ಕನ್ನಡ ಸುದ್ದಿ  /  latest news  /  March 25 Kannada News Updates: ಟೆಕ್ಸಾಸ್‌ನಲ್ಲಿ ಪ್ರಚಾರ ಸಭೆ ನಡೆಸಲು ಸಿದ್ಧರಾದ ಡೊನಾಲ್ಡ್‌ ಟ್ರಂಪ್

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)(AP)

March 25 Kannada News Updates: ಟೆಕ್ಸಾಸ್‌ನಲ್ಲಿ ಪ್ರಚಾರ ಸಭೆ ನಡೆಸಲು ಸಿದ್ಧರಾದ ಡೊನಾಲ್ಡ್‌ ಟ್ರಂಪ್

05:07 PM ISTMar 25, 2023 01:06 PM Praveen Chandra B
  • twitter
  • Share on Facebook
05:07 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Sat, 25 Mar 202305:06 PM IST

ಟೆಕ್ಸಾಸ್‌ನಲ್ಲಿ ಪ್ರಚಾರ ಸಭೆ ನಡೆಸಲು ಸಿದ್ಧರಾದ ಡೊನಾಲ್ಡ್‌ ಟ್ರಂಪ್

ಟೆಕ್ಸಾಸ್‌ನಲ್ಲಿ ಅಧ್ಯಕ್ಷೀಯ ಪ್ರಚಾರ ಸಭೆ ನಡೆಸಲು, ರಿಪಬ್ಲಿಕನ್‌ ನಾಯಕ ಡೊನಾಲ್ಡ್ ಟ್ರಂಪ್ ಸಿದ್ಧರಾಗಿದ್ದಾರೆ

Sat, 25 Mar 202303:04 PM IST

ಅರ್ಥ್‌ ಅವರ್:‌ ಒಂದು ಗಂಟೆಗಳ ಕಾಲ ದೆಹಲಿಯ ಅಕ್ಷರಧಾಮ ದೇವಾಲಯದ ದೀಪಗಳು ಆಫ್

ಅರ್ಥ್‌ ಅವರ್ ಅನ್ನು ಗುರುತಿಸಲು ದೆಹಲಿಯ ಅಕ್ಷರಧಾಮ ದೇವಾಲಯದ ದೀಪಗಳನ್ನು ರಾತ್ರಿ 8.30 ರಿಂದ 9.30 ರವರೆಗೆ ಒಂದು ಗಂಟೆಯವರೆಗೆ ಆಫ್ ಮಾಡಲಾಗಿದೆ.

Sat, 25 Mar 202301:57 PM IST

ಮಿಸಿಸಿಪ್ಪಿಯಲ್ಲಿ ಭೀಕರ ಚಂಡಮಾರುತ: 23 ಜನರ ದುರ್ಮರಣ!

ಅಮೆರಿಕದ ಮಿಸಿಸಿಪ್ಪಿಯಲ್ಲಿ ಸುಂಟರಗಾಳಿ ಮತ್ತು ಚಂಡಮಾರುತ ಅಪ್ಪಳಿಸಿದ್ದರಿಂದ 23 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Sat, 25 Mar 202301:06 PM IST

ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿ: ಸಿದ್ದರಾಮಯ್ಯ ಕರೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಇಂದು ಶಾಸಕ ಶಿವಶಂಕರ ರೆಡ್ಡಿ ಅವರು ಆಯೋಜಿಸಿದ್ದ ಮಹಿಳಾ ಸಮಾವೇಶ ಹಾಗೂ ರೋಡ್ ಶೋದಲ್ಲಿ ಬಾಗವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Sat, 25 Mar 202310:28 AM IST

ದಾವಣಗೆರೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರದದಲ್ಲಿ ಮೋದಿ ಭಾಗಿ

ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.  ಶೀಘ್ರದಲ್ಲೇ ಪ್ರಧಾನಿ ಮೋದಿ ಅವರು ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Sat, 25 Mar 202309:12 AM IST

ವೈಟ್‌ಫೀಲ್ಡ್ (ಕಾಡುಗೋಡಿ)-ಕೆ.ಆರ್.ಪುರಂ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು ಮೆಟ್ರೋದ ಕೃಷ್ಣರಾಜಪುರ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ) ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು

Sat, 25 Mar 202307:36 AM IST

 ಪ್ರಧಾನಿ ನರೇಂದ್ರ ಮೋದಿಯಿಂದ ವೈಟ್ ಫೀಲ್ಡ್ – ಕೆಆರ್ ಪುರಂ ಮೆಟ್ರೋ ಮಾರ್ಗ ಲೋಕಾರ್ಪಣೆ- ನೇರ ಪ್ರಸಾರ

