Shiggaon byelection results 2024: ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಪಠಾಣ್‌ ನಡುವೆ ಭಾರೀ ಹಣಾಹಣಿ, ಯಾರು ಮುಂದೆ ಇದ್ದಾರೆ
ಕನ್ನಡ ಸುದ್ದಿ  /  ಕರ್ನಾಟಕ  /  Shiggaon Byelection Results 2024: ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಪಠಾಣ್‌ ನಡುವೆ ಭಾರೀ ಹಣಾಹಣಿ, ಯಾರು ಮುಂದೆ ಇದ್ದಾರೆ

Shiggaon byelection results 2024: ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಪಠಾಣ್‌ ನಡುವೆ ಭಾರೀ ಹಣಾಹಣಿ, ಯಾರು ಮುಂದೆ ಇದ್ದಾರೆ

Shiggaon byelection results 2024: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು ಈಗಾಗಲೇ ಹತ್ತು ಸುತ್ತುಗಳ ಮತ ಎಣಿಕೆ ಮುಗಿದಿದೆ.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಹಣಾಹಣಿ ಇಬ್ಬರ ನಡುವೆ ಏರ್ಪಟ್ಟಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಹಣಾಹಣಿ ಇಬ್ಬರ ನಡುವೆ ಏರ್ಪಟ್ಟಿದೆ.

Shiggaon byelection results 2024: ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಉಪಉಮೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು ಒಂಬತ್ತು ಸುತ್ತುಗಳ ಮತ ಎಣಿಕೆ ಮುಗಿದಿದೆ. ಏಳು ಸುತ್ತುಗಳಲ್ಲಿ ಬಿಜೆಪಿಯ ಭರತ್‌ ಬೊಮ್ಮಾಯಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರೂ ಕಾಂಗ್ರೆಸ್‌ನ ಯಾಸಿರ್‌ ಅಹಮದ್‌ ಪಠಾಣ್‌ ಅವರು ನಂತರದ ಎರಡು ಸುತ್ತಿನಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಶಿಗ್ಗಾಂವಿಯಲ್ಲೂ ಕೂಡ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಹಣಾಹಣಿಯೂ ಜೋರಾಗಿದೆ. ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದು ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಇಲ್ಲಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನಿಂದ ಹಿಂದಿನ ಬಾರಿಯೂ ಸ್ಪರ್ಧಿಸಿದ್ದ ಯಾಸಿರ್‌ ಅಹಮದ್‌ ಪಠಾಣ್‌ ಕಣಕ್ಕೆ ಇಳಿದಿದ್ದಾರೆ.

ಹಾವೇರಿಯ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಪ್ರತಿ ಸುತ್ತಿನಲ್ಲೂ ಸಾಕಷ್ಟು ಏರಿಳಿತ ಕಂಡು ಬಂದಿದೆ. ಇದರಿಂದ ಗೆಲುವು ಯಾರಿಗೆ ಸಿಗಲಿದೆ ಎನ್ನುವ ಕುತೂಹಲವಿದೆ.

ಶಿಗ್ಗಾಂವಿಯಲ್ಲಿ 13ನೇ ಮತ ಎಣಿಕೆಯ ಪ್ರಕ್ರಿಯೆ ಮುಗಿದ ನಂತರವೂ ಕಾಂಗ್ರೆಸ್‌ ನ ಯಾಸಿರ್‌ ಅಹಮದ್‌ ಪಠಾಣ್‌ಗೆ ಮುನ್ನಡೆ ದಕ್ಕಿದೆ.

ಶಿಗ್ಗಾಂವಿಯ 12ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್‌ನ ಯಾಸಿರ್‌ ಪಠಾಣ್‌ ಅವರೇ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಶಿಗ್ಗಾಂವಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಗೆ 12,793 ಮತಗಳ ಭಾರಿ ಮುನ್ನಡೆ ಪಡೆದಿದ್ದು, ಯಾಸೀರ್ ಪಠಾಣ್ ಗೆ 68,078 ಮತಗಳು. ಭರತ್ ಬೊಮ್ಮಾಯಿಗೆ 55285 ಮತಗಳು ಲಭಿಸಿವೆ.

ಶಿಗ್ಗಾಂವಿ ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಇಲ್ಲಿ ಮುನ್ನಡೆ ಕಾಯ್ದುಕೊಂಡು ಬಂದಿದೆ. ಈ ಚುನಾವಣೆಯಲ್ಲೂ ಕಾಂಗ್ರೆಸ್‌ ಸರ್ಕಾರವಿದ್ದ ಕಾರಣದಿಂದ ಗೆಲ್ಲಲೇಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದವು. ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ಕಂಡು ಬಂದಿತು.

Whats_app_banner