ಕನ್ನಡ ಸುದ್ದಿ  /  Nation And-world  /  India News Rajasthan Crime News Mother Kills 4 Children Grain Drum Jaipur Baniyawas Village Police News In Kannada Pcp

Crime News: ಭತ್ತದ ಕಣಜದಲ್ಲಿ ನಾಲ್ವರು ಮಕ್ಕಳನ್ನು ಹಾಕಿ ಸಾಯಿಸಿ ಆತ್ಮಹತ್ಯೆಗೆ ಶರಣಾದ ತಾಯಿ

Rajasthan Crime News: ಭತ್ತದ ಕಣಜದಲ್ಲಿ ತನ್ನ ನಾಲ್ವರು ಮಕ್ಕಳನ್ನು ಹಾಕಿ ಉಸಿರುಗಟ್ಟಿ ಮೃತಪಡುವಂತೆ ಮಾಡಿ ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

Crime News: ಭತ್ತದ ಕಣಜದಲ್ಲಿ ನಾಲ್ವರು ಮಕ್ಕಳನ್ನು ಹಾಕಿ ಸಾಯಿಸಿ ಆತ್ಮಹತ್ಯೆಗೆ ಶರಣಾದ ತಾಯಿ
Crime News: ಭತ್ತದ ಕಣಜದಲ್ಲಿ ನಾಲ್ವರು ಮಕ್ಕಳನ್ನು ಹಾಕಿ ಸಾಯಿಸಿ ಆತ್ಮಹತ್ಯೆಗೆ ಶರಣಾದ ತಾಯಿ

ಬಾರ್ಮರ್‌: ಭತ್ತದ ಕಣಜದಲ್ಲಿ ತನ್ನ ನಾಲ್ವರು ಮಕ್ಕಳನ್ನು ಹಾಕಿ ಉಸಿರುಗಟ್ಟಿ ಮೃತಪಡುವಂತೆ ಮಾಡಿ ಬಳಿಕ ತಾಯಿಯೂ ಆತ್ಮಹತ್ಯೆ (ಆತ್ಮಹತ್ಯೆ ತಡೆಯಲು ಇಲ್ಲಿದೆ ಸಲಹೆ.) ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮಂಡ್ಲಿ ಸ್ಟೇಷನ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಈ ದುಷ್ಕೃತ್ಯ ನಡೆಸಿದ ಮಹಾತಾಯಿಯ ಹೆಸರು ಊರ್ಮಿಳಾ. ಮೃತ ಮಕ್ಕಳೆಲ್ಲರೂ 2 ರಿಂದ 8 ವರ್ಷದೊಳಗಿನ ಮಕ್ಕಳು.

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಊರ್ಮಿಳಾ. ಮನೆಯಲ್ಲಿದ್ದ ಭತ್ತದ ಕಣಜಕ್ಕೆ ತನ್ನ ನಾಲ್ವರು ಮಕ್ಕಳನ್ನು ಹಾಕಿ ಕಣಜದ ಬಾಗಿಲನ್ನು ಮುಚ್ಚಿದ್ದಾಳೆ. ನಂತರ ಊರ್ಮಿಳಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ತಪ್ಪಿಸಿ- ಐಕಾಲ್‌ ಹೆಲ್ಪ್‌ ಲೈನ್‌ಗೆ ಕರೆ ಮಾಡಿ: 9152987821

ಮೃತ ಮಕ್ಕಳನ್ನು ಭಾವನಾ (8), ವಿಕ್ರಮ್ (5), ವಿಮಲಾ (3), ಮತ್ತು ಮನಿಶಾ (2) ಎಂದು ಗುರುತಿಸಲಾಗಿದೆ.

ಪೊಲೀಸರು ಎಲ್ಲಾ ಐದು ಮೃತದೇಹಗಳನ್ನು ಕಲ್ಯಾಣಪುರಿ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎಫ್ಎಸ್ಎಲ್ ತಂಡ ಪುರಾವೆ ಸಂಗ್ರಹಿಸಿದೆ. ಮೃತರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಪತಿ ಜೇಥಾ ರಾಮ್ ಮತ್ತು ಅವರ ಕುಟುಂಬದ ಸದಸ್ಯರ ಕಿರುಕುಳವೇ ಕಾರಣ ಎಂದು ತಿಳಿದು ಬಂದಿದೆ. ಇದರಿಂದ ಬೇಸತ್ತ ಊರ್ಮಿಳಾ ಈ ಹಾದಿ ಹಿಡಿದಿದ್ದಾಳೆ. ದುರ್ಘಟನೆ ನಡೆದ ಶನಿವಾರ ಊರ್ಮಿಳಾ ಪತಿ ಜೇಥರಾಮ್ ಕೂಲಿಗಾಗಿ ಜೋಧಪುರಕ್ಕೆ ಹೋಗಿರುತ್ತಾನೆ. ಅಂದು ಉರ್ಮಿಳಾ ಮನೆಯಲ್ಲೇ ಇರುತ್ತಾಳೆ. ಪತಿ ಕೂಲಿಗಾಗಿ ತೆರಳಿದ ನಂತರ ಊರ್ಮಿಳಾ ತನ್ನ ಮಕ್ಕಳನ್ನು ಭತ್ತದ ಕಣಜಕ್ಕೆ ಹಾಕಿ ಬಾಗಿಲು ಮುಚ್ಚುತ್ತಾಳೆ.

ಬಳಿಕ ತಾನೂ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಸಂಜೆಯವರೆಗೂ ಮಕ್ಕಳು ಮತ್ತು ಊರ್ಮಿಳಾ ಕಂಡು ಬರದಿದ್ದಾಗ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಅವರ ಸಂಬಂಧಿಕರು ಊರ್ಮಿಳಾ ಮನೆಗೆ ಭೇಟಿ ನೀಡಿದಾಗ ಆಕೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಮನೆಯ ಬಾಗಿಲು ಮುರಿದು ಮಕ್ಕಳನ್ನು ಹುಡುಕಿದಾಗ ಭತ್ತದ ಕಣಜದಲ್ಲಿ ಶವಗಳ ರೂಪದಲ್ಲಿ ಕಾಣಿಸುತ್ತಾರೆ. ಸಂಬಂಧಿಕರು ಮತ್ತು ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಕಲ್ಯಾಣಪುರ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಪತಿ, ಅತ್ತೆ ಮತ್ತು ಮಾವ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ವರದಿ: ಎಚ್‌. ಮಾರುತಿ

ಆತ್ಮಹತ್ಯೆ ತಪ್ಪಿಸಿ- ಐಕಾಲ್‌ ಹೆಲ್ಪ್‌ ಲೈನ್‌ಗೆ ಕರೆ ಮಾಡಿ: 9152987821

IPL_Entry_Point