಲೆಯಾದ ವೆಂಕಟೇಶ್ ಸಹೋದರ ರಮೇಶ್ ಜೊತೆ ಗಲಾಟೆ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರು ಪೊಲೀಸರೆಂದು ಹೇಳಿಕೊಂಡು ರಮೇಶ್ ನನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದ್ದರು. ಆದರೆ ಮನೆಯಲ್ಲಿ ತಮ್ಮ ರಮೇಶ್ ಇಲ್ಲದ ಕಾರಣ ಆತನ ಅಣ್ಣ ವೆಂಕಟೇಶ್​​ನನ್ನು ಕಿಡ್ನ್ಯಾಪ್ ಮಾಡಿದ್ದರು.

ಹತ್ಯೆಯಾದ ವೆಂಕಟೇಶ್​
ಹತ್ಯೆಯಾದ ವೆಂಕಟೇಶ್​

ಮಂಡ್ಯ: ಹಂತಕರು ತಮ್ಮನನ್ನು ಗುರಿ ಇಟ್ಟು ಹಾಕಿದ ಸಂಚಿಗೆ ಅಣ್ಣ ಬಲಿಯಾದ ಭಯಾನಕ ಘಟನೆ ಮಂಡ್ಯದಲ್ಲಿ (Mandya Murder) ನಡೆದಿದೆ. ತಮ್ಮನ ಮೇಲಿದ್ದ ಸೇಡಿಗೆ ಅಣ್ಣನನ್ನು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದಲ್ಲಿ (Sathanuru village) ಈ ಭೀಕರ ಘಟನೆ ನಡೆದಿದ್ದು, 13 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ಅಣ್ಣನ ಹೆಸರು ವೆಂಕಟೇಶ್.‌ ಪೊಲೀಸರ ನೆಪದಲ್ಲಿ ಬಂದ ದುಷ್ಕರ್ಮಿಗಳು, ವೆಂಕಟೇಶ್ ನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ಈರೇಗೌಡನಕೊಪ್ಪಲು ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಸುಟ್ಟು ಹಾಕಿದ್ದಾರೆ.

ಭೀಮೇಶ್ ಹಾಗೂ ವಿನಯ್ ಎನ್ನುವರು ಹಣಕಾಸಿನ ವಿಚಾರಕ್ಕೆ ಕೊಲೆಯಾದ ವೆಂಕಟೇಶ್ ಸಹೋದರ ರಮೇಶ್ ಜೊತೆ ಗಲಾಟೆ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರು ಮೇ 23 ರಂದು ಪೊಲೀಸರೆಂದು ಹೇಳಿಕೊಂಡು ರಮೇಶ್ ನನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದ್ದರು. ಆದರೆ ಮನೆಯಲ್ಲಿ ತಮ್ಮ ರಮೇಶ್ ಇಲ್ಲದ ಕಾರಣ ಆತನ ಅಣ್ಣ ವೆಂಕಟೇಶ್​​ನನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು.

ಟ್ರೆಂಡಿಂಗ್​ ಸುದ್ದಿ

ಬಳಿಕ ವೆಂಕಟೇಶ್​​ನನ್ನು ಹತ್ಯೆ ಮಾಡಿ, ಈರೇಗೌಡನ ಕೊಪ್ಪಲು ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ. ಘಟನೆ ನಡೆದು 2 ವಾರಗಳ ಬಳಿಕ ಬೆಳಕಿಗೆ ಬಂದಿದ್ದು, ಇದೀಗ ಮಂಡ್ಯ ಗ್ರಾಮಾಂತರ ಪೊಲೀಸರು ನಾಲ್ವರು ಕೊಲೆ ಪಾತಕಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೇಡು ತೀರಿಸಿಕೊಳ್ಳಲು ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಹಣಕಾಸು ಸಮಸ್ಯೆ ಬಗೆಹರಿಸಲು ರಮೇಶ್ ಭೀಮೇಶ್‌ ನನ್ನು ಬೆಂಗಳೂರಿಗೆ ಕೆರೆಸಿಕೊಂಡಿದ್ದ, ತಾನು ಸ್ಥಳಕ್ಕೆ ಆಗಮಿಸಿದಾಗ ರಮೇಶ್ ತನ್ನ ಸಹಚರರೊಂದಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಭೀಮೇಶ್ ದೂರು ದಾಖಲಿಸಿದ್ದನು. ಈ ಘಟನೆಯಲ್ಲಿ ಬೆಂಗಳೂರು ಪೊಲೀಸರು ರಮೇಶ್‌ನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

ರಮೇಶ್ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿದ ಭೀಮೇಶ್ ಮತ್ತು ಅವನ ಸಹಚರರು ರಮೇಶ್‌ನನ್ನು ಹತ್ಯೆ ಮಾಡಲು ಹೊಂಚು ಹಾಕಿದ್ದರು. ಅದರಂತೆ ಪೊಲೀಸರು ಎಂದು ಹೇಳಿಕೊಂಡು ರಮೇಶ್ ಮನೆಗೆ ಬಂದಿದ್ದರು. ಆದರೆ ಮನೆಯಲ್ಲಿ ರಮೇಶ್ ಇಲ್ಲದ ಕಾರಣ ಅಣ್ಣ ವೆಂಕಟೇಶ್ ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವರದಿ: ಧಾತ್ರಿ ಭಾರದ್ವಾಜ್‌