Sat, 25 Mar 202305:46 AM IST

ಪ್ರಧಾನಿ ಮೋದಿ ಉದ್ಘಾಟಿಸಲಿರುವ ವೈಟ್‌ಫೀಲ್ಡ್‌- ಕೆಆರ್‌ ಪುರ ಮೆಟ್ರೋ ಇಂದು ಉದ್ಘಾಟನೆ

ಇಂದು ಪ್ರಧಾನಿ ನರೇಂದ್ರ ಮೋದಿಯವರು ವೈಟ್‌ಫೀಲ್ಡ್‌- ಕೆಆರ್‌ ಪುರ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. ಸುಮಾರು 13.71 ಕಿ.ಮೀ. ನಿಲ್ದಾಣದ ಈ ಮೆಟ್ರೋ ರೈಲು ಮಾರ್ಗದಿಂದಾಗಿ ಟ್ರಾಫಿಕ್‌ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಮುಖ್ಯವಾಗಿ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಈ ಕುರಿತು ವರದಿ ಇಲ್ಲಿದೆ.

Sat, 25 Mar 202305:43 AM IST

ಪ್ರಧಾನಿಯಿಂದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಜಾನ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆ- ನೇರ ಪ್ರಸಾರ

ಚಿಕ್ಕಬಳ್ಳಾಪುರತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನೂತನ ಮೆಡಿಕಲ್‌ ಕಾಲೇಜು ನಿರ್ಮಾಣಗೊಂಡಿದೆ. ಈ ವೈದ್ಯಕೀಯ ಕಾಲೇಜಿಗೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದು ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು  ಈ ವೈದ್ಯಕೀಯ ಕಾಲೇಜನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಉಚಿತವಾಗಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ನೀಡುವ ಅಪರೂಪದ ಈ ಸಂಸ್ಥೆಯ ಕುರಿತು ವಿಶೇಷ ವರದಿ ಇಲ್ಲಿದೆ.

Sat, 25 Mar 202304:28 AM IST

ಗಣಪತಿ ಭಟ್‌ ಆತ್ಮಹತ್ಯೆ

ಕರ್ನಾಟಕದಲ್ಲಿ ಸಂಚಲನ ಉಂಟು ಮಾಡಿದ್ದ 545 ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ವಿಚಾರಣೆಗೆ ಹಾಜರಾಗಿದ್ದ ಸಿದ್ದಾಪುರದ ನೆಲೆಮಾಂವ ಗ್ರಾಮದ ಗಣಪತಿ ಭಟ್‌ (63) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ನಿನ್ನೆ ಅವರು ಹೆರೂರು ಗ್ರಾಮದಲ್ಲಿ ಎಂಆರ್‌ ಭಟ್ಟರ ತೋಟದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Sat, 25 Mar 202304:28 AM IST

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಇಂದು ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.

124 ಕ್ಷೇತ್ರಗಳಿಗೆ ಘೋಷಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಪರ್ಧೆಯ ಕಣವೂ ಫಿಕ್ಸ್ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸಿದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ವಿಧಾನಸಭಾ ಕೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈ ಕುರಿತ ಕಂಪ್ಲಿಟ್‌ ರಿಪೋರ್ಟ್‌ ಇಲ್ಲಿದೆ.

Sat, 25 Mar 202302:04 AM IST

ಬಸ್ ನಲ್ಲೇ ಬಿಎಂಟಿಸಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ ಬಸ್​​ಗೆ ಬೆಂಕಿ ತಗುಲಿ ಕಂಡಕ್ಟರ್ ಸಜೀವ ದಹನವಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.  ನಿರ್ವಾಹಕ ಬಸ್ಸಿನೊಳಗೆ ಸುಟ್ಟು ಕರಕಲಾದ ಘಟನೆ ಸಂಭವಿಸುವ ಕೆಲವೇ ಗಂಟೆಗಳ ಮುನ್ನ ಹತ್ತಿರದ ಪೆಟ್ರೋಲ್ ಬಂಕ್ ನಲ್ಲಿ ಐದು ಲೀಟರ್ ಪೆಟ್ರೋಲ್ ಮತ್ತು 2 ಲೀಟರ್ ಡೀಸೆಲ್ ಖರೀದಿಸಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಈ ಕುರಿತು ವರದಿ ಇಲ್ಲಿದೆ ಓದಿ

Sat, 25 Mar 202302:02 AM IST

ಪಿಂಜಾರ, ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರಕಾರ ಆದೇಶ

ರಾಜ್ಯದ ಅತ್ಯಂತ ಹಿಂದುಳಿದ ವರ್ಗಗಳಾಗಿರುವ ಪಿಂಜಾರ, ನದಾಫ್, ಚಪ್ಪರ ಬಂದ್, ಒಟಾರಿ ಸೇರಿದಂತೆ ಇತರ 13 ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ 1 ರ ಪಿಂಜಾರ, ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.

Sat, 25 Mar 202302:48 AM IST

ಇಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ವೈಟ್‌ಫೀಲ್ಡ್‌ ಮೆಟ್ರೋಗೆ ಚಾಲನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

  • ಇಂದು ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
  • ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರು ರಾಜ್ಯಕ್ಕೆ ನೀಡುತ್ತಿರುವ 7ನೇ ಭೇಟಿ ಇದಾಗಿದೆ.
  • ವೈಟ್​​ಫೀಲ್ಡ್ ಮತ್ತು ಕೆ. ಆರ್​ ಪುರ ನಡುವಿನ ಮೆಟ್ರೋಗೆ ಚಾಲನೆ ನೀಡಲಿದದ್ದಾರೆ.
  • ಮುದ್ದೇನಹಳ್ಳಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಉದ್ಘಾಟನೆ ಹಾಗೂ ದಾವಣಗೆರೆಯಲ್ಲಿನ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಇಂದು ಕರ್ನಾಟಕಕ್ಕೆ ನರೇಂದ್ರ ಮೋದಿ  Photographer: T. Narayan/Bloomberg
ಇಂದು ಕರ್ನಾಟಕಕ್ಕೆ ನರೇಂದ್ರ ಮೋದಿ Photographer: T. Narayan/Bloomberg (Bloomberg)

Sat, 25 Mar 202302:02 AM IST

ಅಲ್ಪ ಸಂಖ್ಯಾತರ ಶೇಕಡ 4 ಮೀಸಲಾತಿ ರದ್ದು

ಅಲ್ಪ ಸಂಖ್ಯಾತರಿಗೆ 2ಬಿಯಡಿ ನೀಡಲಾಗಿದ್ದ ಶೇಕಡ 4 ಮೀಸಲಾತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕರ್ನಾಟಕ ಸರಕಾರ ಮಾಡಿದೆ. ಅಲ್ಪ ಸಂಖ್ಯಾತರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯುಎಸ್‌) ದಡಿ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಪ ಸಂಖ್ಯಾತರಿಗೆ ಈ ಹಿಂದೆ 2ಬಿಐಡಿ ನೀಡುತ್ತಿದ್ದ ಮೀಸಲಾತಿಯನ್ನು ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಸೇರಿಸಲು ನಿರ್ಧರಿಸಲಾಗಿದೆ. ಈ ಕುರಿತ ವರದಿ ಇಲ್ಲಿದೆ ಓದಿ.

Reservation in Karnataka: ಅಲ್ಪ ಸಂಖ್ಯಾತರ ಶೇಕಡ 4 ಮೀಸಲಾತಿ ರದ್ದುಗೊಳಿಸಿ, ಒಕ್ಕಲಿಗ ಮತ್ತು ಲಿಂಗಾಯಿತರಿಗೆ ಹಂಚಲು ರಾಜ್ಯ ಸರಕಾರ ನಿರ್ಧಾರ
Reservation in Karnataka: ಅಲ್ಪ ಸಂಖ್ಯಾತರ ಶೇಕಡ 4 ಮೀಸಲಾತಿ ರದ್ದುಗೊಳಿಸಿ, ಒಕ್ಕಲಿಗ ಮತ್ತು ಲಿಂಗಾಯಿತರಿಗೆ ಹಂಚಲು ರಾಜ್ಯ ಸರಕಾರ ನಿರ್ಧಾರ (ANI )

Sat, 25 Mar 202302:02 AM IST

ಮಾದಿಗ ಸಮುದಾಯದಿಂದ ಅಭಿನಂದನೆ

  • ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ಶಿಫಾರಸಿನಂತೆ ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‌ತೀರ್ಮಾನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರನ್ನು ಅಭಿನಂದಿಸಲಾಯಿತು.
  • ಈ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ಸಚಿವರಾದ ಗೋವಿಂದ ‌ಕಾರಜೋಳ, ಡಾ.‌ಕೆ ಸುಧಾಕರ್, ಮುರುಗೇಶ ನಿರಾಣಿ ಹಾಗೂ ಮತ್ತಿತರರು ಹಾಜರಿದ್ದರು.
ಮಾದಿಗ ಸಮುದಾಯದಿಂದ ಅಭಿನಂದನೆ
ಮಾದಿಗ ಸಮುದಾಯದಿಂದ ಅಭಿನಂದನೆ

Sat, 25 Mar 202302:02 AM IST

ಕೇಂದ್ರ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳ

  • ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ.
  • ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಘೋಷಣೆ ಮಾಡಲಾಗಿದೆ.
  • ಕೇಂದ್ರ ಸರ್ಕಾರವು ತನ್ನ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡಾ 4.ರಷ್ಟು ಹೆಚ್ಚಿಸಿದೆ.
  • ಒಟ್ಟಾರೆಯಾಗಿ ಶೇಕಡಾ 38 ರಿಂದ ಶೇಕಡಾ 42 ಕ್ಕೆ ತುಟ್ಟಿಭತ್ಯೆ ಏರಿಕೆಯಾಗಿದೆ.